ಕೆಮ್ಮು ಬಂದಾಗ ಕೆಮ್ಮಲಿಲ್ಲ ಅಂದ್ರೆ, ಸೀನು ಬಂದಾಗ ಸೀನ್ಲಿಲ್ಲ ಅಂದ್ರೆ ದೇಹದಲ್ಲಿ ಎಷ್ಟೆಲ್ಲ ತೊಂದ್ರೆ ಆಗುತ್ತೆ ಗೊತ್ತಾ??

0
1289

ಸೀನುವುದು, ಕೆಮ್ಮುವುದು, ಮಲ ಮೂತ್ರ ವಿಸರ್ಜಿಸುವುದು, ಆಕಳಿಸುವುದು, ಅಳುವುದು ಇವೆಲ್ಲನ್ನು ಆಯುರ್ವೇದದಲ್ಲಿ ‘ವೇಗ’ವೆಂದು ಕರೆಯುತ್ತಾರೆ. ಶರೀರದಲ್ಲಿ ಮಾಲಿನ್ಯ ಸೇರಿಕೊಂಡಾಗ ಕೂಡ್ಲೇ ಶುಭ್ರಗೊಳಿಸಲು ಈ ವೇಗಗಳು ಉಂಟಾಗುತ್ತವೆ. ತಡ ಮಾಡದೆ ಕ್ರಿಯೆಗಳನ್ನು ನಡೆಸುವುದರಿಂದ ದೇಹವು ಶುದ್ಧಿಯಾಗುವುದು. ಈ ವೇಗಗಳನ್ನು ತಡೆದಲ್ಲಿ ಹಲವಾರು ರೋಗಗಳಿಗೆ ಉಪದ್ರವಗಳಿಗೆ ದಾಸರಾಗಬೇಕಾಗುತ್ತದೆ. ಹಸಿವು, ದಾಹ, ವಾಂತಿ ಬರುವಿಕೆ, ಸೀನು, ತೇಗು ಆಕಳಿಕೆ, ಕೆಮ್ಮು ಈವುಗಳೆಲ್ಲವೂ ದೇಹವು ಕಲ್ಮಶಗಳನ್ನು ಹೊರ ಹಾಕಲು ನೀಡುವ ಸಿಗ್ನಲ್ (ವೇಗ)ಗಳಾಗಿವೆ.

ಹಸಿವೆ ಉಂಟಾದಾಗ ಆಹಾರವನ್ನು ತೆಗೆದುಕೊಳ್ಳದೆ ಇದ್ದಲ್ಲಿ : ಶರೀರ ಕೃಶವಾಗುವವುದು, ಬಲಹೀನತೆ, ಬಳಲಿಕೆಯಿಂದ ಶರೀರ ಸಹಜ ಕಾಂತಿಯನ್ನು ಕಳೆದುಕೊಳ್ಳುವುದು, ಬಾಯಿ ರುಚಿ ಇರುವುದಿಲ್ಲ. ಕಣ್ಣುಗಳು ತಿರುಗುವುದು.

ದಾಹ ನಿಯಂತ್ರಿಸಿದ್ದಲ್ಲಿ: ಬಾಯಿ ಗಂಟಲು ಒಣಗುವುದು, ಕಿವಿಗಳು ಮುಚ್ಚಿಕೊಂಡ ಅನುಭವವಾಗವುದು, ಶರೀರ ಕೃಶಿಸುವುದು, ಬಳಲಿಕೆ, ತಲೆ ತಿರುಗುವುದು, ಹೃದಯದಲ್ಲಿ ನೋವು ಎನಿಸುವುದು.

ಮೂತ್ರ ತಡೆದಲ್ಲಿ: ಕಿಬ್ಬೊಟ್ಟೆ, ಮೂತ್ರಾಸಹಾಯ, ಜನನೇಂದ್ರಿಯ, ವೃಷಣಗಳ ಭಾಗದಲ್ಲಿ ಹಿಡಿದಿಟ್ಟುಕೊಂಡ ಭಾವ ಉಂಟಾಗುವುದು. ಮೂತ್ರ ವಿಸರ್ಜಿಸುವಾಗ ನೋವು ಕಾಣಿಸಿಕೊಳ್ಳುವುದು. ತಲೆನೋವು ಕಂಡುಬರುವುದು.ಮೂತ್ರಾಶಯದಲ್ಲಿ ಕಲ್ಲುಗಳು ಉಂಟಾಗಬಹುದು.

ಮಲ ವಿಸರ್ಜನೆಯನ್ನು ತಡೆದ್ದಲ್ಲಿ: ಕರುಳಿನಲ್ಲಿ ನೋವು, ತಲೆ ಶೂಲೆ, ಹೊಟ್ಟೆ ಉಬ್ಬರ, ಕಾಲುಗಳ ಸೆಳೆತ, ಎದೆ ಹಿಂದುವಿಕೆ,ಬಾಯಿಯ ದುರ್ವಾಸನೆ ಅಂತಹ ಸಮಸ್ಯೆಗಳು ತಲೆದೋರುವವು.

