ದಿನ ಭವಿಷ್ಯ 16 ಏಪ್ರಿಲ್, 2019!!

0
135

Astrology in kannada | kannada news ದಿನ-ಭವಿಷ್ಯ: 16 ಏಪ್ರಿಲ್, 2019!!

ದಿನ-ಭವಿಷ್ಯ: 16 ಏಪ್ರಿಲ್, 2019!!

ಮೇಷ:

ದಿನ ಭವಿಷ್ಯ

ಮೇಷ:- ವಿಶೇಷವಾದ ಗುಪ್ತಚರ ಇಲಾಖೆಯಿಂದ ವಿಷಯವೊಂದರ ಕುರಿತು ಆಶ್ಚರ್ಯಕರ ವಾರ್ತೆ ಲಭಿಸಲಿದೆ. ಇದರಿಂದ ನಿಮ್ಮ ಮನಸ್ಸು ಪ್ರಫುಲ್ಲಗೊಳ್ಳುವುದು. ಇನ್ನು ಹೆಚ್ಚಿನ ಉತ್ಸಾಹದಿಂದ ಕಾರ್ಯ ಮಾಡಲು ಉತ್ಸುಕರಾಗುವಿರಿ.

ವೃಷಭ:

ದಿನ ಭವಿಷ್ಯ

ವೃಷಭ:- ನಿಮ್ಮ ನೆಂಟರು ಆಪ್ತರು ಬಣ್ಣ ಬಣ್ಣದ ಮಾತುಗಳನ್ನಾಡಿ ನಿಮ್ಮನ್ನು ಮೋಸಗೊಳಿಸಲು ಯತ್ನಿಸುವರು. ಈ ಬಗ್ಗೆ ಎಚ್ಚರದಿಂದ ಇರಿ. ಹಣಕಾಸಿನ ಪರಿಸ್ಥಿತಿ ಉತ್ತಮವಾಗುವುದು. ಮಡದಿ ಮಕ್ಕಳು ನಿಮಗೆ ಸಹಾಯಹಸ್ತ ನೀಡುವರು.

ಮಿಥುನ:

ದಿನ ಭವಿಷ್ಯ

ಮಿಥುನ:- ಸಂದಿಗ್ಧದ ಕ್ಷಣಗಳು ಏಕಾಏಕಿ ಎದುರಾಗಿ ನೀವು ವಿಚಲಿತರಾಗುವಿರಿ. ಬಹು ಜಾಣ್ಮೆಯಿಂದ ಪರಿಸ್ಥಿತಿಯನ್ನು ಎದುರಿಸಿ. ಗುರು, ಹಿರಿಯರ ಆಶೀರ್ವಾದ ಇರುವುದರಿಂದ ಹೆಚ್ಚಿನ ತೊಂದರೆಯಿಲ್ಲ. ಮಕ್ಕಳು ನಿಮ್ಮ ಮನಸ್ಸಿಗೆ ನೆಮ್ಮದಿ ನೀಡುವರು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಮನಸ್ಸಿನ ಸಂಕಲ್ಪಿತ ಕೆಲಸವು ಭಗವಂತನ ದಯೆಯಿಂದ ಪೂರ್ಣವಾಗುವುದು. ಸಾಮಾಜಿಕ ಮತ್ತು ರಾಜಕೀಯವಾಗಿ ಗುರುತಿಸಿಕೊಳ್ಳುವಿರಿ. ಆಸ್ತಿ ವಿವಾದಕ್ಕೆ ಸಂಬಂಧಪಟ್ಟಂತೆ ನಿಮಗೆ ಗೆಲುವು ದೊರೆಯುವುದು. ಆರ್ಥಿಕ ಸ್ಥಿತಿ ಸಾಧಾರಣವಾಗಿರುವುದು.

ಸಿಂಹ:

