ರೈತರಿಗೆ ಸಿಎಂ ನೀಡಿದ ಸಾಲ ಮನ್ನಾ ಘೋಷಣೆಯನ್ನು ನಂಬಿಕೊಂಡ ರೈತರಿಗೆ ಕೋರ್ಟ್ ನೊಟೀಸ್, ಕಂಗಾಲಾದ ರೈತರು!! ಎಚ್.ಡಿ.ಕೆ. ರೈತರ ಕೈ ಹಿಡಿಯುತ್ತಾರಾ ??

0
182

ಚುನಾವಣೆ ಮೊದಲು ಸಿಎಂ ಕುಮಾರಸ್ವಾಮಿ ನೀಡಿದ ರೈತರ ಸಂಪೂರ್ಣ ಸಾಲ ಮನ್ನಾ ಮಾತು ಇನ್ನೂ ಬರಿ ಭರವಸೆಯಾಗೆ ಉಳಿದಿದೆ. ರೈತರಿಗಂತೂ ಇನ್ನೂ ಬ್ಯಾಂಕ್-ಗಳಿಂದ ನೋಟಿಸ್ ಬರುವುದು ನಿಂತಿಲ್ಲ. ಅಷ್ಟೇಅಲ್ಲದೆ ಬ್ಯಾಂಕ್ ಗಳ ನೋಟೀಸ್ ಗೆ ಸರ್ಕಾರದ ಸಾಲ ಮನ್ನಾ ವನ್ನು ನೋಡಿಕೊಂಡು ಕುಳಿತ ರೈತರಿಗೆ ಮತ್ತೊಂದು ಶಾಕ್ ಆಗಿದ್ದು ಈಗ ಬ್ಯಾಂಕ್ ಗಳು ಕೋರ್ಟ್ ಮೆಟ್ಟಿಲೇರಿದ್ದು, ರೈತರರಿಗೆ ಕೋರ್ಟ್ ಗೆ ಹಾಜರಾಗುವಂತೆ ನೋಟೀಸ್ ಬರುತ್ತಿವೆ ಇದನ್ನು ಕಂಡ ರೈತರು ಆಘಾತಕ್ಕೆ ಒಳಗಾಗಿದ್ದು ಸರ್ಕಾರ ನಂಬಿಕೊಂಡು ಹೊಲಮನೆ ಹರಾಜಿಗೆ ಬರುತ್ತೆ ಎನ್ನುವ ಆತಂಕದಲ್ಲಿದ್ದಾರೆ.

ಹೌದು ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ ಮೈತ್ರಿ ಸರ್ಕಾರ ವರ್ಷವಾದರೂ ರೈತರಿಗೆ ಮತ್ತು ಬ್ಯಾಂಕ್ ಗಳಿಗೆ ಸರಿಯಾದ ಭದ್ರತೆ ಮಾಡಿಲ್ಲ, ಬ್ಯಾಂಕ್ ಗಳಿಂದ ಬರುತ್ತಿರುವ ನೋಟೀಸ್ ಬಗ್ಗೆ ಸರ್ಕಾರಕ್ಕೆ ತಿಳಿಸಿದರೆ ಮುಖ್ಯಮಂತ್ರಿ ಕುಮಾರಸ್ವಾಮಿ ರೈತರಿಗೆ ಪತ್ರ ಬರೆದು ನಿಮ್ಮ ಜೊತೆ ನಾವಿದ್ದೇವೆ, ಹೆದರಬೇಡಿ ಎಂದು ಧೈರ್ಯವನ್ನೂ ಕೂಡ ತುಂಬುತ್ತಾರೆ. ಆದರೆ ಕೋರ್ಟ್ ನೋಟಿಸ್ ಬರೋದು ಮಾತ್ರ ನಿಂತಿಲ್ಲ. ಬ್ಯಾಂಕ್ ಗೆ ರೈತರು ಹೋಗಿ ಸಾಲ ಮನ್ನಾ ಬಗ್ಗೆ ಹೇಳಿಕೊಂಡರೆ ನಿಮ್ಮನು ನೋಡಿ ಸಾಲ ನೀಡಿದ್ದು ಕುಮಾರಸ್ವಾಮಿ ನೋಡಿ ಸಾಲ ನೀಡಿಲ್ಲ ಎನ್ನುತ್ತಿದ್ದಾರೆ ಎಂದು ರೈತರು ಆಘಾತಕ್ಕೆ ಒಳಗಾಗಿದ್ದಾರೆ.

ಇಂತಹ ಹತ್ತಾರು ಕೋರ್ಟ್ ನೋಟೀಸ್ -ಗಳು ಹಾವೇರಿ ಅನ್ನದಾತರಿಗೆ ಬಂದಿದ್ದು ಈಗ ಚಾಮರಾಜನಗರದ ರೈತರಿಗೆ ಬರುತ್ತಿವೆ. ಅದರಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ಮಳೆಯಿಲ್ಲದೆ ರೈತರು ಸಾಲ ಮಾಡಿಕೊಂಡು ಅಳುವಿನ ಅಂಚಿನಲ್ಲಿದ್ದಾರೆ. ಕುಮಾರಸ್ವಾಮಿ ಕೇವಲ ಅಧಿಕಾರ ದಾಹದಿಂದ ಆಶ್ವಾಸನೆ ನೀಡಿ ಅಧಿಕಾರ ವಹಿಸಿಕೊಂಡನೆ ಹೊರತು, ನಿಜಕ್ಕೂ ಈ ಕುಮಾರಸ್ವಾಮಿ ಗೆ ರಾಜ್ಯದ ಜನರ ಹಿತ ಬಯಸುವ ಮನಸಿಲ್ಲ. ರೈತರ ಹೆಸರಿನಲ್ಲಿ ತನ್ನ ಸ್ವಾರ್ಥ ಸಾಧನೆಗಾಗಿ ಭರವಸೆ ನೀಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದ್ದು.

