ಕೃಷಿ ಚಟುವಟಿಕೆಗಳಲ್ಲಿ ಗೋಮೂತ್ರದ ಉಪಯೋಗ ಗೊತ್ತಾದ್ರೆ ಆಶ್ಚರ್ಯ ಪಡ್ತಿರಾ!!!

0
1437

ಗಂಜಲದ ಬಳಕೆ ಹೊಸದೇನಲ್ಲ. ಹೀಗಿದ್ದರೂ ನಮ್ಮಲ್ಲಿ ಗಂಜಲ ವ್ಯರ್ಥವಾಗುವುದೇ ಹೆಚ್ಚು. ದೇಸೀ ಹಸುವಿನ ಗಂಜಲವಷ್ಟೇ ಅಲ್ಲದೇ, ಎಲ್ಲಾ ಬಗೆಯ ಜಾನುವಾರುಗಳ ಗಂಜಲದ ಬಳಕೆ ಅನಿವಾರ್ಯ.

ರಾಸುಗಳ ಗಂಜಲದ ಮೂಲಕ 25 ಎಕರೆಗೆ ಬೇಕಾಗುವಷ್ಟು ಪೋಷಕಾಂಶವನ್ನು ಒಂದೇ ಹಸುವಿನಿಂದ ಪಡೆಯಬಹುದು ಎಂಬುದು ನೈಸರ್ಗಿಕ ಕೃಷಿಕ ಸುಭಾಷ್ ಪಾಳೇಕಾರ್ ಅವರ ಅಭಿಪ್ರಾಯ.

source: kannadaprabha.com

ಗಂಜಲದಲ್ಲಿ ದೊಡ್ಡ ಪ್ರಮಾಣದ ಯೂರಿಕ್ ಆಮ್ಲ ಇದ್ದು, ಕೃತಕ ಯೂರಿಯಾ ಗೊಬ್ಬರ ಬಳಸುವುದಕ್ಕಿಂತ ಗಂಜಲ ಬಳಸುವುದು ಅತಿ ಸೂಕ್ತ. ಪಂಚಗವ್ಯ, ಬೀಜಾಮೃತ, ಜೀವಾಮೃತ, ತ್ರಿಮೂರ್ತಿ ಟಾನಿಕ್ ಹಾಗೂ ಪೂಂಚಿಮರಂದು ತಯಾರಿಕೆಯಲ್ಲಿ ಗಂಜಲ ಒಂದು ಪ್ರಮುಖ ಅಂಶ. ಸಾವಯವ ಕೃಷಿಯಲ್ಲಿ ಜೀವಾಮೃತ ಹಾಗೂ ಪಂಚಗವ್ಯದ ಬಳಕೆ ಹೆಚ್ಚಾಗಿದೆ. ಗಂಜಲ ಕೃಷಿಗೆ ಸೀಮಿತವಾಗದೇ ಮಾನವರ ಆರೋಗ್ಯ ಕಾಪಾಡುವಲ್ಲೂ ಪ್ರಮುಖ ಪಾತ್ರ ವಹಿಸಿದೆ. ಹಸುವಿನ ಗಂಜಲ `ಆರ್ಕ’ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಕೆಯಲ್ಲಿದೆ.

ಔಷಧೀಯ ಗುಣಗಳು:

ಗಂಜಲದಲ್ಲಿ ಹಲವಾರು ರೀತಿಯ ಪೋಷಕಾಂಶಗಳಿವೆ. ಜೀವಚೈತನ್ಯ ನೀಡುವ ಕಿಣ್ವಗಳು ಹಾಗೂ ಜೀವಸತ್ವಗಳು ಇವೆ. ಗಂಜಲದಲ್ಲಿ ಶೇಕಡ 95ರಷ್ಟು ನೀರು, ಶೇಕಡ 2.5ರಷ್ಟು ಯೂರಿಯಾ ಹಾಗೂ ಶೇಕಡ 2.5ರಷ್ಟು ಸತ್ವ, ಕಿಣ್ವ, ಉಪ್ಪು, ಖನಿಜಗಳು ಇವೆ.

ಸಾರಜನಕದ ಅಂಶ ಪ್ರತಿ ಲೀಟರ್ ಗಂಜಲದಲ್ಲಿ 6.8 – 21.6 ಗ್ರಾಂ ಇದೆ. ನಿಯಮಿತವಾಗಿ ಗಂಜಲವನ್ನು ಬೆಳೆಗಳಿಗೆ ಬಳಸಿದರೆ ಕಡಿಮೆ ಖರ್ಚಿನೊಂದಿಗೆ, ಅಧಿಕ ಇಳುವರಿ ಪಡೆಯಬಹುದು. ಆಧುನಿಕ ಕೃಷಿ ವ್ಯವಸ್ಥೆ ಅಡಿಯಲ್ಲಿ ಇದರ ಮಹತ್ವ ಸಂಪೂರ್ಣ ತಿರಸ್ಕಾರಗೊಂಡಿದೆ. ಆಧುನಿಕ ಕೃಷಿ ಉತ್ಪನ್ನಗಳಾದ ರಾಸಾಯನಿಕ ಗೊಬ್ಬರಗಳು, ಪೀಡೆನಾಶಕಗಳು ಹಾಗೂ ಕಳೆನಾಶಕಗಳು ಲಗ್ಗೆ ಇಟ್ಟವು.

