“ನಾವು ಬದುಕಿದ್ದೇವೆ” ಸತ್ತರು ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಲು ಬಿಡಲ್ಲ; ಡಿ.ಕೆ. ಶಿವಕುಮಾರ್.!

0
271

ಬಡವರಿಗೆ ಅನ್ನ ನೀಡಲು ತೇರೆದ ಇಂದಿರಾ ಕ್ಯಾಂಟೀನ್ ಹೆಸರನ್ನು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬದಲಾಯಿಸಲು ಸಜ್ಜಾಯಿತು, ಇದಕ್ಕೆ ಪ್ರತಿಪಕ್ಷದಲ್ಲಿ ಅಲ್ಪ ವಿರೋದ್ಧ ವ್ಯಕ್ತವಾಯಿತು, ಇಂದಿರಾ ಕ್ಯಾಂಟೀನ್ ಹೆಸರನ್ನು ‘ವಾಲ್ಮೀಕಿ ಅನ್ನ ಕುಟೀರ’ ಎಂದು ಬದಲಾವಣೆ ಮಾಡಲು ಮುಂದಾಯಿತು, ಸರ್ಕಾರದ ಈ ಕ್ರಮಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿತು. ಈಗ ಇಂದಿರಾ ಕ್ಯಾಂಟೀನ್ ಮುಚ್ಚಬೇಕು ಎನ್ನುವ ನಿರ್ಧಾರಕ್ಕೆ ಬಿಜೆಪಿ ಸರ್ಕಾರ ಚಿಂತನೆ ನಡೆಸಿದೆ. ಇದಕ್ಕೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿ. ಬದುಕಿರುವವರೆಗೂ ಇಂದಿರಾ ಕ್ಯಾಂಟೀನ್ ಹೆಸರು ಬದಲಾಗಲು, ಮುಚ್ಚಲು ಬಿಡುವುದಿಲ್ಲವೆಂದು ಹೇಳಿದ್ದಾರೆ.

Also read: ರಾಜ್ಯಾದ್ಯಂತ ಡಿ.21ರ ಮಧ್ಯರಾತ್ರಿವರೆಗೂ ನಿಷೇಧಾಜ್ಞೆ 144 ಸೆಕ್ಷನ್ ಜಾರಿ; ಯಾವುದಕ್ಕೆ ಅನುಮತಿ ಇಲ್ಲ??

ಹೌದು ನಾವಿನ್ನು ಬದುಕಿದ್ದೇವೆ, ಸತ್ತಿಲ್ಲ,ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಾಯಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡುತ್ತಿದ್ದೇವೆ. ಇಂದಿರಾಗಾಂಧಿ ಎಂಬುದು ದೇಶದ ಜನರ ಭಾವ ನಾತ್ಮಕ ವಿಷಯ. ಅದನ್ನು ಮುಟ್ಟಲು ಹೋಗಬೇಡಿ. ಯಾವುದೇ ಕಾರಣಕ್ಕೂ ನಾವು ಅದಕ್ಕೆ ಅವಕಾಶ ನೀಡುವುದಿಲ್ಲ, ನಾವು ಸರ್ಕಾರ ನಡೆಸಿದ್ದೇವೆ. ಬಿಜೆಪಿ ಅಧಿಕಾರದಲ್ಲಿದ್ದಾಗ ವಾಜಪೇಯಿ ಹೆಸರಿನಲ್ಲಿ ಅಟಲ್ ಸಾರಿಗೆ, ಅಟಲ್ ಜನಸ್ನೇಹಿ ಕೇಂದ್ರ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿತ್ತು.

Also read: ಕಳಸಾ ಬಂಡೂರಿ ವಿಚಾರವಾಗಿ ಕರ್ನಾಟಕಕ್ಕೆ ಮತ್ತೆ ಮೋಸ; ಮಹದಾಯಿ ಯೋಜನೆಗೆ ನೀಡಿದ್ದ ಒಪ್ಪಿಗೆ ವಾಪಸ್ ಪಡೆದ ಕೇಂದ್ರ ಸರ್ಕಾರ.!

