ಮನೆಯ ಸೌಂದರ್ಯದಲ್ಲಿ ಮಹತ್ವ ಪಾತ್ರವಹಿಸುತ್ತದೆ ಕುಶನ್ ಹೊಸ ಲುಕ್

0
472

ಕುಶನ್ ಕೇವಲ ಪೀಠೋಪಕರಣಗಳಿಗೆ ದೂಳು, ಕೊಲೆಯಿಂದ ರಕ್ಷಣೆ ಮಾತ್ರ ನೀಡುವುದಿಲ್ಲ, ಜೊತೆಗೆ ಸುಂದರ ವಿನ್ಯಾಸದ, ವರ್ಣರಂಜಿತ ಕುಶನ್ ಇಡೀ ಇಂಟೀರಿಯರ್’ಗೆ ಡ್ರಾಮಾ ಲುಕ್ ತಂದುಕೊಡುತ್ತದೆ.

ಕೊಠಡಿಯೊಂದರಲ್ಲಿ ಯಾವಿದೇ ಬಣ್ಣದ ವಸ್ತುಗಳನ್ನು ಸರಿಯಾದ ಜಾಗದಲ್ಲಿಟ್ಟರೆ ಅದು ಇಡೀ ಕೋಣೆಯ ವಿಶುವಲ್ ಅಪೀಲ್’ಗೆ ಕಾರಣವಾಗುತ್ತದೆ. ಕೆಲವೊಮ್ಮೆ ವಸ್ತುಗಳನ್ನು ಸರಳವಾಗಿ ರಿಅರೆಂಜ್ ಮಾಡಿದರೆ ಅಥವಾ ಸ್ಥಾನಪಲ್ಲಟಗೊಳಿಸಿದೆರೆ ಆಗ ಅದರಿಂದ ಇಡೀ ಕೋಣೆಯ ಮೂಡ್ ಬದಲಾಗಿ, ಒಳಗಿನ ಸ್ಥಳಕ್ಕೆ ಹೊಸ ಲುಕ್ ಬಂದು ಬಿಡುತ್ತದೆ.

‘ಬೆಡ್ ಇರಲಿ, ಕುಶನ್, ಸೋಫಾ, ದಿವಾನ್ ಅಥವಾ ಅದನ್ನು ಕವರ್ ಮಾಡಿದ ಬಟ್ಟೆಯಿರಲಿ ಅವುಗಳ ಬದಲಾವಣೆಯು ಇಡೀ ಕೋಣೆಗೆ ಹೊಸ ಲುಕ್ ನೀಡುವುದರಲ್ಲಿ ಸಂಶಯವಿಲ್ಲ’ ಎಂದು ಹೋಮ್ ಹೇಳುತ್ತಾರೆ. ಪ್ರತಿ ಆರು ತಿಂಗಳಿಗೊಮ್ಮೆ ಬೆಡ್ ರೂಮ್ ಪೀಠೋಪಕರಣಗಳನ್ನು ಬದಲಾಯಿಸುತ್ತಿರುವ ಅವರು ತಮ್ಮನುಭವದಿಂದ ಈ ಮಾತನ್ನು ಹೇಳುತ್ತಾರೆ.

ಕುಶನ್ ನಿಂದ ಅಂದ: ಮನೆಯಲ್ಲಿ ಹೆಚ್ಚು ಕುಳಿತುಕೊಳ್ಳಲು ಬಳಕೆಯಾಗುವ ಸ್ಥಳದಲ್ಲಿರುವ ಪೀಠೋಪರಣಗಳ ಮೇಲಿನ ಕುಶನ್ ಇಡೀ ಮನೆಯ ಸೌಂದರ್ಯದಲ್ಲಿ ಮಹತ್ವ ಪಾತ್ರವಹಿಸುತ್ತದೆ. ಕೆಲವು ದೊಡ್ಡ. ವರ್ಣರಣಜಿತ ಕೆಲವು ಚಿಕ್ಕಕುಶನ್’ಗಳ ಸಮತೋಲನ ಮಿಶ್ರಣವು ಮನೆಗೆ ಬರುವ ಅತಿಥಿತಳನ್ನು ಮತ್ತೊಮ್ಮೆ ಆಸಕ್ತಿಯಿಂದ ನೋಡುವಂತೆ ಮಾಡುತ್ತದೆ.