source: media2.intoday.in

ಗಂಜಲ ಕೇವಲ ಪೋಷಕಾಂಶ ಅಲ್ಲ; ಬದಲಾಗಿ ಶೀಲಿಂಧ್ರನಾಶಕ, ಕಳೆನಾಶಕವಾಗಿ ಕೆಲಸ ಮಾಡುತ್ತದೆ. ನಾಚಿಕೆಮುಳ್ಳು ನಿಯಂತ್ರಿಸಲು ಗಂಜಲ ಬಳಸುತ್ತಾರೆ. ಜ್ವರ ಗುಣಪಡಿಸಲು ಗಂಜಲದೊಂದಿಗೆ ಕಾಳುಮೆಣಸು, ಮೊಸರು ಹಾಗೂ ತುಪ್ಪ ಬೆರೆಸಿ ಕೊಡುತ್ತಾರೆ.

ರಕ್ತಹೀನತೆ ಹೋಗಲಾಡಿಸಲು ಗಂಜಲ, ತ್ರಿಫಲ ಚೂರ್ಣ, ಹಸುವಿನ ಹಾಲಿನೊಂದಿಗೆ ಮಿಶ್ರಣ ಮಾಡಿ ಕೊಡುತ್ತಾರೆ. ಕುಷ್ಠರೋಗ ತಡೆಗಟ್ಟಲು ಗಂಜಲ, ವಾಸಕ ಎಲೆ, ಕುರೇಲ್ಲಾ ಚಕ್ಕೆಯೊಂದಿಗೆ ಬೆರೆಸಿ ಕೊಡುತ್ತಾರೆ.

ಎತ್ತಿನ ಗಂಜಲದಿಂದ ಜೋಳಕ್ಕೆ ಬರುವ ಕಾಡಿಗೆ ರೋಗವನ್ನು ನಿಯಂತ್ರಿಸಬಹುದು. ಜೋಳದ ಕಾಳಿಗೆ ಕಾಡಿಗೆ ತಾಗಿದರೆ ತಿನ್ನಲಿಕ್ಕೆ ಬರುವುದಿಲ್ಲ. ಬಿತ್ತನೆ ಬೀಜಗಳನ್ನು ಎತ್ತಿನ ಗಂಜಲದಲ್ಲಿ 2 ನಿಮಿಷ ನೆನೆಸಿ ಕೂಡಲೇ ನೆರಳಲ್ಲಿ ಒಣಗಿಸಬೇಕು. ಗಂಜಲದೊಂದಿಗೆ ಸೆಗಣಿ ಮಿಶ್ರಣ ಮಾಡಿ ಹತ್ತಿ ಎಲೆಗೆ ಸಿಂಪರಣೆ ಮಾಡಿದರೆ ಸಂಪೂರ್ಣವಾಗಿ ಹತ್ತಿ ಎಲೆ ಸುರಳಿಪೂಚಿ ರೋಗವನ್ನು ನಿಯಂತ್ರಿಸಬಹುದು.

ಗೋಧಿ ಹೊಲದಲ್ಲಿ ಕಾಡುವ ಗೆದ್ದಲಿನ ಕಾಟಕ್ಕೆ ಕತ್ತೆಯ ಗಂಜಲ ಉತ್ತಮ. ಗೋಧಿ ಬಿತ್ತನೆ ಬೀಜಗಳನ್ನು ಬಿತ್ತನೆಗೆ ಮೊದಲು ಕತ್ತೆಯ ಗಂಜಲದಲ್ಲಿ ನೆನೆಸಬೇಕು. ಬಿತ್ತನೆ ಬೀಜಗಳನ್ನು ಕತ್ತೆ ಗಂಜಲದಲ್ಲಿ ಎರಡು ನಿಮಿಷ ನೆನೆಸಿ ಕೂಡಲೇ ನೆರಳಲ್ಲಿ ಒಣಗಿಸಬೇಕು. ನಂತರ ಆ ಬೀಜಗಳನ್ನು ಬಿತ್ತಬೇಕು.ಯಾವುದೇ ಬೀಜವನ್ನು ಎಮ್ಮೆಯ ಗಂಜಲದಲ್ಲಿ ಎರಡು ನಿಮಿಷ ನೆನೆಸಿ ಕೂಡಲೇ ನೆರಳಲ್ಲಿ ಒಣಗಿಸಬೇಕು. ಈ ರೀತಿ ಬೀಜೋಪಚಾರ ಮಾಡಿದ ಬೀಜವನ್ನು ಬಿತ್ತಿದರೆ ಅದು ಶಕ್ತಿಭರಿತವಾಗಿ ಬೇಗನೆ ಮೊಳಕೆ ಬರುವುದು.