ಬಿ.ಜೆ.ಪಿ.ಗೇ ರಿವರ್ಸ್ ಅಪರೇಷನ್ ಕಮಲದ ರುಚಿ ತೋರಿಸಿದ ಡಿ.ಕೆ.ಬ್ರದರ್ಸ್!!

0
414

ರಾಮನಗರ ಉಪ ಚುನಾವಣೆಗೆ ಇನ್ನು ಕೇವಲ 2 ದಿನ ಬಾಕಿ ಇರುವಂತೆ ಅಲ್ಲದೆ ಬಹಿರಂಗ ಪ್ರಚಾರಕ್ಕೆ ಕೊನೆ ದಿನವಾದ ಇಂದು ರಾಮನಗರ ಬಿಜೆಪಿ ಅಭ್ಯರ್ಥಿ ಎಲ್ ಚಂದ್ರಶೇಖರ್ ಕಣದಿಂದ ಹಿಂದೆ ಸರಿದಿದ್ದು, ಮಾತ್ರವಲ್ಲದೇ ತಮ್ಮ ಮಾತೃ ಪಕ್ಷಕ್ಕೆ ಹೋಗುವುದಾಗಿ ಘೋಷಣೆ ಮಾಡಿದ್ದಾರೆ. ಈ ಎಲ್ಲ ಬೆಳವಣಿಗೆಯಿಂದ ರಾಜ್ಯ ಬಿಜೆಪಿಗೆ ದೊಡ್ಡ ಆಘಾತ ವಾಗಿದ್ದು. ನಾಯಕರು ತಲೆಕೆಡಿಸಿಕೊಳ್ಳುವಂತಾಗಿದೆ. ಫ‌ಲಿತಾಂಶಕ್ಕೂ ಮುನ್ನ ಭಾರೀ ಮುಖಭಂಗ ಅನುಭವಿಸಬೇಕಾಗಿದೆ. ತಳಮಟ್ಟದ ಕಾರ್ಯಕರ್ತರ ವಿರೋಧವನ್ನು ಎದುರಿಸುವ ಪರಿಸ್ಥಿತಿ ಒದಗಿ ಬಂದಿದೆ.


Also read: ಮೋದಿ ಸರ್ಕಾರ ಕೇಂದ್ರದ ಸಂಸ್ಥೆಗಳ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿದೆ, CBI ಆಯ್ತು ಈಗ RBI-ನಲ್ಲಿ ಉಂಟಾಗಿದ್ದ ಭಿನ್ನಪ್ರಾಯಕ್ಕೆ  ಗವರ್ನರ್‌ ಊರ್ಜಿತ್‌ ಪಟೇಲ್‌ ರಾಜೀನಾಮೆ ಸಾಧ್ಯತೆ..!

