ನಿತ್ಯ ಕಾಣಸಿಗುವ ಈ ವಸ್ತುಗಳಲ್ಲಿ ಕ್ಯಾನ್ಸರ್ ಕಾರಕಗಳಿವೆ ಎಂಬುವುದರ ಬಗ್ಗೆ ಅರಿವು ಮೂಡಿಸಿಕೊಳ್ಳಿ, ಮಾರಕ ಕ್ಯಾನ್ಸರ್ ಖಾಯಿಲೆಯಿಂದ ದೂರವಿರಿ!!

0
538

ಪ್ರತಿ ವರ್ಷ ಯುನೈಟೆಡ್ ನೇಷನ್ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಫೆಬ್ರವರಿ 4 ಅನ್ನು ವಿಶ್ವ ಕ್ಯಾನ್ಸರ್ ದಿನವನ್ನಾಗಿ ಆಚರಿಸುತ್ತದೆ, ಪ್ರಪಂಚದಾದ್ಯಂತ ಸರ್ಕಾರಗಳು ಈ ರೋಗದ ವಿರುದ್ಧ ಕ್ರಮ ಕೈಗೊಳ್ಳಲು, ಮತ್ತು ಲಕ್ಷಾಂತರ ಸಾವುಗಳನ್ನು ತಡೆಗಟ್ಟಲು ಒತ್ತಾಯಿಸುತ್ತದೆ. ಏಕೆಂದರೆ ಈ ಕಾಯಿಲೆಗೆ ಯಾವುದೇ ವಯಸ್ಸಿನ ಅಂತರವಿಲ್ಲ, ನಾನಾ ಕಾರಣಗಳಿಂದ ಹೆಚ್ಚಾಗುತ್ತಿದೆ. ಆಹಾರ ವಸ್ತುಗಳಿಗೆ ರಾಸಾಯನಿಕ ಸಿಂಪಡಿಸುವುದು, ವ್ಯಾಯಾಮ ಇಲ್ಲದಿರುವುದು, ಅಧಿಕ ರಾಸಾಯನಿಕ ವಸ್ತುಗಳ ಬಳಕೆ, ಕಲುಷಿತ ವಾತಾವರಣ ಹೀಗೆ ನಾನಾ ಕಾರಣಗಳಿಂದ ಕ್ಯಾನ್ಸರ್ ಹೆಚ್ಚಾಗುತ್ತಿದೆ. ಅದರಲ್ಲಿ ವ್ಯಕ್ತಿಯ ಸುತ್ತಲಿನ ಪರಿಸರ ಮಾಲಿನ್ಯ, ಊಟದ ಪದಾರ್ಥಗಳಿಂದ, ಮತ್ತು ಪಾನೀಯಗಳಿಂದ ಕ್ಯಾನ್ಸರ್ ಹೆಚ್ಚಾಗುತ್ತಿದೆ. ಅದರಂತೆ ಕ್ಯಾನ್ಸರ್-ಗೆ ಕಾರಣವಾಗುವ 116 ವಸ್ತುಗಳ ಪಟ್ಟಿಯನ್ನು ತಿಳಿಸಿದ್ದು, ಅದರಲ್ಲಿ ಕೆಲವು ಪ್ರಮುಖ್ಯವೆಂದು ಹೇಳಿದೆ.

1. ತಂಬಾಕು:

