ಕೊರಿಯರ್ ವ್ಯವಸ್ಥೆಯ ಚೆಲ್ಲಾಟ ಗ್ರಾಹಕರಿಗೆ ಪ್ರಾಣಸಂಕಟ ಇದೇನಪ್ಪ ಅಂತೀರಾ ಈ ಸ್ಟೋರಿ ನೋಡಿ..!

0
628

ಇಂದಿನ ಅತ್ಯಾಧುನಿಕ ಕಾಲದಲ್ಲಿ ಎಲ್ಲವೂ ವೇಗವಾಗಿ ಮುಗಿಯಬೇಕೆಂದು ಎಲ್ಲರೂ ಬಯಸುತ್ತಾರೆ. ಪತ್ರ, ಪಾರ್ಸಲ್ ಕಳುಹಿಸಲು ಬಹುತೇಕ ಮಂದಿ ಕೊರಿಯರ್ ಅನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಕನಸಿನ ನೌಕರಿಗಾಗಿ ಸಲ್ಲಿಸುವ ಅರ್ಜಿ ಶೀಘ್ರವಾಗಿ ತಲುಪಲು ಹಾಗೂ ವಿಳಂಬವಾಗಬಾರದೆಂಬ ಕಾರಣಕ್ಕೆ ಅತ್ಯುತ್ತಮವಾದ ಕೊರಿಯರ್‍ಅನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ, ಅರ್ಜಿ ತಲುಪುವುದೇ ಇಲ್ಲ. ಮತ್ತೊಂದು ಉದಾಹರಣೆಯೆಂದರೆ, ಹುಟ್ಟುಹಬ್ಬಕ್ಕೆ ತಾಯಿಗೆ ಉತ್ತಮ ಉಡುಗೊರೆ ಕೊರಿಯರ್ ಮೂಲಕ ಕಳುಹಿಸಿದರೆ, ಅದು ಆಕೆಗೆ ಸಿಗುವುದೇ ಇಲ್ಲ. ಇದನ್ನು ಪ್ರಶ್ನಿಸಿದರೆ, ಕೊರಿಯರ್ ಕಂಪನಿಯವರು ಮೊದಲು ಅದನ್ನು ಆಕೆಗೆ ಕಳುಹಿಸಲಾಗಿದೆ ಎಂದು ವಾದಿಸುತ್ತಾರೆ, ನಂತರ ಉಡುಗೊರೆ ಕಳೆದುಹೋಗಿದೆ ಎಂದು ಒಪ್ಪಿಕೊಳ್ಳುತ್ತಾರೆ..!

ಕೊರಿಯರ್ ಸೇವೆಗಳನ್ನು ಪಡೆದುಕೊಳ್ಳುವ ಗ್ರಾಹಕರು ಅನುಭವಿಸುವ ಸಮಸ್ಯೆಗಳ ಪೈಕಿ ಇವು ಕೇವಲ ಎರಡು ಉದಾಹರಣೆಗಳಷ್ಟೇ. ವಿಳಂಬ ವಿತರಣೆ, ವಿತರಣೆಯಾಗುವುದಿಲ್ಲ, ಸರಕುಗಳಿಗೆ ಹಾನಿ, ಪ್ಯಾಕೇಜ್‍ನಲ್ಲಿ ವಸ್ತುಗಳ ಕಳವು… ಹೀಗೆ ದೂರಗಳ ಪಟ್ಟಿ ಬಹಳ ದೊಡ್ಡದಾಗಿದೆ.
ಇಂಥ ಅನ್ಯಾಯಗಳನ್ನು ನಿಯಂತ್ರಿಸುವ ಕಾನೂನು ಅನುಪಸ್ಥಿತಿಯಲ್ಲಿ ಗ್ರಾಹಕರ ನ್ಯಾಯದ ಹೋರಾಟ ದೀರ್ಘಕಾಲದ್ದಾಗಿದೆ. ಇದೇ ದಿಸೆಯಲ್ಲಿ 1996ರ ಮೇ ತಿಂಗಳಿನಲ್ಲಿ ಗ್ರಾಹಕರು ಪ್ರಮುಖ ಹಿನ್ನಡೆಯನ್ನು ಅನುಭವಿಸಿದ್ದರು.