ನಾವು ಅದನ್ನು ಬದಲಾವಣೆ ಮಾಡಲು ಹೋಗಿರಲಿಲ್ಲ. ಏಕೆಂದರೆ ಅಟಲ್‍ಜೀ ಅವರ ಹೆಸರು ಈ ದೇಶಕ್ಕೆ ಬೇಕಿದೆ. ಮೊರಾರ್ಜಿ ದೇಸಾಯಿ, ಜೆ.ಪಿ.ನಾರಾಯಣ್ ಅವರ ಹೆಸರಿನಲ್ಲಿ ಹಲವು ಶಿಕ್ಷಣ ಸಂಸ್ಥೆಗಳಿವೆ. ಯಾವುದನ್ನೂ ನಾವು ಬದಲಾವಣೆ ಮಾಡಲು ಹೋಗಿರಲಿಲ್ಲ ಎಂದು ಸ್ಪಷ್ಟಪಡಿಸಿದರು. ಕಂದಾಯ ಸಚಿವ ಆರ್.ಅಶೋಕ್ ಅವರು ಕನಸು ಕಾಣುತ್ತಿದ್ದಾರೆ. ನಾವಿನ್ನು ಬದುಕಿದ್ದೇವೆ, ಸತ್ತಿಲ್ಲ. ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆಗೆ ಅವಕಾಶ ನೀಡುವುದಿಲ್ಲ. ಈ ಹಿಂದೆ ಸರ್ಕಾರಗಳು ಯಾವ ರೀತಿ ನಡೆದಿವೆ ಎಂಬುದನ್ನು ಬಿಜೆಪಿಯವರು ತಿಳಿದುಕೊಳ್ಳಬೇಕು ಎಂದು ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಇಂದಿರಾ ಕ್ಯಾಂಟೀನ್ ಮುಚ್ಚಿಬಿಡಿ:

Also read: ರಾಜಕೀಯದಲ್ಲಿ ಸೋಲು ಕಂಡ ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಪುಸ್ತಕದ ಪ್ರೇಮಿ ಆಗಿದ್ದಾರಂತೆ.!

ರಾಜ್ಯದಲ್ಲಿ ಒಂದು ಹೊತ್ತಿನ ಊಟಕ್ಕೆ ಗತಿಯಿಲ್ಲದವರು ಯಾರೂ ಇಲ್ಲ. ಆದರೆ, ಕಾಂಗ್ರೆಸ್​ನವರು ಅಕ್ರಮ ನಡೆಸಲು ಇಂದಿರಾ ಕ್ಯಾಂಟೀನ್ ಯೋಜನೆ ಜಾರಿಗೆ ತಂದರು. ಇಂತಹ ಅಕ್ರಮ ನಡೆಯುವ ಇಂದಿರಾ ಕ್ಯಾಂಟೀನ್​ಗಳನ್ನು ಮುಚ್ಚುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದು ಸಚಿವ ಸಿ.ಟಿ. ರವಿ ಹೇಳಿದ್ದಾರೆ. ಕಾಂಗ್ರೆಸ್​ನವರಿಗೆ ಯೋಜನೆ ಜಾರಿಯಲ್ಲಿರಬೇಕು ಎಂದಾದರೆ ತಮ್ಮ ಮನೆಯ ದುಡ್ಡನ್ನು ತಂದು ಯೋಜನೆ ಮುಂದುವರಿಸಲಿ. ಆಗಲಾದರು ತಾವು ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತ ಸಿಗುತ್ತದೆ ಎಂದು ತಿಳಿಸಿದ್ದಾರೆ.
ಪಕ್ಷದ ವಕ್ತಾರ ವಿ.ಎಸ್. ಉಗ್ರಪ್ಪ ಮಾತನಾಡಿ, ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುತ್ತಿದ್ದು, ಅಲ್ಲಿ ವಾಲ್ಮೀಕಿ ಹೆಸರನ್ನು ಇಡಲಿ. ವಾಲ್ಮೀಕಿ ಸಮುದಾಯಕ್ಕೆ ಶೇ. 7.5 ಮೀಸಲಾತಿ ನೀಡಲಿ. ಯಾವುದಾದರೂ ವಿಶ್ವವಿದ್ಯಾಲಯಕ್ಕೆ ವಾಲ್ಮೀಕಿ ಮಹರ್ಷಿ ಹೆಸರಿಡಲಿ ಎಂದು ಹೇಳಿದ್ದಾರೆ. ಬಿಜೆಪಿಯವರು ಬಡವರ ವಿರೋಧಿಗಳು. ಬಡವರ ಪರ ಯೋಜನೆಗಳನ್ನು ಜಾರಿಗೆ ತಂದವರು ನಾವು. ಹೆಸರು ಬದಲಾವಣೆ ಮೂಲಕ ಕಾಂಗ್ರೆಸ್ ಯೋಜನೆಗಳನ್ನು ಮುಚ್ಚಿ ಹಾಕಲು ಪ್ರಯತ್ನ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ದೂರಿದ್ದಾರೆ.