ಧೂಮಪಾನ ಮಾಡದವರಿಗೂ ಶ್ವಾಸಕೋಶದ ಕ್ಯಾನ್ಸರ್ ಬರುವುದು ಹೆಚ್ಚಾಗಿದೆ. ಇತರ ಜನರ ಮಾಡುವ ಧೂಮಪಾನ ಹೊಗೆಯಲ್ಲಿ ಉಸಿರಾಡುವ ಮೂಲಕ ಕಾಯಿಲೆ ಹೆಚ್ಚಾಗುತ್ತಿದೆ. ಇದು ಗಂಟಲಕುಳಿ (ಮೇಲಿನ ಗಂಟಲು) ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರತಿ ವರ್ಷ ತಂಬಾಕು ಏಳು ದಶಲಕ್ಷಕ್ಕೂ ಹೆಚ್ಚು ಜನರನ್ನು ಕೊಲ್ಲುತ್ತದೆ. ಆರು ದಶಲಕ್ಷಕ್ಕೂ ಹೆಚ್ಚಿನ ಸಾವುಗಳು ನೇರ ಸೇವನೆಯ ಪರಿಣಾಮವಾದರೆ, 890 000 ಬಿಟ್ಟ ಹೊಗೆಯಿಂದ ಪರಿಣಾಮ ಬಿರುತ್ತೆ.

2. ಆಲ್ಕೊಹಾಲು ಇರುವ ಪಾನೀಯಗಳು:

ಬಿಯರ್, ವೈನ್ ಮತ್ತು ಗಟ್ಟಿಯಾದ ಮದ್ಯವನ್ನು ತಯಾರಿಸಿದಾಗ ಕ್ಯಾನ್ಸರ್ ರಾಸಾಯನಿಕಗಳು ಉತ್ಪತ್ತಿಯಾಗುತ್ತವೆ. ಅದಕ್ಕಾಗಿ ಮಹಿಳೆಯರಿಗೆ ಪ್ರತಿದಿನ ಒಂದಕ್ಕಿಂತ ಹೆಚ್ಚು ಪಾನೀಯಗಳು ಮತ್ತು ಪುರುಷರು ಎರಡಕ್ಕಿಂತ ಹೆಚ್ಚು ಪಾನೀಯಗಳನ್ನು ಸೇವಿಸಬಾರದು ಎಂದು ತಿಳಿಸಿದೆ.

3. ಚೈನೀಸ್ ಶೈಲಿಯ ಉಪ್ಪು ಮೀನು:

ಉಪ್ಪು-ಸಂಸ್ಕರಿಸಿದ ಯಾವುದೇ ಮಾಂಸ ಮತ್ತು ಮೀನುಗಳು ಅಥವಾ ಉಪ್ಪಿನಕಾಯಿ ಆಹಾರಗಳು ಮೂಗಿನ ಹಿಂಭಾಗದ ಗಂಟಲಿನ ಮೇಲಿನ ಭಾಗದಲ್ಲಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಆಹಾರದಲ್ಲಿ ಹೆಚ್ಚಿನ ಪ್ರಮಾಣದ ನೈಟ್ರೇಟ್‌ಗಳು ಮತ್ತು ನೈಟ್ರೈಟ್‌ಗಳು ಪ್ರೋಟೀನ್ನೊಂದಿಗೆ ಪ್ರತಿಕ್ರಿಯಿಸಿ ನೈಟ್ರೊಸಮೈನ್‌ಗಳನ್ನು ರೂಪಿಸುತ್ತವೆ ಎಂದು ಹೇಳಬಹುದು.

4. ಸಂಸ್ಕರಿಸಿದ ಮಾಂಸ:

ಸಂಸ್ಕರಿಸಿದ ಬೇಕನ್, ಸಲಾಮಿ, ಪೆಪ್ಪೆರೋನಿ, ಸಾಸೇಜ್ ಸೇವನೆ ಇಂದ ಕರುಳಿನ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿದೆ. “ಸಂಸ್ಕರಿಸಿದ, ಉಪ್ಪುಸಹಿತ, ಹೊಗೆಯಾಡಿಸಿದ ಮಾಂಸವು ಸಕ್ರಿಯ ಚಯಾಪಚಯ ಕ್ರಿಯೆಗಳ ರಚನೆಗೆ ಕಾರಣವಾಗುತ್ತದೆ. ಮತ್ತು ಇದು ರೋಗಪೀಡಿತ ಜೀವಕೋಶಗಳಿಗೆ ಕಾರಣವಾಗುತ್ತದೆ. ಈ ಕೋಶಗಳ ಅಸಹಜ ಕ್ಯಾನ್ಸರ್ಗೆ ಕಾರಣವಾಗುತ್ತದೆ.

