ಕಾಮಾಲೆ ರೋಗದಿಂದ ಸಾಯುವ ಸ್ಥಿತಿಯಲ್ಲಿದ ಬಾಲಕನನ್ನು 8 ಕಿಮೀ ಹೊತ್ತೊಯ್ದು ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ CRPF ಯೋಧರು..

0
298

ದೇಶ ಕಾಯಿತ್ತಿರುವ ಯೋಧರು ಬರಿ ವಿರೋಧಿಗಳಿಂದ ದೇಶದ ರಕ್ಷಣೆ ಅಷ್ಟೇ ಮಾಡದೆ ಯಾರು ತೋರದಂತ ಮಾನವಿತೆಯನ್ನು ತೋರಿ ಅದೆಷ್ಟೋ ಬಡ ಜೀವಗಳನ್ನು ಉಳಿಸುತ್ತಿದ್ದಾರೆ. ಇದಕ್ಕೆ ಹಲವಾರು ನಿದರ್ಶನಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಭಾರತೀಯ ಯೋಧರ ಸಾಹಸ ದಿಟ್ಟತನದ ಕೆಲಸಕ್ಕೆ ಪ್ರಪಂಚದ್ಯಾದಂತ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಮತ್ತೊಂದು ಮಾನವಿತೆಗೆ ಪಾತ್ರರಾದ ಸಿಆರ್ ಪಿಎಫ್ ಯೋಧರು ತೀವ್ರ ಅನಾರೋಗ್ಯ ಪಿಡಿತನಾಗಿದ್ದ ಬಾಲಕನೊಬ್ಬನನ್ನು ಬರೋಬರಿ 8 ಕಿಮೀ ಹೊತ್ತುಕೊಂಡು ಹೋಗಿ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದ ಘಟನೆ ಛತ್ತೀಸ್ ಘಡದಲ್ಲಿ ನಡೆದಿದೆ.

ಹೌದು ಚತ್ತೀಸ್‍ಗಢದ ದಾಂತೇವಾಡ ಪ್ರದೇಶ ನಕ್ಸಲ್ ಪೀಡಿತ ಪ್ರದೇಶವೆಂದು ಹೆಸರು ಪಡೆದಿದ್ದು ಇಲ್ಲಿ ಯಾವುದೇ ಸರಿಯಾದ ವ್ಯವಸ್ಥೆಗಳಿಲ್ಲ, ಇದೆ ಸ್ಥಳದಲ್ಲಿ ಬರುವ ಗುಮೋದಿ ಗ್ರಾಮದ 13 ವರ್ಷದ ಬಾಲಕ ಅನಾರೋಗ್ಯದಿಂದ ಬಳಲುತ್ತಿದ್ದ. ಅಲ್ಲಿ ಹತ್ತಿರದೆಲ್ಲೆಲ್ಲೂ ಚಿಕಿತ್ಸೆಯ ವ್ಯವಸ್ಥೆ ಇರಲಿಲ್ಲ. ಆಗ ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಸಿಆರ್‌ಪಿಎಫ್ 231 ಬೆಟಾಲಿಯನ್ ಪಡೆಯ ಸೈನಿಕರು ಬಾಲಕನನ್ನು ನೋಡಿದ್ದಾರೆ. ಆತನ ಸ್ಥಿತಿಯನ್ನು ಅರಿತ ಯೋಧರು ಮಂಚವನ್ನು ಹಗ್ಗದ ಸಹಾಯದಿಂದ ಉದ್ದದ ಕಟ್ಟಿಗೆ ಕಟ್ಟಿದ್ದಾರೆ. ಬಳಿಕ ಇಬ್ಬರು ಯೋಧರು ಅದನ್ನು ಹೆಗಲ ಮೇಲೆ ಇಟ್ಟುಕೊಂಡು ಬಾಲಕನನ್ನು ಸೇನಾ ಕ್ಯಾಂಪ್ ಗೆ ಸಾಗಿಸಿದ್ದಾರೆ.

