ಬೆಂಗಳೂರಿನಲ್ಲಿ ಗಾಂಜಾ ತೋಟ ಪತ್ತೆ; ಗಾಂಜಾ ನಮ್ಮಲ್ಲಿ ಇಲ್ಲವೇ ಇಲ್ಲ ಬೇರೆ ರಾಜ್ಯದಿಂದಷ್ಟೇ ಬರುತ್ತದೆ ಅನ್ನೋ ಪೊಲೀಸರಿಗೆ ಶಾಕ್.!

0
532

ಬೆಂಗಳೂರಿನಲ್ಲಿ ಮಾದಕವಸ್ತುಗಳ ದರ್ಬಾರ್ ಜೋರಾಗಿದ್ದು ಗಾಂಜಾ ಸೇರಿದಂತೆ ಹಲವು ವಸ್ತುಗಳನ್ನು ಬೇರೆ ರಾಜ್ಯದಿಂದ ತರಿಸಲಾಗುತ್ತಿದೆ. ಅದರಂತೆ ನಗರದಲ್ಲಿ ಮಾರಾಟ ಮಾಡಲು ಕೆಲವು ವ್ಯಕ್ತಿಗಳು ಅಡ್ಡಾ ಮಾಡಿಕೊಂಡಿದ್ದು. ಗುರುತ್ತಿರುವ ಕಾಯಂ ವ್ಯಕ್ತಿಗಳಿಗೆ ಮಾತ್ರ ಮಾದಕ ವಸ್ತುಗಳನ್ನು ನೀಡುತ್ತಾರೆ. ಇದೆಲ್ಲವೂ ಮೊದಲಿನಿಂದ ನಡೆಯುತ್ತಿರುವ ದಂದೆಯಾದರೆ ಪೊಲೀಸರಿಗೆ ತಿಳಿದಿರುವ ವಿಚಾರ, ಗಾಂಜಾ ಬೆಂಗಳೂರಿನಲ್ಲಿ ಬೆಳಯುತ್ತಿಲ್ಲ ಎನ್ನುವುದು ಏಕೆಂದರೆ ಮಾರಾಟದ ಜಾಲವನ್ನು ಬಿಡದೇ ಬೇಟೆ ಆಡುತ್ತಿದ್ದಾರೆ. ಇದೆ ಹೆದರಿಕೆಯಲ್ಲಿ ಗಾಂಜಾ ಬೆಳಯಲು ಸಾಧ್ಯವಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿತ್ತು, ಆದರೆ ಆಶ್ಚರ್ಯಿ ಎನ್ನುವಂತೆ ನಗರದಲ್ಲೇ ಗಾಂಜಾ ತೋಟ ಪತ್ತೆಯಾಗಿದೆ.

Also read: ಟೋಲ್‌ಗಳಲ್ಲಿ ಹಗಲು ದರೋಡೆ; ಸಾವಿರಾರು ಕೋಟಿ ಭ್ರಷ್ಟಾಚಾರ ತೆರೆದಿಟ್ಟ ವಕೀಲರು, ಹೇಗೆ ನಡೆಯುತ್ತಿದ್ದೆ ನೋಡಿ ಭ್ರಷ್ಟಾಚಾರ.!

ಬೆಂಗಳೂರಿನಲ್ಲಿ ಗಾಂಜಾ ತೋಟ?

ಹೌದು ಸಿಲಿಕಾನ್ ಸಿಟಿಯಲ್ಲಿ ಗಾಂಜಾ ಬೆಳೆಯುತ್ತಿರುವ ಅಚ್ಚರಿಯ ಸುದ್ದಿಯೊಂದನ್ನು ಬಯಲಾಗಿದ್ದು, ಗಾಂಜಾ ನಮ್ಮಲ್ಲಿ ಇಲ್ಲವೇ ಇಲ್ಲ ಬೇರೆ ರಾಜ್ಯದಿಂದಷ್ಟೇ ಬರುತ್ತದೆ ಅನ್ನೋ ಬೆಂಗಳೂರು ಪೊಲೀಸರಿಗೆ ಶಾಕ್ ಕೊಟ್ಟಿದೆ. ಹೌದು. ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಕೂಲಿನಗರದ ಸೈಟ್‍ಗಳಲ್ಲಿರುವ ಗಾಂಜಾ ಅಡ್ಡದಲ್ಲೇ ಎರಡು ದಿನಗಳ ಹಿಂದೆ ಜಾಲಹಳ್ಳಿ ಹಾಗೂ ನಂದಿನಿ ಲೇಔಟ್ ಪೊಲೀಸರು ಇಬ್ಬರು ರೌಡಿಗಳನ್ನ ಹೊಡೆದುರುಳಿಸಿದ್ದರು. ಅಲ್ಲದೆ ಆರೋಪಿಗಳನ್ನ ಹೊಡೆದುರುಳಿಸಿ ಗಂಟೆಗಟ್ಟಲೆ ಸುತ್ತಾಡಿದರು. ಆದರೆ ಬೆಳೆದು ನಿಂತಿದ್ದ ಗಾಂಜಾ ಮಾತ್ರ ಪೊಲೀಸರ ಕಣ್ಣಿಗೆ ಬಿದ್ದೇ ಇಲ್ಲ. ಬರಿ ಮಾರಾಟ ಅಡ್ಡಾ ಬಗ್ಗೆ ತಲೆಕೆಡಸಿಕೊಂಡಿರುವ ಅಧಿಕಾರಿಗಳು ಸೈಟ್‍ನಲ್ಲಿ ಬೆಳೆದು ನಿಂತಿರುವ ಗಾಂಜಾದ ಬಗ್ಗೆ ತಲೆಯೇ ಕಡೆಸಿಕೊಂಡಿಲ್ಲ.