ದಿನ ಭವಿಷ್ಯ

ಸಿಂಹ:- ಮನೆಯಲ್ಲಿ ಅಶಾಂತಿ ಬೇಡ ಎಂದಷ್ಟು ನಿಮ್ಮ ಮನೋಧೈರ್ಯವನ್ನು ಪರೀಕ್ಷಿಸುವ ಬೆಳವಣಿಗೆ ನಡೆಯುವ ಸಾಧ್ಯತೆ ಇದೆ. ಆದಷ್ಟು ತಾಳ್ಮೆಯಿಂದ ಇರಿ. ಪರರ ಲೋಪದೋಷಗಳನ್ನು ಎತ್ತಿ ಆಡದಿರಿ. ಮಡದಿಯ ಸಕಾಲಿಕ ಎಚ್ಚರಿಕೆಯ ಮಾತುಗಳನ್ನು ಆಲಿಸಿ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಆತ್ಮಸಾಕ್ಷಿಯನ್ನು ಕಾಪಾಡಿಕೊಳ್ಳಿ. ಅಶಿಸ್ತನ್ನು ಎಂದೂ ಸಹಿಸದ ನೀವು ನಿಮ್ಮ ಪ್ರಾಮಾಣಿಕತೆಗೆ ಪ್ರಶಂಸೆ ಗಳಿಸುವಿರಿ. ಬಂಧು ಬಾಂಧವರೊಡನೆ ಉತ್ತಮ ಸ್ನೇಹವನ್ನು ವೃದ್ಧಿಸಿಕೊಳ್ಳುವಿರಿ. ಬರಬೇಕಾಗಿದ್ದ ಹಣಕಾಸು ನಿಮ್ಮ ಕೈಸೇರುವ ಸಾಧ್ಯತೆ ಇದೆ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ವಿಶಿಷ್ಟವಾದ ದಿನವಾಗಿದೆ. ಆರಂಭದಲ್ಲಿ ಎಲ್ಲವೂ ಸೋಲು ಎಂದು ಕಂಡು ಬಂದರೂ ದಿನದ ಅಂತ್ಯಕ್ಕೆ ಯಶಸ್ಸು ಖಂಡಿತಾ ದೊರೆಯುತ್ತದೆ. ಮನೆಯಲ್ಲಿ ಮಕ್ಕಳ ಕಲರವ ಹೆಚ್ಚು ಸಂತೋಷ ಕೊಡುವುದು. ಹಾಗೆಯೆ ಖಚ್ಚು ಹೆಚ್ಚಾಗುಬಹುದು.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಮಾನಸಿಕವಾಗಿ ಉತ್ಸಾಹದಿಂದ ಇರಲು ಪ್ರಯತ್ನಿಸಿದಷ್ಟು ಕೆಲವು ಹಿನ್ನಡೆಗಳಿಗೆ ಇಂದು ಸಾಕ್ಷಿ ಆಗುವುದು. ಗ್ರಹಸ್ಥಿತಿಗಳೇ ಉತ್ತಮವಾಗಿಲ್ಲದ ಈ ದಿನಗಳಲ್ಲಿ ಯಾರನ್ನು ದೂರಿ ಪ್ರಯೋಜನವಿಲ್ಲ. ಇಂದಲ್ಲ ನಾಳೆ ಒಳ್ಳೆಯ ದಿನಗಳು ಬಂದೇ ಬರುತ್ತವೆ. ತಾಳ್ಮೆಯಿರಲಿ.

ಧನಸ್ಸು:

ದಿನ ಭವಿಷ್ಯ

ಧನಸ್ಸು:- ನಿಮ್ಮ ಯೋಜನೆ ಹಾಗೂ ಯೋಚನೆಗಳನ್ನು ಮೀರಿ ಧನಲಾಭಕ್ಕೆ ಅವಕಾಶವಿದೆ. ಆದರೆ ಆತುರ ತೋರದಿರಿ. ಕೂತು ಮಲಗುವ ವ್ಯಕ್ತಿಯು ನಿಶ್ಚಿತವಾಗಿ ಸುಖನಿದ್ದೆಯನ್ನು ಹೊಂದುವನು. ಅಂತೆಯೆ ಈ ದಿನದ ಕಾರ್ಯಗಳು ಯೋಜನಾಬದ್ಧವಾಗಿ ಜಾರಿಗೊಳ್ಳುವುದು.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ನಿರ್ದಿಷ್ಟವಾಗಿ ನಿಮ್ಮ ಧ್ಯೇಯೋದ್ದೇಶಗಳೇನು ಎಂಬುದನ್ನು ಬೆಂಬಲಿರಿಗೆ ಸ್ಪಷ್ಟವಾಗಿ ತಿಳಿಸಿ. ಇಲ್ಲವೆ ಅನಗತ್ಯ ಅಪವಾದಗಳು ನಿಮ್ಮ ಹೇಗಲೇರುವುದು. ಸಮಯವನ್ನು ಬಹು ಚಾಣಾಕ್ಷ ತನದಿಂದ ನಿರ್ವಹಿಸುವಿರಿ.

ಕುಂಭ:

ದಿನ ಭವಿಷ್ಯ

ಕುಂಭ:- ನಿಮ್ಮನ್ನು ನೀವು ವಿಮರ್ಶೆಗೆ ಒಳಪಡಿಸಿಕೊಳ್ಳುವುದು ಒಳ್ಳೆಯದು. ಕೆಲವು ಕೆಲಸಗಳನ್ನು ನೀವು ನಿಮ್ಮ ಮನಸ್ಸಿನ ವಿರುದ್ಧವಾಗಿ ಮಾಡಿರುವ ಬಗ್ಗೆ ಮನದಲ್ಲಿ ಅಳುಕಿದೆ. ಅದು ಯಾವ ಮಹತ್ತರವಾದ ಕಾರಣಕ್ಕೆ ಮಾಡಲಾಯಿತು ಎಂದು ಅವಲೋಕಿಸಿಕೊಳ್ಳಿ.

ಮೀನ:

ದಿನ ಭವಿಷ್ಯ

ಮೀನ:- ಏನೋ ಮಾಡಲು ಹೋಗಿ ಮತ್ತೇನೋ ಆಯಿತು ಎಂಬಂತೆ ನಿಮ್ಮ ಮನಸ್ಸಿನ ಭಾವನೆಗಳಿಗೆ ಧಕ್ಕೆ ಬರುವ ಸಂದರ್ಭ ಎದುರಾಗಲಿದೆ. ಮಾತಾ ದುರ್ಗಾದೇವಿಯ ಆರಾಧನೆ ಮೂಲಕ ದುಃಖವನ್ನು ಶಮನಗೊಳಿಸಿ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ-ಭವಿಷ್ಯ: 16 ಏಪ್ರಿಲ್, 2019!!