Astrology in kannada | kannada news ದಿನ-ಭವಿಷ್ಯ: 11 ಏಪ್ರಿಲ್, 2019!!
ದಿನ-ಭವಿಷ್ಯ: 11 ಏಪ್ರಿಲ್, 2019!!
ಮೇಷ:
ಮೇಷ:- ಯಾವುದೇ ರೀತಿಯ ಮಹತ್ವಾಕಾಂಕ್ಷೆಗಳು ಸೂಕ್ತವಾದ ದಾರಿಯಲ್ಲಿ ಇರಿಸುವ ಹೆಜ್ಜೆಗಳಿಂದ ಮಾತ್ರ ಕೈಗೂಡಲಿದೆ. ಕುಲದೇವತಾ ಅನುಗ್ರಹವನ್ನು ವಿಶೇಷವಾಗಿ ಪಡೆಯಿರಿ. ಆಂಜನೇಯ ಸ್ತೋತ್ರ ಪಠಿಸಿ.
ವೃಷಭ:
ವೃಷಭ:- ನೂತನ ಪರಿಸರದಲ್ಲಿ ಕೆಲಸ ಮಾಡುವ ಸಾಧ್ಯತೆ ಇದ್ದು ಇದು ನಿಮ್ಮ ವೃತ್ತಿಗೆ ಪೂರಕವಾಗಿದೆ ಮತ್ತು ನಿಮ್ಮ ಬುದ್ಧಿಮಟ್ಟವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಲಿದೆ. ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಕೊಡಿ.
ಮಿಥುನ:
ಮಿಥುನ:- ವೃತ್ತಿಯಲ್ಲಿನ ಒಂದು ಸಣ್ಣ ತಪ್ಪು ನಿಮಗೆ ಬೇಸರ ಉಂಟುಮಾಡುವುದು. ಇದರಿಂದಾಗಿ ನಿಮ್ಮ ಮನೋಕಾಮನೆಗಳು ಪೂರೈಸಿಕೊಳ್ಳಲು ಪುನಃ ಕಾಲಾವಕಾಶ ಬೇಕಾಗುವುದು.
Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!
ಕಟಕ:
ಕಟಕ:- ಸತ್ಯವಂತರಿಗಿದು ಕಾಲವಲ್ಲ ಎಂದರು ಹಿರಿಯರು. ಅಂತೆಯೇ ನೀವು ಎಷ್ಟೇ ಪ್ರಾಮಾಣಿಕವಾಗಿ ವರ್ತಿಸಿದರೂ ಮಡದಿ ಮಕ್ಕಳೇ ನಿಮ್ಮ ಬಗ್ಗೆ ಅಪನಂಬಿಕೆ ತೋರುವರು. ಶಿವನ ಆರಾಧನೆ ಮಾಡಿ.
ಸಿಂಹ:
ಸಿಂಹ:- ಬಾಳಸಂಗಾತಿಯ ವಿಚಾರದಲ್ಲಿ ಸ್ವಲ್ಪ ಹೆಚ್ಚಿನ ಮುತುವರ್ಜಿ ತೋರಬೇಕಾಗುವುದು. ಇದರಿಂದ ಬರಬಹುದಾದ ಬಿಕ್ಕಟ್ಟು ದೂರವಾಗಲಿದೆ. ನೆರೆಹೊರೆಯವರೊಡನೆ ಸ್ನೇಹದಿಂದ ವರ್ತಿಸಿ. ಹಣಕಾಸಿನ ಸ್ಥಿತಿ ಸಾಮಾನ್ಯವಾಗಿರುತ್ತದೆ.
ಕನ್ಯಾ:
ಕನ್ಯಾ:- ದೂರದ ಊರಿನ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇರುತ್ತದೆ. ಆದರೆ ಆ ಬಗ್ಗೆ ನಿರುತ್ಸಾಹ ತೋರದೆ ಉತ್ಸಾಹ ಭರಿತರಾಗಿ ಒಪ್ಪಿಗೆ ಸೂಚಿಸಿ. ಪ್ರವಾಸವು ನಿಮಗೆ ಹೊಸ ಹುರುಪನ್ನು ತಂದುಕೊಡುತ್ತದೆ.
Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!
