ಈ ಭಾನುವಾರದ (15-04-2018) ನಿತ್ಯ ಭವಿಷ್ಯ!!

0
295

Astrology in kannada | kannada news

ಮೇಷ:

ನಿಮ್ಮನ್ನು ಹೀಯಾಳಿಸುವ ಜನ ಸಿಗುತ್ತಾರೆ. ಬೇಸರ ಬೇಡ. ನಿಮ್ಮನ್ನು ನೀವು ಸುಧಾರಿಸಿಕೊಳ್ಳಲು ದಾರಿ ಲಭ್ಯ.

ವೃಷಭ:

ಬರೀ ಮಾತುಗಳ ಬಡಿವಾರ ಬೇಡ. ನಿಮ್ಮ ನಿಜವಾದ ಶಕ್ತಿಯನ್ನು ಪ್ರದರ್ಶಿಸಿ. ಅನ್ಯರ ಬೆಂಬಲ ಸಿಗಲಿದೆ.

ಮಿಥುನ:

ದಶರಥಕೃತ ಶನಿಸ್ತೋತ್ರವನ್ನು ಓದುವುದರಿಂದ ಇಷ್ಟಾರ್ಥವಾದ ಧನಸಂಪಾದನೆಯ ದಾರಿ ಸ್ಪಷ್ಟವಾಗಲಿದೆ.

ಕಟಕ:

ಯಾವುದೋ ಒಂದು ಕೆಲಸ ಎಂದು ಅಂದುಕೊಂಡು ತೆಪ್ಪಗಿರುವ ನಿಮಗೆ ಹೊಸಕೆಲಸ ಸಿಗುವ ಸಾಧ್ಯತೆ ಹೇರಳ.

ಸಿಂಹ:

ಅನೇಕ ಜನರು ನಿಮ್ಮನ್ನು ಪ್ರಶಂಸಿಸುತ್ತಾರೆ ಎಂಬುದು ಈ ದಿನದ ಸತ್ಯವಾದರೂ ಸ್ವವಿಮರ್ಶೆಗೆ ದಾರಿ ಇರಲಿ.

ಕನ್ಯಾ:

ಶನಿಕಾಟದಿಂದ ಬೇಸತ್ತಿದ್ದೀರಿ. ರಾಹುಕಾಟವೂ ಇದೆ. ಆದರೆ ಸಹೋದ್ಯೋಗಿಯೊಬ್ಬರಿಂದ ನೆರವಿಗೆ ದಾರಿ ಇದೆ.

ತುಲಾ:

ಸಾಲಿಗ್ರಾಮವನ್ನು ಪೂಜಿಸುವವರು ಹಾಲಿನ ಸಿಹಿ ನೈವೇದ್ಯದಿಂದ ಪೂಜೆಯನ್ನು ನೆರವೇರಿಸಿ. ಮನದ ಸಂಕಲ್ಪ ಸಿದ್ಧಿ.

ವೃಶ್ಚಿಕ:

ನಿಮ್ಮ ಚಿಂತೆಗಳನ್ನು ಕುಟುಂಬದ ಸದಸ್ಯರೊಂದಿಗೆ ಭಾವನಾತ್ಮಕವಾಗಿ ಹಂಚಿಕೊಳ್ಳಿ. ನಿರಾಳತೆ ಸಾಧ್ಯವಾಗಲಿದೆ.

ಧನಸ್ಸು:

ಎಲ್ಲರಿಂದಲೂ ದೂರವಾಗಿದ್ದೇನೆ ಎಂಬನಿರಾಸೆ ಬೇಡ. ಜನರು ಆರಾಧಿಸುವ ದಿನಗಳಿಗಾಗಿ ಹೊಸ ಸಾಧ್ಯತೆ ಲಭ್ಯ.

ಮಕರ:

ಯಾವುದೋ ಕಾಲದ ಹಳೆಯವಿಚಾರಗಳೆಂದು ಮೂಗು ಮುರಿಯದಿರಿ. ಅವುಗಳ ನೈಜ ಬೆಲೆ ತಿಳಿಯಲಿದೆ.

ಕುಂಭ:

ಎಷ್ಟೋ ದಿನಗಳ ಕನಸು ನನಸಾಗುವದಿನವಾಗಿದೆ. ಬೇಸರದಿಂದ ಹೊರಬಂದು ಕ್ರಿಯಾಶೀಲರಾಗಿರಿ.

ಮೀನ:

Meena1

ನಿಮ್ಮನ್ನು ಪ್ರಶಂಸಿಸುವವರನ್ನು ಮಾತ್ರವೇ ಆದರಿಸಬೇಡಿ, ಇತರರನ್ನೂ ಆರಾಽಸಿ. ಹೊಸದಕ್ಕೆ ಸಾಧ್ಯತೆ ಜಾಸ್ತಿ.

Also read: ಭಾರತದ ಪೂರ್ವಜರ ವಿವಾಹ ಪದ್ದತಿಯ ಹಿಂದೆ ಇರುವ ವೈಜ್ಞಾನಿಕ ಅರ್ಥ ಗೊತ್ತಾದ್ರೆ, ಹೆಮ್ಮೆ ಆಶ್ಚರ್ಯ ಎರಡೂ ಆಗುತ್ತೆ!!