ರೈತರಿಗೆ ಕೋರ್ಟ್ ನೋಟಿಸ್ ?

ಚಾಮರಾಜನಗರ ಜಿಲ್ಲೆಯ ವೆಂಕಟಯ್ಯನಛತ್ರದ ವಿಜಯ ಬ್ಯಾಂಕ್‍ನಲ್ಲಿ 20ಕ್ಕೂ ಹೆಚ್ಚು ರೈತರು ಬೆಳೆ ಸಾಲ ಪಡೆದಿದ್ದರು. ಆದರೆ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿಸಲು ವಿಫಲರಾಗಿದ್ದಾರೆ. ಹಾಗಾಗಿ ವಿಜಯ ಬ್ಯಾಂಕ್ ಕೋರ್ಟ್ ಮೆಟ್ಟಿಲೇರಿದ್ದು ಜಿಲ್ಲಾ ನ್ಯಾಯಾಲಯ ಇಂದು ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿದೆ ಎಂದು ರೈತ ವೀರತಪ್ಪ ಅಕ್ರೋಶ ವ್ಯಕ್ತಪಡಿಸಿದ್ದು ಸಾಲಮನ್ನಾ ಮಾಡುತ್ತೇನೆಂಬ ಸಿಎಂ ಕುಮಾರಸ್ವಾಮಿಯವರ ಭರವಸೆ, ಭರವಸೆಯಾಗಿಯೇ ಉಳಿದಿದೆ. ಇದರ ನಡುವೆ ಪತ್ರ ಬರೆದು ಧೈರ್ಯ ಬೇರೆ ತುಂಬಿದರು. ಆದರೆ ಅನ್ನದಾತರಿಗೆ ಮಾತ್ರ ಶಾಕ್ ಮೇಲೆ ಶಾಕ್ ಬರುತ್ತಿವೆ. ಬ್ಯಾಂಕ್‍ಗೆ ಹೋಗಿ ಸಾಲಮನ್ನಾ ಯೋಜನೆ ಬಗ್ಗೆ ಮಾತನಾಡಿದರೆ, ಕುಮಾರಸ್ವಾಮಿ ಮುಖ ನೋಡಿ ನಿಮಗೆ ಸಾಲ ನೀಡಿಲ್ಲ. ನಿಮ್ಮ ಜಮೀನಿನ ಮೇಲೆ ಸಾಲ ನೀಡಿದ್ದೇವೆ. ಸಾಲ ಮರುಪಾವತಿಸಿ ಇಲ್ಲವೆ ಕಾನೂನು ಕ್ರಮ ಎದುರಿಸಿ ಎನ್ನುತ್ತಿದ್ದಾರೆ ಎಂದು ಹೇಳಿದ್ದಾರೆ.

ಇಲ್ಲಿಯವರೆಗೆ ಮಾಡಿದ ಸಾಲ ಮನ್ನಾ ಎಷ್ಟು?

@publictv

ಸಹಕಾರ ಇಲಾಖೆ ಈಗಾಗಲೇ ಘೋಷಿಸಿಕೊಂಡಿರುವ ಮಾಹಿತಿ ಪ್ರಕಾರ ಈ ಯೋಜನೆಯಿಂದ 20.38 ಲಕ್ಷ ರೈತರಿಗೆ 9448.61 ಕೋಟಿ ರೂ. ಸೌಲಭ್ಯ ದೊರೆಯಲಿದೆ. ಜೂನ್‌ ಅಂತ್ಯದ ವೇಳೆಗೆ ಸಾಲ ಮನ್ನಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಮುಕ್ತಾಯಗೊಳಿಸಲಾಗುತ್ತದೆ ಎಂಬ ಭರವಸೆಯನ್ನು ಸರಕಾರ ನೀಡುತ್ತಲೇ ಇದೆ. ಆದರೆ ಆಯ್ಕೆಗೊಂಡ ಫಲಾನುಭವಿಗಳಿಗೆ ಇದುವರೆಗೆ ಕೇವಲ 2630 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ. ವಾಣಿಜ್ಯ ಬ್ಯಾಂಕ್‌ಗಳಲ್ಲಿ ಫಲಾನುಭವಿಗಳ ಸಂಖ್ಯೆ ಇಷ್ಟೇ ಪ್ರಮಾಣದಲ್ಲಿದ್ದು, ಇದುವರೆಗೆ 2800 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಒಟ್ಟಾರೆಯಾಗಿ ರಾಜ್ಯ ಸರಕಾರ ಇದುವರೆಗೆ ಸಾಲ ಮನ್ನಾಕ್ಕೆ ವಿನಿಯೋಗಿಸಿರುವುದು 5430 ಕೋಟಿ ರೂ. ಮಾತ್ರ.

Also read: ಸರ್ಕಾರ ಮಾಡಿರುವ ರೈತರ ಸಾಲ ಮನ್ನಾ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ಯೋ ಇಲ್ಲವೋ ಎಂದು ಪರೀಕ್ಷಿಸಿಕೊಳ್ಳುವುದು ಹೇಗೆ ಅಂತ ಹೇಳ್ತೀವಿ ಓದಿ…