ಅಪ್ಪ ಅಮ್ಮ ಅಂದರೆ ಒಂದು ಸುಂದರ ಜಗತ್ತು. ತಂದೆ ತಾಯಿ ಮೇಲೆ ಪ್ರೀತಿ ಇದ್ರೆ ಖಂಡಿತ ಈ ಸ್ಟೋರಿ ನೋಡ್ತೀರಾ ಅನ್ಸುತ್ತೆ..!

0
3729

ಅಪ್ಪ ಅಮ್ಮ ಅಂದರೆ ನಿಜಕ್ಕೂ ಒಂದು ಸುಂದರ ಜಗತ್ತು ಯಾಕೆ ಅಂದರೆ ನಮ್ಮ ಜೀವನದಲ್ಲಿ ತಂದೆ ತಾಯಿ ಪಾತ್ರ ಅಪಾರವಾದದು.
ಅಮ್ಮ ನಿನ್ನನ್ನು ಪ್ರಪಂಚಕ್ಕೆ ಪರಿಚಯಿಸುತ್ತಾಳೆ. ಅಪ್ಪ ಪ್ರಪಂಚವನ್ನು ನಿನಗೆ ಪರಿಚಯಿಸುತ್ತಾನೆ.

ಜೀವ ಅಮ್ಮನದು  ಜೀವನ ಅಪ್ಪನದು.
ಹಸಿವೆ ತಿಳಿಯದಂತೆ ಅಮ್ಮ ನೋಡುತ್ತಾಳೆ. ಹಸಿವಿನ ಬೆಲೆಯನ್ನು ಅಪ್ಪ ತಿಳಿಸುತ್ತಾನೆ.

daddys-mother-is-a-beautiful-world-1
source:pexels.com

ಅಮ್ಮ ಭದ್ರತೆಯಾದರೆ..ಅಪ್ಪ ಬಾಧ್ಯತೆಯಾಗುತ್ತಾನೆ..
ಬೀಳದಂತೆ ಹಿಡಿಯಬೇಕೆಂದು ಅಮ್ಮ ನೋಡುತ್ತಾಳೆ. ಬಿದ್ದರೂ ಮೇಲೆ ಏಳಬೇಕೆಂದು ಅಪ್ಪ ಹೇಳುತ್ತಾನೆ..

daddys-mother-is-a-beautiful-world-2
source;depositphotos.com

ನಡೆಸುವದು ಅಮ್ಮನಾದರೆ.ನಡವಳಿಕೆ ಅಪ್ಪನಿಂದ..
ತನ್ನ ಅನುಭವಗಳನ್ನು ವಿದ್ಯೆಯಂತೆ ಬೋಧಿಸುತ್ತಾಳೆ ಅಮ್ಮ..
ನಿನ್ನ ಅನುಭವವೇ ವಿದ್ಯೆ ಎಂದು ತಿಳಿಸುವಂತೆ ಮಾಡುತ್ತಾನೆ ಅಪ್ಪ..

daddys-mother-is-a-beautiful-world-3
source:fotolia.com

ಅಮ್ಮ ಆಲೋಚನೆಯಾದರೆ..
ಅಪ್ಪ ಆಚರಣೆ ಅಮ್ಮನ ಪ್ರೇಮವನ್ನು ನೀನು ಹಸುಳೆ ಇರುವಾಗಲೇ ತಿಳಿದು ಕೊಳ್ಳುತ್ತೀಯಾ..

daddys-mother-is-a-beautiful-world-4
source;lifehack.org

ಅದರೆ…
ಅಪ್ಪನ ಪ್ರೇಮವನ್ನು ತಿಳಿದು ಕೊಳ್ಳುವುದು ನೀನೊಬ್ಬ ಹಸುಳೆಯ ತಂದೆ ಆದಾಗಲೇ ಮಾತ್ರ ಅಪ್ಪನ ಪ್ರೇಮ ಗೊತ್ತಾಗುತ್ತದೆ.
ನಿಮ್ಮ ಜೀವನದಲ್ಲಿ ತಂದೆ ತಾಯಿ ಸಹ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ. ಸಾಧ್ಯವಾದಷ್ಟು ನಿಮ್ಮ ತಂದೆ ತಾಯಿನ್ನು ಪ್ರೀತಿಸಿ.