ದಿನ ಭವಿಷ್ಯ 19 ಏಪ್ರಿಲ್, 2019!!

0
261

Astrology in kannada | kannada news ದಿನ-ಭವಿಷ್ಯ: 19 ಏಪ್ರಿಲ್, 2019!!

ದಿನ-ಭವಿಷ್ಯ: 19 ಏಪ್ರಿಲ್, 2019!!

ಮೇಷ:

ದಿನ ಭವಿಷ್ಯ

ಮೇಷ:- ನಿಮ್ಮ ಓದಿಗೆ ತಕ್ಕಂತೆ ನೌಕರಿ ದೊರೆಯುವುದು. ರಾಘವೇಂದ್ರ ಸ್ವಾಮೀ ಸ್ತೋತ್ರ ಪಠಿಸಿ. ಗುರು ಹಿರಿಯರ ಆಶೀರ್ವಾದ ಪಡೆಯಿರಿ. ಕೆಲಸ ಕಾರ್ಯಗಳು ನಿಮ್ಮ ಮನಸ್ಸಿನಂತೆ ನಡೆಯುವುದು.

ವೃಷಭ:

ದಿನ ಭವಿಷ್ಯ

ವೃಷಭ:- ನೆರೆಹೊರೆಯವರೊಂದಿಗೆ ಪ್ರೀತಿ-ವಿಶ್ವಾಸದಿಂದ ಇರಿ. ಅನಗತ್ಯ ವಿಷಯಗಳಲ್ಲಿ ಮೂಗು ತೂರಿಸಿ ಮನಸ್ತಾಪಕ್ಕೆ ಒಳಗಾಗುವಿರಿ. ನಿಮ್ಮ ಕೆಲಸ ಕಾರ್ಯಗಳಲ್ಲಿ ತಲ್ಲೀನತೆಯಿಂದ ಮಗ್ನರಾಗಿ. ಭಗವಂತನ ಆಶೀರ್ವಾದ ದೊರೆಯುವುದು.

ಮಿಥುನ:

ದಿನ ಭವಿಷ್ಯ

ಮಿಥುನ:- ನೆನೆಗುದಿಗೆ ಬಿದ್ದಿದ್ದ ಕೆಲಸ ಕಾರ್ಯಗಳಿಗೆ ಚಾಲನೆ ದೊರೆಯುವುದು. ನಿಮ್ಮ ಕಚೇರಿಯ ವಾತಾವರಣದಲ್ಲಿ ನಿಮ್ಮನ್ನು ಎಲ್ಲರೂ ಗೌರವಿಸುವರು. ಸರ್ಕಾರದಿಂದ ಬರಬೇಕಾಗಿದ್ದ ಹಣವು ಬರುವ ಸೂಚನೆ ದೊರೆಯುವುದು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಮನೆಯ ಕುಟುಂಬದ ಸದಸ್ಯರೊಡನೆ ತೀರ್ಥಯಾತ್ರೆ ಕೈಕೊಳ್ಳುವ ಸಾಧ್ಯತೆ ಇದೆ. ಪ್ರಯಾಣಕ್ಕೆ ಬೇಕಾದ ಸಕಲ ವಸ್ತುಗಳನ್ನು ಪಟ್ಟಿ ಮಾಡುವಿರಿ. ಬಂಧುಗಳಿಂದ ಹಣಕಾಸಿನ ನೆರವು ದೊರೆಯುವುದು.

ಸಿಂಹ:

