ಕರ್ನಾಟಕ ಸಹ ಭಾರತದ ಒಂದು ಭಾಗ: ಶಾಸಕ ಸಿ.ಟಿ ರವಿ

0
705

ಕರ್ನಾಟಕ ಕೂಡ ಭಾರತದ ಒಂದು ರಾಜ್ಯ ಎಂದು ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಅವರಿಗೆ ರಾಜ್ಯ ಬಿಜೆಪಿ ಶಾಸಕ ಸಿ.ಟಿ ರವಿ ನೆನಪು ಮಾಡಿಕೊಟ್ಟಿದ್ದಾರೆ.

 

ನೇಕಾರರಿಗೆ ಅನುಕೂಲವಾಗಲೆಂಬ ದೃಷ್ಟಿಯಿಂದ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ, ‘ಇ ಧಾಗ’ ಎಂಬ ಆ್ಯಪ್ ಉದ್ಘಾಟಿಸಿದರು. ಈ ಆ್ಯಪ್ ಹಿಂದಿ, ಇಂಗ್ಲಿಷ್, ಮತ್ತು ತೆಲುಗು ಭಾಷೆಯಲ್ಲಿ ಲಭ್ಯವಿದೆ. ಶೀಘ್ರವೇ ತಮಿಳು, ಬೆಂಗಾಲಿ, ಒರಿಯಾ ಮತ್ತು ಉರ್ದು ಹಾಗೂ ಅಸ್ಸಾಮೀ ಭಾಷೆಯಲ್ಲಿ ಸಿಗಲಿದೆ ಎಂದು ಸ್ಮೃತಿ ಇರಾನಿ ಹೇಳಿದ್ದರು.

ಆದರೆ ಇರಾನಿ ಕನ್ನಡ ಭಾಷೆಯಲ್ಲಿ ಆ್ಯಪ್ ಇಲ್ಲದುದರ ಬಗ್ಗೆ ಬಿಜೆಪಿ ಶಾಸಕ ಸಿಟಿ ರವಿ ಟ್ವೀಟ್ ಮಾಡಿದ್ದಾರೆ. ಸ್ಮೃತಿ ಇರಾನಿ ಅವರೇ, ಕರ್ನಾಟಕ ಕೂಡ ಭಾರತದ ಒಂದು ಭಾಗ, ಹೀಗಾಗಿ ಇ ಧಾಗ ಆ್ಯಪ್ ಅನ್ನು ಕನ್ನಡದಲ್ಲಿ ಶೀಘ್ರವೇ ಪರಿಚಯಿಸಿ, ಜೊತೆಗೆ ಅಡ್ವಾನ್ಸ್ ಥ್ಯಾಂಕ್ಸ್ ಎಂದು ಟ್ವೀಟ್ ಮಾಡಿದ್ದರು.

ಸಿಟಿ ರವಿ ಟ್ವೀಟ್ ಗೆ ಇರಾನಿ ಪ್ರತಿಕ್ರಿಯೆ ನೀಡಿದ್ದು ಕನ್ನಡದಲ್ಲಿ ಆ್ಯಪ್ ಲಾಂಚ್ ಮಾಡುವುದಾಗಿ ಹೇಳಿದ್ದಾರೆ.