ಕಾಗೆ’ಗಳಿಗೂ ಬಂತು ಡಿಮ್ಯಾಂಡ್; ಉತ್ತರಕ್ರಿಯೆ ಕಾಗೆ ನೀಡುವ ಬ್ಯುಸಿನೆಸ್-ಗೆ ಭಾರಿ ಬೇಡಿಕೆ..

0
332

ಹಿಂದೂ ಸಂಪ್ರದಾಯಗಳಿಗೆ ಎಂದಿಗೂ ಕೊನೆಯಿಲ್ಲ, ಅವುಗಳೇ ಇಂದು ಬ್ಯುಸಿನೆಸ್ ಆಗುತ್ತಿವೆ ಎನ್ನುವುದಕ್ಕೆ ಈ ಸ್ಟೋರಿ ನೋಡಿದರೆ ತಿಳಿಯುತ್ತೆ, ಹಿಂದೆ ಹಿರಿಯರು ಮಾಡಿದ ನಿಯಮಗಳು ಸಂಪ್ರದಾಯಗಳು ಎಂದಿಗೂ ಮರೆಮಾಚುವುದಿಲ್ಲ, ಒಂದು ವೇಳೆ ಜೀವನ ಪೂರ್ತಿ ಸಂಪ್ರದಾಯಗಳಿಗೆ ವಿರೋದ್ಧ ಮಾಡಿಕೊಂಡು ಬಂದರು ಸತ್ತ ನಂತರದಲ್ಲಿ ಆದರು ಸಂಪ್ರದಾಯಗಳು ಬೇಕೇಬೇಕು, ಮದುವೆ, ಅಂತ್ಯಕ್ರಿಯೆಯಲ್ಲಿ ಕೆಲವು ಪ್ರಾಣಿಪಕ್ಷಿಗಳಿಂದ ನಿಯಮ ಮಾಡುವುದು ಇದೆ. ಅದರಂತೆ ಸತ್ತ ವ್ಯಕ್ತಿಯ ಉತ್ತರಕ್ರಿಯೆಯಲ್ಲಿ ಕಾಗೆಯನ್ನು ಎಡೆಯನ್ನು ಮುಟ್ಟಲೇ ಬೇಕು ಇಲ್ಲದಿದ್ದರೆ ಸತ್ತ ವ್ಯಕ್ತಿಯ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ, ಅದಕ್ಕಾಗಿ ಕಾಗೆ ಬರುವುದನ್ನು ಎಷ್ಟೇ ಸಮಯವಾದರೂ ಕಾಯುತ್ತಾರೆ. ಇದನ್ನೇ ಇಲ್ಲೊಬ್ಬ ವ್ಯಕ್ತಿ ಬ್ಯುಸಿನೆಸ್ ಮಾಡಿಕೊಂಡು ಹಣಗಳಿಸುತ್ತಿದ್ದಾನೆ.

ಹೌದು ಉತ್ತರಕ್ರಿಯೆಯಲ್ಲಿ ಕಾಗೆಯನ್ನು ನೀಡಿ ಕಾಗೆ ಬಿಸ್ನೆಸ್ ಗೆ ಪ್ರಸಿದ್ಧಿಯಾಗಿರುವ ವ್ಯಕ್ತಿ ಹೆಸರು ಪ್ರಶಾಂತ್ ಪೂಜಾರಿ. ಕರಾವಳಿಯ ಈ ಯುವಕ ಈಗ ಕಾಗೆ ಬಿಸ್ನೆಸ್ ಗೆಂದೇ ಹೆಸರು ಪಡೆದಿದ್ದಾನೆ. ಯಾರು ಇಷ್ಟ, ಮುಟ್ಟದ ಕಾಗೆಯನ್ನು ಇವನು ಸಾಕಿ ಇದರಿಂದಲೇ ಸಾವಿರಾರು ಹಣವನ್ನು ಗಳಿಸುತ್ತಿದ್ದಾನೆ. ಏಕೆಂದರೆ ಇತ್ತೀಚಿಗೆ ಕಾಗೆಗಳ ಸಂತತಿ ಕಡಿಮೆಯಾಗಿದೆ. ಮುಂದೊಂದು ದಿನ ಕಾಗೆನೇ ಇಲ್ಲದಂತಾಗಿ ಉತ್ತರಕ್ರಿಯೆ ಸಂಪ್ರದಾಯಕ್ಕೆ ಬ್ರೇಕ್ ಬಿಳ್ಳುತ್ತದೆ ಮುಂದೇನು ಎನ್ನುವ ಚಿಂತೆಯಲ್ಲಿರುವ ಜನರಿಗೆ ಒಂದು ಒಳ್ಳೆಯ ಉಪಾಯವನ್ನು ಪ್ರಶಾಂತ್ ನೀಡಿದ್ದಾರೆ.

