ಕರ್ನಾಟಕದ ಸಮ್ಮಿಶ್ರ ಸರ್ಕಾರ ನಡೆಸುತ್ತಿರುವ ಇಂದಿರಾ ಕ್ಯಾಂಟೀನ್-ನ ಊಟ ತಿನ್ನಲು ಯೋಗ್ಯವಾಗಿದ್ಯ?? ಈ ರಿಪೋರ್ಟ್ ನೋಡಿ ಖಂಡಿತ ಶಾಕ್ ಆಗ್ತೀರ!!

0
370

ಹಸಿದವರಿಗೆ ಅನ್ನ ನೀಡುವ ಉದ್ದೇಶದಿಂದ ರಾಜ್ಯದಲ್ಲಿ ಪ್ರಾರಂಭ ಮಾಡಿದ ಇಂದಿರಾ ಕ್ಯಾಂಟೀನ್ ಊಟ ಬಹುಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ ಈಗ ಈ ಊಟದಲ್ಲಿ ವಿಷವಿದೆ ಎನ್ನುವ ಆಘಾತಕಾರಿ ಸುದ್ದಿಗಳು ಹರಡಿ ರಾಜ್ಯದ ಜನರಲ್ಲಿ ಭಯ ಮೂಡಿಸಿದೆ. ಇದರ ಕುರಿತು ಬೆಂಗಳೂರಿನ ಹಲವು ಕ್ಯಾಂಟೀನ್-ಗಳ ಆಹಾರವನ್ನು ಪರೀಕ್ಷೆಗೆ ಒಳಪಡಿಸಿದಾಗ ಈ ಭಯಾನಕ ಅಂಶ ಬೆಳಕಿಗೆ ಬಂದಿದೆ.

Also read: ಕೇಂದ್ರ ಸರ್ಕಾರದಿಂದ ನೌಕರರ ವರ್ಗಕ್ಕೆ ಮತ್ತೊಂದು ಗಿಫ್ಟ್; ಗ್ರಾಚ್ಯುಟಿ ಮೇಲಿನ ಆದಾಯ ತೆರಿಗೆ ಮಿತಿ ಹೆಚ್ಚಳ..

ಹೌದು ಬಡವರಿಗೆ ಪೌರ ಕಾರ್ಮಿಕರಿಗೆ ಅನ್ನ ನೀಡುವ ಇಂದಿರಾ ಕ್ಯಾಂಟೀನ್ ಸ್ವಲ್ಪದಿನಗಳಲ್ಲೇ ಬಾರಿ ವಿವಾಧಕ್ಕೆ ತುತ್ತಾಗಿದೆ. ಈ ಊಟವನ್ನು ಮನುಷ್ಯರು ಅಷ್ಟೇ ಅಲ್ಲದೆ ಪ್ರಾಣಿಗಳು ತಿನ್ನಲೂ ಯೋಗ್ಯವಾಗಿಲ್ಲ ಎನ್ನುವ ಸತ್ಯಗಳು ತಿಳಿದಿವೆ. ಈ ಊಟವನ್ನು ಮಾಡಿದರೆ ಸ್ಲೋ ಪಾಯ್ಸನ್ ಆಗುತ್ತಿದೆ. ಸತತವಾಗಿ ತಿಂದರೆ ಬೇದಿ ವಾಂತಿ ಆಗಿ ಆಸ್ಪತ್ರೆಗೆ ಸೇರುತ್ತಿದ್ದಾರೆ. ಇನ್ನೂ ಇದೆ ಊಟವನ್ನು ಬಿಬಿಎಂಪಿ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಪೌರಕಾರ್ಮಿಕರಿಗೆ ನೀಡುತ್ತಿದೆ. ಈ ಊಟ ತಿನ್ನುತ್ತಿರುವ ಕಾರ್ಮಿಕರ ಗೋಳು ಕೇಳಲು ಆಗದಷ್ಟು ಬೆಳಕಿಗೆ ಬಂದಿವೆ.

ಇಂದಿರಾ ಊಟದಲ್ಲಿ ವಿಷ?

