ಮೃತಪಟ್ಟ ಬಿಕ್ಷುಕನ ಮನೆಯಲ್ಲಿ ಲಕ್ಷಾಂತರ ಹಣ ಪತ್ತೆ; ಭಿಕ್ಷುಕ ಸಂಗ್ರಹಿಸಿಟ್ಟಿ ಹಣ ಎಣಿಸುವಷ್ಟರಲ್ಲಿ ಪೊಲೀಸರೇ ಸುಸ್ತು.!

0
157

ರಸ್ತೆ, ದೇವಸ್ಥಾನ, ಬಸ್ ಸ್ಟಾಂಡ್, ರೈಲ್ವೆ ಸ್ಟೇಷನ್-ಗಳಲ್ಲಿ ಬಿಕ್ಷೆ ಬೇಡುವರನ್ನು ನೋಡಿದರೆ ಅದೇನೋ ಕರುಣೆ ಹುಟುತ್ತೆ. ಏಕೆಂದರೆ ಒಂದು ಹೊತ್ತಿನ ಊಟಕ್ಕೆ ಎಷ್ಟೊಂದು ಕಷ್ಟ ಪಡುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿರುತ್ತೆ. ಕೈ ಚಾಚಿ ಬೇಡಿದಾಗ ಒಂದು ರುಪಾಯಿ ನೀಡಿ ಮುಂದೆ ಹೋಗುತ್ತೇವೆ. ಈ ಒಂದು ರುಪಾಯಿ ಅಲ್ಲಿ ಏನಾಗುತ್ತೆ ಎನ್ನುವುದು ಎಲ್ಲರೂ ತಿಳಿದಿರುವ ವಿಚಾರ. ಆದರೆ ಕೆಲವು ಬಿಕ್ಷಕರನ್ನು ನೋಡಿದರೆ ಇದರಲ್ಲಿ ಅಷ್ಟೊಂದು ಆದಾಯ ಇದಿಯಾ ಅನಿಸುತ್ತೆ. ಇದಕ್ಕೆ ಸಾಕ್ಷಿ ಎಂದರೆ ಇಲ್ಲೊಬ್ಬ ಮೃತ ಬಿಕ್ಷುಕನ ಮನೆಯಲ್ಲಿ ಲಕ್ಷಾಂತರ ಹಣ ಸಿಕ್ಕಿದ್ದು ಆಶ್ಚರ್ಯಿ ಮೂಡಿಸಿದೆ.

Also read: ಗಂಡನ ಮನೆಯಲ್ಲಿ ಶೌಚಾಲಯ ಇಲ್ಲವೆಂದು ಮದುವೆಯಾದ ಒಂದೇ ದಿನದಲ್ಲಿ ಪತಿಯನ್ನು ಬಿಟ್ಟು ಹೋದ ನವ ವಿವಾಹಿತೆ; ಮೋದಿ ಅವರ ಯೋಜನೆಗೆ ಸ್ಪೂರ್ತಿಯಾದ ಯುವತಿ.!

ಬಿಕ್ಷುಕನ ಮನೆಯಲ್ಲಿ 10 ಲಕ್ಷ ಹಣ?

ಹೌದು ನಾವೆಲ್ಲರೂ ತಿಳಿದ ಮಟ್ಟಿಗೆ ಬಿಕ್ಷಕರು ಇರುವುದಿಲ್ಲ, ಬರಿ ಒಂದು ರೂಪಾಯಿಗೆ ಕೈ ಚಾಚುವರು ಲಕ್ಷಾಧಿಪತಿಗಳಾಗಿರುತ್ತಾರೆ. ಮುಂಬೈನ ಗೋವಂದಿ ಪ್ರದೇಶದಲ್ಲಿದ ಬಿರ್ಜು ಚಂದ್ರ ಅಜಾದ್ ಎನ್ನುವ ವ್ಯಕ್ತಿ ಶುಕ್ರವಾರ ರಾತ್ರಿ ಗೋವಂಡಿ ರೈಲು ನಿಲ್ದಾಣದಲ್ಲಿ ಹಳಿ ದಾಟುತ್ತಿದ್ದ ವೇಳೆ ವೇಗದ ರೈಲಿಗೆ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಈ ಸುದ್ದಿಯನ್ನು ಅವರ ಸಂಬಂಧಿಕರು ಹಾಗೂ ಇತರ ಭಿಕ್ಷುಕರಿಗೆ ತಿಳಿಸಲು ಗೀವಾಂಡಿ ರೈಲು ನಿಲ್ದಾಣದ ಬಳಿಯ ಅವರ ಗುಡಿಸಲಿಗೆ ತೆರಳಿದ ರೈಲ್ವೆ ಪೊಲೀಸರ ತಂಡಕ್ಕೆ ಫುಲ್ ಶಾಕ್ ಆಗಿದೆ.

