“ಇಟ್ಟರೆ ಸಗಣಿಯಾದೆ ತಟ್ಟಿದರೆ ಕುರುಳಾದೆ ಸುಟ್ಟರೇ ನೊಸಲಿಗೆ ವಿಭೂತಿಯಾದೆ ನೀನಾರಿಗಾದೆಯೋ ಎಲೆಮಾನವ” ಇದು ಜನಪದ ಗೀತೆ ನೀವು ಕೇಳೇ ಇರುತ್ತೀರಾ. ಭಾರತೀಯ ಸಂಸ್ಕೃತಿ ಹಸುವಿಗೆ ವಿಶೇಷ ಸ್ಥಾನ ನೀಡಲಾಗಿದೆ. ಹಸು ಎಲ್ಲಾ 33 ದೇವರುಗಳ ದೇವಸ್ಥಾನ ಅವಿಭಾಜ್ಯ ಅಂಗವಾಗಿದೆ. ಸಾಮಾನ್ಯವಾಗಿ ದೇಹ ಶುದ್ಧಿ- ಸ್ಥಳ ಶುದ್ಧಿಗಾಗಿ, ಸೂತಕ ನಿವೃತ್ತಿಗಾಗಿ ಪ್ರಾಶನ. ಅಲ್ಲದೆ ಎಲ್ಲಾ ವೃತ- ಯಜ್ಞ-ಯಾಗಾದಿ ಆರಂಭದಲ್ಲೂ ಶುದ್ಧಿಗಾಗಿ ಪಂಚಗವ್ಯವನ್ನು ಉಪಯೋಗಿಸಲಾಡುತ್ತದೆ. ಇದರಲ್ಲಿ ಮುಖ್ಯವಾಗಿ ಇರುವುದು ಗೋ ಮೂತ್ರ. ಆಯುರ್ವೇದ ಶಾಸ್ತ್ರಗಳಲ್ಲಿ ಗೋ ಮೂತ್ರವು ಪುರಾತನಕಾಲದಿಂದ ಔಷಧಿಯಾಗಿ ಬಳಕೆಯಾಗುತ್ತಿದ್ದ ಗೋಜನ್ಯ ಪದಾರ್ಥವಾಗಿದೆ ಎಂದು ಉಲ್ಲೇಖಿಸಲಾಗಿದೆ.
ಇತ್ತೀಚೆಗಷ್ಟೇ ಗೋ ಮೂತ್ರ ಇದು ಆರೋಗ್ಯವರ್ಧಕ ಎಂದು ಆಧುನಿಕ ವಿಜ್ಞಾನವೂ ಒಪ್ಪಿಕೊಂಡಿದೆ. ಈ ವಿಷಯವಾಗಿ ನಡೆದ ಕೆಲವೇ ಸಂಶೋಧನೆಗಳು ಗೋವಿನ ಮಹಾತ್ಮೆಯನ್ನು ಸಾರುವಂಥದ್ದಾಗಿದೆ. ಇವರಲ್ಲಿ ಪ್ರಮುಖವಾದದ್ದು ಗೋ ಮೂತ್ರ ಸೇವನೆಯಿಂದ ದೇಹದ ರೋಗನಿರೋಧಕ ಶಕ್ತಿ ಅಧಿಕವಾಗುವಂತಹದ್ದು.
ಬನ್ನಿ ಹಾಗಾದರೆ ಗೋ ಮೂತ್ರ ಸೇವನೆಯಿಂದ ದೇಹಕ್ಕೆ ಏನೆಲ್ಲ ಲಾಭವಿದೆ ಎಂದು ತಿಳಿಯೋಣ:
- ಗೋ ಮೂತ್ರ ಸೇವನೆ ಪ್ರತಿದಿನ ಮಾಡಿದರೆ ದೇಹದ ರೋಗ ನಿರೋಧಕ ಅಧಿಕವಾಗಿ ಎಂತಹ ರೋಗವನ್ನೂ ವಿರೋಧಿಸು ಶಕ್ತಿ ಬರುತ್ತದೆ.
- ಗೋ ಮೂತ್ರದಲ್ಲಿ ಇಪ್ಪತ್ತನಾಲ್ಕು ರೀತಿಯ ರಸಾಯನಿಕಗಳಿವೆ ಇದರ ಸೇವನೆಯಿಂದ ಕ್ಯಾನ್ಸರ್, ಮಧುಮೇಹ ರೋಗಿಯ, ಏಡ್ಸ್, ಆಸ್ತಮಾ , ಸೋರಿಯಾಸಿಸ್ ಎಸ್ಜಿಮಾ, ಅಸ್ತಮಾ, ಕೆಮ್ಮು, ಕಫ, ಉಬ್ಬಿರುವ ರಕ್ತನಾಳಗಳು, ಕೊಲೆಸ್ಟರಾಲ್, ಎದೆ ನೋವು, ಏಡ್ಸ್, ಮೈಗ್ರೇನ್, ತಲೆನೋವು, ಒತ್ತಡ, ಮಲಬದ್ಧತೆ, ಇಂತಹ ರೋಗಗಳಿಗೆ ಅದ್ಭುತ ಔಷಧಿ.
- ಥೈರಾಯ್ಡ್, ಎಸ್ಜಿಮಾ, ರಿಂಗ್ವರ್ಮ್, ತುರಿಕೆ ಮತ್ತು ಯಕೃತ್ತು ಅಸ್ವಸ್ಥತೆ, ಮೂತ್ರಪಿಂಡ ಸಮಸ್ಯೆ, ಮತ್ತು ಅನೇಕ ರೋಗ. ಮತ್ತು ಚರ್ಮದ ಇತರ ಸಮಸ್ಯೆಗಳನ್ನು ಗುಣಪಡಿಸುವ ಸಾಮರ್ಥ್ಯ ಗೋ ಮೂತ್ರ ಹೊಂದಿದೆ.
- ಅಮೆರಿಕದ ಡಾ.ಕ್ರೋ-ರ್ಡ್ ಹ್ಯಾಮಿಲ್ಟನ್ರು ಗಹನವಾದ ಸಂಶೋಧನೆ ಯಿಂದ ಗೋಮೂ ತ್ರದಲ್ಲಿ ಪೊಟ್ಯಾಷಿಯಂ, ಕ್ಯಾಲ್ಸಿಯಂ, ಕ್ಲೋರೈಡ್, ಯೂರಿಯಾ ಮುಂತಾದ ಪೋಷಕ ಕ್ಷಾರಗಳಿವೆ ಎಂದು ಪತ್ತೆ ಹಚ್ಚಿದ್ದಾರೆ.
- ಗೋಮೂತ್ರವು ಯಕೃತ್ತು, ಹೃದಯ ಮತ್ತು ಮನಸ್ಸುಗಳನ್ನು ಆರೋಗ್ಯಪೂರ್ಣ ವಾಗಿರಿಸುತ್ತದೆ ಮತ್ತು ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅದು ವಯಸ್ಸಾಗುವುದನ್ನೂ ನಿಧಾನಗೊಳಿಸುತ್ತದೆ.