ತುಲಾ:
ತುಲಾ:- ಮಹತ್ವದ ಕೆಲಸವನ್ನು ಮಾಡುವ ಮುನ್ನ ಕುಲದೇವತೆಯನ್ನು ಪ್ರಾರ್ಥಿಸಿರಿ. ಕುಲದೇವರ ಅನುಗ್ರಹದಿಂದ ಒಳಿತಾಗುವುದು. ಹಳೆಯ ಸ್ನೇಹಿತರು ನಿಮ್ಮನ್ನು ಭೇಟಿ ಆಗುವರು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.
ವೃಶ್ಚಿಕ:
ವೃಶ್ಚಿಕ:- ವಿರುದ್ಧ ಲಿಂಗಿಗಳ ಬಗ್ಗೆ ಎಚ್ಚರದಿಂದಿರಿ. ಇಲ್ಲಸಲ್ಲದ ಆರೋಪಗಳಿಂದ ಅವರು ನಿಮ್ಮನ್ನು ದಣಿಸುವ ಸಾಧ್ಯತೆ ಇರುವುದು. ಆಂಜನೇಯ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಒಳಿತಾಗುವುದು.
ಧನಸ್ಸು:
ಧನಸ್ಸು:- ಧಾರ್ಮಿಕ ಕಾರ್ಯಗಳನ್ನು ಯಶಸ್ವಿಯಾಗಿ ಮುಗಿಸಿದ ತೃಪ್ತಿಯ ಸಂತೋಷದಲ್ಲಿರುವ ನಿಮಗೆ ನಿಮ್ಮ ಉತ್ಸಾಹದ ಬಲೂನಿಗೆ ಸೂಜಿ ಚುಚ್ಚಿದಂತೆ ಕೆಲವರು ಟೀಕೆ ಮಾಡುವರು. ಇದರಿಂದ ಮನಸ್ಸಿಗೆ ಕಿರಿಕಿರಿ ಉಂಟಾಗುವುದು.
ಮಕರ:
ಮಕರ:- ಮುನ್ನುಗ್ಗಿ ಹೋಗುವ ನಿಮ್ಮ ಉತ್ಸುಕತೆಯನ್ನು ವೃದ್ಧಿಸಿಕೊಳ್ಳಿ. ಒಳಿತಾಗುವ ಹೊಸದಾದ ಬಾಗಿಲು ತೆರೆಯಲಿದೆ. ಈ ದಿನ ಬರುವ ಉತ್ತಮ ಅವಕಾಶಗಳನ್ನು ನಿರಾಕರಿಸದೆ ಒಪ್ಪಿಕೊಳ್ಳಿ. ಇದರಿಂದ ಒಳಿತಾಗುವುದು.
ಕುಂಭ:
ಕುಂಭ:- ಸಂಪಾದನೆಗಿಂತ ಖರ್ಚು ಹೆಚ್ಚು ಎಂದು ರೋಸಿ ಹೋಗಿದ್ದೀರಿ. ಆದರೆ ಇದಕ್ಕೆ ನಿಮ್ಮ ಸ್ವಯಂಕೃತ ಅಪರಾಧವೇ ಕಾರಣವೆಂದು ಹೇಳಬೇಕಾಗಿಲ್ಲ. ಹೆಚ್ಚು ಹಣ ಬಂದಾಗ ಅದರಲ್ಲಿ ಸ್ವಲ್ಪ ಭಾಗವಾದರು ಉಳಿತಾಯ ಮಾಡಿ.
ಮೀನ:
ಮೀನ:- ಯಾವ ಕೆಲಸವನ್ನು ಮೊದಲು ಮಾಡಬೇಕು ಎಂದು ಮಾನಸಿಕ ಗೊಂದಲದಲ್ಲಿ ನರಳುವಿರಿ. ಮಾಡಬೇಕಾಗಿರುವ ಕೆಲಸಗಳ ಪಟ್ಟಿ ತಯಾರಿಸಿ. ಆದ್ಯತೆಯ ಮೇರೆಗೆ ಕೆಲಸವನ್ನು ಮಾಡುತ್ತಾ ಬನ್ನಿ ಒಳಿತಾಗುವುದು.
Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ
ದಿನ-ಭವಿಷ್ಯ: 11 ಏಪ್ರಿಲ್, 2019!!