ದಿನ ಭವಿಷ್ಯ 18 ಮೇ, 2018

0
371
ದಿನ ಭವಿಷ್ಯ

ಮೇಷ:

ಸಮಾಜದಲ್ಲಿ ಸಾಮಾಜಿಕ ಕಾರ್ಯಗಳಿಗೆ ಪ್ರಶಂಸೆ. ಪತಿ-ಪತ್ನಿಯಲ್ಲಿನ ಒಮ್ಮತಕ್ಕೆ ಆಪ್ತರಲ್ಲಿ ಸಂತಸ. ಕ್ಷೇತ್ರದರ್ಶನ ಭಾಗ್ಯ.

ವೃಷಭ:

ದೇವತಾ ಕಾರ್ಯದ ನಿಮಿತ್ತ ವಿನೂತನ ಯೋಜನೆ. ಪ್ರೀತಿಪಾತ್ರರ ಭೇಟಿಯಿಂದ ಧನಾಗಮನ. ಆಕಸ್ಮಿಕ ಶುಭವಾರ್ತೆ.

ಮಿಥುನ:

ದಾಂಪತ್ಯದಲ್ಲಿ ಕಲಹ, ಅಪವಾದ-ಅವಮಾನಗಳಿಂದ ಬೇಸರ. ದೂರದ ಸಂಚಾರದಿಂದ ಆಯಾಸ. ಆರೋಗ್ಯದಲ್ಲಿ ಏರುಪೇರು.

ಕಟಕ:

ವ್ಯಾಪಾರ ವ್ಯವಹಾರಗಳಿಂದ ನಿರೀಕ್ಷಿತ ಲಾಭ. ವಿದ್ಯಾರ್ಥಿಗಳಿಗೆ ಸಂಚಾರದಲ್ಲಿ ಅವಘಡ. ಮಂಗಲ ಕಾರ್ಯಕ್ಕೆ ದೂರದೂರಿಗೆ ಪ್ರಯಾಣ.

ಸಿಂಹ:

ನಿರುದ್ಯೋಗಿಗಳಿಗೆ ತಾತ್ಕಾಲಿಕ ವ್ಯವಸ್ಥೆ. ಕೊಂಚ ಸಮಾಧಾನ. ಹಿರಿಯ ಮಕ್ಕಳ ಬಗೆಗೆ ಚಿಂತೆ. ಆರೋಗ್ಯದಲ್ಲಿನ ಏರಿಳಿತದಿಂದ ಪರದಾಟ.

ಕನ್ಯಾ:

ಔದ್ಯಮಿಕ ರಂಗದಲ್ಲಿನ ಆದಾಯದಿಂದ ಹೊಸ ಯೋಜನೆಯಲ್ಲಿ ಮುನ್ನಡೆ. ಆರೋಗ್ಯದಲ್ಲಿ ಚೇತರಿಕೆ. ಆಪ್ತರಿಂದ ಶುಭವಾರ್ತೆ.

ತುಲಾ:

ಆರೋಗ್ಯದಲ್ಲಿನ ಸಮಸ್ಯೆಗಳಿಂದ ಮಾನಸಿಕ ಅಸ್ಥಿರತೆ, ಉದ್ವೇಗ. ಹಣಕಾಸಿನ ವಿಚಾರದಲ್ಲಿ ಹಿನ್ನಡೆ. ತೀವ್ರ ಬೇಸರ.

ವೃಶ್ಚಿಕ:

ಹಣಕಾಸಿನ ಲೆಕ್ಕಾಚಾರದಲ್ಲಿ ವ್ಯತ್ಯಯವಾಗಿ ಅಪವಾದ. ದೇವತಾರಾಧನೆಯಿಂದ ಪರಿಹಾರ. ಸಂಗ್ರಹಿತ ಧನದಿಂದ ಅನುಕೂಲ.

ಧನಸ್ಸು:

ಸಾಂಸಾರಿಕ ಭಿನ್ನಾಭಿಪ್ರಾಯದಿಂದ ಮನಸ್ಸಿಗೆ ದುಗುಡ, ಧನ ವ್ಯಯ. ವ್ಯಾಪಾರಿಗಳಿಗೆ, ಕೃಷಿಕರಿಗೆ ಸ್ವಲ್ಪ ಪ್ರಗತಿ. ಅಲೆದಾಟದಿಂದ ಆಯಾಸ.

ಮಕರ:

ಸಣ್ಣ, ಪುಟ್ಟ ರಾಜಕಾರಣಿಗಳಿಗೆ ಹಿರಿಯರಿಂದ ಕಿರಿಕಿರಿ. ಕೃಷಿಕರು, ವೈದ್ಯರು, ಕಲಾವಿದರಿಗೆ ಆಪ್ತ ವಲಯದಿಂದ ಸಹಾಯ, ಸಂತಸ.

ಕುಂಭ:

ಆರೋಗ್ಯ ಸುಧಾರಣೆಯಿಂದ ದೇವತಾ ಕಾರ್ಯದ ಬಗ್ಗೆ ಯೋಜನೆ ಹಣ ವ್ಯಯ. ಅವಿವಾಹಿತರಿಗೆ ಯೋಗ್ಯ ಸಂಬಂಧ ಲಾಭ. ಸಂತಸ.

ಮೀನ:

Meena1

ಕೊಟ್ಟ ಮಾತಿಗೆ ತಪ್ಪುವ ಸಂಭವದಿಂದ ಆಪ್ತ ವಲಯದಲ್ಲಿ ಬೇಸರ. ಕೆಟ್ಟ ಅಭ್ಯಾಸದಿಂದ ಅಧಿಕ ಧನ ವ್ಯಯ. ಕಿರಿಕಿರಿ.