ದಿನ ಭವಿಷ್ಯ: 17 ಜೂನ್, 2019!!

0
267

Astrology in kannada | kannada news ದಿನ ಭವಿಷ್ಯ: 17 ಜೂನ್, 2019!!

ದಿನ ಭವಿಷ್ಯ: 17 ಜೂನ್, 2019!!

ಮೇಷ:

ದಿನ ಭವಿಷ್ಯ

ಮೇಷ:- ಕುಟುಂಬದಲ್ಲಿ ಸಂಶಯವು ನುಸುಳದಂತೆ ನೋಡಿಕೊಳ್ಳಿರಿ. ಬೇರೆಯವರ ಸಂಸಾರ ಸರಿಮಾಡಲು ಹೋಗಿ ನಿಮ್ಮ ಕುಟುಂಬ ಜೀವನದಲ್ಲಿ ಅಶಾಂತಿಯನ್ನು ತಂದುಕೊಳ್ಳದಿರಿ. ವಿದೇಶದಿಂದ ಮಗ ಹಾಗೂ ಅವರ ಕುಟುಂಬದ ಆಗಮನವಾಗಲಿದೆ. ಸಾಮಾಜಿಕ ಸೇವೆಯಲ್ಲಿಯೇ ಸಂತೃಪ್ತಿ ಕಾಣುವ ನಿಮಗೆ ಅದರಲ್ಲೇ ಕೀರ್ತಿ, ಗೌರವ ಪ್ರತಿಷ್ಠೆ ಹೆಚ್ಚಲಿದೆ.

ವೃಷಭ:

ದಿನ ಭವಿಷ್ಯ

ವೃಷಭ:- ಹಿರಿಯರ ಆಶೀರ್ವಾದದಿಂದ ಮನೆಯಲ್ಲಿ ನೆಮ್ಮದಿಯ ದಿನಗಳನ್ನು ಕಳೆಯುವಿರಿ. ಸಂಗಾತಿಯ ಬುದ್ಧಿಮತ್ತೆ ಆದರಿಸಿ ಸಾಮಾಜಿಕ ಕ್ಷೇತ್ರದಲ್ಲಿ ಗೌರವ ಆದರಗಳನ್ನು ಹೊಂದುವಿರಿ. ಇದರಿಂದ ನಿಮ್ಮ ವೈಯಕ್ತಿಕ ಪ್ರತಿಷ್ಠೆಯು ಹೆಚ್ಚಾಗುವುದು. ಮಾನಸಿಕ ಚಾಂಚಲ್ಯದಿಂದ ದೂರವಾಗಲು ಶಿವ-ಪಂಚಾಕ್ಷ ರಿ ಮಂತ್ರವನ್ನು ಪಠಿಸಿರಿ.

ಮಿಥುನ:

ದಿನ ಭವಿಷ್ಯ

ಮಿಥುನ:- ಸತತ ಪರಿಶ್ರಮ ಹಾಗೂ ಕಾರ್ಯ ಒತ್ತಡದಿಂದ ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ. ಈ ಬಗ್ಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ. ನಿಮ್ಮ ನೆಚ್ಚಿನ ಕ್ಷೇತ್ರದಲ್ಲಿ ಆರೋಗ್ಯಕರ ಸ್ಪರ್ಧೆ ಕಂಡುಬರುವುದು. ಆದರೆ ಯಶಸ್ಸು ಮಾತ್ರ ನಿಮ್ಮದೇ ಆಗುವುದು. ಪ್ರಗತಿ ಹೊಂದಲು ಉತ್ತಮ ಅವಕಾಶಗಳು ಒದಗಿ ಬರುವುದು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ನೀವು ಎಷ್ಟೇ ಕಷ್ಟಪಟ್ಟು ದುಡಿದರೂ ಕೂಡಾ ಅದು ಖರ್ಚುವೆಚ್ಚಗಳಿಗೆ ಸರಿ ಹೊಂದುವುದು. ಆದರೆ ಹಣ ಉಳಿತಾಯ ಮಾಡಲು ಆಗುವುದಿಲ್ಲ. ವಹಿಸಿಕೊಂಡ ಜವಾಬ್ದಾರಿ ನೀವು ಅಂದುಕೊಂಡಷ್ಟು ಶುಭವಲ್ಲ. ಬೇರೆಯವರ ಸಲಹೆಗಳನ್ನು ನಮ್ರತೆಯಿಂದ ಸ್ವೀಕರಿಸುವುದನ್ನು ಕಲಿಯಿರಿ. ಸಾಧ್ಯವಾದಷ್ಟು ದೇವತಾರಾಧನೆ ಮಾಡುವುದು ಒಳ್ಳೆಯದು.

