ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದ್ದಾಗ ಇರದ EVM ಮೋಸ ಬಿಜೆಪಿ ಗೆದ್ದಾಗ ಮಾತ್ರ ಮೋಸ ಆಯ್ತಂತೆ…

0
496

EVM ಬಗ್ಗೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ವಿರುದ್ಧ ಮಾಡಿಕೊಂಡು ಬಂದಿರುವ ಕಾಂಗ್ರೆಸ್ ಈಗ ಗುಜುರಾತ್ ಮತ್ತು ಹಿಮಾಚಲ್ ಪ್ರದೇಶದ ಚುನಾವಣೆಯ ಸೋಲಿನ ನಂತರ ಅವರು EVM ನನ್ನು ದೂರಲಾರಂಭಿಸಿದ್ದಾರೆ. ಈ ಕುರಿತು ಚಿಕ್ಕಮಗಳೂರು ಬಿಜೆಪಿ ಶಾಸಕ ಸಿಟಿ ರವಿ ಕಾಂಗ್ರೆಸ್-ನವರಿಗೆ ಟಾಂಗ್ ನೀಡಿದ್ದಾರೆ.

ಎರಡು ರಾಜ್ಯದಲ್ಲಿ ಜನ ನಮ್ಮ ಪಕ್ಷದ ಅಭಿವೃದ್ಧಿಯನ್ನು ಮತ್ತು ಮೋದಿಯವರ ಕಾರ್ಯವನ್ನು ನೋಡಿ ಮತ ನೀಡಿದ್ದಾರೆ. ಮೀಸಲಾತಿ ಹೋರಾಟ ಮತ್ತು ರಾಹುಲ್ ಗಾಂಧಿಯ ದೇವಾಲಯ ಭೇಟಿಗೆ ಜನರು ತಮ್ಮ ಮತಗಳ ಮೂಲಕ ಉತ್ತರಿಸಿದ್ದಾರೆ ಎಂದು ಸಿಟಿ ರವಿಯವರು ತಮ್ಮ ಸಾಮಾಜಿಕ ಜಾಲತಾಣ ಖಾತೆ ಟ್ವಿಟ್ಟರ್-ನ ಮೂಲಕ ತಿಳಿಸಿದ್ದಾರೆ.

ಕಾಂಗ್ರೆಸ್-ನವರಿಗೆ ಬೆಳಗ್ಗೆ 8.45 ರಿಂದ 9.45ರವರೆಗೆ EVM ತುಂಬಾ ಚೆನ್ನಾಗಿ ಕೆಲಸ ಮಾಡಿತ್ತು, ಆದರೆ ಯಾವಾಗ ಅವರು ಸೋತರು ಆಗಿನಿಂದ EVM ಹ್ಯಾಕ್ ಮಾಡಲಾಗಿದೆ ಎಂದು ಆರೋಪಿಸುತ್ತಿದ್ದಾರೆ ಎಂದು ಸಿಟಿ ರವಿ ಹೇಳಿದ್ದಾರೆ. ಗುಜುರಾತ್-ನಲ್ಲಿ ಬಿಜೆಪಿ ಅಭೂತಪೂರ್ವ ಜಯಗಳಿಸಿದೆ, ಆದರೂ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಯನ್ನು ಹೊಗಳುತ್ತಿರುವುದು ಅಚ್ಚರಿಯೇ ಸರಿ ಎಂದಿದ್ದಾರೆ.