ಏನಿದು ಕಾಗೆ ಬ್ಯುಸಿನೆಸ್?

ಹಿಂದೂ ಸಂಪ್ರದಾಯದ ಪ್ರಕಾರ ಮನುಷ್ಯ ಸತ್ತು ಹನ್ನೊಂದನೇ ಅಥವಾ ಹದಿಮೂರನೇ ದಿನ ಉತ್ತರಕ್ರಿಯೆ ಮಾಡಲಾಗುತ್ತದೆ. ಈ ಸಮಯದಲ್ಲಿ ಸತ್ತ ವ್ಯಕ್ತಿಗೆ ಇಟ್ಟ ಎಡೆಯನ್ನು ಮೊದಲು ಕಾಗೆ ಮುಟ್ಟಬೇಕು. ಹಾಗೆ ಕಾಗೆ ತಿನ್ನದೇ ಬೇರೆಯವರು ತಿಥಿ ಊಟ ಮಾಡುವಂತಿಲ್ಲ. ಸತ್ತವರ ಆತ್ಮ ಕಾಗೆ ರೂಪದಲ್ಲಿ ಬಂದು ಊಟ ಸ್ವೀಕರಿಸುತ್ತಾರೆ ಎಂಬುದು ನಂಬಿಕೆ. ಹಾಗೆ ಕಾಗೆ ಬಂದು ತಿಂದರೆ ಸತ್ತವರಿಗೆ ತೃಪಿಯಾಗಿದೆ ಎಂದರ್ಥ. ಈ ಸಂಪ್ರದಾಯ, ನಂಬಿಕೆಯೇ ಉಡುಪಿ ಜಿಲ್ಲೆಯ ಕಾಪು ನಿವಾಸಿ ಪ್ರಶಾಂತ್ ಪೂಜಾರಿಗೆ ಈಗ ಬಂಡವಾಳವಾಗಿದೆ. ಕಾಗೆಯನ್ನೇ ತನ್ನ ನೂತನ ಬಿಸ್ನೆಸ್ ಗೆ ಬಳಸಿಕೊಂಡಿದ್ದಾನೆ ಈತ. ವೈಕುಂಠ ಸಮಾರಾಧನೆಯ ದಿನ ಕಾಗೆಯನ್ನು ಎಲ್ಲಿ ಅವಶ್ಯಕತೆಯಿದೆಯೋ ಅಲ್ಲಿ ನೀಡುವುದೇ ಕಾಯಕ. ಈ ವ್ಯವಹಾರಕ್ಕೆ ಈಗ ಗ್ರಾಹಕರೂ ಹೆಚ್ಚಿದ್ದಾರಂತೆ. ಅದಕ್ಕಾಗಿ ಕಾಗೆಗೆ ಡಿಮ್ಯಾಂಡ್ ಗೇನು ಕೊರತೆಯಿಲ್ಲವಂತೆ.

ಕಾಗೆಗೆ ಮೊದಲೇ ಬುಕಿಂಗ್?

