ಅಧಿಕಾರ ಇರೋದು ಜನರಿಗೆ ಸಹಾಯ ಮಾಡೋದಕ್ಕೆ. ಯಾರೋ ಕೊಟ್ಟಂತಹ ಕಾರ್ಯಕ್ರಮ ರದ್ದು ಮಾಡುವುದಕ್ಕಲ್ಲ; ಡಿ.ಕೆ. ಶಿವಕುಮಾರ್

0
100

ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವಿ ನಾಯಕರಾದ ಡಿ.ಕೆ. ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗುವುದರಲ್ಲಿ ಅನುಮಾನವಿಲ್ಲ ಆದರೆ. ದೆಹಲಿ ಚುನಾವಣೆ ಪ್ರಚಾರದಲ್ಲಿರುವ ಸೋನಿಯಾಗಾಂಧಿ ಅಧಿಕೃತ ಘೋಷಣೆ ಮಾಡಲು ವಿಳಂಭ ಮಾಡುತ್ತಿದ್ದಾರೆ. ಇದೇ ವಿಷಯವಾಗಿ ದೆಹಲಿಗೆ ಡಿಕೆಶಿ ತೆರಳಿದ್ದರು ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು ಆದರೆ ಇದೆಲ್ಲವಕ್ಕೂ ನಿನ್ನಯೇ ಸ್ಪಷ್ಟನೆ ನೀಡಿದ ಕನಕಪುರದ ಬಂಡೆ ಡಿಕೆಶಿ ಇಂದು ಕಲಬುರಗಿಗೆ ಭೇಟಿ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಹೌದು ದೆಹಲಿ ಪ್ರವಾಸದಿಂದ ಮರಳಿದ ತಕ್ಷಣಕ್ಕೆ ಕಲಬುರಗಿಗೆ ಭೇಟಿ ನೀಡಿರುವ ಕಾಂಗ್ರೆಸ್​ ನಾಯಕ ಡಿಕೆ ಶಿವಕುಮಾರ್​, ನಿನ್ನೆ ಯಾದಗಿರಿ ಜಿಲ್ಲೆಯ ಗೋನಾಲ ಗಡಿ ದುರ್ಗಮ್ಮ ದೇವಾಲಯಕ್ಕೆ ಭೇಟಿ ನೀಡಿದ್ದರು. ಇಂದು ಗಾಣಗಾಪುರ ದತ್ತಾತ್ರೇಯ ದೇಗುಲಕ್ಕೆ ಭೇಟಿ ನೀಡಿ, ದತ್ತನ ಪಾದುಕೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಅವರು, ದತ್ತನ ಪಾದ ಪವಿತ್ರವಾದಂತಹ ಪಾದ, ಪವಿತ್ರ ಕ್ಷೇತ್ರ ಇದು. ಕ್ಷೇತ್ರಕ್ಕೆ ಮಹಾರಾಷ್ಟ್ರ, ಆಂಧ್ರ, ಕರ್ನಾಟಕದಿಂದ ಅನೇಕರು ಇಷ್ಟಾರ್ಥ ಸಿದ್ದಿಗಾಗಿ ಭೇಟಿ ನೀಡುತ್ತಾರೆ. ನಾನಿಲ್ಲಿ ಹಿಂದೆ ಕೂಡ ಬಂದಿದ್ದೆ. ಮತ್ತೆ ಈಗ ಬಂದಿದ್ದೇನೆ.