5. ಡೀಸೆಲ್ ಹೊಗೆ:

ಡೀಸೆಲ್ ಇಂಧನದ ಮೇಲೆ ಸಂಚರಿಸುವ ವಾಹನಗಳು ಬಿಡುವ ಹೊಗೆ ಕ್ಯಾನ್ಸರ್-ಕಾರಕವಾಗಿದ್ದು, ಡೀಸೆಲ್ ಎಂಜಿನ್ ನಲ್ಲಿ ಅನಿಲ ಶ್ವಾಸಕೋಶದ ಕ್ಯಾನ್ಸರ್ ಮತ್ತು ಇತರ ರೀತಿಯ ಕ್ಯಾನ್ಸರ್ಗೆ ಕಾರಣವಾಗುತ್ತದೆ. ನಿಮಗೆ ಸಾಧ್ಯವಾದಷ್ಟು ಪೆಟ್ರೋಲ್ ಪಂಪ್‌ಗಳಲ್ಲಿ ಅಥವಾ ಅದರ ಸುತ್ತಮುತ್ತ ಸಮಯ ಕಳೆಯುವುದನ್ನು ತಪ್ಪಿಸಿ. “ಯಾವುದೇ ಪೆಟ್ರೋಲಿಯಂ ಉತ್ಪನ್ನಗಳಿಂದ ಬರುವ ಹೊಗೆಗಳು ಪಾಲಿಕಾರ್ಬೊನೇಟ್‌ಗಳಿಗೆ ಒಡ್ಡಿಕೊಳ್ಳುವುದಕ್ಕೆ ಕಾರಣವಾಗುತ್ತವೆ, ಇದು ಡಿಎನ್‌ಎಗೆ ಹಾನಿಯನ್ನುಂಟುಮಾಡುತ್ತದೆ” ಎಂದು ವ್ಯೆದ್ಯರು ಹೇಳಿದ್ದಾರೆ.

6. ಗರ್ಭನಿರೋಧಕಗಳು:

ಗರ್ಭನಿರೋಧಕಗಳ ಅತಿಯಾದ ಬಳಕೆ ಹಾರ್ಮೋನುಗಳು, ಸಂಯೋಜಿತ ರೂಪಗಳು ಇವು ಕ್ಯಾನ್ಸರ್ಗೆ ಕಾರಣವಾಗಬಹುದು. “ಈಸ್ಟ್ರೊಜೆನ್ ಜೊತೆಗಿನ ಬಾಯಿಯ ಗರ್ಭನಿರೋಧಕಗಳು ವಿಶೇಷವಾಗಿ ಸ್ತನ ಕ್ಯಾನ್ಸರ್ಗೆ ಕಾರಣವಾಗಬಹುದು ಎನ್ನುವುದು ವ್ಯೆದ್ಯರ ಅಭಿಪ್ರಾಯ.

7. ಗರಿಗರಿಯಾದ, ಕಪ್ಪು ಆಹಾರಗಳು:

ಆಲೂಗಡ್ಡೆಯಂತಹ ಕೆಲವು ತರಕಾರಿಗಳನ್ನು ಹೆಚ್ಚಿನ ತಾಪಮಾನಕ್ಕೆ ಬಿಸಿಮಾಡಿದಾಗ ಅಕ್ರಿಲಾಮೈಡ್ ಎಂಬ ರಾಸಾಯನಿಕ ಬಿಡುಗಡೆಯಾಗುತ್ತದೆ, ಉದಾಹರಣೆಗೆ ಬಾಣಲೆಯಲ್ಲಿ ಹುರಿಯುವುದು ಅಥವಾ ತೆರೆದ ಬೆಂಕಿಯ ಮೇಲೆ ಬೇಯಿಸುವುದು. ಅಪಾಯಕಾರಿ ಆದ್ದರಿಂದ ಇಂತಹ ಆಹಾರಗಳನ್ನು ಸೇವಿಸಬಾರದು ಎಂದು ಸಂಶೋಧಕರು ಭಾವಿಸುತ್ತಾರೆ. ಅದರಂತೆ ಕಪ್ಪು ಬಣ್ಣಕ್ಕೆ ಬರುವಂತೆ ಹುರಿಯುವ ಯಾವುದೇ ಆಹಾರ ಪದಾರ್ಥಗಳು ಕ್ಯಾನ್ಸರ್-ಗೆ ಕಾರಣವಾಗುತ್ತೆ ಎಂದು ವ್ಯೆದ್ಯರು ಹೇಳಿದ್ದಾರೆ.