ಉತ್ತರ ಕ್ರಿಯೆ ದಿನ ಇವರಿಗೆ ಕರೆ ಮಾಡಿ ಬುಕ್ ಮಾಡಿದರೆ ಸಾಕು, ತಾವು ಸಾಕಿದ ಕಾಗೆ ತಂದು ಸತ್ತವರ ಉತ್ತರಕ್ರಿಯೆ ಊಟ ಮಾಡಿಸುವುದು ಇವರ ಕೆಲಸ. ಇತ್ತೀಚೆಗೆ ಹೆಬ್ರಿ ಸಮೀಪ ಅಪಘಾತದಲ್ಲಿ ಮೃತಪಟ್ಟ ಯುವಕನೊಬ್ಬನ ಉತ್ತರಕ್ರಿಯೆಗೆ ಸಂಪ್ರದಾಯದಂತೆ ಎಡೆ ಇಟ್ಟಿದ್ದರು. ಅಲ್ಲಿ ಕಾಗೆ ಬರಲೇ ಇಲ್ಲ. ನಂತರ ಅಲ್ಲಿ ಪ್ರಶಾಂತ್ ಪೂಜಾರಿ ಕಾಗೆಯೊಂದಿಗೆ ಹೋಗಿದ್ದರು. ಕಾಗೆಗೆ ಎಡೆ ಊಟ ಮಾಡಿಸಿದ್ದನ್ನು ನೋಡಿ ಜನರು ಅಚ್ಚರಿ ಪಟ್ಟಿದ್ದರು. ಅಲ್ಲಿಂದ ಪ್ರಶಾಂತ್ ಬಿಸ್ನೆಸ್ ಮತ್ತಷ್ಟು ಚುರುಕಾಯಿತು. ತಿಥಿ ನಡೆಸುವ ಕುಟುಂಬದವರು ದಕ್ಷಿಣೆ ನೀಡುವುದರೊಂದಿಗೆ ಕ್ರಿಯೆ ನಡೆಯುವ ಸ್ಥಳಕ್ಕೆ ವಾಹನ ವ್ಯವಸ್ಥೆ ಅಥವಾ ವಾಹನ ಬಾಡಿಗೆಯನ್ನು ನೀಡಬೇಕಿರುವುದು ಕಡ್ಡಾಯವಂತೆ.

ಈ ಉಪಾಯ ಹೊಳೆದಿದ್ದು ಹೇಗೆ?

ತಮ್ಮ ಮನೆ ಸಮೀಪದ ತೆಂಗಿನ ಮರದಿಂದ ಬಿದ್ದಿದ್ದ ಮೂರು ಕಾಗೆ ಮರಿಗಳನ್ನು ಪ್ರಶಾಂತ್ ಮನೆಗೆ ತಂದಿದ್ದರು. ಸ್ವಲ್ಪ ಸಮಯದಲ್ಲೇ ಎರಡು ಮರಿಗಳು ಸತ್ತು ಹೋಗಿವೆ. ಉಳಿದ ಒಂದನ್ನು ಮರಿಯಿಂದಲೇ ಸಾಕಿ ಬೆಳೆಸಿದ್ದಾರೆ. ಅದಕ್ಕೆ ರಾಜ ಅಂತಾನು ಹೆಸರು ಇಟ್ಟಿದ್ದಾರೆ. ಹೀಗೆ ಸಾಕುವಾಗ ಒಂದು ದಿನ ಉತ್ತರಕ್ರಿಯೆ ದಿನ ಕಾಗೆಗಾಗಿ ಕಾದು ಸುಸ್ತಾಗುತಿದ್ದ ಜನರನ್ನು ನೋಡಿದ್ದ ಪ್ರಶಾಂತ್ ಗೆ ಹೊಸದೊಂದು ಆಲೋಚನೆ ಹೊಳೆದಿದ್ದಂತೆ. ತಾನು ಸಾಕಿದ ಕಾಗೆ ಮರಿಯನ್ನು ಉತ್ತರಕ್ರಿಯೆ ಕಾರ್ಯಕ್ರಮಗಳಿಗೆ ಜನ ಬಯಸಿದಲ್ಲಿ ಕೊಡುವುದಾಗಿ ಫೇಸ್‌ಬುಕ್ ನಲ್ಲಿ ಬರೆದುಕೊಂಡಿದ್ದೇ ಅವರಿಗೆ ಅದೇ ಈಗ ದೊಡ್ಡ ಅದೃಷ್ಟವಾಗಿ ಹಣದ ಜೊತೆಗೆ ಹೆಸರು ಕೂಡ ಬಂದಿದೆ ಅಂತೆ.