ಶ್ರೀಲಂಕಾ ವಿರುದ್ಧ ರೋಹಿತ್ ಶರ್ಮ ಭರ್ಜರಿ ಬ್ಯಾಟಿಂಗ್, 3 ನೇ ಬಾರಿ ದ್ವಿಶತಕ ಬಾರಿಸಿದ ವಿಶ್ವದ ಏಕೈಕ ಬ್ಯಾಟ್ಸ್-ಮೆನ್…!

0
728

ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮೂರು ಡಬಲ್ ಶತಕಗಳನ್ನು ಗಳಿಸಿದ ಮೊದಲ ಕ್ರಿಕೆಟಿಗನಾಗಿ ರೋಹಿತ್ ಶರ್ಮಾ ಹೊರಹೊಮ್ಮಿದನು. ಬುಧವಾರ ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಮುಂಬೈ ಬ್ಯಾಟ್ಸ್ಮನ್ ಶ್ರೀಲಂಕಾ ವಿರುದ್ಧ ಇತಿಹಾಸ ಸೃಷ್ಟಿಸಿದನು.

ರೋಹಿತ್ ಶರ್ಮಾ 153 ಎಸೆತಗಳಲ್ಲಿ 208 ರನ್ ಗಳಿಸಿದ್ದು, ಇದರಲ್ಲಿ 13 ಬೌಂಡರಿ ಮತ್ತು 12 ಸಿಕ್ಸರ್ಗಳನ್ನು ಒಳಗೊಂಡಿವೆ. ಏಕದಿನ ತಂಡದ ಕ್ಯಾಪ್ಟನ್ ಆಗಿ ಇದು ಅವರ ಮೊದಲ 100-ಪ್ಲಸ್ ಸ್ಕೋರ್ ಆಗಿದೆ.

ಕುತೂಹಲಕರ ವಿಷಯವೆಂದರೆ, ಶ್ರೀಲಂಕಾದ ವಿರುದ್ಧ ಇವರು ಹೊಡೆದ 264 ರನ್, ವಿಶ್ವ ದಾಖಲೆಯ ಸ್ಕೋರ್, ಮತ್ತು ಅವರ ಎರಡನೇ ದ್ವಿಶತಕವಾಗಿದೆ. ಅವರ ಮೊದಲ ಡಬಲ್ ಶತಕ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ 2013 ರಲ್ಲಿ ಬಾರಿಸಿದ್ದರು.