‘ಲಿವಿಂಗ್ ರೂಮ್ ನಲ್ಲಿ ಯಾವಾಗಲೂ ಒಂದು ಕಲರ್’ನ್ ಕುಶನ್ ಇರುವುದು ನನಗೆ ಹಿಡಿಸುವುದಿಲ್ಲ. ಹೀಗಾಗಿ ನಿಯಮಿತವಾಗಿ ಬೇರೆ ಬಣ್ಣ ಮತ್ತು ಗಾತ್ರದ ಕುಶನ್ ಬದಲಾಯಿಸುತ್ತಲೇ ಇರುತ್ತೇನೆ’ ಎಂದು 350 ಚದರ ಅಡಿ ವಿಸ್ತಾರದ ಲೀವಿಂಗ್ ರೂಮ್’ನ್ನು ಮನೆಯಲ್ಲಿ ಹೊಂದಿರುವವರು ಹೇಳುತ್ತಾರೆ.

ಕುಶನ್’ಗಳು ಯಾವಾಗಲೂ ನೋಡಲು ಸುಂದರವಾಗಿರುವುದಷ್ಟೇ ಸಾಲದು. ಜೊತೆಗೆ ಕುಳಿತುಕೊಳ್ಳುವಾಗ ಆರಾಮದಾಯಕ ಎನಿಸುವಂತಿರಬೇಕು ಎನ್ನುವುದನ್ನು ಮರೆಯಬಾರದು. ಇದರಲ್ಲಿ ಕುಶನ್ ಗಾತ್ರ ಮತ್ತು ಅದಕ್ಕೆ ಬಳಸುವ ಹತ್ತಿ, ಬಟ್ಟೆ ಎಲ್ಲವೂ ಮುಖ್ಯವಾಗುತ್ತದೆ.

ಇನ್ನು ಬಹುತೇಕ ಗೃಹಿಣಿಯರು ಹಳೆ ಸೀರೆ, ದುಪ್ಪಟ, ಒಡೆದ ಗಾಜು, ಕನ್ನಡಿ ಚೂರುಗಳು, ಜರಿ, ಸಿಲ್ಕ್ ಇವುಗಳನ್ನು ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಂಡು ಆಕರಷಕ ಕುಶನ್ ತಯಾರಿಸುತ್ತಾರೆ. ಇದಕ್ಕೆ ಒಂದಿಷ್ಟು ಕ್ರಿಯೇಟಿವ್ ಇದ್ದರೂ ಸಾಕು.

ಗಾತ್ರ ಮತ್ತು ಬಳಕೆ: ಇಂಟೀರಿಯರ್ ನಲ್ಲಿ ಬಳಕೆ ಮಾಡುವ ಮೊದಲು ಕುಶನ್ ಉಪಯೋಗ ಯಾವ ರೀತಿ ಮಾಡಿಕೊಳ್ಳಬೇಕು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.ಒಂದು ವೇಳೆ 10 ವರ್ಷ ಹಳೆಯ ರೂಮ್ ಆಗಿದ್ದರೆ ಅದಕ್ಕೆ ಅತ್ಯಂತ ಅದ್ದೂರಿ ಅಥವಾ ಅಲಂಕೃತ ಕುಶನ್ ಸರಿಯಲ್ಲ. ಡೆನಿಮ್ ನಂತಹ ರಫ್ ಯೂಸ್ ಬಟ್ಟೆ ಬಳಸುವುದು ಸೂಕ್ತ.

ಇನ್ನು ಕುಶನ್ ಆಕಾರ ಕೂಡ ರೂಮ್’ನ ಲುಕ್ ಅನ್ನು ಇನ್ನಷ್ಟು ಸುಣದರವಾಗಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕುಶನ್ ಜೊತೆ ಬೀನ್ ಬ್ಯಾಗ್ ಅಥವಾ ಬೇರೆ ಬೇರೆ ಆಕಾರ ಮತ್ತು ಗಾತ್ರದ ಒಂದೆರಡು ಕುಶನ್ ಗಳನ್ನು ಒಟ್ಟಾಗಿ ಇಡುವುದು ಕೂಡ ಹೊಸ ಲುಕ್ ನೀಡುತ್ತದೆ. ಇನ್ನು ಆಧುನಿಕ ಕಾಲಕ್ಕೆ ಹೊಂದುವ ಕ್ರೆಸೆಂಟ್ ಶೇಪ್ ಕುಶನ್, ಝೆನ್ ಮೆಡಿಟೇಶನ್ ಕುಶನ್, ಸಂಘ, ಜಪಾನೀಸ್ ಝಬುಟನ್ ಸೇರಿದಂತೆ ಹಲವು ವಿಧದ ಕುಶನ್ ಸಿಗುತ್ತವೆ.