ಹಿಂದೂ ಅಲ್ಲದ ಡೆಲಿವರಿ ಬಾಯ್ ತಂದ ಆಹಾರವನ್ನು ಕ್ಯಾನ್ಸಲ್ ಮಾಡಿ ಟ್ವಿಟ್ಟರ್ ನಲ್ಲಿ ಬರೆದುಕೊಂಡಿ ವ್ಯಕ್ತಿಗೆ ಝೊಮ್ಯಾಟೊ ದಿಂದ ಸಿಕ್ತು ಭಾರಿ ಬಹುಮಾನ..

0
302

ಜನರು ಬೆಳೆದಂತೆ ಸಮಾಜ ಬೆಳೆಯುತ್ತದೆ. ಇದರಿಂದ ಜನರ ಮನಸ್ಸಿನಲ್ಲಿ ಅಂಟಿಕೊಂಡಿರುವ ಜಾತಿ, ಧರ್ಮವೆನ್ನುವ ವಿಷಬೀಜ ಹುಟ್ಟುವುದು ಕಡಿಮೆಯಾಗುತ್ತಿದೆ. ಎನುವುದು ಕೇವಲ ಭ್ರಮೆಯಷ್ಟೇ ಆಗಿದೆ. ಏಕೆಂದರೆ ಜನರು ತಾವು ಬೆಳೆದಂತೆ ಜಾತಿ, ಧರ್ಮವೆನ್ನುವ ಮನೋಭಾವನ್ನು ಬೆಳೆಸಿಕೊಂಡು ಬರುತ್ತಿದ್ದಾರೆ. ಎನ್ನುವುದಕ್ಕೆ ಘಟನೆಯೊಂದು ನಡೆದಿದ್ದು, ಅದು ಆನ್ಲೈನ್ ಫುಡ್ ಡೆಲಿವರಿಗೆ ಮಾರಕವಾಗಿದ್ದು, ಹಿಂದೂ ಅಲ್ಲದ ವ್ಯಕ್ತಿ ಆನ್ಲೈನ್ ನಲ್ಲಿ ಫುಡ್ ಆರ್ಡರ್ ಮಾಡಿದ ವ್ಯಕ್ತಿಗೆ ಡೆಲಿವರಿ ಮಾಡಿದಕ್ಕೆ ಊಟವನ್ನೇ ರಿಜೆಕ್ಟ್ ಮಾಡಿ. ತಮ್ಮ ಟ್ವೀಟ್-ನಲ್ಲಿ ಬರೆದುಕೊಂಡು ವ್ಯಕ್ತಿಗೆ ಸರಿಯಾದ ಉತ್ತರ ಸಿಕ್ಕಿದೆ.

Also read: ಆನ್ಲೈನ್ ಫುಡ್-ನಲ್ಲಿ ಗ್ರಾಹಕರಿಗೆ ಮೋಸ; ಪನೀರ್ ಆರ್ಡರ್ ಮಾಡಿದ್ರೆ ಚಿಕನ್ ಡೆಲಿವರಿ ಮಾಡಿದ ಝೊಮ್ಯಾಟೊಗೆ 55 ಸಾವಿರ ರೂ. ದಂಡ..

ಧರ್ಮಕ್ಕೆ ಬಂದ ಆನ್ಲೈನ್ ಫುಡ್?

ಹೌದು ಕೆಲವು ಹಾಸ್ಯವೆನಿಸಿದರು ಅಸಲಿಗೆ ವ್ಯಕ್ತಿ ಮಾಡಿರುವ ಟ್ವೀಟ್ ಭಾರಿ ವೈರಲ್ ಆಗಿದೆ. ಅಮಿತ್ ಶುಕ್ಲಾ ಎನ್ನುವ ವ್ಯಕ್ತಿ ಝೊಮ್ಯಾಟೊ ಆ್ಯಪ್-ನಲ್ಲಿ ಫುಡ್ ಆರ್ಡರ್ ಮಾಡಿದ್ದಾರೆ, ಆಗ ಊಟ ಕೊಡಲು ಬಂದ ವ್ಯಕ್ತಿಯ ಹೆಸರು ಧರ್ಮವನ್ನು ವಿಚಾರಿಸಿದ್ದಾರೆ, ಡೆಲಿವರಿ ಬಾಯ್ ಹಿಂದೂ ಅಲ್ಲ ಎನ್ನುವುದನ್ನು ತಿಳಿದ ವ್ಯಕ್ತಿ ಆರ್ಡರ್ ವಾಪಸ್ ಕಳುಹಿಸಿ. ಝೊಮ್ಯಾಟೊ ಆ್ಯಪ್ ಅನ್ ಇನ್ಸಟಾಲ್ ಮಾಡಿಕೊಂಡು ಈ ಸಂಬಂಧ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದರು. ಝೊಮ್ಯಾಟೊ ಆರ್ಡರ್ ನಾನು ಕ್ಯಾನ್ಸಲ್ ಮಾಡಿದ್ದೇನೆ. ಕಾರಣ ಹಿಂದೂ ಅಲ್ಲದ ವ್ಯಕ್ತಿಯ ಕೈಯಲ್ಲಿ ನನಗೆ ಆಹಾರ ಕಳುಹಿಸಲಾಗುತ್ತಿತ್ತು. ನಾನು ಡೆಲಿವರಿ ಬಾಯ್ ನನ್ನು ಬದಲಿಸಿ ಎಂದು ಕೇಳಿದ್ದಕ್ಕೆ ಆಗಲ್ಲ ಎಂದರು.