ಏಕೆಂದರೆ ಭಿಕ್ಷುಕನ ಗುಡಿಸಲನ್ನು ಪ್ರವೇಶಿಸಿದ ನಂತರ ಯಾರೂ ಇಲ್ಲದ್ದನ್ನು ಕಂಡು ಪೊಲೀಸರು ಒಳಗೆ ತೆರಳಿ ಹುಡುಕಾಟ ನಡೆಸಿದ್ದಾರೆ. ಅಷ್ಟು ಸಣ್ಣ ಗುಡಿಸಲಲ್ಲಿಯೇ ಹತ್ತಾರು ಗನ್ನಿ ಬ್ಯಾಗ್‍ಗಳಲ್ಲಿ ಲಕ್ಷಾಂತರ ರೂ. ನಾಣ್ಯಗಳಿರುವುದು ಪೊಲೀಸರಿಗೆ ಕಂಡು ಬಂದಿದೆ. ಎಣಿಸಲು ಕುಳಿತ ಪೊಲೀಸರು ನಿಬ್ಬೆರಗಾಗಿದ್ದು, ಒಟ್ಟು 1.77 ಲಕ್ಷ ರೂ. ಸಿಕ್ಕಿದೆ. ಗುಡಿಸಲಿನಲ್ಲಿಟ್ಟಿದ್ದ ನಾಣ್ಯಗಳನ್ನು ಎಣಿಸಲು ಪೊಲೀಸರು ಸುಮಾರು 8 ಗಂಟೆಯನ್ನು ತೆಗೆದುಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮಾತ್ರವಲ್ಲದೆ ವಿವಿಧ ಬ್ಯಾಂಕ್‍ಗಳಲ್ಲಿ ಸುಮಾರು 8.77 ಲಕ್ಷ ರೂ. ಮೌಲ್ಯದ ಎಫ್‍ಡಿ(ಫಿಕ್ಸಡ್ ಡಿಪಾಸಿಟ್) ಇಟ್ಟಿರುವ ರಶೀದಿಯನ್ನು ಗಮನಿಸಿದ ನಂತರ ಪೊಲೀಸರ ತಂಡ ಇನ್ನೂ ಆಘಾತಕ್ಕೊಳಗಾಗಿದೆ.

Also read: ಹೊಟ್ಟೆ ಪಾಡಿಗಾಗಿ ಕೆಲಸ ಹುಡುಕುತ ಮುಂಬೈ ಹೋದ ಯುವಕರಿಗೆ ಒಲಿಯಿತು 23. ಕೋಟಿ ರೂ. ಲಾಟರಿ.!

ಹೀಗೆ ಹುಡುಕಾಟ ನಡೆಸಿದ್ದಾಗ ಪಾನ್ ಕಾರ್ಡ್​, ಆಧಾರ್​ ಕಾರ್ಡ್ ಮತ್ತು ವೋಟರ್ ಐಡಿ ದೊರೆತಿದ್ದವು. ಜೊತೆಗೆ ನ್ಯೂಸ್​ ಪೇಪರ್​ ಮತ್ತು ಪಾಲಿಥೇನ್ ಬ್ಯಾಗ್​ಗಳು ಮನೆ ತುಂಬಾ ಬಿದ್ದಿದ್ದವು. ಪೊಲೀಸರು ಬ್ಯಾಂಕ್​ ಅಧಿಕಾರಿಗಳನ್ನು ಸಂಪರ್ಕಿಸಿ ನಿಶ್ಚಿತ ಠೇವಣಿಯನ್ನು ಸುರಕ್ಷಿತವಾಗಿಡುವಂತೆ ಹೇಳಲಿದ್ದಾರೆ. ಸದ್ಯ ನಾಣ್ಯಗಳು ಪೊಲೀಸರ ಬಳಿಯಿದ್ದು, ಸುರಕ್ಷಿತವಾಗಿವೆ. ಪೊಲೀಸರು ಭಿಕ್ಷುಕನ ಸಂಬಂಧಿಕರಿಗಾಗಿ ಹುಡುಕಾಡುತ್ತಿದ್ದಾರೆ. ಸಾವನ್ನಪ್ಪಿದ ಭಿಕ್ಷುಕ ತುಂಬಾ ವರ್ಷಗಳ ಕಾಲ ಸಂಗ್ರಹಿಸಿಟ್ಟಿದ್ದ ಹಣ ಎನ್ನಲಾಗಿದೆ.

ಇಷ್ಟೊಂದು ಹಣವನ್ನು ಸಂಗ್ರಹಿಸಲು ಎಷ್ಟೊಂದು ದಿನ ತೆಗೆದುಕೊಂಡಿದ್ದಾರೆ. ಆದರೆ ಬೇಸರದ ಸಂಗತಿ ಎಂದರೆ ಜನರು ಕೊಟ್ಟ ಹಣವನ್ನು ಈ ಬಿಕ್ಷುಕರು ತಮ್ಮ ಜೀವನಕ್ಕೆ ಆದರು ಬಳಸುವುದಿಲ್ಲ, ಯಾರೋ ಕೊಟ್ಟ ಹಳಸಲು ಊಟ ತಿದ್ದು ಆಸ್ಪತ್ರೆ ಹೋಗದೆ ಹಣ ವಿದ್ದರು ಬಳಸದೆ ಇನ್ನೊಬರಿಗೆ ಲಾಭ ಮಾಡಿ ಹೋಗುತ್ತಾರೆ. ತಮಗೆ ಅವಶ್ಯಕತೆ ಇದ್ದಷ್ಟು ಹಣವನ್ನು ಮಾತ್ರ ಬೇಡಿ ಇರುವಾಗಲೇ ಕರ್ಚು ಮಾದುವುದೇ ಇಲ್ಲ, ಹೀಗೆ ಎಲ್ಲೋ ಯಾರೇ ಬಿಕ್ಷುಕ ಮೃತ ಪಟ್ಟಾಗ ಕಡಿಮೆ ಎಂದರು 1 ಲಕ್ಷದಿಂದ 50 ಸಾವಿರ ಹಣ ಸಿಗುತ್ತೇವೆ.