ರೈತರ ಸಂಕಷ್ಟಗಳನ್ನು ಆಲಿಸಿ ಅವರು ಬೆಳೆದಿರುವ ತರಕಾರಿ ಖರೀದಿ ಮಾಡಿ, 55 ಸಾವಿರ ಬಡ ಕುಟುಂಬಗಳಿಗೆ ವಿತರಿಸಲು ಚಾಲನೆ ನೀಡಿದ ಜನ ನಾಯಕ ಡಿ.ಕೆ. ಶಿವಕುಮಾರ್.!

0
138

ಕೊರೊನಾ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಹೇರಿರುವ ಲಾಕ್ ಡೌನ್-ಗೆ ಬೆಂಬಲ ಸೂಚಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರೈತರಿಗೆ ಆಗುತ್ತಿರುವ ನಷ್ಟವನ್ನು ಸರ್ಕಾರ ತುಂಬಬೇಕು ಎನ್ನುವ ಆದೇಶವನ್ನು ಹೊರಡಿಸಿ, ರೈತರು ಬೆಳೆದ ತರಕಾರಿ, ಹಣ್ಣುಗಳನ್ನ ಖರೀಧಿ ಮಾಡಿ ಉಚಿತವಾಗಿ ಬಡವರಿಗೆ ನೀಡಲು ಸೂಚಿಸಿದ್ದು, ಭಾರಿ ಮೆಚ್ಚುಗೆ ಪಾತ್ರವಾಗಿತ್ತು, ನುಡಿದಂತೆ ಇಂದು ಡಿಕೆಶಿ ಅವರು ಸಂಕಷ್ಟದಲ್ಲಿರುವ ರೈತರ ತೋಟಗಳಿಗೆ ಭೇಟಿ ನೀಡಿ ರೈತರ ಸಂಕಷ್ಟ ಕೇಳುವುದರ ಜೊತೆಗೆ ಅವರು ಬೆಳೆದಿರುವ ತರಕಾರಿ ಖರೀದಿ ಮಾಡಿ ಜನರಿಗೆ ಹಂಚಲು ಚಾಲನೆ ನೀಡಿದ್ದು, ಸರಿಸುಮಾರು 55 ಸಾವಿರ ಕುಟುಂಬಗಳಿಗೆ ದಿನಸಿ, ತರಕಾರಿ ವಿತರಿಸುವ ಗುರಿ ಹೊಂದಿದ್ದಾರೆ.

55 ಸಾವಿರ ಕುಟುಂಬಗಳಿಗೆ ಉಚಿತ ದಿನಸಿ?

ಹೌದು ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕೋಲಾರದ ಮಾಲೂರು ತಾಲೂಕಿನ ಬಡಜನರ ನೆರವಿಗೆ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಮಾಲೂರಿನಾದ್ಯಂತ 50 ಸಾವಿರ ಬಡ ಕುಟುಂಬಗಳಿಗೆ ತರಕಾರಿ ಮತ್ತು ದಿನಸಿ ವಿತರಿಸುವ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷರು ಚಾಲನೆ ನೀಡಿದ್ದಾರೆ. ಅಷ್ಟೇ ಅಲ್ಲದೆ ರೈತರು ಬೆಳೆದಿರುವ ಎಲೆಕೋಸು, ಕ್ಯಾರೆಟ್, ಟೊಮ್ಯಾಟೋ, ಕ್ಯಾಪ್ಸಿಕಂ ತೋಟಗಳಿಗೆ ಡಿಕೆಶಿ ಭೇಟಿ ನೀಡಿದರು. ಅಲ್ಲದೆ ಜನರಿಗೆ ವಿತರಿಸಲು ಸಿದ್ಧವಾಗಿರುವ ಗೋಧಿ ಹಿಟ್ಟು ಹಾಗೂ ತರಕಾರಿಗಳನ್ನು ಪರಿಶೀಲಿಸಿದ್ದು ಬಡವರಿಗೆ ಮತ್ತು ರೈತರಿಗೆ ನೆರವಾಗಲು ಸದಾ ಸಿದ್ದ ಎನ್ನುವುದ್ದನ್ನು ಸೂಚಿಸಿದ್ದಾರೆ.