ಅಪಾನ ವಾಯು(ಹೂಸು)ವನ್ನು ತಡೆದಲ್ಲಿ: ವಾತದ ತೊಂದರೆ ಅಧಿಕವಾಗುತ್ತದೆ, ಮೂತ್ರ ಮಲವು ಬಿಗಿ ಹಿಡಿದಂತೆ ಆಗುತ್ತದೆ, ಹೊಟ್ಟೆ ಉಬ್ಬರ ಬರುವುದು, ಹಸಿವು ಕಡಿಮೆಯಾಗುವುದು, ಗುಲ್ಮರೋಗ ಬರುವುದು, ಕಣ್ಣು ಮಸಕಾಗುವುದು.

ವಾಮನ/ ವಾಂತಿಯನ್ನು ನಿರೋಧಿಸಿದರೆ ಉಂಟಾಗುವ ರೋಗಗಳು: ಚರ್ಮರೋಗಗಳು, ಕಣ್ಣುಗಳ ಬಳಿ ನವೆ, ಬಾಯಿ ರುಚಿ ಇಲ್ಲದೆ ಇರುವುದು, ಮುಖದ ಮೇಲೆ ಮಚ್ಚೆಗಳು ಉಂಟಾಗುವವು, ಕೆಮ್ಮು ವಾಕರಿಕೆ, ಬಿಕ್ಕಳಿಕೆ ಉಂಟಾಗುವವು.

ವೀರ್ಯವನ್ನು ವಿಸರ್ಜಿಸದೆ ತಡೆಹಿಡಿದ್ದಲ್ಲಿ: ಅಂಗದಲ್ಲಿ ನೋವು, ಊತ ಕಾಣಿಸಿಕೊಳ್ಳುವುದು. ಎದೆ ಹಿಡಿದಂತಹ ಅನುಭವ, ಜ್ವರ, ಮೂತ್ರ ಬಂಧ, ನಪುಂಸಕತ್ವ ಉಂಟಾಗುತ್ತದೆ.

ಕೆಮ್ಮು ತಡೆಹಿಡಿದ್ದಲ್ಲಿ: ಕುತ್ತಿಗೆಯ ನರಗಳು ಸಿಡಿಯುವವು, ತಲೆ ನೋವು, ಪಾರ್ಶ್ವವಾಯು, ತಲೆ ಸಂಬಂಧಿ ರೋಗಗಳು ಉಂಟಾಗುತ್ತವೆ.

ತೇಗುವುದನ್ನು ನಿಯಂತ್ರಿಸಿದರೆ: ಬಿಕ್ಕಳಿಕೆ, ಅರುಚಿ, ಹೊಟ್ಟೆ ಉಬ್ಬರ, ಹೃದಯ ಹಿಡಿದಂತೆ ಭಾಸವಾಗಿ ಆಯಾಸ ಉಂಟಾಗುತ್ತದೆ.

ಆಕಳಿಕೆಯನ್ನು ತಡೆಹಿಡಿದಾಗ: ಶರೀರ ಅಡರುವುದು, ಸ್ಪರ್ಶಜ್ಞಾನ ನಶಿಸುವುದು, ಹೊಟ್ಟೆಯಲ್ಲಿ ಗೊಂದಲ ಉಂಟಾಗುವುದು, ಕೆಮ್ಮು ತರಿಸುವ ನಾಡಿಗಳಲ್ಲಿ ತೊಂದರೆ ಕಾಣಿಸುವುದು.

ಕಣ್ಣೀರನ್ನು ತಡೆದ್ದಲ್ಲಿ: ನೆಗಡಿ, ನೇತ್ರದ ರೋಗಗಳು, ಅರುಚಿ, ಹೃದಯ ರೋಗಗಳು, ಭ್ರಮೆ, ತಲೆ ಸಂಬಂಧಿ ರೋಗಗಳು, ಕುತ್ತಿಗೆಯ ನರಗಳು ಬಿಗಿ ಹಿಡಿದಂತೆ ಆಗುವುದು.

ನಿದ್ರೆ ತಡೆ ಹಿಡಿದರೆ: ಮೈಕೈ ನೋವು, ಆಕಳಿಕೆ, ತೂಕಡಿಕೆ, ಕಣ್ಣುಗಳ ಭಾರ, ಸೋಮಾರಿತನ, ತಲೆಸುತ್ತು ಉಂಟಾಗುವುದು.

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ
50 ಅಡಿ ರಸ್ತೆ, ಹನುಮಂತನಗರ
ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840