ಸಿಂಹ:

ದಿನ ಭವಿಷ್ಯ

ಸಿಂಹ:- ಕುಟುಂಬದ ಸದಸ್ಯರೊಡನೆ ವಿನಾಕಾರಣ ಮನಸ್ತಾಪ ಮಾಡಿಕೊಳ್ಳದಿರಿ. ರಕ್ತಸಂಬಂಧಿ ಸಮಸ್ಯೆಗಳು ಕಾಡುವ ಸಾಧ್ಯತೆ ಇರುವುದು. ಖರ್ಚಿನ ವಿಷಯದಲ್ಲಿ ಕಡಿವಾಣ ಹಾಕುವುದು ಉತ್ತಮ. ಮುಂದೆ ನಡೆಯಬೇಕಾದ ಮಂಗಳ ಕಾರ್ಯಗಳ ಬಗ್ಗೆ ಈಗಲೇ ಪೂರ್ವಸಿದ್ಧತೆ ಮಾಡಿಕೊಳ್ಳುವುದು ಒಳ್ಳೆಯದು.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಮಾನ ಸನ್ಮಾನಗಳು ಉಂಟಾಗುವ ಸಾಧ್ಯತೆ. ಇದರಿಂದಾಗಿ ನಿಮ್ಮ ಗೌರವ ಮತ್ತಷ್ಟು ಹೆಚ್ಚುವುದು. ನಿಮ್ಮ ಉತ್ಸಾಹದ ವೇಗಕ್ಕೆ ಎದುರಾಳಿಗಳು ಕೂಡಾ ಬೆಚ್ಚಿ ಬೀಳುವರು. ಕಠಿಣ ಪರಿಶ್ರಮದಿಂದ ಯಶಸ್ಸು ದೊರೆಯುವುದು. ನಿಮ್ಮನ್ನು ನೋಡಿ ಮಾತ್ಸರ್ಯ ಪಡುವ ವ್ಯಕ್ತಿಗಳನ್ನು ಕಂಡು ತಲೆ ಕೆಡಿಸಿಕೊಳ್ಳಬೇಡಿ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ಕಾರ್ಯಕ್ಷೇತ್ರದ ಪ್ರಗತಿಗೋಸ್ಕರ ದೂರ ಪ್ರಯಾಣ ಮಾಡಬೇಕಾಗುವುದು. ಮಗನ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುವುದು. ವ್ಯವಹಾರದಲ್ಲಿ ಸ್ನೇಹಿತರು, ಅನುಭವಿಗಳ ಹಾಗೂ ಹಿರಿಯರ ಸಹಾಯ ದೊರೆಯಲಿದೆ. ಅದು ದುರುಪಯೋಗವಾಗದಂತೆ ಎಚ್ಚರ ವಹಿಸಿರಿ. ಕಾರ್ಯವೈಖರಿಯಲ್ಲಿ ಬದಲಾವಣೆ ಮಾಡಿಕೊಳ್ಳುವಿರಿ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ವ್ಯಾಪಾರಿಗಳಲ್ಲಿ ಪ್ರತಿ ಸ್ಫರ್ಧಿಗಳ ಕಾಟ ವಿಪರೀತವಾಗುವುದು. ಬಹಳ ಆಲೋಚಿಸಿ ಕಾರ್ಯ ಪ್ರವೃತ್ತರಾದಲ್ಲಿ ಯಶಸ್ಸು ದೊರೆಯುವುದು. ಆದಾಯ ಮೂಲಗಳ ಹೆಚ್ಚಳದಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ಯೋಜನಾಬದ್ಧ ನಿರ್ಧಾರಗಳಿಂದ ಮಾತ್ರ ವ್ಯವಹಾರದಲ್ಲಿ ಚೇತರಿಕೆ ಕಂಡುಬರುವುದು. ಗೆಳೆಯರೊಂದಿಗೆ ನಿಷ್ಠೂರದ ವಚನಗಳನ್ನು ಆಡುವುದು ಸೂಕ್ತವಲ್ಲ..

