ಪಾರ್ಕ್ ನಲ್ಲಿ ರೊಮ್ಯಾನ್ಸ್ ಮಾಡೋಕೆ 500 ರುಪಾಯಿ ಕೊಟ್ಟರೆ ಪೊದೆಯಲ್ಲಿ ಜಾಗ ಕೊಡ್ತಾರಂತೆ..

0
1613

ಲವರ್ಸ್ ಸ್ಪಾಟ್ ಅಂದ್ರೆ ಅದು ಪಾರ್ಕ್ ಗಳು. ಪ್ರೇಮಿಗಳು ಗಂಟೆಗಟ್ಟಲೆ ಕೂತು ಹರಟುತ್ತಾ ರೊಮ್ಯಾನ್ಸ್ ಮಾಡೋಕಂತ್ಲೇ ಪಾರ್ಕ್ ಗಳಿಗೆ ಬರ್ತಾರೆ. ಆದರೆ ಇದು ಸಾರ್ವಜನಿಕರಿಗೆ ತೀರಾ ಮುಜುಗರದ ಸಂಗತಿ. ಫ್ಯಾಮಿಲಿ ಜೊತೆಗೆ ಫ್ರೆಶ್ ಏರ್ಗಾಗಿ ಉದ್ಯಾನವನಗಳಿಗೆ ಬರ್ತಾರೆ. ಆದ್ರೆ ಈ ಪ್ರೇಮಿಗಳ ವರ್ತನೆಯಿಂದ ಮುಜುಗರಪಡ್ತಾರೆ.

ಹೀಗಿರುವಾಗ ಪ್ರೇಮಿಗಳ ಅಕ್ರಮಗಳಿಗೆ ಬ್ರೇಕ್ ಹಾಕಬೇಕಾದವರೇ ಪ್ರೋತ್ಸಾಹ ಸಿಗ್ತಿದೆ ಅಂದ್ರೆ ನೀವ್ ನಂಬ್ತೀರಾ..! ಹೌದು.. ತೆಲಂಗಾಣ ರಾಜಧಾನಿ ಹೈದರಾಬಾದ್ನಲ್ಲಿರುವ ಪ್ರಮುಖ ಪಾರ್ಕ್ ಗಳಾದ ಇಂದಿರಾ, ಸಂಜಿವಯ್ಯ, ದುರ್ಗಂ ಚೆರುವು ಪಾರ್ಕ್ ಗಳಲ್ಲಿ ಆಕ್ರಮ ಚಟುವಟಿಕೆಗಳು ರಾಜರೋಷವಾಗಿ ನಡೆಯುತ್ತಿವೆ. ಈ ಅಕ್ರಮ ಚಟುವಟಿಕೆಗಳಿಗೆ ಭದ್ರತಾ ಸಿಬ್ಬಂದಿಗಳೇ ಸಾಥ್ ನೀಡ್ತಿದ್ದಾರೆ.

ಜಸ್ಟ್ 500 ರೂ. ಕೊಟ್ರೆ ಪಾರ್ಕ್ ಗಳಲ್ಲಿ ಪ್ರೇಮಿಗಳಿಗೆ ಪಾರ್ಕ್ ನ ರಹಸ್ಯ ಸ್ಥಳವನ್ನು ತೋರಿಸುತ್ತಾರೆ. ಒಂದು ಗಂಟೆಯ ಅವಧಿವರೆಗೆ ಪ್ರೇಮಿಯ ಜೊತೆ ಕುಳಿತುಕೊಳ್ಳಲು ಅನುಮತಿ ನೀಡುತ್ತಿದ್ದಾರೆ. ಪಾರ್ಕ್ ನ ಪ್ರತಿಯೊಂದು ಸ್ಥಳಕ್ಕೂ ಒಂದೊಂದು ದರ ನಿಗದಿ ಮಾಡಲಾಗಿದೆ. ಅದರಂತೆ 50 ರೂ. ನಿಂದ ಹಣ ಪಡೆಯುತ್ತಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಇದರಿಂದ ಸಾರ್ವಜನಿಕರಿಗೆ ತೀರಾ ತೊಂದರೆಯಾಗುತ್ತಿದ್ದು, ಸಂಜೆ ವೇಳೆಗೆ ಪಾರ್ಕ್ ಗಳು ಪ್ರೇಮಿಗಳಿಂದ ತುಂಬಿ ತುಳುಕುತ್ತಿವೆ. ರಾತ್ರಿ 11 ಗಂಟೆಯಾದರೂ ಪ್ರೇಮಿಗಳು ಪಾರ್ಕ್ ಗಳನ್ನು ಬಿಟ್ಟು ತೆರಳುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಪಾರ್ಕ್ ಗಳಲ್ಲಿ ಎಲ್ಲಿ ನೋಡಿದರಲ್ಲಿ ಕಾಂಡೋಮ್ ಪ್ಯಾಕೆಟ್ ಗಳ ದರ್ಶನವಾಗುತ್ತಿರೋದೇ ಇಲ್ಲಿನ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

ಇನ್ನು ಈ ಕುರಿತು ಹಿಂದೊಮ್ಮೆ ಸ್ಥಳೀಯ ಮಾಧ್ಯಮಗಳು ಹಲವು ವರದಿಗಳನ್ನು ಬಿತ್ತರಿಸಿದ ಪರಿಣಾಮ ಅಕ್ರಮಗಳಿಗೆ ಬ್ರೇಕ್ ಬಿದ್ದಿತ್ತು. ಆದರೆ ಕೆಲ ದಿನಗಳ ನಂತರ ಅಧಿಕಾರಿಗಳು ಇತ್ತ ಗಮನಿಸದ ಕಾರಣ ಮತ್ತೆ ಅಕ್ರಮ ಚಟುವಟಿಕೆಗಳು ತಲೆ ಎತ್ತಿದೆ. ಇದಕ್ಕೆ ಸಿಬ್ಬಂದಿಗಳೇ ಸಾಥ್ ನೀಡುತ್ತಿರುವುದು ಸಾರ್ವಜನಿಕರಿಗೆ ಬೇಸರ ತಂದಿದೆ.