ದೇಶದ ಆರ್ಥಿಕತೆ ಏರಿಕೆಗೆ ನಿರ್ಮಲಾ ಸೀತಾರಾಮನ್ ಪ್ಲಾನ್ ಸಕ್ಸಸ್; ದಾಖಲೆ ಬರೆದ ಸೆನ್ಸೆಕ್ಸ್, ಒಂದೇ ದಿನ 5 ಲಕ್ಷ ಕೋಟಿ ಲಾಭ

0
800

ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕೆಲವು ನೀತಿಯಿಂದ ದೇಶದ ಆರ್ಥಿಕತೆ ಕುಷಿತಗೊಂಡಿದೆ ಎನ್ನುವ ಮಾತುಗಳು ಕೇಳಿಬರುತ್ತಿದ್ದ ಹಿನ್ನೆಲೆಯಲ್ಲಿ ಅರ್ಥಿಕ ಪ್ರಗತಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಲವು ಪ್ರಯತ್ನ ನಡೆಸಿದ್ದಾರೆ. ಇದರ ಬೆನ್ನಲೆಯಲ್ಲೇ ದೇಶಿಯ ಕಂಪೆನಿಗಳಿಗೆ ವಿಧಿಸುತ್ತಿದ್ದ ಕಾರ್ಪೋರೇಟ್ ತೆರಿಗೆಯನ್ನು ಕಡಿತಗೊಳಿಸಲಾಗಿದೆ. ಹೊಸ ಸ್ಥಳೀಯ ಸಂಸ್ಥೆಗಳಿಗೂ ಕಾರ್ಪೋರೇಟ್ ಮಾದರಿಯಲ್ಲಿ ತೆರಿಗೆಯಲ್ಲಿ ವಿನಾಯಿತಿ ನೀಡುವ ತೀರ್ಮಾನ ಮಾಡಲಾಗಿದೆ ಎಂದು ಘೋಷಣೆ ಮಾಡಿದರು. ಇದರ ಹಿನ್ನೆಲೆಯಲ್ಲಿ ಸೆನ್ಸೆಕ್ಸ್ ಸೂಪರ್ ಜಿಗಿತ ಕಂಡು ಒಂದೇ ದಿನ 5 ಲಕ್ಷ ಕೋಟಿ ಲಾಭ ಕಂಡು ಬಂದಿದೆ.

Also read: ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಮೊದಲ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್; ಬೇರೆ ದೇಶಕ್ಕೆ ಯುದ್ಧ ವಿಮಾನ ರಪ್ತು ಮಾಡುವ ಸಾಮರ್ಥ್ಯ ಹೊಂದಿದ ಭಾರತ.!

ಏರಿಕೆ ಯತ್ತ ದೇಶದ ಆರ್ಥಿಕತೆ?

ಹೌದು ಗೋವಾದ ಪಣಜಿಯಲ್ಲಿ ಜಿಎಸ್‍ಟಿ ಕೌನ್ಸಿಲ್ ಸಭೆ ನಡೆಯುತ್ತಿದ್ದು ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶಿಯ ಕಂಪೆನಿಗಳಿಗೆ ವಿಧಿಸುತ್ತಿದ್ದ ಕಾರ್ಪೋರೇಟ್ ತೆರಿಗೆಯನ್ನು ಕಡಿತಗೊಳಿಸಲಾಗಿದೆ. ಹೊಸ ಸ್ಥಳೀಯ ಸಂಸ್ಥೆಗಳಿಗೂ ಕಾರ್ಪೋರೇಟ್ ಮಾದರಿಯಲ್ಲಿ ತೆರಿಗೆಯಲ್ಲಿ ವಿನಾಯಿತಿ ನೀಡುವ ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು. ಈ ಸಂಬಂಧ ಸುಗ್ರೀವಾಜ್ಞೆ ಹೊರಡಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಅದರಂತೆ ಎಲ್ಲಾ ಹೊಸ ಕಂಪನಿಗಳಿಗೂ ಅಂದರೆ 2019ರ ಅಕ್ಟೋಬರ್‌ 1 ರಿಂದ 2023ರ ಮಾರ್ಚ್‌ 31ರೊಳಗೆ ಹೊಸದಾಗಿ ಸ್ಥಾಪನೆಯಾಗಿ ಉತ್ಪಾದನೆಯನ್ನು ಪ್ರಾರಂಭಿಸುವ ಕಂಪನಿಗಳಿಗೆ ಆದಾಯ ತೆರಿಗೆಯನ್ನು ಶೇಕಡಾ 15ಕ್ಕೆ ಇಳಿಕೆ ಮಾಡುವುದಾಗಿ ತಿಳಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ತೆರಿಗೆ ಕಡಿತ ಘೋಷಿಸಿದ ನಂತರರ ಮಾರುಕಟ್ಟೆಗಳು ತಕ್ಷಣವೇ ಏರಿಕೆ ಕಂಡವು. ಸೆನ್ಸೆಕ್ಸ್ 1,600 ಪಾಯಿಂಟ್‌ ಏರಿಕೆ ಕಂಡರೆ, ನಿಫ್ಟಿ 11000 ಅಂಕಗಳಿಗಿಂತ ಹೆಚ್ಚಾಗಿದೆ. ಆರ್ಥಿಕ ಹಿಂಜರಿತದಲ್ಲಿ ನಲುಗಿ ಹೋಗುತ್ತಿದ್ದ ಷೇರು ವಹಿವಾಟು ಇವತ್ತು ಬಲ ಪಡೆದುಕೊಂಡಿದೆ. ಶುಕ್ರವಾರದ ಬೆಳಗ್ಗಿನ ವಹಿವಾಟಿನಲ್ಲಿ ಷೇರುಗಳ ಮೌಲ್ಯ ಸರಾಸರಿಯಾಗಿ ಶೇ. 2ಕ್ಕಿಂತ ಹೆಚ್ಚು ವೃದ್ಧಿಯಾಯಿತು.