ಹೌದು ಪೌರಕಾರ್ಮಿಕರಿಗೆ ನೀಡುತ್ತಿರುವ ಊಟವನ್ನು ಜಯನಗರ, ಜೆಪಿ ನಗರ ಹಾಗೂ ನಾಗಾಪುರ ವಾರ್ಡ್​ಗಳಲ್ಲಿ ಊಟದ ಸ್ಯಾಂಪಲ್​​​ಅ​​ನ್ನು ಪರೀಕ್ಷಿಸಲಾಗಿದೆ. ಅದರಂತೆ ಸ್ಯಾಂಪಲ್ಅನ್ನು ಪರೀಕ್ಷಿಸಿ ರಾಮಯ್ಯ ಆಸ್ಪತ್ರೆಯ ವೈದ್ಯರು, ಈ ಊಟದಲ್ಲಿ ಅತಿಯಾದ ಪ್ರಮಾಣದಲ್ಲಿ ಕ್ರಿಮಿ-ಕೀಟಗಳು ಇರುವುದಾಗಿ ವರದಿ ನೀಡಿದ್ದಾರೆ. ಮಹಾನಗರ ವ್ಯಾಪ್ತಿಯಲ್ಲಿ ಸುಮಾರು 16 ಸಾವಿರ ಪೌರಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್​​​​ನಿಂದ ಊಟ ಕೊಡಲಾಗುತ್ತಿದೆ ಎಂದು ಬಿಜೆಪಿ ಕಾರ್ಪೋರೇಟರ್​​ ಉಮೇಶ್ ಶೆಟ್ಟಿ ಗಂಭೀರ ಆರೋಪದ ಜೊತೆಗೆ ವೈದ್ಯರು ನೀಡಿದ ವರದಿಗಳನ್ನು ನೀಡಿದ್ದಾರೆ.

ಊಟ ತಿನ್ನುತ್ತಿರುವ ಕಾರ್ಮಿಕರ ದೂರು?

ಸರ್ಕಾರ ನೀಡುತ್ತಿರುವ ಇಂದಿರಾ ಕ್ಯಾಂಟೀನ್ ಊಟ ಮೊದಲು ಸ್ವಲ್ಪ ಸರಿಯಿತ್ತು. ಇದು ಕೆಲವೇ ದಿನಗಳಲ್ಲಿ ನಾಯಿಗಳು ತಿನ್ನದಷ್ಟು ಕೆಟ್ಟದಾಗಿದೆ. ಇದನ್ನೇ ನಮಗೆ ನೀಡುತ್ತಿದ್ದಾರೆ. ಇದನ್ನು ತಿಂದ ನಮ್ಮ ಸಹಚರರು ವಾಂತಿ ಬೇದಿ ಆಗಿ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾರೆ. ಈಗ ಯಾರು ಊಟ ಮುಟ್ಟೊದೆ ಇಲ್ಲ. ಬೇರೆಯವರಿಗೆ ಗೊತ್ತಿಲ್ಲ ತಿನ್ನುತ್ತಾರೆ. ಆದ್ರೆ ನಾವು ಮುಟ್ಟಲ್ಲ. ಇದನ್ನ ತಿಂದು 10 ದಿನ ಮಲಗಿದ್ರೆ ಯಾರ್ ಬರುತ್ತಾರೆ? ನಾಯಿಗಳಿಗೆ ನೀಡುವ ರೀತಿ ಊಟವನ್ನು ಬಿಸಾಡಿ ಹೋಗುತ್ತಾರೆ. ನಮಗೆ ಬೆಲೆಯಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಮಂತ್ರಿಗಳ ಮನೆಯ ಪಕ್ಕದಲ್ಲಿ ಹುಳವಿರುವ ಪಲಾವ್;

