ಕಲ್ಲಡ್ಕ ಮಕ್ಕಳ ಊಟಕ್ಕೆ ಕೊಡಲು ಹಣವಿಲ್ಲ, ಆದರೆ ಉರ್ದು ಶಾಲೆಗಳಿಗೆ ಕೋಟಿ ಕೋಟಿ ಹಣ ಹೋಗುತ್ತಿದೆ, ಮಕ್ಕಳ ವಿಚಾರದಲ್ಲೂ ಈ ರೀತಿ ಮಾಡಬೇಕಾ??

0
470

Kannada News | Karnataka News

ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಏನಾದರೊಂದು ವಿವಾದವನ್ನು ಸೃಷ್ಟಿಯಾಗುತ್ತಲೇ ಇವೆ. ಈಗ ಆ ವಿವಾದಗಳ ಪಟ್ಟಿಗೆ ಹೊಸ ಸೇರ್ಪಡೆ ಎಂಬಂತೆ ಸಿದ್ದರಾಮಯ್ಯ ಸರ್ಕಾರ ಶಾಲೆಗಳ ವಿಷಯದಲ್ಲಿಯೂ ಜಾತಿ ರಾಜಕಾರಣ ಮಾಡಿರುವುದು.

ಕರ್ನಾಟಕದ ಬಹುತೇಕ ಮುಸ್ಲಿಮರಿಗೆ ಈ ಅರೇಬಿಕ್ ಕಾಲೇಜು ನೀಡುವ ಆದೇಶವೇ ವೇದವಾಕ್ಯ. ಇಲ್ಲಿನ ಧರ್ಮಗುರು ನೀಡುವ ಒಂದೇ ಒಂದು ವಾಕ್ಯಕ್ಕೆ ರಾಜಕೀಯ ಮುಖಂಡರು ಮೇಲೆ-ಕೆಳಗೆ ಆಗುತ್ತಾರೆ. ಬಹುಷಃ ಅದ್ಕಕೆ ಇರಬೇಕು ಮುಖ್ಯಮಂತ್ರಿಗಳು ಹಾಗೂ ಬಿಬಿಎಂಪಿ ಈ ಶಾಲೆ/ಕಾಲೇಜಿಗೆ ಅತಿಹೆಚ್ಚು ಅನುಧಾನ ನೀಡಿರುವುದು.

ಎಲ್ಲ ಶಾಲೆಗಳಿಗೆ ಸಮವಾಗಿ ಅನುಧಾನ ನೀಡಿದರೆ ಏನು ಆಗುತ್ತಿರಲಿಲ್ಲ. ಆದರೆ, ಬಂಟ್ವಾಳದಲ್ಲಿರೋ ಕಲ್ಲಡ್ಕ ಪ್ರಭಾಕರ್ ಭಟ್ ಶಾಲೆಗೆ ನಿಯಮಾವಳಿಗಳ ಹೆಸರಿನಲ್ಲಿ ಅನುದಾನ ನಿಲ್ಲಿಸಿ ಮಕ್ಕಳ ಊಟ ಕಿತ್ತುಕೊಂಡ ಸಿದ್ದರಾಮಯ್ಯ ಸರ್ಕಾರ ಈಗ ಸಚಿವ ಜಾರ್ಜ್ ಕ್ಷೇತ್ರದಲ್ಲಿರೋ ದಾರುಲ್ ಉಲೂಮ್ ಅರೇಬಿಕ್ ಕಾಲೇಜಿಗೆ ಅನುಧಾನದ ಸುರಿಮಳೆಯನ್ನೇ ಹಾರಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಅಲ್ಪಸಂಖ್ಯಾತರ ಓಲೈಕೆಗೋ ಅಥವಾ ಸಚಿವ ಜಾರ್ಜ್ ಒತ್ತಡದ ಮೇರೆಗೋ ಅಥವಾ ಚುನಾವಣೆಯ ಮತ ಬ್ಯಾಂಕ್ ತಂತ್ರವೋ, ಕಾಲೇಜಿನ ಆವರಣದಲ್ಲಿ ಧಾರ್ಮಿಕ ಗುರು ದಿವಂಗತ ಆಶ್ರಫ್ ಸ್ಮಾರಕ ಭವನ ನಿರ್ಮಾಣಕ್ಕೆ ಬಜೆಟ್‍ನಲ್ಲಿ ಸರ್ಕಾರ 10 ಕೋಟಿ ರೂ. ಅನುದಾನ ನೀಡಿದ್ದಾರೆ.

ಇನ್ನು ಬಿಬಿಎಂಪಿಯವರು ಇದಕ್ಕೆ ಹೊರತಾಗಿಲ್ಲ ತಾವು ಸಿಎಂ ಗಿಂತಲೂ ಕಡಿಮೆ ಇಲ್ಲ ಎಂದು, ಅರೇಬಿಕ್ ಕಾಲೇಜಿಗೆ 10 ಕೋಟಿ ರೂ. ಹಾಗೂ ಜಾಮಿಯ ಉಲ್ ಉಲಾಮು ಗ್ರೂಪ್ ಶಾಲಾ ಕಟ್ಟಡ ನಿರ್ಮಾಣಕ್ಕೆ 10 ಕೋಟಿ ರೂಪಾಯಿಯನ್ನು ಬಜೆಟ್ ನಲ್ಲಿ ಅನುದಾನ ನೀಡಿದ್ದಾರೆ ಎಂದು ಪಬ್ಲಿಕ್ ಟಿವಿ ವರದಿ ಮಾಡಿದೆ.

Also Read: ಇಂದಿರಾ ಕ್ಯಾಂಟೀನ್-ನಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಕೆಲ ನಾಗರೀಕರು ದೂರು ಮಾಡಿದ ಕಾರಣ ಈ ವಿನೂತನ ಕಾರ್ಯಕ್ಕೆ ಮುಂದಾಗಿದೆ BBMP!!!