ದಿನ ಭವಿಷ್ಯ

ಸಿಂಹ:- ಹಿರಿಯರಿಂದ ಸಿಗಬೇಕಾದ ಹಲವು ಆಸ್ತಿಗಳು ಹಾಗೂ ಉನ್ನತ ಮಾರ್ಗದರ್ಶನವು ತಮಗೆ ದೊರೆಯಲಿದೆ. ವಾಹನ ಸೌಕರ್ಯ ಉತ್ತಮವಾಗಿದ್ದು ಮನಸ್ಸು ಪ್ರಫುಲ್ಲತೆಯಿಂದ ಕೂಡಿರುವುದು. ಬರಬೇಕಾದ ಹಣ ಕೈಸೇರುವುದು.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಸಕಾರಾತ್ಮಕ ಚಿಂತನೆಗಳು ನಿಮ್ಮನ್ನು ಉತ್ತುಂಗ ಶಿಖರಕ್ಕೆ ಒಯ್ಯುವುದು. ಮನಸ್ಸಿಗೆ ಬೇಸರವಾಗುವ ಸಂಗತಿ ನಡೆಯುವ ಸಾಧ್ಯತೆ ಇದೆ. ಮನೋನಿಯಾಮಕ ರುದ್ರದೇವರನ್ನು ಭಜಿಸಿ. ಮಕ್ಕಳಿಂದ ಸುವಾರ್ತೆ ಕೇಳುವಿರಿ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ಕೆಲಸದ ಒತ್ತಡಗಳು ನಿದ್ದೆಯನ್ನು ಹಾಳು ಮಾಡುವ ಸಾಧ್ಯತೆ ಇರುತ್ತದೆ. ಸ್ನೇಹಿತರ ಜೊತೆಯಲ್ಲಿ ಅಥವಾ ಅನುಭವಿಗಳ ಹತ್ತಿರ ಕೆಲಸ ಕುರಿತು ಚರ್ಚಿಸುವುದರಿಂದ ಮನಸ್ಸಿಗೆ ಹಿತವೆನಿಸುವುದು.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ನಿಮ್ಮ ವ್ಯಾಪಾರ ವ್ಯವಹಾರಗಳು ಮಂದ ಪ್ರಗತಿಯಲ್ಲಿ ಸಾಗುವುದು. ಕೆಲಸದ ವಿಚಾರದಲ್ಲಿ ನಕಾರಾತ್ಮಕ ಚಿಂತೆಗಳು ಕಾಡುವುದು. ಆದರೂ ದೇವರ ಕೃಪೆಯಿಂದ ಕಾರ್ಯಗಳು ಸುಗಮವಾಗಿ ಆಗುವುದು.

ಧನಸ್ಸು:

ದಿನ ಭವಿಷ್ಯ

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಧನಸ್ಸು:- ನಿಮ್ಮ ಮೇಲೆ ಹೊರಿಸಲ್ಪಟ್ಟ ಜವಾಬ್ದಾರಿಯಿಂದ ಕಂಗೆಡುವಿರಿ. ಆದರೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋದಲ್ಲಿ ನಿಮಗೆ ಒಳಿತಾಗುವುದು. ಹಣಕಾಸಿನ ತೊಂದರೆ ಎದುರಾಗುವುದಿಲ್ಲ.

ಮಕರ:

ದಿನ ಭವಿಷ್ಯ

ಮಕರ:- ಕೆಲಸ ಕಾರ್ಯಗಳು ನಿಮಗೆ ಅಧಿಕ ಒತ್ತಡವನ್ನು ತರುವ ಸಾಧ್ಯತೆ ಇದೆ. ಆದರೆ ನೀವು ನಿಮ್ಮ ಕೈಕೆಳಗಿನವರನ್ನು ಪ್ರೀತಿ ವಿಶ್ವಾಸಗಳಿಂದ ನಡೆಸಿಕೊಂಡಲ್ಲಿ ನಿಮಗೆ ಒಳಿತೇ ಆಗುವುದು.

ಕುಂಭ:

ದಿನ ಭವಿಷ್ಯ

ಕುಂಭ:- ನಿಮ್ಮ ಹಿಂದೆ ಬಿದ್ದ ಕೆಲಸ ಕಾರ್ಯಗಳಿಗೆಲ್ಲ ಕ್ರಿಯಾಶೀಲತೆ ದೊರೆಯುವುದು. ಹಮ್ಮಿಕೊಂಡ ಕೆಲಸಗಳಲ್ಲಿ ಯಶಸ್ಸು ಪಡೆಯುವಿರಿ. ಗ್ರಹಗತಿ ಉತ್ತಮವಾಗಿದ್ದು, ಹಣಕಾಸಿನ ತೊಂದರೆ ಇರುವುದಿಲ್ಲ.

ಮೀನ:

ದಿನ ಭವಿಷ್ಯ

ಮೀನ:- ಹಣಕಾಸಿನ ಪರಿಸ್ಥಿತಿ ಉತ್ತಮವಾಗಿದ್ದು ಅದರಿಂದ ಮಕ್ಕಳ ಶಾಲೆಯ ಶುಲ್ಕವನ್ನು ತುಂಬುವಿರಿ. ಮನೆಯಲ್ಲಿ ಸಂಭ್ರಮದ ವಾತಾವರಣ ಮೂಡಲಿದೆ. ಆಪ್ತ ಗೆಳೆಯರು ಸಕಾಲದಲ್ಲಿ ಸಹಾಯ ಮಾಡುವರು.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ-ಭವಿಷ್ಯ: 19 ಏಪ್ರಿಲ್, 2019!!