ಯುವ ಪೀಳಿಗೆಯ ಭವಿಷ್ಯ ಹಾಳು ಮಾಡುತ್ತಿರುವ ಸೈಬರ್ ಪಿಡುಗು!!!

0
688

ಸೈಬರ್ ಅಪರಾಧಕ್ಕೆ ಯುವಕರು ಬಲಿ

ಅಂತರ್ಜಾಲದ ಗೀಳಿಗೆ ಬಲಿಯಾಗುವ ಮಕ್ಕಳು ಯೌವನಾವಸ್ಥೆಗೆ ಕಾಲಿಡುವ ಮುನ್ನವೇ ಸೈಬರ್ ಕ್ರೈಂ ಪ್ರಕರಣಗಳಿಗೆ ಸಿಲುಕಿ ನಲುಗುತ್ತಿದ್ದಾರೆ ಎಂಬ ಆಘಾತಕಾರಿ ಸುದ್ದಿಯನ್ನು ಜೀ ಲರ್ನ್ ಸಂಸ್ಥೆ ವರದಿ ಮಾಡಿದೆ. ದೇಶದಲ್ಲಿ 18 ವರ್ಷದೊಳಗಿನ ಶೇ.6 ರಷ್ಟು ಮಕ್ಕಳು ಸೈಬರ್ ಪ್ರಕರಣಗಳಲ್ಲಿ ಸಿಲುಕಿದರೆ, ಶೇ.44 ರಷ್ಟು 18 ರಿಂದ 30 ವಯಸ್ಸಿನೊಳಗಿನವರಾಗಿದ್ದಾರೆ ಎಂಬ ಅಘಾತಕಾರಿ ಅಂಶವನ್ನು ವರದಿ ಬಿಚ್ಚಿಟ್ಟಿದ್ದು, ಮಕ್ಕಳ ಅಂತರ್ಜಾಲದ ಬಳಕೆ ಎಷ್ಟು ಅಪಾಯಕಾರಿ ಎಂಬುದನ್ನು ಸಾಬೀತುಪಡಿಸುತ್ತಿದೆ.

Image result for children and internet india

ರಾಷ್ಟ್ರೀಯ ಅಪರಾಧ ನಿಗ್ರಹ ಸಂಸ್ಥೆಯ 2014ನೇ ಸಾಲಿನ ವರದಿಯನ್ನು ನೋಡಿದರೆ, ಸೈಬರ್ ಕ್ರೈಂಗಳಲ್ಲಿ ಯುವಕರ ಪಾತ್ರ ಎಷ್ಟಿದೆ ಎಂಬುದು ಅರ್ಥವಾಗುತ್ತದೆ. ಕಳೆದು ಎರಡ್ಮೂರು ವರ್ಷಗಳಲ್ಲಿ ಇಂತಹ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದ್ದು, 18 ವರ್ಷದೊಳಗಿನವೇ ಹೆಚ್ಚಾಗಿ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತಿದ್ದಾರೆ ಎಂದು ತಿಳಿದುಬಂದಿದೆ. ನಿಜಕ್ಕೂ ಇದೊಂದು ಅಘಾತಕಾರಿ ಬೆಳವಣಿಗೆಯಾಗುತ್ತಿದ್ದು, ಮಕ್ಕಳಿಗೆ ಶೈಕ್ಷಣಿಕವಾಗಿ ಅನುಕೂಲವಾಗಲೆಂದು ಒದಗಿಸುವ ಅಂತರ್ಜಾಲ ವ್ಯವಸ್ಥೆ ಅವರ ಜೀವನವನ್ನು ಅರಳಿಸುವ ಬದಲು ಮುರುಟಿಸುತ್ತಿದೆ.

Image result for children and internet india

ನರಕವಾಗಿಸುತ್ತಿರುವ ಅಂತರ್ಜಾಲತಂತ್ರಜ್ಞಾನ ಬೆಳೆದಂತೆ ಸಂಬಂಧಗಳ ಬೆಲೆ ಕುಸಿಯತೊಡಗಿದೆ. ತಂದೆ, ತಾಯಿ, ಅಕ್ಕ, ತಂಗಿ ಹೀಗೆ ಎಲ್ಲರೊಂದಿಗಿನ ಪ್ರೀತಿಯ ಬಾಂಧವ್ಯ ಮರೆಯಾಗಿ ಅಂತರ್ಜಾಲಕ್ಕೆ ಸೀಮಿತವಾಗಿದೆ ಎಂದೆನಿಸುತ್ತಿದೆ. ಕುಟುಂಬಗಳಲ್ಲಿ ಮೊದಲಿನ ಒಡನಾಟಗಳಿಲ್ಲದೇ ಮಕ್ಕಳು ಒಂಟಿತನವನ್ನು ನೀಗಿಸಿಕೊಳ್ಳಲು ಅಂತರ್ಜಾಲದ ಬಳಕೆ ಮಾಡುತ್ತಿದ್ದಾರೆ. ಫೇಸ್‍ಬುಕ್, ವಾಟ್ಸ್‍ಅಪ್ ಹೀಗೆ ನಾನಾ ರೀತಿಯ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿ, ತಮ್ಮ ಜೀವನದ ಎಲ್ಲ ವಿಷಯಗಳನ್ನು ಬೇರೆಯವರೊಂದಿಗೆ ಹಂಚಿ ಕೊಳ್ಳುವುದು ಮಾಮೂಲಿ ಯಾಗಿದೆ.

