ಈರುಳ್ಳಿ ದೋಸೆ, ಟೊಮೇಟೊ ದೋಸೆ ತಿಂದಿರ್ತಿರ, ಸೌತೆಕಾಯಿ ದೋಸೆ ತಿಂದಿರೋದು ವಿರಳ; ಈ ಬೇಸಿಗೆಯಲ್ಲಿ ಮಾಡ್ಕೊಂಡು ತಿನ್ನಿ ಆರೋಗ್ಯಕ್ಕೂ ಒಳ್ಳೇದು!!

0
853

ಸೌತೆಕಾಯಿ ಅಧಿಕ ನೀರಿನಂಶವುಳ್ಳ ಮತ್ತು ತುಂಬಾ ರುಚಿಕಟ್ಟಾದ ತರಕಾರಿ. ಆದರೆ ಇದರಲ್ಲಿರುವ ಪೌಷ್ಟಿಕಾಂಶ ಅಪಾರ. ಪ್ರೋಟಿನ್, ಕೊಬ್ಬು, ಪಿಷ್ಟ, ಖನಿಜ, ಸುಣ್ಣ, ನಾರು, ಮುಂತಾದವುಗಳಿಂದ ಸಮೃದ್ಧವಾಗಿರುವ ಸೌತೆಕಾಯಿಯನ್ನು ನಿತ್ಯದ ಆಹಾರದಲ್ಲಿ ಬಳಸುವುದು ಒಳ್ಳೆಯದು. ಬಾಯಿಗೆ ರುಚಿ, ದೇಹಕ್ಕೆ ತಂಪು ನೀಡುವುದಷ್ಟೇ ಅಲ್ಲದೆ ಚರ್ಮದ ಆರೋಗ್ಯಕ್ಕೂ ಇದು ಉತ್ತಮವಾಗಿದ್ದು, ಚರ್ಮದಲ್ಲಿರುವ ಉಷ್ಣತೆಯನ್ನೂ ತೆಗೆದುಹಾಕುತ್ತದೆ. ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಕೆ ಅಂಶ ಹೊಂದಿರುವುದರಿಂದ ಮೂಳೆಗಳಿಗೆ ಶಕ್ತಿ ನೀಡುತ್ತದೆ. ಜೊತೆಗೆ ಇದರಲ್ಲಿ ಸಿಲಿಕಾ ಇರುವುದರಿಂದ ಕೀಲುಸಂದಿಗಳನ್ನೂ ಬಲಪಡಿಸುವುದರಿಂದ ಮೂಳೆಗಳು ಸದೃಢವಾಗುತ್ತವೆ. ಇಂತಹ ಆರೋಗ್ಯಕರ ಅಡಿಗೆಯಲ್ಲಿ ಸೌತೆಕಾಯಿ ದೋಸೆ ಕೂಡ ಒಂದು.

Also read: ರಾಗಿ ಮಸಾಲಾ ದೋಸೆ ಆರೋಗ್ಯಕ್ಕೂ ಸೈ ರುಚಿಗೂ ಸೈ ….ಹೇಗೆ ಮಾಡೋದು ಅಂತೀರಾ ಇಲ್ಲಿ ನೋಡಿ..!

ದೋಸೆಯಲ್ಲೂ ನೂರಾರು ತರದ ದೋಸೆಗಳನ್ನು ಮಾಡಬಹುದು, ಆದ್ದರಿಂದ ದೋಸೆ ಪ್ರಿಯರಿಗೆ ದೋಸೆ ತಿನ್ನಲು ಯಾವತ್ತೂ ಬೇಜಾರಾಗುವುದಿಲ್ಲ. ದೋಸೆಯಲ್ಲಿ ಎಷ್ಟು ವೆರೈಟಿ ದೋಸೆಗಳಿರುತ್ತವೆ ಅವು ನಿಮ್ಮ ನಾಲಿಗೆ ರುಚಿಯನ್ನು ಹೆಚ್ಚಿಸುತ್ತದೆ. ಅದರಲ್ಲೂ ಸೌತೆಕಾಯಿ ದೋಸೆ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಹಾಗೆ ಸುಲಭವಾಗಿ ಕೂಡ ಮಾಡಬಹುದು..ಇಂದೇ ಟ್ರೈ ಮಾಡಿ..

ತಯಾರಿಸಲು ಬೇಕಾಗುವ ಸಾಮಗ್ರಿಗಳು

 • 2 ಕಪ್ ಅಕ್ಕಿ
 • 2 ಕಪ್ ಸೌತೆಕಾಯಿ ತುರಿ
 • ಎರಡು ಹಸಿ ಮೆಣಸಿನಕಾಯಿ
 • ರುಚಿಗೆ ತಕ್ಕಷ್ಟು ಉಪ್ಪು
 • ಸ್ವಲ್ಪ ಎಣ್ಣೆ

ತಯಾರಿಸುವ ವಿಧಾನ

 1. ಅಕ್ಕಿ ತೊಳೆದು ರಾತ್ರಿ ಇಡಿ ನೆನೆಯಲು ಬಿಡಿ.
 2. ಬೆಳಿಗ್ಗೆ ನೆನೆಸಿದ ಅಕ್ಕಿ ಮತ್ತು ಬೇಕಾದರೆ ಕಾಯಿತುರಿ (ಬೇಕಾದರೆ), ಸೌತೆಕಾಯಿ ತುರಿ ಮತ್ತು ಹಸಿಮೆಣಸಿನ ಕಾಯಿ
  ಸೇರಿಸಿ ಅಗತ್ಯವಿದಷ್ಟು ನೀರು ಸೇರಿಸಿ ದೋಸೆ ಹಿಟ್ಟು ಹದವಾಗಿ ಬರುವ ವರೆಗೆ ರುಬ್ಬಿಕೊಳ್ಳಿ.
 3. ಒಲೆಯ ಮೇಲೆ ದೋಸೆ ಕಾವಲಿ ಇಟ್ಟು ಕಾದಮೇಲೆ ಎಣ್ಣೆ ಸವರಿ ಸ್ವಲ್ಪ ದೋಸೆ ಹಿಟ್ಟು ಹಾಕಿ ಒಂದು ದಪ್ಪನೆಯ ಕಾಗದದಿಂದ ತೆಳ್ಳಗೆ ಹರಡಿ ಮುಚ್ಚಳ ಹಾಕಿ. ಬೆಂದ ಮೇಲೆ ದೋಸೆ ಎಬ್ಬಿಸಿ ತಟ್ಟೆಗೆ ಹಾಕಿ.
 4. ಈಗ ಸೌತೆಕಾಯಿ ದೋಸೆ ಸವಿಯಲು ಸಿದ್ದ.