ಮೊದಲಿಗೆ ಬಾಲಕ ಮಲಗಿದ್ದ ಮಂಚವನ್ನು ಹಗ್ಗದ ಸಹಾಯದಿಂದ ಉದ್ದದ ಕಟ್ಟಿಗೆಗೆ ಕಟ್ಟಿ ಬಳಿಕ ಇಬ್ಬರು ಯೋಧರು ಅದನ್ನು ಹೆಗಲ ಮೇಲೆ ಹೊತ್ತು ಸೇನಾ ಕ್ಯಾಂಪ್ ಗೆ ಸಾಗ್ಗಿಸಿದ್ದಾರೆ. ಗ್ರಾಮದಿಂದ ಎಂಟು ಕಿಮೀ ದೂರದಲ್ಲಿದ್ದ ಕ್ಯಾಂ ವರೆಗೆ ಯೋಧರು ಬಾಲಕನನ್ನು ಹೊತ್ತು ಸಾಗಿದ್ದು ಅವರ ಹಿಂದೆ ಬಾಲಕನ ಕುಟುಂಬದವರು ಮತ್ತು ಸ್ನೇಹಿತರೂ ಆಗಮಿಸಿದ್ದಾರೆ. ಇಂತಹ ಮಾನವಿತೆಯ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಯೋಧರ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಯೋಧರು ಹೊತ್ತೊಯ್ಯುದ ಬಾಲಕನಿಗೆ ಕಾಮಾಲೆ ಕಾಯಿಲೆ ಕಾಣಿಸಿಕೊಂಡಿತ್ತು. ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರಿಂದ ಸದ್ಯ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಚಿಕಿತ್ಸೆ ಮುಂದುವರಿದಿದೆ ಎಂದು ವರದಿಯಾಗಿದೆ.

ಕೆಲವು ದಿನಗಳ ಹಿಂದೆಯೂ ಕೂಡ ಇದೆ ಸಿಆರ್’ಪಿಎಫ್ ಯೋಧರು ಮಹಿಳೆಯನ್ನು 7 ಕಿ.ಮೀ ಹೊತ್ತು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದರು ಸಾಮಾಜಿಕ ಜಾಲತಾಣದಲ್ಲಿ ಬಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಜ್ವರದಿಂದ ಬಳಲುತಿದ್ದ ಮಹಿಳೆಯೊಬ್ಬಳನ್ನು 7 ಕಿ.ಮೀ ಹೊತ್ತು ಸಾಗಿದ ಸಿಆರ್’ಪಿಎಫ್ ಯೋಧರು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಘಟನೆ ನಕ್ಸಲ್ ಪೀಡಿತ ಪ್ರದೇಶ ಛತ್ತೀಸ್’ಗಡ’ದಲ್ಲಿ ನಡೆದಿತ್ತು.

ಬೆಟ್ಟ ಗುಡ್ಡದ ನಡುವೆಯಿರುವ ಪುಟ್ಟ ಗ್ರಾಮದಲ್ಲಿ ಮಹಿಳೆಯೊಬ್ಬಳು ತೀರ್ವ ಜ್ವರದಿಂದ ಬಳಲುತ್ತಿದ್ದಳು. ಮಹಿಳೆಯ ಕುಟುಂಬಸ್ಥರು ಆ್ಯಂಬುಲೆನ್ಸ್ ಸಹಾಯ ಕೋರಿದ್ದಾರೆ. ಆದರೆ ರಸ್ತೆ ಮಾರ್ಗ ಇಲ್ಲದ ಕಾರಣ ಆ್ಯಂಬುಲೆನ್ಸ್‌ ಸೌಲಭ್ಯ ಒದಗಿಸಲು ಸಾಧ್ಯವಾಗಿಲ್ಲ. ನಂತರ ಕುಟುಂಬಸ್ಥರು ಯೋಧರ ಸಹಾಯ ಕೋರಿದ್ದಾರೆ. ಮಹಿಳೆಯ ಸ್ಥಿತಿ ನೋಡಿದ ಸೈನಿಕರು ಸ್ಟ್ರಕ್ಚ’ರ್ ಮೂಲಕ ಕಾಲು ದಾರಿಯ ಮೂಲಕ 7 ಕಿ.ಮೀ ಸಾಗಿ ಆಸ್ಪತ್ರೆಗೆ ದಾಖಲಿಸಿದರು. ಈಗ ಅಂತಹದೇ ಒಂದು ಘಟನೆ ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.