Image result for parents and children india

ಮಕ್ಕಳಿಗೆ ತಿಳಿಸಿ ಹೇಳಬೇಕಿರುವ ತಂದೆ ತಾಯಂದಿರೇ ಈ ವ್ಯವಸ್ಥೆಯ ದಾಸರಾಗಿದ್ದರೆ ಮಕ್ಕಳನ್ನು ಹತೋಟಿ ಯಲ್ಲಿಡುವುದು ಹೇಗೆ? ಸಮಾಜದಲ್ಲಿ ಬದಲಾಗುತ್ತಿರುವ ಯೋಚನೆಗಳು ಹಾಗೂ ಜೀವನಶೈಲಿಯೊಂದಿಗೆ ಮಾಧ್ಯಮದ ಪ್ರಭಾವವೂ ಸೇರಿ ಯುವಜನತೆ ದಾರಿ ತಪ್ಪುವಂತಾಗಿದೆ. ಆಕ್ರೋಶಕ್ಕೆ ದಾರಿಸದಾ ಅಂತರ್ಜಾಲ ಬಳಕೆ ಮಾಡುತ್ತಾ ಕಾಲ ಕಳೆಯುವವರ ಮನಸ್ಸು ಸ್ಥಿಮಿತದಲ್ಲಿರುವುದಿಲ್ಲ. ಏಕಾಗ್ರತೆ ಇರುವುದಿಲ್ಲ. ಆಕ್ರೋಶ, ಚಂಚಲತೆ ಹಾಗೂ ಆತಂಕದಿಂದ ಕೂಡಿರುವ ಇವರಿಗೆ ಚಿಕ್ಕಪುಟ್ಟ ಸಂಗತಿಗಳಿಗೂ ಬಹುಬೇಗ ಕೋಪ ಬರುವಂತಾಗುತ್ತದೆ. ಇದೇ ಗುಣ ಅವರನ್ನು ಅಪರಾಧಿಗಳನ್ನಾಗಿಸುತ್ತದೆ. ತಾವು ತುಂಬಾ ಇಷ್ಟಪಟ್ಟಿರುವ ಸಂಗಾತಿ ತಮ್ಮನ್ನು ತೊರೆದು ಮತ್ತೊಬ್ಬರ ಜೊತೆ ಇದ್ದರೆ ಅವರ ಫೋಟೋಗಳನ್ನು ವೆಬ್‍ಸೈಟ್‍ಗಳಲ್ಲಿ ಹಾಕುವುದು, ಅವರ ಬಗ್ಗೆ ಕೆಟ್ಟದಾಗಿ ಹೇಳಿಕೆ ನೀಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪೋಷಕರ ಮಾರ್ಗದರ್ಶನ ಅವಶ್ಯಮಕ್ಕಳಿಗೆ ತಂತ್ರಜ್ಞಾನದ ಬಳಕೆ ಬಗ್ಗೆ ಮಾತ್ರ ತಿಳಿದಿದ್ದು ಅವುಗಳಿಂದಾಗುವ ಅಪಾಯಗಳ ಬಗ್ಗೆ ಅರಿವಿಲ್ಲದೇ ಇರುವುದು ಅಪರಾಧಕ್ಕೆ ಪ್ರಮುಖ ಕಾರಣವಾಗಿದೆ. ಮಕ್ಕಳಿಗೆ ಯಾವುದು ಸರಿ, ಯಾವುದು ತಪ್ಪ ಎಂದು ತಿಳಿಸಿ ಹೇಳುವುದು ಪೋಷಕರ ಆದ್ಯ ಕರ್ತವ್ಯ. ಮಕ್ಕಳು ತಪ್ಪುಗಳನ್ನು ತಿದ್ದಿಕೊಂಡು ಸರಿದಾರಿಯಲ್ಲಿ ನಡೆಯಲಿ ಎಂಬುದು ಎಲ್ಲ ಪಾಲಕರ ಆಶಯವಾಗಿರುತ್ತದೆ. ಆದರೆ ಅವರ ಕಣ್ಣಿಗೂ ಕೆಲವೊಮ್ಮೆ ಇಂತಹ ತಪ್ಪುಗಳು ಕಾಣದೇ ಇರುವ ಕಾರಣ ಮಕ್ಕಳು ಇವುಗಳಲ್ಲೇ ಆನಂದ ಅನುಭವಿಸುವಂತಹ ಮನೋಭಾವ ಬೆಳೆಯುತ್ತಿದೆ. ಹೀಗಿರುವಾಗ ತಪ್ಪುಗಳು ಅರ್ಥವಾಗದೇ ಉಳಿಯುತ್ತವೆ. ಹಾಗಾಗಿ ತಂದೆ ತಾಯಿಗಳು ಮಕ್ಕಳು ಅಂತರ್ಜಾಲವನ್ನು ಹೇಗೆ ಬಳಕೆ ಮಾಡುತ್ತಿದ್ದಾರೆ ಎಂದು ಅರಿಯಬೇಕು.