ಈ ವೇಳೆ ಮಾತನಾಡಿದ ಡಿಕೆಶಿ, ಸರ್ಕಾರ ಕೊರೊನಾ ಸಂಕಷ್ಟದ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಏನೆಲ್ಲಾ ನಡೆಯುತ್ತಿದೆ ಎಂಬುದರ ಕುರಿತು ದಾಖಲೆ ಕಲೆ ಹಾಕುತ್ತಿದ್ದೇವೆ. ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇವೆ. ಬಿಜೆಪಿ ಸರ್ಕಾರದಲ್ಲಿ ಎಲ್ಲವೂ ಪೇಪರ್ ನಲ್ಲಿ ಹೇಳಿದಂತೆ ಕೆಲಸ ನಡೆಯುತ್ತಿಲ್ಲ. ಅಲ್ಲದೆ ಕೋಮು ಸೌಹರ್ದ ಹದಗೆಡುತ್ತಿದೆ ಇದನ್ನು ಯಡಿಯೂರಪ್ಪನವರು ಬರೀ ಮಾತಿನಲ್ಲಿ ಹೇಳಿದ್ದಾರೆ ಇದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಆರೋಪಿಸಿದರು. ಸರ್ಕಾರ ಕೊರೊನಾ ಸಂಕಷ್ಟದ ಸ್ಥಿತಿಯಲ್ಲಿ ಮೊದಲು ರೈತರ ತರಕಾರಿಗಳನ್ನು ಮಾರಾಟ ಮಾಡಲು ಅನುಕೂಲ ಮಾಡಿಕೊಡಬೇಕು. ಸಿಎಂ ಯಡಿಯೂರಪ್ಪ ವಿಧಾನಸಭೆಯಲ್ಲಿ ರೈತರ ಪರವಾಗಿದ್ದೇವೆ ಎಂದು ಹೇಳಿದಂತೆ ನಡೆದುಕೊಳ್ಳಬೇಕು. ಬೂತ್ ಮಟ್ಟದ ಕಾಂಗ್ರೇಸ್ ಮುಖಂಡರು ಸರ್ಕಾರ ನೀಡುತ್ತಿರುವ ಎಲ್ಲ ಸೌಲಭ್ಯಗಳು ಜನರಿಗೆ ಸಿಗುತ್ತಿದೆಯಾ ಎನ್ನುವುದನ್ನು ಗಮನಿಸಲು ಸೂಚಿಸಿದ್ದೇನೆ ಎಂದರು.

ಮಾಲೂರಿನ ಶಾಸಕ ಕೆ.ವೈ. ನಂಜೇಗೌಡ ಅವರು ಇದೇ ಕೊಮ್ಮನಹಳ್ಳಿ ಗ್ರಾಮದವರೇ ಆಗಿದ್ಧಾರೆ. ಆದರೆ, ಈ ಕಾರ್ಯಕ್ರಮಕ್ಕೆ ಬರುವ ಮುನ್ನ ಡಿಕೆ ಶಿವಕುಮಾರ್ ಅವರು ಮಾಲೂರು ಶಾಸಕರನ್ನು ಎಚ್ಚರಿಸಿದ ಘಟನೆ ನಡೆಯಿತು. ದಿನಸಿ ವಿತರಿಸುವ ಉದ್ಘಾಟನಾ ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಸೇರಿಸಲು ನಂಜೇಗೌಡರು ಯೋಜಿಸಿದ್ದರು. ಈ ಸುದ್ದಿ ತಿಳಿದ ಡಿಕೆ ಶಿವಕುಮಾರ್ ಅವರು ಜನರನ್ನು ಸೇರಿಸಬೇಡಿ ಎಂದು ಶಾಸಕರಿಗೆ ತಿಳಿಹೇಳಿದರಂತೆ. ಕೊರೋನಾ ಸೋಂಕು ಹರಡುವ ಭೀತಿ ಇದೆ. ಸುಮ್ಮನೆ ಜನರನ್ನು ಸೇರಿಸಿದರೆ ಅಪಾಯ ಆಗಬಹುದು. ಸೋಷಿಯಲ್ ಡಿಸ್ಟೆನ್ಸಿಂಗ್ ಪಾಲಿಸುವುದು ಕಷ್ಟವಾಗುತ್ತದೆ. ಜನರನ್ನು ಸೇರಿಸಿ ನಾನು ದಿನಸಿ ಹಂಚಿದರೆ ಅಪಕೀರ್ತಿ ಪಡೆಯಬೇಕಾಗುತ್ತದೆ. ಯಾವುದೇ ಕಾರಣಕ್ಕೆ ಹೆಚ್ಚು ಜನರನ್ನು ಕಾರ್ಯಕ್ರಮಕ್ಕೆ ಸೇರಿಸಬೇಡಿ. ಸಾಮಾಜಿಕ ಅಂತರ ಪಾಲನೆಗೆ ಕ್ರಮ ಕೈಗೊಳ್ಳಿ ಎಂದು ಕೆ.ವೈ. ನಂಜೇಗೌಡ ಅವರಿಗೆ ಡಿ.ಕೆ.ಶಿವಕುಮಾರ್ ಸೂಚಿಸಿದ್ದಾರೆ.

Also read: ವಿಶ್ವವನ್ನೇ ಬಲಿ ತೆಗೆದುಕೊಳ್ಳುತ್ತಿರುವ ಮಹಾಮಾರಿ ಕೊರೊನಾ ರಹಸ್ಯವನ್ನು ಕಂಡು ಹಿಡಿಯಲು ಸಜ್ಜಾದ ಅಮೆರಿಕಾ; ಬಯಲಾಗುತ್ತಾ ಸತ್ಯ.?