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಂದ್ರಶೇಖರ್. ರಾಮನಗರ ಉಪಚುನಾವಣಾ ಕಣದಿಂದ ಹಿಂದೆ ಸರಿದು, ಜೆಡಿಎಸ್​ ಅಭ್ಯರ್ಥಿ ಅನಿತಾ ಕುಮಾರಸ್ವಾಮಿಗೆ ಬೆಂಬಲ ಸೂಚಿಸಿಸುವದ್ದಾಗಿ ತಿಳಿಸುವ ಮೂಲಕ. ನಾನು ತುಂಬಾ ನಿರೀಕ್ಷೆಗಳನ್ನಿಟ್ಟುಕೊಂಡು ಬಿಜೆಪಿ ಸೇರಿದ್ದೆ. ವಿಧಾನಸಭೆಯ ಅಭ್ಯರ್ಥಿ ಆಗಿರುವ ನನ್ನ ವಿಚಾರದಲ್ಲಿ ಪಕ್ಷದವರು ತೋರಿದ ಅಸಡ್ಡೆ ನನಗೆ ಬೇಸರ ಉಂಟು ಮಾಡಿದೆ. ಪಕ್ಷದ ಮುಖಂಡರು ಭರವಸೆ ಕೊಟ್ಟಂತೆ ನನ್ನ ಪರವಾಗಿ ಪ್ರಚಾರ ಮಾಡಿಲ್ಲ. ಬಾವುಟ ಕೊಟ್ಟು ಬೀದಿಗೆ ಬಿಟ್ಟರು.
ಬಿಜೆಪಿ ಪಕ್ಷದೊಳಗೆ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದಿಲ್ಲ. ಅವರವರಲ್ಲೇ ಕಿತ್ತಾಟ ನಡೆಸುತ್ತಿದ್ದಾರೆ. ರುದ್ರೇಶ್​ ಬಳಿ ದೂರವಾಣಿಯಲ್ಲಿ ಮಾತನಾಡಲು ನಾನು ಪ್ರಯತ್ನಿಸಿದ್ದೆ. ಆದರೆ ಅವರು ಮಾತನಾಡಲಿಲ್ಲ. ಆರಂಭದಲ್ಲೇ ಈ ರೀತಿ ಆದರೆ ಮುಂದೆ ನನ್ನ ರಾಜಕೀಯದ ಗತಿ ಏನು? ಈ ಹಿನ್ನೆಲೆಯಲ್ಲಿ ನಾನು ಮಾತೃಪಕ್ಷ ಕಾಂಗ್ರೆಸ್​ಗೆ ವಾಪಾಸಾಗಿದ್ದೇನೆ.


Also read: ಇತ್ತ ಜಗತ್ತಿನ ಅತ್ಯಂತ ದೊಡ್ದದ್ದಾದ ಸರ್ದಾರ್ ಪಟೇಲ್-ರವರ ಪ್ರತಿಮೆ ಅನಾವರಣಗೊಂಡರೆ, ಅತ್ತ ಗುಜರಾತ್-ನ RSS ಕಚೇರಿಯಲ್ಲಿ ಪಟೇಲ್-ರ ವಿರೋಧಿಸುವ ಪುಸ್ತಕ ಮಾರಾಟವಾಗುತ್ತಿದೆ.!

ಇದಕ್ಕೆಲ್ಲ ಸಿ.ಪಿ. ಯೋಗೇಶ್ವರ್​ ಅವರೇ ಕಾರಣ’ ಸದಾನಂದಗೌಡರು ಸಹ ಬೆಂಬಲ ನೀಡಲಿಲ್ಲ ಮುಂದೆ ನಮ್ಮದೇ ಸರ್ಕಾರ, ಶಾಸಕರನ್ನು ಬುಕ್ ಮಾಡಿದ್ದೇವೆ. ಅಷ್ಟುಕೋಟಿ ಇಷ್ಟು ಕೋಟಿ ಕೊಟ್ಟಿದಿವಿ ಎಂದು ಹೇಳಿದ್ದರು. ಆದರೆ ಈಗ ಯಾರೂ ಕೈಗೆ ಸಿಕ್ತಿಲ್ಲ.ಹಳ್ಳಿಯಲ್ಲಿನ ಸಮಸ್ಯೆಗೆ ಬಿಜೆಪಿ ನಂಬಿಕೊಂಡು ಪರಿಹಾರ ಕೊಡಲು ಸಾಧ್ಯವಿಲ್ಲ. ಹಾಗಾಗಿ ಕಾಂಗ್ರೆಸ್​ಗೆ ವಾಪಸ್ ಬಂದೆ. ಕೇವಲ 15 ದಿನಗಳಲ್ಲಿ ಬಿಜೆಪಿ ನಾಯಕರ ಗುಣ ಗೊತ್ತಾಯ್ತು ಎಂದು ಚಂದ್ರಶೇಖರ್​ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರತಿಕ್ರಿಯೆ ನೀಡಿದ ಬಿ.ಎಸ್​ಯಡಿಯೂರಪ್ಪ ಆಕ್ರೋಶ:

ಹಣದ ಅಧಿಕಾರದ ಮದದಲ್ಲಿರುವ ಕಾಂಗ್ರೆಸ್- ಜೆಡಿಎಸ್ ಎರಡೂ ಪಕ್ಷಗಳು ಸೇರಿ ಬಿಜೆಪಿಗೆ ಅವಮಾನ ಮಾಡಿವೆ ರಾಮನಗರ ಅಭ್ಯರ್ಥಿಯನ್ನ ಕೋಟಿ ಕೋಟಿ ಹಣ ಕೊಟ್ಟು ಖರೀದಿ‌ ಮಾಡಲಾಗಿದೆ ಎಂದು ಬಿ.ಎಸ್​ಯಡಿಯೂರಪ್ಪ ಆರೋಪಿಸಿ ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದು ಹೇಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಕ್ರಿಯೆ ನೀಡಿದ ಡಿ.ವಿ.ಸದಾನಂದಗೌಡ ಗರಂ:


Also read: ಇತ್ತ ಜಗತ್ತಿನ ಅತ್ಯಂತ ದೊಡ್ದದ್ದಾದ ಸರ್ದಾರ್ ಪಟೇಲ್-ರವರ ಪ್ರತಿಮೆ ಅನಾವರಣಗೊಂಡರೆ, ಅತ್ತ ಗುಜರಾತ್-ನ RSS ಕಚೇರಿಯಲ್ಲಿ ಪಟೇಲ್-ರ ವಿರೋಧಿಸುವ ಪುಸ್ತಕ ಮಾರಾಟವಾಗುತ್ತಿದೆ!

ಕಾಂಗ್ರೆಸ್ ಬಿಟ್ಟು ನಮ್ಮ ಪಕ್ಷಕ್ಕೆ ಬಂದರು. ಆದರೆ ಅವರ ಕಾಂಗ್ರೆಸ್ ಬುದ್ದಿ ಅವರನ್ನು ಬಿಟ್ಟು ಹೋಗಿಲ್ಲ.ಅವರನ್ನ ದೇವರು ಕ್ಷಮಿಸಲ್ಲ, ಕ್ಷೇತ್ರದ ಜನರೂ ಕ್ಷಮಿಸಲ್ಲ. ಅವರು ಇನ್ನು ಯಾವತ್ತು ರಾಜಕೀಯಕ್ಕೆ ಬರಲು ಸಾಧ್ಯವಿಲ್ಲ. ಯಾವುದೋ ಆಮಿಷಕ್ಕಾಗಿ ಅವರು ಕಾಂಗ್ರೆಸ್ ಸೇರಿದ್ದಾರೆ. ಬಿಜೆಪಿ ಸಿದ್ದಾಂತ ಒಪ್ಪಿ, ಮೋದಿ ಅಭಿವೃದ್ಧಿ ಒಪ್ಪಿ, ಪಕ್ಷಕ್ಕೆ ಬಂದವರು ಈಗ ಏಕಾಏಕಿ ಪಕ್ಷ ತೊರೆದಿದ್ದಾರೆ. ನನಗೆ ತುಂಬಾ ನೋವಾಗಿದೆ, ಕಾಂಗ್ರೆಸ್​ನಲ್ಲಿ ದ್ರೋಹದ ರಕ್ತ ಇತ್ತು. ದ್ರೋಹದ ರಕ್ತದಿಂದ ಹೊರಗೆ ಬಂದು ಬಿಜೆಪಿ ಸೇರಿದ್ದರು ಎಂದುಕೊಂಡಿದ್ದೆವು. ಆದರೆ ಚಂದ್ರಶೇಖರ್ ಒಬ್ಬ ದ್ರೋಹಿ ಎಂದು ಗರಂ ಆಗಿದ್ದಾರೆ.
ಒಟ್ಟಾರೆಯಾಗಿ: ರಾಜಕೀಯದಲ್ಲಿ ಏನೂ ಬೇಕಾದರೂ ಆಗಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ರಾಮನಗರ ಉಪಚುನಾವಣಾ ಕಣದಲ್ಲಿ ಆಗಿರುವ ಬೆಳವಣಿಗೆಯೊಂದು ನಡೆದಿದ್ದು ಬಿಜೆಪಿ ಗೆ ಶಾಕ್‌ ಆಗಿದೆ.