ಧನಸ್ಸು:

ದಿನ ಭವಿಷ್ಯ

ಧನುಸ್ಸು:- ಮಕ್ಕಳ ಭವಿಷ್ಯದ ಬಗೆಗೆ ಈಗಲೇ ಒಂದು ನಿರ್ಧಾರಕ್ಕೆ ಬರುವುದು ಉತ್ತಮ. ಗುರು ದೇವತಾನುಗ್ರಹದಿಂದ ಹೆಚ್ಚಿನ ಆತ್ಮಬಲ ಬರಲಿದೆ. ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುವುದು. ಉತ್ಸಾಹದಿಂದ ಮಾಡಿದ ದೂರ ಪ್ರಯಾಣದ ಫಲ ಈಗ ಕಂಡುಬರಲಿದೆ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಲು ಪ್ರಯತ್ನಿಸಿ. ಆತ್ಮೀಯರೊಂದಿಗೆ ರಹಸ್ಯ ಸಮಾಲೋಚನೆ ನಡೆಯಲಿದೆ. ಆರ್ಥಿಕವಾಗಿ ಹೆಚ್ಚಳ ಕಂಡು ಬರುವುದು. ಖಾಸಗಿ ಕಂಪನಿ ನೌಕರರಿಗೆ ಹಳೆಯ ಕಂಪನಿಯಿಂದ ಹೆಚ್ಚಿನ ವೇತನದ ಮರು ಅವಕಾಶ ಒದಗಿ ಬರುವ ಸಾಧ್ಯತೆ ಇರುತ್ತದೆ.

ಕುಂಭ:

ದಿನ ಭವಿಷ್ಯ

ಕುಂಭ:- ಮನೆಗೆ ಬಂಧುಮಿತ್ರರ ಆಗಮನದಿಂದ ಸಂತಸ. ಹೆಚ್ಚಿನ ಖರ್ಚಿಗೆ ದಾರಿಯಾಗುವುದು. ಮಾನಸಿಕ ಸಮತೋಲನ ಕಾಯ್ದುಕೊಳ್ಳಲು ಯೋಗ ಮತ್ತು ಧ್ಯಾನದ ಮೊರೆಹೋಗುವುದು ಅನಿವಾರ್ಯ. ಸ್ನೇಹಿತರಿಂದ ಸಿಕ್ಕ ಉತ್ತಮ ಸಲಹೆ ಮನೆಯಲ್ಲಿ ಶಾಂತಿ ವಾತಾವರಣ ಮೂಡಿಸುವುದು.

ಮೀನ:

ದಿನ ಭವಿಷ್ಯ

ಮೀನ:- ಮನೆಯಲ್ಲಿ ಮಗನಿಗೆ ಉತ್ತಮ ಸಂಬಂಧ ಅವರಾಗಿಯೇ ಕೇಳಿಕೊಂಡು ಬರುವರು. ಮನೆಯಲ್ಲಿ ವಿಶೇಷ ಹೋಮ ಹವನಗಳು ನಡೆಯಲಿವೆ. ಸಾಧು ಸಂತರ ದರ್ಶನ ಮಾನಸಿಕ ನೆಮ್ಮದಿ ತರಲಿದೆ. ದಾಂಪತ್ಯದಲ್ಲಿ ಸರಸ, ಸಾಮರಸ್ಯ ಮೂಡಿ ಬರಲಿದೆ. ವ್ಯವಹಾರದಲ್ಲಿ ಉನ್ನತಿ ಕಂಡು ಬರಲಿದೆ.

Also read: ಭಾರತದ ಪೂರ್ವಜರ ವಿವಾಹ ಪದ್ದತಿಯ ಹಿಂದೆ ಇರುವ ವೈಜ್ಞಾನಿಕ ಅರ್ಥ ಗೊತ್ತಾದ್ರೆ, ಹೆಮ್ಮೆ ಆಶ್ಚರ್ಯ ಎರಡೂ ಆಗುತ್ತೆ!!

ದಿನ ಭವಿಷ್ಯ: 17 ಜೂನ್, 2019!!