Also read: ಕೇಂದ್ರ ಸರ್ಕಾರಿ ನೌಕರರಿಗೆ ದಸರಾ ಮೊದಲೇ ಭರ್ಜರಿ ಉಡುಗೊರೆ; ಜಾರಿ ಆಗುತ್ತ 7ನೇ ವೇತನ ಆಯೋಗ??

ಮಧ್ಯಾಹ್ನದ ವೇಳೆ ಸೆನ್ಸೆಕ್ಸ್ 1300ಕ್ಕೂ ಹೆಚ್ಚು ಪಾಯಿಂಟ್​ ಹೆಚ್ಚಳ ಮಾಡಿಕೊಂಡಿತು. ಒಂದು ಹಂತದಲ್ಲಿ ಸೆನ್ಸೆಕ್ಸ್ 1,800 ಅಂಕಗಳಷ್ಟು ಏರಿಕೆಗೊಂಡು ಮಿಂಚುತ್ತಿತ್ತು. ನಿಫ್ಟಿ ಸೂಚ್ಯಂಕ ಕೂಡ ಸುಮಾರು 350 ಅಂಕಗಳಷ್ಟು ಹೆಚ್ಚಳಗೊಂಡು 11 ಸಾವಿರ ಗಡಿ ದಾಟಿದೆ. ಇವತ್ತಿನ ವಹಿವಾಟಿನಲ್ಲಿ ಸಾವಿರಕ್ಕೂ ಹೆಚ್ಚು ಕಂಪನಿಗಳ ಷೇರು ಮೌಲ್ಯ ಹೆಚ್ಚಳವಾಗಿದೆ. ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿಯಾಗಿ ಕೆಲವೇ ಹೊತ್ತಲ್ಲಿ ಷೇರು ಮಾರುಕಟ್ಟೆ ಬರೋಬ್ಬರಿ 5 ಲಕ್ಷ ಕೋಟಿ ರೂ ಲಾಭ ಮಾಡಿಕೊಂಡಿದೆ.

Also read: ದೇಶದಲ್ಲಿ ಆಟೋಮೊಬೈಲ್ ವಲಯ ಕುಸಿಯಲು ಯುವಪೀಳಿಗೆ ಓಲಾ, ಉಬರ್, ಮೆಟ್ರೋ ಬಳಸುವುದೇ ಕಾರಣವೆಂದ ನಿರ್ಮಲಾ ಸೀತಾರಾಮನ್.!

ಹಣಕಾಸುವ ಸಚಿವೆಯು ಕಾರ್ಪೊರೇಟ್ ತೆರಿಗೆ ದರವನ್ನು ಶೇ. 25ರಿಂದ ಶೇ. 22ಕ್ಕೆ ಇಳಿಕೆ ಮಾಡಲಾಗಿದೆ. ಇದರಲ್ಲಿ ಯಾವುದೇ ವಿನಾಯಿತಿ ಒಳಗೊಂಡಿರುವುದಿಲ್ಲ. ಅಂದರೆ, ಕಂಪನಿಯು ಬೇರಾವುದೇ ನೆರವು ಯಾಚನೆ ಮಾಡದಿದ್ದರೆ ಮಾತ್ರ ಶೇ. 22ರ ತೆರಿಗೆ ಲೆಕ್ಕಾಚಾರ ಅನ್ವಯವಾಗುತ್ತದೆ. ಹೆಚ್ಚುವರಿ ಸುಂಕ ಸೇರಿದರೆ ಕಾರ್ಪೊರೇಟ್ ತೆರಿಗೆಯ ಪ್ರಮಾಣವು ಶೇ. 25.17 ಆಗಲಿದೆ. ಕಾರ್ಪೊರೇಟ್ ತೆರಿಗೆಯನ್ನು ಶೇ. 22ಕ್ಕೆ ಇಳಿಕೆ ಮಾಡುವ ನಿರ್ಧಾರದಿಂದಾಗಿ ಆರ್ಥಿಕ ಮಾರುಕಟ್ಟೆಗೆ ಪ್ರತೀ ವರ್ಷ 1.45 ಲಕ್ಷ ಕೋಟಿ ರೂ ಹರಿದುಬರಲಿದೆ. ಅಂದರೆ, ಕಾರ್ಪೊರೇಟ್ ವಲಯಕ್ಕಾಗಿ ಸರ್ಕಾರ ಇಷ್ಟು ಮೊತ್ತವನ್ನು ತ್ಯಾಗ ಮಾಡಲಿದೆ. ಸರ್ಕಾರದ ಈ ನಿರ್ಧಾರವು ಕಾರ್ಪೊರೇಟ್ ವಲಯಕ್ಕೆ ಭಾರೀ ನಿರಾಳತೆ ತಂದಿದೆ. ಶೇ. 32ರಷ್ಟು ತೆರಿಗೆ ಪಾವತಿಸುವ ಹಣಕಾಸು, ಹೋಟೆಲ್ ವಲಯದ ಉದ್ಯಮಗಳಿಗೆ ಸರಕಾರದ ಈ ಕ್ರಮ ಹೆಚ್ಚು ಲಾಭ ತರುವ ನಿರೀಕ್ಷೆ ಇದೆ.