ಕ್ರಿಕೆಟ್ ಪ್ರಿಯರಿಗೆ ಸಿಹಿ ಸುದ್ದಿ: ಮುಂದಿನ ಕಾಮನ್-ವೆಲ್ತ್ ಕ್ರೀಡಾಕೂಟದಲ್ಲಿ T-20 ಕ್ರಿಕೆಟ್ ಪಾದಾರ್ಪಣೆ ಮಾಡಲಿದೆಯಂತೆ!!

0
1018

ಕ್ರಿಕೆಟ್​​.. ಇದು ಭಾರತೀಯರ ನರ ನಾಡಿ ಆವರಿಸಿಕೊಂಡ ಕ್ರೀಡೆ.. ಈ ಆಟದ ಮೇಲೆ ತವರು ದೇಶಕ್ಕಿಂತಲೂ ಹೆಚ್ಚಿನ ಮೋಹ ನಮ್ಮ ದೇಶದಲ್ಲಿದೆ. ಇಂಗ್ಲೆಂಡ್​ ವಿಶ್ವ ಕ್ರಿಕೆಟ್​ನಲ್ಲಿ ಮಾಡದ ಸಾಧನೆಯನ್ನು ಭಾರತ ಕ್ರಿಕೆಟ್​ ತಂಡ ಮಾಡಿದೆ. ಐಸಿಸಿ ಪ್ರಾಯೋಜಿತ ಎಲ್ಲ ಕಪ್​​ಗಳನ್ನು ಗೆದ್ದಿರುವ ತಂಡಗಳಲ್ಲಿ ಭಾರತ ಕೂಡ ಸ್ಥಾನ ಪಡೆದಿದೆ.

ಈ ಕ್ರೀಡೆ ಹವಾ ಎಷ್ಟಾಗಿದೆ ಎಂದ್ರೆ, ಓಲಿಂಪಿಕ್ಸ್​ನಲ್ಲಿ ಕ್ರಿಕೆಟ್​ ಎಂಬ ಕ್ರೀಡೆಯನ್ನು ಸೇರಿಸಿ ಎಂಬ ಚರ್ಚೆಗಳು ವ್ಯಾಪಕಾಗಿವೆ. ಆದ್ರೆ ಈ ಬಗ್ಗೆ ಪರ ಹಾಗೂ ವಿರೋಧ ಚರ್ಚೆಗಳು ನಡೆದಿವೆ. ಆದ್ರೆ ಭಾರತೀಯ ಕ್ರೀಡಾಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಎಸ್​​.. ಮಿನಿ ಓಲಿಂಪಿಕ್ಸ್​​ ಎಂದೇ ಖ್ಯಾತಿ ಪಡೆದಿರುವ ಕಾಮನ್​ವೆಲ್ತ್​ ಕ್ರೀಡಾ ಕೂಟದಲ್ಲಿ ಕ್ರಿಕೆಟ್ ಸೇರಿಸಲು ಚಿಂತನೆ ನಡೆದಿದೆ.

ವಿಶ್ವದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕ್ರೀಡೆಗಳಲ್ಲಿ ಸ್ಥಾನ ಪಡೆದಿರುವ ಕ್ರಿಕೆಟ್​​ ಅಭಿಮಾನಿಗಳನ್ನು ಸೆಳೆಯಲು, ಕಾಮನ್​ವೆಲ್ತ್​ ಕ್ರೀಡಾ ಕೂಟ ಪ್ಲಾನ್ ಮಾಡಿಕೊಂಡಿದೆ. ಅದರಂತೆ ಬರ್ಮಿಂಗ್‌ ಹ್ಯಾಮ್‌ನಲ್ಲಿ ನಡೆಯಲಿರುವ 2022ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಟಿ-20 ಕ್ರಿಕೆಟ್‌ ಆಡಿಸಬೇಕೆಂಬ ಹೊಸ ಆಲೋಚನೆಯನ್ನು ಕಾಮನ್‌ವೆಲ್ತ್‌ ಕ್ರೀಡಾ ಒಕ್ಕೂಟ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

ಒಂದು ವೇಳೆ ಎಲ್ಲಾ ಅಂದು ಕೊಂಡಂತೆ ಆದ್ರೆ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್‌, ಶ್ರೀಲಂಕಾ, ದ.ಆಫ್ರಿಕಾ, ನ್ಯೂಜಿಲೆಂಡ್‌ ಸೇರಿದಂತೆ ಹಲವಾರು ರಾಷ್ಟ್ರಗಳು ಕದನ ಪ್ರವೇಶಿಸೋದು ಫಿಕ್ಸ್​​.. ಚೆಂಡು, ಬ್ಯಾಟ್​​ನ ಆಟವನ್ನು ಮಿನಿ ಒಲಿಂಪಿಕ್ಸ್​​ಗೆ ಸೇರಿಸಿದ್ರೆ ಅಭಿಮಾನಿಗಳು ಫುಲ್​ ಖುಷ್​ ಆಗಲಿದ್ದಾರೆ. ಈ ಮೂಲಕ ಕಾಮನ್​ ವೆಲ್ತ್​​ ಗೇಮ್ಸ್​​ಗೆ ಹೆಚ್ಚಿನ ವೀಕ್ಷಕರನ್ನು ಸೆಳೆಯಲು ಆಯೋಜಕರು ಪ್ಲಾನ್ ಮಾಡಿಕೊಂಡಿದ್ದಾರೆ.

ಇನ್ನು ಈ ಬಗ್ಗೆ ಭಾರತ ಕ್ರಿಕೆಟ್​ ನಿಯಂತ್ರಣಾ ಮಂಡಳಿ (ಬಿಸಿಸಿಐ) ಒಪ್ಪಿಗೆ ಕೇಳಲಿದ್ದೇವೆ. ಕಾಮನ್​ವೆಲ್ತ್​​ ಕ್ರೀಡಾ ಕೂಟದಲ್ಲಿ ಕ್ರಿಕೆಟ್​ ಸೇರ್ಪಡೆಗೆ ಬಿಸಿಸಿಐ ಸಮ್ಮತಿ ಸೂಚಿಸುವ ಭರವಸೆ ಇದೆ. ಒಂದು ವೇಳೆ ಬಿಸಿಸಿಐ ಒಪ್ಪಿಗೆ ನೀಡದೆ ಇದ್ರೂ, ಚುಟುಕು ಕ್ರಿಕೆಟ್​ ನಡೆಸಲು ಆಯೋಕರು ಚಿಂತನೆ ನಡೆಸಿದ್ದಾರೆ. ಇದ್ರಂತೆ ಕಾಮನ್​ ವೆಲ್ತ್​ ಕ್ರೀಡಾ ಕೂಟ ಪ್ರಾಯೋಜಿತ ಟೂರ್ನಿಯನ್ನು ನಡೆಸಲು ಪ್ಲಾನ್​ ಹಾಕಿಕೊಂಡಿದೆ. ಇದ್ರಂತೆ ಕ್ರಿಕೆಟ್ ಕಾಶಿ ಲಾರ್ಡ್ಸ್​​ ಅಂಗಳದಲ್ಲಿ ಈ ಪಮದ್ಯ ನಡೆಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.