ನಿತ್ಯ ಭವಿಷ್ಯ 20 ಮಾರ್ಚ್, 2018…

0
602
ದಿನ ಭವಿಷ್ಯ

ಮೇಷ:

ಕೋರ್ಟ್ ಕಚೇರಿ ಕೆಲಸಗಳಿಗೆ ಸ್ವಲ್ಪ ಹಿನ್ನಡೆ, ತಟಸ್ಥತೆಯಿಂದ ಉತ್ತಮ, ಮನೆಯವರ ಕೆಟ್ಟ ಮಾತುಗಳಿಂದ ಬೇಸರ.

ವೃಷಭ:

ಉದ್ಯೋಗ ವ್ಯವಹಾರಗಳಲ್ಲಿ ಬದಲಾವಣೆ, ಉತ್ತಮ ಅವಕಾಶ. ಹೆಚ್ಚಿನ ಧನ ಸಂಚಯಕ್ಕೆ ದೂರದ ಸಂಚಾರ ಯೋಗ, ಸಂತಸ.

ಮಿಥುನ:

ಮೇಲಿಂದ ಮೇಲೆ ಒದಗುವ ಖರ್ಚುಗಳಿಂದ ಆರ್ಥಿಕ ಹಿನ್ನಡೆ, ಮಗನ ಉದ್ಯೋಗದಿಂದ ಸ್ವಲ್ಪ ಸಮಾಧಾನ.

ಕಟಕ:

ಹೊಸ ವ್ಯವಹಾರಗಳಿಗೆ ಅಡೆತಡೆ , ಪರಿಶ್ರಮದಿಂದ ಜಯ . ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ದೂರ ದೂರಿನ ಯೋಗ.

ಸಿಂಹ:

ವ್ಯಾಪಾರಿ ವರ್ಗದವರಿಗೆ ಲಾಭದಾಯಕ ಆದಾಯ. ಆಪ್ತರ ಸಹಾಯ. ದೂರ ಸಂಚಾರ ದಿಂದ ಅನುಕೂಲ.

ಕನ್ಯಾ:

ಅವಿವಾಹಿತರಿಗೆ ವಿವಾಹ ಕಾರ್ಯಕ್ಕೆ ಅಡೆತಡೆ . ಧೈರ್ಯದ ಹೆಜ್ಜೆಯಿಂದ ಒಳಿತು. ಕ್ಷೇತ್ರಗಳ ದರ್ಶನದಿಂದ ಶಾಂತಿ.

ತುಲಾ:

ಯುವಕ, ಯುವತಿಯರಿಗೆ ಹಿರಿಯರ ಮನ್ನಣೆ, ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗದಿಂದ ತೃಪ್ತಿ.

ವೃಶ್ಚಿಕ:

ವೈದ್ಯರು, ಸಾಹಿತಿಗಳು, ಕಲಾಕಾರರಿಗೆ ಭೂ ಖರೀದಿ ಯೋಗ. ಸರಕಾರಿ ನೌಕರರಿಗೆ ಅಧಿಕಾರಿಗಳಿಂದ ಬೆಂಬಲ, ಸೂಕ್ತ ಸಹಾಯ.

ಧನಸ್ಸು:

ಅನಿರೀಕ್ಷಿತ ಸಂಚಾರದಿಂದ ರಾಜಕೀಯ ವ್ಯಕ್ತಿಗಳಿಗೆ ಸಾಧಾರಣ ಪ್ರಗತಿ, ದೇವತಾರಾಧನೆ ಉತ್ತಮ, ಆಕಸ್ಮಿಕ ಅತಿಥಿಗಳಿಂದ ಸಂತಸ.

ಮಕರ:

ಅಧಿಕ ಸಂಚಾರದಿಂದ ವ್ಯರ್ಥ ಧನ ವ್ಯಯ. ಆರ್ಥಿಕ ಸಂಸ್ಥೆಯಿಂದ ವಂಚನೆ. ಮನೆ ಮಂದಿಯಿಂದ ಕಿರಿಕಿರಿ, ಬೇಸರ.

ಕುಂಭ:

ದುಡುಕು ನಿರ್ಧಾರಗಳಿಂದ ತೊಂದರೆ ಸಂಭವ, ಸೂಕ್ತ ಹೆಜ್ಜೆಯಿಂದ ಸಹಾಯ. ದಂಪತಿಗೆ ಸಮಾಧಾನವಿದೆ.

ಮೀನ:

ದೈವ ಸಹಾಯದಿಂದ ಕೆಲಸ ಕಾರ್ಯಗಳಿಗೆ ಯಶಸ್ಸು. ಮೇಲಧಿಕಾರಿಗಳ ಸಹಕಾರದಿಂದ ಜವಾಬ್ದಾರಿ ಹೆಚ್ಚಳ. ಸಾಂಸಾರಿಕ ಸುಖ, ಸಂತಸ.