ದೇಶಿ ಸ್ಟೈಲ್ ಚಿಕನ್ ಬಿರಿಯಾನಿ ಮಾಡುವ ವಿಧಾನ..!!

0
628

ಬಿರಿಯಾನಿ ಭಾರತೀಯ ಉಪಖಂಡದ ಒಂದು ಮಿಶ್ರ ಅಕ್ಕಿ ಖಾದ್ಯವಾಗಿದೆ. ಅದನ್ನು ಸಂಬಾರ ಪದಾರ್ಥಗಳು, ಅಕ್ಕಿ ಮತ್ತು ಮಾಂಸ ಅಥವಾ ತರಕಾರಿಗಳಿಂದ ತಯಾರಿಸಲಾಗುತ್ತದೆ. ಬಿರಿಯಾನಿಯ ಮೂಲ ಅನಿಶ್ಚಿತವಾಗಿದೆಯಾದರೂ ಈಗದು ಮಾಂಸಹಾರಿಗಳ ಜನಪ್ರಿಯ ಖಾದ್ಯವಾಗಿದೆ. ಬಿರಿಯಾನಿಯಲ್ಲಿ ಮೂರು ವಿಧ- ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ, ತರಕಾರಿ ಬಿರಿಯಾನಿ. ಆದರೆ ಬಿರಿಯಾನಿಯನ್ನು ಹತ್ತಾರು ವಿಧಗಳಲ್ಲಿ ಮಾಡುವ ಕ್ರಮ ರೂಢಿಯಲ್ಲಿದೆ. ಹೆಚ್ಚಾಗಿ ಇದನ್ನು ಮಾಂಸದಲ್ಲಿ ಮಾಡುವುದು ಹೆಚ್ಚು. ಇವತ್ತು ನಮ್ಮ ರೆಸಿಪೆಯಲ್ಲಿ ದೇಶಿ ಚಿಕನ್ ಬಿರಿಯಾನಿ ಮಾಡುವ ವಿಧಾನ ಇಲ್ಲಿದೆ ನೋಡಿ.

Also read: ಹೈದರಾಬಾದ್ ಚಿಕನ್ ಬಿರಿಯಾನಿ ಅಂದ್ರೆ ಬಾಯಲ್ಲಿ ನೀರು ಬರುತ್ತೆ ಅಲ್ವ…? ಮತ್ತೆ ಯಾಕೆ ತಡ ಸುಲಭವಾಗಿ ನಿಮ್ಮ ಮನೆಯಲ್ಲಿಯೇ ಮಾಡಿಕೊಳ್ಳಿ..!!

ಬೇಕಾಗುವ ಪದಾರ್ಥಗಳು:

 • ಒಂದು ಕೆ.ಜಿ ಬಿರಿಯಾನಿ ಅಕ್ಕಿ,
 • ಒಂದು ಕೆ.ಜಿ ಮಾಂಸ,
 • ಐದು ಟೀಸ್ಪೂನ್ ಎಣ್ಣೆ,
 • ಎರಡು ಟೀ ಸ್ಪೂನ್ ತುಪ್ಪ,
 • ಎರಡು ದೊಡ್ಡ ಗಾತ್ರದ ಈರುಳ್ಳಿ,
 • ಎರಡು ಚೆನ್ನಾಗಿ ಹಣ್ಣಾದ ಟೋಮೊಟೊ,
 • ಗಸಗಸೆ, ಚಕ್ಕೆ, ಲವಂಗ, ಮರಾಠಿ ಮೊಗ್ಗು,
 • ದಾಲ್ಚಿನ್ನಿ ಎಲೆ, ಹಸಿಶುಂಠಿ,
 • ಬೆಳ್ಳುಳ್ಳಿ ಪೇಸ್ಟ್ ಅಗತ್ಯಕ್ಕೆ ತಕ್ಕಷ್ಟು ಉಪ್ಪು,
 • ತುಸು ಅರಿಸಿಣ, ೧ ಕಟ್ಟು ಕೊತ್ತಂಬರಿಸೊಪ್ಪು,
 • ಅರ್ಧ ಹೋಳು ಚೆನ್ನಾಗಿ ಬಲಿತ ತೆಂಗಿನಕಾಯಿ,
 • ಅರ್ಧ ಕಟ್ಟು ಪುದೀನಾ ಸೊಪ್ಪು,
 • ೫ ಹಸಿಮೆಣಸು, ೧ ಟೀಸ್ಪೂನ್ ಮೆಣಸಿನ ಪುಡಿ,
 • ಎರಡು ಟೀ ಸ್ಪೂನ್ ಧನಿಯ ಪುಡಿ, ೧ ಟೀ ಸ್ಪೂನ್ ಅಚ್ಚಕಾರದ ಪುಡಿ,
 • ೧ ನಿಂಬೇ ಹಣ್ಣು, ಅಳತೆಗೆ ತಕ್ಕನೀರು

  ಮಾಡುವ ವಿಧಾನ:


Also read: ಅತಿ ಸುಲಭವಾಗಿ ಮತ್ತು ಕಡಿಮೆ ಸಮಯದಲ್ಲಿ ಆರೋಗ್ಯಕರ ಡಯಟ್ – ಚಿಕನ್ ಸೂಪ್ ಮಾಡಿ ಸವಿದು ನೋಡಿ..!!