Also read: ಮೂರು ಚಕ್ರದ ಸೈಕಲ್ ನಲ್ಲಿ ಕುಳಿತು ಮನೆ ಮನೆಗೂ ಝೊಮಾಟೊ ಫುಡ್ ಡೆಲಿವರಿ ಮಾಡುವ ಅಂಗವಿಕಲನಿಗೆ ಕಂಪನಿಯಿಂದ ವಿಶೇಷ ಗಿಫ್ಟ್..

ಕೊನೆಗೆ ಆರ್ಡರ್ ಕ್ಯಾನ್ಸಲ್ ಮಾಡಿದ್ದರಿಂದ ಹಣ ರಿಫಂಡ್ ಮಾಡಲು ಸಾಧ್ಯವಿಲ್ಲ ಎಂದು ಕಂಪನಿ ತಿಳಿಸಿತು. ನೀವು ಡೆಲಿವರಿ ತೆಗೆದುಕೊಳ್ಳುವಂತೆ ನನ್ನ ಮೇಲೆ ಒತ್ತಡ ಹಾಕುವಂತಿಲ್ಲ ಮತ್ತು ನನಗೆ ರಿಫಂಡ್ ಬೇಕಾಗಿಲ್ಲ. ಹಾಗಾಗಿ ಆರ್ಡರ್ ಕ್ಯಾನ್ಸಲ್ ಮಾಡಿ ಎಂದು ಅಮಿತ್ ಟ್ವಿಟ್ಟರ್ ನಲ್ಲಿ ಝೊಮ್ಯಾಟೊಗೆ ಟ್ಯಾಗ್ ಮಾಡಿಕೊಂಡಿದ್ದರು. ಮತ್ತೊಂದು ಟ್ವೀಟ್‍ನಲ್ಲಿ ಝೊಮ್ಯಾಟೊ ಆ್ಯಪ್ ಅನ್ ಇನ್ಸಟಾಲ್ ಬಗ್ಗೆ ಹೇಳಿಕೊಂಡಿರುವ ಅಮಿತ್, ನಾನು ಆ ವ್ಯಕ್ತಿಯಿಂದ ಆಹಾರ ಸ್ವೀಕರಿಸಲ್ಲ ಎಂದು ಹೇಳುತ್ತಿದ್ದರೂ ಕಂಪನಿ ನನ್ನ ಮೇಲೆ ಒತ್ತಡ ಹಾಕುತ್ತಿದೆ. ಆರ್ಡರ್ ಕ್ಯಾನ್ಸಲ್ ಮಾಡಿದ್ರೂ ರಿಫಂಡ್ ಮಾಡಿಲ್ಲ. ಈ ಸಂಬಂಧ ನಮ್ಮ ವಕೀಲರ ಬಳಿ ಚರ್ಚಿಸುತ್ತೇನೆ ಎಂದು ಹೇಳುವ ಮೂಲಕ ಕೋರ್ಟ್ ಮೊರೆ ಹೋಗುವ ಮಾಹಿತಿ ನೀಡಿದ್ದಾರೆ.

ಝೊಮ್ಯಾಟೊ ತಿರುಗೇಟು:

ಅಮಿತ್ ಶುಕ್ಲಾ ಟ್ವೀಟಿಗೆ ಪ್ರತಿಕ್ರಿಯಿಸಿರುವ ಝೊಮ್ಯಾಟೊ, ಆಹಾರಕ್ಕೆ ಯಾವುದೇ ಧರ್ಮವಿರಲ್ಲ. ಆಹಾರವೇ ಒಂದು ಧರ್ಮ ಎಂದು ಚಿಕ್ಕದಾಗಿ ಬರೆದು ಖಡಕ್ ತಿರುಗೇಟು ನೀಡಿದೆ. ಅಷ್ಟೇ ಅಲ್ಲದೆ ಈ ಕುರಿತು ಪ್ರತಿಕ್ರಿಯಿಸಿರುವ ಝೊಮ್ಯಾಟೊ ಸ್ಥಾಪಕ ದೀಪೇಂದ್ರ ಗೊಯಲ್, ನಮಗೆ ಐಡಿಯಾ ಆಫ್ ಇಂಡಿಯಾ, ಗೌರವಯುತ ಗ್ರಾಹಕರು ಮತ್ತು ಪಾಟ್ರ್ನನರ್ ಗಳ ವಿವಿಧತೆಯ ಬಗ್ಗೆ ಹೆಮ್ಮೆ ಇದೆ. ಆದರೆ ನಮ್ಮ ಮೌಲ್ಯಗಳಿಗೆ ಅಡ್ಡಿಯುಂಟು ಮಾಡುವ ವ್ಯವಹಾರವನ್ನು ಕಳೆದುಕೊಳ್ಳುವುದರಿಂದ ನಮಗೆ ಯಾವುದೇ ರೀತಿಯಲ್ಲಿ ದುಃಖ ಆಗಲಾರದು ಎಂದು ಬರೆದು ಕೊನೆಗೆ ತ್ರಿವರ್ಣ ಧ್ವಜದ ಟಿಕ್ಕರ್ ಹಾಕಿಕೊಂಡಿದ್ದಾರೆ. ಇದೆಲ್ಲವನ್ನು ನೋಡಿದರೆ ದೇಶದಲ್ಲಿ ಜನರು ಧರ್ಮದ ಭ್ರಮೆಯಲ್ಲಿ ಬದುಕುತ್ತಿದ್ದಾರೆ. ಅನಿಸುತ್ತೆ ಎಂದು ಹಲವು ಪ್ರತಿಕ್ರಿಯೆ ನೀಡಿದ್ದಾರೆ.