ಬ್ರಹ್ಮ, ವಿಷ್ಣು, ಮಹೇಶ್ವರ, ದರ್ಶನ ಮಾಡಿ ದತ್ತನ ನಿರ್ಗುಣ ಪಾದುಕೆ ದರ್ಶನ ನನಗೆ ದೊರೆತಿದೆ. ಅಧಿಕಾರ ಇರುವುದು ಜನರಿಗೆ ಸಹಾಯ ಮಾಡಲಿ ಎಂದು. ಈ ಹಿಂದೆ ಗಾಣಗಾಪುರದ ಸಂಗಮದಲ್ಲಿ ಒಂದು ಕೆಲಸ ಆಗಬೇಕು ಅಂತಾ ನಮ್ಮ ಶಾಸಕರು ಹೇಳಿದ್ದರು.‌ ಈಗ ಅದರ ಕೆಲಸ ನಡೆಯುತ್ತಿದೆ. ‌ಇದರಿಂದ ನನಗೆ ಸಂತೋಷವಾಗಿದೆ. ಆದರೆ, ಅಧಿಕಾರ ಇರೋದು ಜನರಿಗೆ ಸಹಾಯ ಮಾಡೋದಕ್ಕೆ. ಯಾರೋ ಕೊಟ್ಟಂತಹ ಕಾರ್ಯಕ್ರಮ ರದ್ದು ಮಾಡುವುದಕ್ಕಲ್ಲ. ನಾನು ಕೊಟ್ಟ ಅನುದಾನ ರದ್ದಾಗಿದೆ. ದತ್ತಾತ್ರೇಯ ನೋಡಿಕೊಳ್ಳುತ್ತಾನೆ. ನಾನು ಕೊಟ್ಟ ಅನುದಾನ 5 ಕೋಟಿ ರೂ. ಕಡಿತಗೊಳಿಸಿರುವ ಬಗ್ಗೆ ನಾನು ಈಗ ಮಾತಾಡಲ್ಲ.‌ ದೇವಸ್ಥಾನದಲ್ಲಿ ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಆದರೆ, ಕೆಲವರು ತಮ್ಮ ಬಳಿ ಅಧಿಕಾರ ಬಳಸಿಕೊಂಡು, ನಾನು ಕೊಟ್ಟ ಅನುದಾನ ರದ್ದಾಗಿದೆ. ಇದನ್ನು ಆ ದತ್ತಾತ್ರೇಯ ನೋಡಿಕೊಳ್ಳುತ್ತಾನೆ. ಇದು ಸರಿಯಲ್ಲ. ಅಧಿಕಾರವಿರುತ್ತದೆ. ಹೋಗುತ್ತದೆ. ಆದರೆ, ನಾವು ಜನರಿಂದ ಆಯ್ಕೆಯಾಗಿರುವುದು ಅವರಿಗೆ ಸಹಾಯ ಮಾಡಬೇಕು ಎಂದು ಪರೋಕ್ಷವಾಗಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ಹಿಂದೆ ತಿಹಾರ್​ ಜೈಲಿನಿಂದ ಹೊರ ಬಂದ ಸಮಯದಲ್ಲಿ ಕೂಡ ಡಿಕೆ ಶಿವಕುಮಾರ್​ ದತ್ತಾತ್ರೇಯನ ದರ್ಶನ ಪಡೆದಿದ್ದರು. ಈಗ ಮತ್ತೊಮ್ಮೆ ಹರಕೆ ತೀರಿಸಲು ಕುಟುಂಬ ಸಮೇತರಾಗಿ ಅವರು ದತ್ತಾತ್ತೇಯ ದೇಗುಲಕ್ಕೆ ಭೇಟಿ ನೀಡಿದ್ದಾರೆ.

ಅದರಂತೆ ನಿನ್ನೆ ಕಲಬುರಗಿಯಲ್ಲಿ ಬಿಜೆಪಿ ಪಕ್ಷದ ಸಚಿವ ಸಂಪುಟದ ಬಗ್ಗೆ ಮಾತನಾಡಿದ ಅವರು ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೂ ಕೆಪಿಸಿಸಿ ಅಧ್ಯಕ್ಷರ ಆಯ್ಕೆಗೂ ಸಂಬಂಧವೇ ಇಲ್ಲ. ಅವರು ಯಾವಾಗ ಬೇಕಾದ್ರೂ ಸಂಪುಟ ವಿಸ್ತರಣೆ ಮಾಡಲಿ, ಯಾರನ್ನು ಬೇಕಾದ್ರೂ ಸಿಎಂ ಇಲ್ಲವೆ ಡಿಸಿಎಂ ಮಾಡಲಿ. ಅವರ ಸಂಪುಟ ವಿಸ್ತರಣೆಗೂ ನಮ್ಮ ಪಕ್ಷಕ್ಕೂ ಏನೂ ಸಂಬಂಧವಿಲ್ಲ. ಕೆಪಿಸಿಸಿ ಅಧ್ಯಕ್ಷರ ಹುದ್ದೆ ಖಾಲಿಯೇ ಇಲ್ಲದಿರುವಾಗ, ಹೊಸ ಅಧ್ಯಕ್ಷರ ಆಯ್ಕೆಯ ವಿಳಂಬದ ಪ್ರಶ್ನೆಯೇ ಇಲ್ಲ. ಸದ್ಯ ದಿನೇಶ್ ಗುಂಡೂರಾವ್ ಅವರೇ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಹಾಗೆಯೇ ಸಿದ್ಧರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದು, ಅವರಿಬ್ಬರ ಕೆಳಗೆ ನಾವೆಲ್ಲ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ ಎಂದು ಡಿಕೆಶಿ ಹೇಳಿದರು.

Also read: ಪ್ರಧಾನಿ ನರೇಂದ್ರ ಮೋದಿ ಮತ್ತು ಕೊಲೆಗಾರ ನಾಥೂರಾಮ್ ಗೋಡ್ಸೆ ಇಬ್ಬರದ್ದೂ ಒಂದೇ ಸಿದ್ಧಾಂತ; ರಾಹುಲ್ ಗಾಂಧಿ.!