ದಿನ ಭವಿಷ್ಯ 21 ಎಪ್ರಿಲ್ 2018!!

0
542
ದಿನ ಭವಿಷ್ಯ

ದಿನ ಭವಿಷ್ಯ| Daily horoscope in Kannada |
ದಿನ ಭವಿಷ್ಯ 21 ಎಪ್ರಿಲ್ 2018!!

Astrology in kannada | kannada news
ಮೇಷ:

ಜೀವನದಲ್ಲಿ ಹಿರಿಯ ಸ್ತ್ರೀಯರನ್ನು ಗೌರವದಿಂದ ಕಾಣಬೇಕು. ಇದರಿಂದಾಗಿ ನಿಮ್ಮ ವರ್ಚಸ್ಸು ಹೆಚ್ಚುವುದು ಮತ್ತು ಸಮಾಜದಲ್ಲಿ ಗೌರವವನ್ನು ಹೊಂದುವಿರಿ. ಗುರುವಿನ ಅನುಗ್ರಹ ಸಂಪಾದಿಸಲು ಗುರುಸ್ತೋತ್ರ ಪಠಿಸಿರಿ.

ವೃಷಭ:

ತೆರೆಮರೆಯ ಕಾಯಿಯಂತೆ ಇದ್ದ ನೀವು ಇಂದು ಸಮಾಜಮುಖಿ ಕೆಲಸಗಳಿಂದ ಸಮಾಜದಲ್ಲಿ ಗುರುತಿಸಿಕೊಳ್ಳುವಿರಿ. ಸಕಾರಾತ್ಮಕ ಚಿಂತನೆಯು ನಿಮ್ಮಿಂದ ಸರಿಯಾದ ಕೆಲಸವನ್ನು ಮಾಡಿಸುವುದು ಮತ್ತು ಅದರಲ್ಲಿ ಸಫಲತೆಯನ್ನು ಹೊಂದುವಿರಿ.

ಮಿಥುನ:

ವಾಹನದ ಸುಖ ಇದೆ. ಆದರೆ ವಾಹನ ಚಲಿಸುವಾಗ ವೇಗ ಮಿತಿಯನ್ನು ಅಳವಡಿಸಿಕೊಳ್ಳುವುದು ಮತ್ತು ಅದಕ್ಕೆ ಸೂಕ್ತ ದಾಖಲೆಗಳನ್ನು ವಾಹನದಲ್ಲಿ ಇಟ್ಟುಕೊಳ್ಳವುದು ಒಳಿತು. ಇಲ್ಲದಿದ್ದಲ್ಲಿ ಸರಕಾರಕ್ಕೆ ದಂಡ ತೆರಬೇಕಾಗುವುದು.

ಕಟಕ:

ಸಂಚರಿಸಿ ಮಾಡುವ ಕೆಲಸಗಳಿಂದ ಏಜೆನ್ಸಿ ವೃತ್ತಿ ಮತ್ತು ಟ್ರಾವೆಲ್ಸ್‌ ವಾಹನಗಳನ್ನು ಚಲಾಯಿಸುವವರಿಗೆ ಉತ್ತಮ ದಿನವಿದ್ದು ನೀವು ಬಯಸಿದ್ದಕ್ಕಿಂತ ಹೆಚ್ಚು ಲಾಭವಾಗುವ ಸಂಭವ ಇದೆ. ದುರ್ಗಾ ಜಪ ಮಾಡಿರಿ.

ಸಿಂಹ:

ವಿವಾಹ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ಬರುವುದು. ಕೆಲವರಿಗೆ ವಿವಾಹದ ಮಾತುಕತೆಯಲ್ಲಿ ಪ್ರಗತಿ ಕಂಡುಬರುವುದು. ಆದರೆ ಮಕ್ಕಳ ವಿದ್ಯಾಭ್ಯಾಸದಲ್ಲಿನ ಹಿನ್ನಡೆ ನಿಮ್ಮ ಮನಸ್ಸಿಗೆ ಘಾಸಿ ಮಾಡುವುದು.

ಕನ್ಯಾ:

ಸಣ್ಣ ವಿಷಯವನ್ನು ಕೂಡ ಭೂತ ಕನ್ನಡಿಯಿಂದ ನೋಡಿ ಪರೀಕ್ಷಿಸುವ ಮನಸ್ಥಿತಿಯಿರುವ ನೀವು ಕೆಲವೊಮ್ಮೆ ಉದಾರಿಗಳಾಗಬೇಕಿದೆ. ತಪ್ಪು ಮಾಡದ ಮನುಜ ಈ ಜಗತ್ತಿನಲ್ಲಿ ಇಲ್ಲ. ಹಾಗಾಗಿ ಇತರರು ಮಾಡುವ ತಪ್ಪಿಗೆ ಕ್ಷ ಮೆ ನೀಡಿರಿ.