ಅಪಾಯಕಾರಿ ಊಟದ ಅನುಮಾನದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆಗೆ ಇಳಿದು, ಡಿಸಿಎಂ ಮನೆಯ ಪಕ್ಕದಲ್ಲೇ ಇರುವ ಇಂದಿರಾ ಕ್ಯಾಂಟೀನ್ ಊಟವನ್ನು ಪರೀಕ್ಷಿಸಿದೆ ಅದರಲ್ಲಿ ಸಾಕಷ್ಟು ಬ್ಯಾಕ್ಟೀರಿಯಾ ಪತ್ತೆಯಾಗಿವೆ. ಬಳಿಕ ಮೇಯರ್ ಗಂಗಾಂಬಿಕೆ ಇರುವ ಜಯನಗರ ವಾರ್ಡ್ ನಲ್ಲಂತೂ ಪೇಯಿಂಟ್ ಡಬ್ಬದಲ್ಲಿ ಊಟ ನೀಡಲಾಗ್ತಿದೆ. ಅದರಲ್ಲೂ ಸತ್ತ ಇರುವೆಗಳು ಸಿಕ್ಕೋದು ಕಾಮನ್. ಇಲ್ಲಿನ ಸಾಂಬಾರ್ ತಿನ್ನಲು ಯೋಗ್ಯವಿಲ್ಲ ಎಂದು ವರದಿಯಲ್ಲಿ ತಿಳಿಸಿದೆ. ನಂತರ ಸಚಿವ ಕೃಷ್ಣಬೈರೇಗೌಡರ ಬ್ಯಾಟರಾಯನಪುರದ ಬಿಸಿ ಬೇಳೆಬಾತ್-ನಲ್ಲಿ ಭಯಾನಕ ಕಾಯಿಲೆ ಬರುವುದು ಪಕ್ಕಾ ಎಂದು ತಿಳಿದಿದೆ.

ಇಂದಿರಾ ಊಟ ತಿಂದೆ ಭಯಾನಕ ರೋಗಗಳು?

ಈಗಾಗಲೇ ಪತ್ತೆಯಾದ ಊಟದಲ್ಲಿ ವಾಂತಿ, ಬೇದಿ, ಡಿಹೈಡ್ರೇಶನ್‍ಗೆ ಕಾರಣವಾಗುವ ಬ್ಯಾಕ್ಟೀರಿಯಾಗಳು ಪತ್ತೆಯಾದವು. ಪಿಎಚ್ ಎಂಬ ಅಂಶ 6ಕ್ಕಿಂತ ಕಡಿಮೆ ಇದ್ದು, ಇದ್ರಿಂದ ದೇಹದಲ್ಲಿ ಸೆಪಿಟಸ್ ಎಂಬ ಬ್ಯಾಕ್ಟೀರಿಯಾ ಉತ್ಪತ್ತಿಯಾಗಲಿದೆ. ಹಾಗೆಯೇ ಇ-ಕಾಯಲ್ ಎಂಬ ಅಂಶ ಹೆಚ್ಚಿದ್ದು, ಸೆಪಿಟಿಸ್ ಎಂಬ ಬ್ಯಾಕ್ಟೀರಿಯಾ ಇರೋದು ಬೆಳಕಿಗೆ ಬಂತು. ಈ ಬ್ಯಾಕ್ಟೀರಿಯಾ ಚಿಕನ್‍ಗುನ್ಯ, ಲೋ ಬಿಪಿ, ಜ್ವರಕ್ಕೆ ದಾರಿ ಮಾಡಿಕೊಡುತ್ತದೆ ಎಂಬ ವರದಿ ಬಂದಿದೆ. ಎಂದು ಆಹಾರ ತಜ್ಞರು ಮಾಹಿತಿ ನೀಡಿದ್ದಾರೆ.

Also read: ಕ್ಯಾನ್ಸರ್ ಖಾಯಿಲೆಯ ಮಾತ್ರೆಗಳು ತುಂಬಾ ದುಬಾರಿ, ಬಡವರಿಗೆ ನೆರವಾಗಲು ಮೋದಿ ಸರ್ಕಾರ 390 ಔಷಧಿಗಳ ಬೆಲೆಯನ್ನು ಕಡಿಮೆ ಮಾಡಿದೆ!!