ಭಾರತಿ ನಿಟ್ಟಿಂಗ್ ಕಂಪನಿ v/s ಡಿಹೆಚ್‍ಎಲ್ ವರ್ಡ್‍ವೈಡ್ ಎಕ್ಸ್‍ಪ್ರೆಸ್ ಕೊರಿಯರ್ (ಸಿಎ ನಂ. 9057, 1996) ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕೊರಿಯರ್ ಕಂಪನಿಯ ಷರತ್ತು, ನಿಮಯಗಳಿಗೆ ಒಪ್ಪಿ, ಗ್ರಾಹಕರು ಸಹಿ ಮಾಡಿದ್ದಲ್ಲಿ ನಿಯಮಕ್ಕಿಂತ ಹೆಚ್ಚಿ ನ ಪರಿಹಾರವನ್ನು ಘೋಷಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು.
ಅಲ್ಲದೆ, ಕೆಲ ಅಂಶಗಳ ಕುರಿತು ಸುಪ್ರೀಂ ಕೋರ್ಟ್ ಗಮನ ಸೆಳೆದಿತ್ತು. ಗ್ರಾಹಕ ಸಹಿ ಮಾಡದಿದ್ದಲ್ಲಿ, ಷರತ್ತು, ನಿಯಮಗಳನ್ನು ಆತನ ಗಮನ ತರಲಾಗಿತ್ತೇ ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದು ಕೇಳಿತ್ತು. ಪ್ರಕರಣದ ಸತ್ಯಾಸತ್ಯತೆ ಮೇಲೆ ಪ್ರತಿಯೊಂದು ಪ್ರಕರಣ ಅವಲಂಭಿತವಾಗಿರುತ್ತದೆ ಮತ್ತು ಸಹಿ ದಾಖಲೆ ಕುರಿತು ಗ್ರಾಹಕ ತಗಾದೆ ತೆಗೆದ್ದಲ್ಲಿ, ಯಾವ ಸಂದರ್ಭಗಳಲ್ಲಿ ದಾಖಲೆಗಳಿಗೆ ಆತ ಸಹಿ ಹಾಕಿದ್ದ ಎಂಬುದನ್ನು ಸಾಬೀತುಪಡಿಸಬೇಕಾಗುತ್ತದೆ ಎಂದು ತಿಳಿಸಿತ್ತು.

ಬ್ಲೂ ಡಾರ್ಟ್ ಎಕ್ಸ್‍ಪ್ರೆಸ್ v/s ಸ್ಪೆಫೆನ್ ಲಿವೆರಾ, (ಆರ್‍ಪಿ ನಂ. 393, 1997) ಪ್ರಕರಣದಲ್ಲಿ ರಾಷ್ಟ್ರೀಯ ಗ್ರಾಹಕ ವಿವಾದಗಳ ಪರಿಹಾರ ಆಯೋಗವು ಗ್ರಾಹಕನಿಗೆ ನೀಡಲಾದ 20,000 ಪರಿಹಾರವನ್ನು ಎತ್ತಿಹಿಡಿದಿರುವ ಪರಿಣಾಮ 2001ರಲ್ಲಿ ಗ್ರಾಹಕರಿಗೆ ಸ್ವಲ್ಪ ನಿರಾಳ ವಾತಾವರಣ ಸೃಷ್ಟಿಯಾಯಿತು. ಈ ರೀತಿ ಮಾಡುವ ಮೂಲಕ ಆಯೋಗವು, ಭಾರತಿ ನಿಟ್ಟಿಂಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಪ್ರಮಾಣಿತ ಒಪ್ಪಂದಲ್ಲಿ ಸಣ್ಣದಾಗಿ ಮುದ್ರಿತವಾಗಿರುವುದನ್ನು ಪರಿಗಣಿಸಿರಲಿಲ್ಲ ಎಂದು ಸ್ಪಷ್ಟಪಡಿಸಿತ್ತು. ಈ ಪ್ರಕರಣದಲ್ಲಿ ಕೊರಿಯರ್ ರಸೀದಿ ಹಿಂದೆ ಸಣ್ಣ ಹಾಗೂ ಸ್ಪಷ್ಟವಾಗಿ ಮುದ್ರಿತವಾಗಿರುವ ಷರತ್ತು ಮತ್ತು ನಿಯಮಗಳು ಪ್ರಮುಖವಾದುದು. ಎರಡನೆಯದಾಗಿ ಈ ಕುರಿತು ಗ್ರಾಹಕರ ಗಮನ ಸೆಳೆಯಲಾಗಿಲ್ಲ. ಮೂರನೆಯದಾಗಿ ಹಿಂದೆ ಮುದ್ರಿತವಾಗಿರುವ ಷರತ್ತು ಮತ್ತು ನಿಯಮಗಳಿಗೆ ಗ್ರಾಹಕ ಒಪ್ಪಿಕೊಂಡಿರುವುದಾಗಿ ಎಲ್ಲೂ ರಸೀದಿಯಲ್ಲಿ ಸ್ಪಷ್ಟವಾಗಿಲ್ಲ ಎಂದೂ ಆಯೋಗವು ಹೇಳಿದೆ.

