ಕೇವಲ 10 ನಿಮಿಷದಲ್ಲಿ ನಿಮ್ಮ ಸ್ಕಿನ್‌ ಕಾಂತಿಯುತವಾಗುತ್ತದೆ. ಅದಕ್ಕಾಗಿ ಈ ಟಿಪ್ಸ್‌ಗಳನ್ನು ತಪ್ಪದೆ ಬಳಸಿ..!!

0
2302

ಮೊಸರು-ಆಲಿವ್ ಎಣ್ಣೆಮೊಸರು ಮತ್ತು ಆಲಿವ್ ಎಣ್ಣೆಯ ಮಿಶ್ರಣವನ್ನು ಮುಖಕ್ಕೆ ಹಾಕಿಕೊಂಡು ಮೂವತ್ತು ನಿಮಿಷದ ನಂತರ ತೊಳೆಯಿರಿ. ವಾರಕ್ಕೆರಡು ಬಾರಿ ಹೀಗೆ ಮಾಡುವುದರಿಂದ ವಯಸ್ಸಾದ ಲಕ್ಷಣಗಳು ಕಾಣಿಸುವುದಿಲ್ಲ. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲವು ಚರ್ಮದ ಮೃತ ಕೋಶಗಳನ್ನು ತೆಗೆದು ಹಾಕಿ ಬೇಗನೆ ನೆರಿಗೆ ಬೀಳುವುದನ್ನು ತಪ್ಪಿಸುತ್ತಿದೆ. ಹೀಗಾಗಿ ಸುಕ್ಕಾಗುವ ಪ್ರಕ್ರಿಯೆ ನಿಧಾನವಾಗುತ್ತದೆ.

ಬಿಳಿಯ ಚರ್ಮಕ್ಕೆ ಮೊಸರಿನಲ್ಲಿ ಒಂದಿಷ್ಟು ಬ್ಲೀಚಿಂಗ್ ಗುಣವಿದೆ. ನಿಯಮಿತವಾಗಿ ಮೊಸರು ಬಳಸುವುದರಿಂದ ತ್ವಚೆಯ ಬಣ್ಣ ವೃದ್ಧಿಸಿ, ಕಾಂತಿಯುತವಾಗುತ್ತದೆ. ಕಲೆ ಹಾಗೂ ವಯಸ್ಸಿನ ಕಾರಣದಿಂದ ಸುಕ್ಕಾಗುವುದನ್ನು ತಪ್ಪಿಸುತ್ತದೆ.

ಮೊಸರಿಗೆ ಸ್ವಲ್ಪ ನಿಂಬೆ ರಸ ಬೆರೆಸಿ ಮುಖಕ್ಕೆ ಲೇಪಿಸಿ ಸ್ವಲ್ಪ ಹೊತ್ತಿನ ನಂತರ ತೊಳೆಯಿರಿ. ನಿಂಬೆ ಕೂಡ ನೈಸರ್ಗಿಕ ಬ್ಲೀಚಿಂಗ್ ಗುಣ ಹೊಂದಿದ್ದು, ಮೊಸರಿನೊಂದಿಗೆ ಇದನ್ನು ಸೇರಿಸಿ ಬಳಸುವುದರಿಂದ ಚರ್ಮಕ್ಕೆ ಒಳ್ಳೆಯ ಆರೈಕೆ ದೊರೆಯುತ್ತದೆ.

ಶುಷ್ಕತ್ವಚೆಗೆ ಮೊಸರು ನೀರು ತೆಗೆದ ಗಟ್ಟಿ ಮೊಸರು ಇದಕ್ಕೆ ಸೂಕ್ತ. ಶುಭ್ರವಾಗಿ ಮುಖ ತೊಳೆದು ಗಟ್ಟಿ, ದಪ್ಪವಾದ ಮೊಸರನ್ನು ಲೇಪಿಸಿ. ಹತ್ತು ನಿಮಿಷ ನಂತರ ಮುಖ ತೊಳೆಯಿರಿ. ಇದರಿಂದ ಮುಖದ ಚರ್ಮ ಮೃದುವಾಗುವುದರ ಜೊತೆಗೆ ಆದ್ರ್ರತೆ ಹೆಚ್ಚಾಗುತ್ತದೆ.