ತುಲಾ:

ಕೆಲ ಗ್ರಹಗಳ ಅಶುಭ ಸಂಚಾರದಿಂದ ಬರುವ ಹಣಕಾಸು ಪೂರ್ಣವಾಗಿ ಬರುವುದಿಲ್ಲ. ಕಂತಿನ ರೂಪದಲ್ಲಿ ಹಣ ಬರುವ ಸಾಧ್ಯತೆ ಇದೆ. ಮನೆಯ ಯಂತ್ರೋಪಕರಣಗಳ ರಿಪೇರಿಗಾಗಿ ಹಣ ಖರ್ಚಾಗುವುದು.

ವೃಶ್ಚಿಕ:

ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿರುವವರಿಗೆ ಹೆಚ್ಚಿನ ಆದ್ಯತೆ ದೊರೆಯಲಿದೆ. ನಿಮ್ಮ ಮೂಲ ವಿಚಾರಧಾರೆಗಳಿಂದ ಹಿಂದೆ ಸರಿಯದಿರಿ. ದೈವ ಕೃಪೆ ಇದ್ದು ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿ ಎನಿಸಿಕೊಳ್ಳುವಿರಿ.

ಧನಸ್ಸು:

ಹಣ ಖರ್ಚಾಗುವ ಪರಿ ಕಂಡು ಆಶ್ಚರ್ಯವಾಗುವುದು. ದುಡಿದ ಹಣವು ಅನಾರೋಗ್ಯ ಸಲುವಾಗಿ ಖರ್ಚಾಗುವ ಸಾಧ್ಯತೆ ಇರುತ್ತದೆ. ಆದರೆ ಭಗವಂತನ ಕಾರ್ಯಗಳಿಗೆ ಮತ್ತು ದೀನದಲಿತರಿಗೆ ಸಹಾಯ ಮಾಡುವುದರಿಂದ ಪುಣ್ಯ ಸಂಚಯವಾಗುತ್ತದೆ.

ಮಕರ:

ಸದಾಕಾಲವು ರಜೆಯ ದಿನವಾಗಿರುವುದಿಲ್ಲ. ಹಾಗಾಗಿ ಈದಿನ ಕೆಲಸ, ಕಾರ್ಯಗಳನ್ನು ಮನಸು ಕೊಟ್ಟು ಮಾಡಿರಿ. ನಾಳೆಗಾಗಿ ಕೆಲಸವನ್ನು ಉಳಿಸಬೇಡಿ. ಮನಸ್ಸಿನ ಜಡತ್ವ ನಿವಾರಣೆಗಾಗಿ ಆಂಜನೇಯ ಸ್ತೋತ್ರ ಪಠಿಸಿರಿ.

ಕುಂಭ:

ಯಂತ್ರದ ಮೂಲಕ ಕಾರ್ಯ ನಿರ್ವಹಣೆಯು ನಿಮ್ಮ ಹೆಚ್ಚಿನ ಶ್ರಮವನ್ನು ಕಡಿಮೆ ಮಾಡುವುದು. ಈ ಹಿಂದೆ ನಡೆದ ಪರೀಕ್ಷೆಗಳಲ್ಲಿ ಉತ್ತೀರ್ಣತೆಯನ್ನು ಹೊಂದುವ ದೃಢ ವಿಶ್ವಾಸವನ್ನು ಹೊಂದುವಿರಿ. ದೈವ ಕೃಪೆ ಸಹಕಾರಿಯಾಗುವುದು.

ಮೀನ:

Meena1

ಆತ್ಮೀಯ ಗೆಳೆಯರು ನಿಮ್ಮಿಂದ ಕೆಲ ವಿಷಯ ತಿಳಿಯಲು ಕಾತುರರಾಗಿದ್ದಾರೆ. ಅವರಿಗೆ ನಿಮ್ಮ ವಿಚಾರಧಾರೆಗಳನ್ನು ತಿಳಿಸುವಿರಿ. ಇದರಿಂದ ಅವರು ಪ್ರಭಾವಿತರಾಗಿ ನಿಮ್ಮನ್ನು ಕೊಂಡಾಡುವರು.

ದಿನ ಭವಿಷ್ಯ|Daily horoscope | Astrology | Kannada News
Astrology in KannadaKannada Jyothishya 2017 | Vastu Shastra in Kannada | Astrology Prediction 2017