ಅಲ್ಲದೆ, ಪ್ರವೇಶ್ ಕುಮಾರ್ ಮುಖರ್ಜಿ v/s ಏರ್ ಟ್ರಾನ್ಸ್‍ಪೋರ್ಟ್ ಕಾರ್ಪೊರೇಷನ್ ಲಿಮಿಟೆಡ್(ಆರ್‍ಪಿ ನಂ. 1404, 2003) ಪ್ರಕರಣದಲ್ಲಿ ಆಯೋಗವು ಗ್ರಾಹಕ ಹಾಗೂ ಕೊರಿಯರ್ ಕಂಪನಿ ನಡುವೆ ತಿಳಿವಳಿಕೆ ಒಪ್ಪಂದ ಇಲ್ಲದಿದ್ದಲ್ಲಿ ರವಾನೆ(ಸಾಗಣೆ) ಟಿಪ್ಪಣಿಯಲ್ಲಿನ ಷರತ್ತುಗಳು ಉಭಯ ಬಣಗಳ ಮೇಲೆ ಅನ್ವಯವಾಗುವುದಿಲ್ಲ.
2014ರ ಡಿಟಿಡಿಸಿ ಕೊರಿಯರ್ ಮತ್ತು ಕಾರ್ಗೋ ಹಾಗೂ ಮತ್ತೊಂದು ಎಮ್/ಎಸ್ ಕಾಟರ್‍ಪಿಲ್ಲರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹಾಗೂ ಮತ್ತೊಂದು(ಆರ್ ನಂ. 2150, 2008) ಪ್ರಕರಣದಲ್ಲಿ ಆಯೋಗವು ಗ್ರಾಹಕ ನ್ಯಾಯಾಲಯದ 1,82,645 ಪರಿಹಾರದ ತೀರ್ಪನ್ನು ಎತ್ತಿಹಿಡಿದಿತ್ತು. ಈ ಪ್ರಕರಣದಲ್ಲಿ ದೂರುದಾರನ ಚೆಕ್ ಕಳವು ಮಾಡಿ, ಹಣ ಡ್ರಾ ಮಾಡಿಕೊಳ್ಳಲಾಗಿತ್ತು.

ನಿಮ್ಮ ಗಮನಕ್ಕೆ ಷರತ್ತು ಮತ್ತು ನಿಮಯಗಳನ್ನು ತರದಿದ್ದರೆ ಅಥವಾ ಷರತ್ತುಗಳು ಸ್ಪಷ್ಟವಾಗಿ ಗೋಚರಿಸದಿದ್ದರೆ ಅಥವಾ ರಸೀದಿ-ರವಾನೆ ಟಿಪ್ಪಣಿ ಮೇಲೆ ಸಹಿ ಮಾಡದಿದ್ದರೆ ನೀವು ಪರಿಹಾರವನ್ನು ಪಡೆದುಕೊಳ್ಳಬಹುದು. ಇದರ ಹೊರತಾಗಿಯೂ ಪರಿಹಾರ ಪಡೆದುಕೊಳ್ಳಬಹುದಾಗಿದೆ. ಸೆಂಟರ್ ಇನ್‍ಲ್ಯಾಂಡ್ ವಾಟರ್ ಟ್ರಾನ್ಸ್‍ಪೋರ್ಟೇಷನ್ ಕಾರ್ಪೊರೇಷನ್ ಲಿಮಿಟೆಸ್ ಮತ್ತು ಮತ್ತೊಂದು v/s ಬ್ರೊಜೊ ನಾಥ್ ಗಂಗೂಲಿ ಹಾಗೂ ಮತ್ತೊಂದು(1986 ಎಐಆರ್ 1571, 1986 ಎಸ್‍ಸಿಆರ್(2) 278) ಪ್ರಕರಣದಲ್ಲಿ ಒಪ್ಪಂದದಲ್ಲಿನ ಅನ್ಯಾಯ ಮತ್ತು ಅಸಮಂಜಸ ಷರತ್ತುಗಳನ್ನು ನ್ಯಾಯಾಲಯವು ಅನೂರ್ಜಿತಗೊಳಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.