 • ಅಕ್ಕಿಯನ್ನು ತೊಳೆದು ನೀರನ್ನು ಬಸಿದು ಇಟ್ಟುಕೊಂಡು. ಮಾಂಸವನ್ನು ಶುದ್ದಿಕರಿಸಿಕೊಂಡು ತೊಳೆದಿಟ್ಟುಕೊಳ್ಳಿ
 • ನಂತರ ಈರುಳ್ಳಿ ಮತ್ತು ಎರಡು ಚೆನ್ನಾಗಿ ಹಣ್ಣಾದ ಟೋಮೊಟೊವನ್ನು ಉದ್ದಕ್ಕೆ ಹೆಚ್ಚಿಟ್ಟುಕೊಳ್ಳಬೇಕು.
 • ಗಸಗಸೆ, ಚಕ್ಕೆ, ಲವಂಗ, ೫ ಹಸಿಮೆಣಸು,೧ ಟೀಸ್ಪೂನ್ ಮೆಣಸು, ಎರಡು ಟೀ ಸ್ಪೂನ್ ಧನಿಯ, ೧೦ ಒಣಮೆಣಸಿನಕಾಯಿ, ಅರ್ಧ ಹೋಳು
 • ಚೆನ್ನಾಗಿ ಬಲಿತ ತೆಂಗಿನಕಾಯಿಯನ್ನು ಬಾಣಲೆಯೊಂದಕ್ಕೆ ಸ್ಪಲ್ಪ ಎಣ್ಣೆ ಹಾಕಿ ಕೆಂಪಗೆ ಹುರಿದು ಪುಡಿ ಮಾಡಿಟ್ಟುಕೊಳ್ಳಬೇಕು.
 • ನಂತರ ೫ ಟೀಸ್ಪೂನ್ ಎಣ್ಣೆ, ೩ ಟೀ ಸ್ಪೂನ್ ತುಪ್ಪ, ಎರಡು ಈರುಳ್ಳಿ, ಟೋಮೊಟೊವನ್ನು ಸೇರಿಸಿ ಚೆನ್ನಾಗಿ ಬಾಡಿಸಿ, ಅದಕ್ಕೆ ಮಾಂಸವನ್ನು ಸೇರಿಸಿ ಹದವಾಗಿ ಹುರಿದು ರುಬ್ಬಿಕೊಂಡ ಮಸಾಲೆಯನ್ನು ಸೇರಿಸಿ.

Also read: ಹೆಚ್ಚು ಖಾರವನ್ನು ತಿನ್ನಲು ಬಯಸುವವರು ಇಂದೇ ಟ್ರೈ ಮಾಡಿ ಬಟರ್ ಚಿಕನ್ ಮಸಾಲ..!!

 • ಹಸಿಶುಂಠಿ, ಬೆಳ್ಳುಳ್ಳಿ ಪೇಸ್ಟ್ ಮತ್ತು ಅಗತ್ಯಕ್ಕೆ ತಕ್ಕಷ್ಟು ಉಪ್ಪು ಸೇರಿಸಿ ಬಾಡಿಸಿಕೊಂಡು ಅಳತೆಗೆ ತಕ್ಕ ನೀರನ್ನು ಹಾಕಿ ಅಕ್ಕಿಯನ್ನು ಮಸಾಲೆಯೊಂದಿಗೆ ಮಿಶ್ರಮಾಡಿ ಮಧ್ಯಮ ಉರಿಯಲ್ಲಿ ಚೆನ್ನಾಗಿ ಬೇಯಿಸಿ,
 • ಮುಕ್ಕಾಲು ಭಾಗ ಬಿರಿಯಾನಿ ಬೆಂದ ಮೇಲೆ ಅರ್ಧ ಕಟ್ಟು ಪುದೀನಾ ಸೊಪ್ಪು,೧ ಕಟ್ಟು ಕೊತ್ತಂಬರಿಸೊಪ್ಪುನ್ನು ಹಾಕಿ ಮಿಶ್ರಮಾಡಿ,
 • ಕೊನೆಗೆ ನಿಂಬೆ ಹಣ್ಣನ್ನು ಹಿಂಡಿ ಬಿರಿಯಾನಿಯನ್ನು ಸ್ಪಲ್ಪ ಹೊತ್ತು ಮುಚ್ಚಿಟ್ಟು ಅದು ಚೆನ್ನಾಗಿ ಅರಳಿದ ಮೇಲೆ ಬಾಯಿ ತೆರೆದು ನೋಡಿ. ಈಗ ನಿಮ್ಮ ದೇಶಿ ಚಿಕನ್ ಬಿರಿಯಾನಿ ರೆಡಿ.