Also read: ಮೃತಪಟ್ಟ ಬಿಕ್ಷುಕನ ಮನೆಯಲ್ಲಿ ಲಕ್ಷಾಂತರ ಹಣ ಪತ್ತೆ; ಭಿಕ್ಷುಕ ಸಂಗ್ರಹಿಸಿಟ್ಟಿ ಹಣ ಎಣಿಸುವಷ್ಟರಲ್ಲಿ ಪೊಲೀಸರೇ ಸುಸ್ತು.!

ಆದರೆ ಮೇಲೆಯೇ ಎದ್ದು ಕಾಣುವ ಗಾಂಜಾ ಗಿಡಗಳ ಬಗ್ಗೆ ಯಾಕೆ ನಿಗಾ ವಹಿಸಿಲ್ಲಾ ಎನ್ನುವ ಅನುಮಾನ ಕಾಡುತ್ತಿದ್ದು, ಕೂಲಿ ನಗರ ಸುತ್ತಮುತ್ತ ಸ್ಲಂ ಇರುವ ಕಾರಣ ಇಲ್ಲಿ ಇವೆಲ್ಲ ಸರ್ವೇಸಾಮಾನ್ಯ ಎಂದು ಪೊಲೀಸರು ಸುಮ್ಮನಾಗಿದ್ದಾರೋ ಗೊತ್ತಿಲ್ಲ. ಬೆಳೆದು ನಿಂತಿರುವ ಗಾಂಜಾ ಗಿಡಗಳ ಮಧ್ಯೆ ಪೊಲೀಸ್ ಅಧಿಕಾರಿಗಳೇ ರೌಂಡ್ ಹಾಕಿದ್ದಾರೆ. ಆದರೆ ಗಾಂಜಾ ಆರೋಪಿಗಳನ್ನು ಹಿಡಿಯೋ ಈ ಪೊಲೀಸರು ಇದನ್ನ ಬೆಳೆಯೋ ಕಿರಾತಕರ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.

Also read: ಎಸ್ ಪಿ ಸಾಂಗ್ಲಿಯಾನ ಚಿತ್ರದಲ್ಲಿ ಬಾಲನಟನಾದ ಮಾಸ್ಟರ್ ಮಂಜುನಾಥ್ ಸದ್ದಿಲ್ಲದೇ ನಟನೆ ಬಿಡಲು ಕಾರಣವೇನು? ಸದ್ಯ ಏನ್ ಮಾಡುತ್ತಿದ್ದಾರೆ ಗೊತ್ತಾ??

ಪೊಲೀಸರು ಬೇರೆ ಕಡೆಯಿಂದ ಸಬರುವ ಗಾಂಜಾ ಮೇಲೆ ನಿಗಾ ಇಡಲು ತೋರುವ ಆಸಕ್ತಿಯನ್ನ ನಗರದಲ್ಲಿ ಬೆಳೆಯುತ್ತಿರುವವರ ಮೇಲೆ ನಿಗಾ ಇಡುತ್ತಿಲ್ಲ ಎಂಬುದು ನಗರದ ಸೈಟ್‍ಗಳಲ್ಲಿ ಬೆಳೆದು ನಿಂತಿರುವ ಗಾಂಜಾ ಗಿಡಗಳಿಂದ ನೋಡಿದರೆ ತಿಳಿಯುತ್ತೆ, ಇತ್ತೀಚೆಗಷ್ಟೇ ಉಡ್ತಾ ಬೆಂಗಳೂರು ಆಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಖೇದ ವ್ಯಕ್ತಪಡಿಸಿದ್ದರು. ಆದರೆ ಈ ರೀತಿ ಬೆಳೆದು ನಿಂತಿರುವ ಗಾಂಜಾಗಳನ್ನ ಯಾರು ಬೆಳೆಯುತ್ತಿದ್ದಾರೆ ಎಂಬುದರ ಬಗ್ಗೆ ಪೊಲೀಸರು ಗಮನವಿಟ್ಟು ತಪ್ಪಿಸ್ಥರ ವಿರುದ್ಧ ಕ್ರಮ ಜರಿಗಿಸದೇ ಹೋದರೆ ರಾಜಧಾನಿ ಬೆಂಗಳೂರು ಗಾಂಜಾ ವ್ಯಸನಿಗಳಿಗೆ ಹೇಳಿ ಮಾಡಿಸಿದ ಸ್ಥಳ ಅಗುವುದರಲ್ಲ್ಲಿ ಅನುಮಾನವಿಲ್ಲ.