ನೀವು ಸೈಬರ್ ಕ್ರೈಮ್ ದುಷ್ಕರ್ಮಿಗಳಿಂದ ದೂರ ಉಳಿಯಲು ಇದನ್ನು ನೀವು ಓದಲೇಬೇಕು!!!

0
1305

ಹೌದು ಸ್ನೇಹಿತರೆ,

ನೀವು Gmail ಸೈನ್ ಇನ್ ಆಗಬೇಕಾದರೆ ಎರಡು ಬಾರಿ ಖಚಿತಪಡಿಸಿಕೊಂಡು ನಂತರ ನೀವೇ ಎಂದು ಖಚಿತವಾದ ಮೇಲೆ ನಿಮ್ಮ ಅಕೌಂಟ್‍ಗೆ ಸೈನ್ ಇನ್ ಆಗಲು ಸಾಧ್ಯ. ಇಂತದ್ದೊಂದು ಸೆಕ್ಯೂರಿಟಿಯನ್ನ ಗೂಗಲ್ ತನ್ನ ಸೇವೇದಾರರಿಗೆ ಒದಗಿಸುತ್ತಿದೆ. ಇದನ್ನು ತಿಳಿದುಕೊಳ್ಳಿ ಮತ್ತು ನಿಮ್ಮವರಿಗೂ ತಿಳಿಸಿ. ಈ ಕೆಳಗಿನ ಹಂತಗಳು ಅದನ್ನು ವಿವರಿಸಲಿವೆ.
ಹಂತ-1: ಒಂದು ವೇಳೆ ಈಗಾಗಲೆ ನಿಮ್ಮ ಅಕೌಂಟ್ ಇದ್ದರೆ ಎಂದಿನಂತೆ ಸೈನ್ ಇನ್ ಆಗಿ. ಹೊಸದಾಗಿ ಅಕೌಂಟ್ ಓಪನ್ ಮಾಡುವವರು ಸಹ ತಿಳಿದುಕೊಳ್ಳಿ.
ಹಂತ-2: ಸೈನ್ ಇನ್ ಆದ ಕೂಡಲೆ, ನಿಮ್ಮ ಪ್ರೊಪೈಲ್ ಲೋಗೋ ಹತ್ತಿರ “Add Account” “Sign Out” ಮತ್ತು“My Account” ಎಂದು ನೋಡಬಹುದು. “My Account” ಅನ್ನು ಕ್ಲಿಕ್ ಮಾಡಿ.
ಹಂತ-3: ಅಲ್ಲಿ ನೀವು “Sign In and Security” ಎಂದು ಇರುವುದನ್ನ ನೋಡುತ್ತೀರಿ, Sign in to Google  ಅನ್ನು ಕ್ಲಿಕ್ ಮಾಡಿ.
ಹಂತ-4: ನಂತರ ನೀವು, ಫೋನ್ ಹಿಡಿದು ನಿಂತಿರುವ ಚಿತ್ರ ಕಾಣುತ್ತೀರಿ, ಅಲ್ಲಿಯೇ ಕೆಳಗೆ 2-Step Verification OFF ಎಂದಿರುವುದನ್ನು ನೋಡುತ್ತೀರಿ ಅದರ ಮೇಲೆ ಕ್ಲಿಕ್ ಮಾಡಿ.
ಹಂತ-5: ಈಗ ನೀವು ನಿಮ್ಮ ಮೊದಲ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ನಿಮಗೊಂದು ಗೂಗಲ್ ವೆರಿಫಿಕೇಷನ್ ಕೋಡ್ ಬರುತ್ತದೆ, ಅದನ್ನು ಮತ್ತೆ ನಮೂದಿಸಿ ನಂತರ ಸಬ್‍ಮಿಟ್ ಅನ್ನು ಕ್ಲಿಕ್ ಮಾಡಿ. ಈಗ ನಿಮ್ಮ 2- Step Verification ON ಆಗುತ್ತದೆ.
ಹಂತ-6: ಗೂಗಲ್, ನಿಮಗೆ ಒಂದು ವೇಳೆ ನಿಮ್ಮ ಮೊದಲ ಮೊಬೈಲ್ ಸಂಖ್ಯೆ Network Problem ನಿಂದ ಸಿಗದೇ ಇದ್ದರೂ ಸಹ, ನಾಲ್ಕೈದು ಸಾಧ್ಯವಾಗಬಹುದಾದ ಸೈನ್ ಇನ್ ವಿಧಾನಗಳನ್ನು ವಿವರಿಸುತ್ತದೆ.
ಹಂತ-7: ನೀವು “10 Backup Code” ಗಳನ್ನು ಡೌನ್ ಲೋಡ್ ಮಾಡಿಟ್ಟುಕೊಳ್ಳಬಹದು. ನೀವು ಒಂದು ಕೋಡನ್ನು ಒಮ್ಮೆ ಮಾತ್ರ ಬಳಸಬಹುದು. ನಂತರ ಮತ್ತೆ “10 Backup Code” ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹದು.
ಹಂತ-8: ನೀವು ನಿಮ್ಮ ಆಂಡ್ರಾಯಿಡ್ ಮೊಬೈಲ್ನಲ್ಲಿ Google Prompt ಅನ್ನು ಉಪಯೋಗಿಸಿಕೊಳ್ಳಬಹುದು.
ಹಂತ-9: ನೀವು ನಿಮ್ಮ ಇನ್ನೊಂದುBackup Phone  ಸಂಖ್ಯೆಯನ್ನು ಸೆಕ್ಯೂರಿಟಿಯಾಗಿ ಬಳಸಬಹುದು. ಆದರೆ ನೆನಪಿಡಿ ನಿಮ್ಮ ಇನ್ನೊಂದು ಮೊಬೈಲ್ ಸಂಖ್ಯೆ ನಿಮ್ಮದೇ ಆಗಿರಬೇಕು. ಇಲ್ಲದೇ ಹೋದರೆ ನಿಮ್ಮ ನಂಬಿಕೆ ಮೇಲೆ ಆ ನಿರ್ಧಾರ ತೆಗೆದುಕೊಳ್ಳಿ.
ಹಂತ-10: ಒಂದು ವೇಳೆ ನಿಮ್ಮ ಸ್ವಂತ ಲ್ಯಾಪ್ ಟಾಪ್ ಅಥವಾ ಮೊಬೈಲ್ ಆಗಿದ್ದರೆ, “Do not ask me for this device again” ಎಂದಿರುವ ಚೆಕ್ ಬಾಕ್ಸ್ ಕ್ಲಿಕ್ ಮಾಡಿದರೆ ನೀವು ಎಂದಿನಂತೆ ಸೈನ್ ಇನ್ ಆಗಬಹುದು.
ಇಂತಹ ವಿಷೇಶವಾದ ಸೆಕ್ಯೂರಿಟಿ ಮಾಹಿತಿಯನ್ನು ನೀವೂ ತಿಳಿದು, ನಿಮ್ಮವರಿಗೂ ತಿಳಿಸಿ, ಸೈಬರ್ ಕ್ರೈಮ್ ಅನ್ನು ತಡೆಯಲು ಒಂದು ಹಜ್ಜೆ ಮುಂದಾಗಿ.