8. ಬೊಜ್ಜು:

ದೇಹದಲ್ಲಿ ಹೆಚ್ಚಾದ ತೋಕದಿಂದ ಹೃದ್ರೋಗ ಅಥವಾ ಮಧುಮೇಹದಂತಹ ಅಪಾಯಗಳು ಹೆಚ್ಚಾಗಿವೆ. ಅದರಂತೆ ಕ್ಯಾನ್ಸರ್ ಕೂಡ ಬರುವುದರಲ್ಲಿ
ಅನುಮಾನವಿಲ್ಲ ಎಂದು ಸಂಶೋಧನೆಗಳು ಹೇಳಿವೆ. ಇದು ಕೊಲೊನ್, ಸ್ತನ ಮತ್ತು ಎಂಡೊಮೆಟ್ರಿಯಲ್ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. “ಹಾರ್ಮೋನುಗಳ ಪರಿವರ್ತನೆ ಸಂಭವಿಸುವ ಅಡಿಪೋಸ್ ಕೋಶಗಳು ಅಥವಾ ಕೊಬ್ಬಿನ ಕೋಶಗಳ ಹೆಚ್ಚಿನ ಸಾಂದ್ರತೆಯು ಕ್ಯಾನ್ಸರ್ ಮರುಕಳಿಸುವಿಕೆಗೆ ಕಾರಣವಾಗಬಹುದು. ಎಂದು ವ್ಯೆದ್ಯರು ಹೇಳಿದ್ದಾರೆ.

9.ನಿದ್ರಾಹೀನತೆ / ಒತ್ತಡ:

ಪ್ರತಿದಿನ ಸರಿಯಾಗಿ ನಿದ್ದೆ ಮಾಡುವುದು ಒಳ್ಳೆಯದು, ನಿದ್ರೆಯ ಕೊರತೆಯಿಂದ ಅತಿಯಾದ ಒತ್ತಡಕ್ಕೆ ಒಳಗಾಗುತ್ತೀರಿ. ಅದು ಅಂತಿಮವಾಗಿ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ. ಸಾಮಾನ್ಯವಾಗಿ ದೇಹವನ್ನು ಬಲಪಡಿಸುವ ಎಂಡಾರ್ಫಿನ್‌ಗಳು ಈ ಪರಿಸ್ಥಿತಿಯಲ್ಲಿ ಕ್ರಮೇಣ ಕ್ಷೀಣಿಸುತ್ತವೆ. ಕಾಲಾನಂತರದಲ್ಲಿ, ಇದು ಕ್ಯಾನ್ಸರ್ಗೆ ಕಾರಣವಾಗಬಹುದು ಎಂದು ಸಂಶೋಧನೆಗಳು ಹೇಳುತ್ತೇವೆ.

Also read: ಪ್ಲಾಸ್ಟಿಕ್‌ ಬಾಟಲಿ ನೀರು ಸೇವನೆ ಕ್ಯಾನ್ಸರ್ ಗೆ ಕಾರಣವಾಗಲಿದೆಯೇ? ಈ ಕುರಿತು ಸಂಶೋಧನೆ ಏನ್ ಹೇಳುತ್ತೆ ನೋಡಿ.!