ದಿನ ಭವಿಷ್ಯ: 22 ಜೂನ್, 2019!!

0
212

Astrology in kannada | kannada news ದಿನ ಭವಿಷ್ಯ: 22 ಜೂನ್, 2019!!

ದಿನ ಭವಿಷ್ಯ: 22 ಜೂನ್, 2019!!

ಮೇಷ:

ದಿನ ಭವಿಷ್ಯ

ಮೇಷ:- ಸುಮ್ಮನೆ ನಿರೀಕ್ಷೆ ಇಟ್ಟುಕೊಂಡು ಕೂರುವುದಕ್ಕಿಂತ ಇತರೆ ಕಾರ್ಯಗಳಲ್ಲಿ ಮಗ್ನವಾಗುವುದು ಉತ್ತಮ. ತಾನು ಮಾಡುವುದು ಒಳ್ಳೆಯದು, ಮಗ ಮಾಡುವುದು ಹಾನಿ ಎಂಬ ಮಾತಿದೆ. ಹಾಗಾಗಿ ನೀವೇ ಖುದ್ದಾಗಿ ಕೆಲಸ ಕಾರ್ಯ ಮಾಡುವುದು ಒಳ್ಳೆಯದು.

ವೃಷಭ:

ದಿನ ಭವಿಷ್ಯ

ವೃಷಭ:- ಸಮುದ್ರದಲ್ಲಿ ಅಲೆಗಳು ಒಂದರ ಹಿಂದೆ ಮತ್ತೊಂದು ಬರುತ್ತಲೇ ಇರುತ್ತವೆ. ಅಲೆ ನಿಂತ ಮೇಲೆ ಸಮುದ್ರ ಸ್ನಾನ ಮಾಡುತ್ತೇನೆ ಎಂದರೆ ಆಗುವುದಿಲ್ಲ. ಆ ಅಲೆಗಳ ಮಧ್ಯೆಯೇ ಸ್ನಾನ ಮಾಡುವಂತೆ ನಿತ್ಯ ಜೀವನ ಜಂಜಾಟದ ನಡುವೆ ಭಗವಂತನನ್ನು ಆರಾಧಿಸುವುದು ಒಳ್ಳೆಯದು.

ಮಿಥುನ:

ದಿನ ಭವಿಷ್ಯ

ಮಿಥುನ:- ಕೇವಲ ಕೃತ್ರಿಮ ಮಾತುಗಳಿಂದಲೇ ನಿಮ್ಮನ್ನು ಹಣಿಯಲು ಕೆಲವರು ಕಾದಿರುವರು. ಇದರಿಂದ ಪಾರಾಗಲು ಮಾತಾ ದುರ್ಗಾದೇವಿಯ ಪ್ರಾರ್ಥನೆ ಮಾಡುವುದು ಒಳ್ಳೆಯದು. ಹಣಕಾಸಿನ ಸ್ಥಿತಿ ಸಾಧಾರಣವಾಗಿರುವುದು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಯಾಕಾದರೂ ಈ ಕೆಲಸಕ್ಕೆ ಕೈ ಹಾಕಿದೆನೋ ಎಂಬ ನಿರಾಸೆ ಬೇಡ. ದೈವದ ಅನುಗ್ರಹದಿಂದ ಸಿದ್ಧಿ ದೊರೆಯುವುದು. ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ನಿಮ್ಮ ಮನಸ್ಸಿಗೆ ಮುದ ನೀಡುವರು.

ಸಿಂಹ:

ದಿನ ಭವಿಷ್ಯ

ಸಿಂಹ:- ನೀವು ಪರೋಪಕಾರಿ ಎಂದು ಹಲವಾರು ಬಾರಿ ಸಾಬೀತಾದ ವಿಷಯ. ಅಂತೆಯೆ ನೀವು ಹಮ್ಮಿಕೊಳ್ಳುವ ಕೆಲಸ ಕಾರ್ಯಗಳಿಗೆ ಇತರರು ಸಹಕಾರ ನೀಡುವರು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಹೊಯ್ದಾಟದ ದಾರಿಗಳೇ ಎದುರಿಗೆ ಬಂದು ನಿಲ್ಲುತ್ತವೆ. ಗಟ್ಟಿ ಮನಸ್ಸಿನಿಂದ ಒಂದನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ಮನೋಕಾಮನೆಗಳು ಬೇಗನೆ ಕಾರ್ಯರೂಪಕ್ಕೆ ಬರುತ್ತವೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ಮನಸ್ಸಿನ ಸಂತಸವನ್ನು ನಿಯಂತ್ರಿಸಿಕೊಳ್ಳಿ. ಕೆಟ್ಟ ದೃಷ್ಟಿಯ ಜನ ಎಲ್ಲವನ್ನೂ ಹಾಳು ಮಾಡುವರು. ಶ್ರೀ ರಾಘವೆಂದ್ರ ಸ್ವಾಮಿಯನ್ನು ಮನಸಾ ಸ್ಮರಿಸಿ. ಕೆಲವು ವಿಚಾರಗಳಲ್ಲಿ ಸಹೋದರನ ಸಹಕಾರ ಬಯಸುವುದು ಒಳ್ಳೆಯದು.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:-ಸುಮ್ಮನೆ ಗಾಳಿಗೆ ಗುದ್ದಿ ಮೈ ನೋಯಿಸಿಕೊಳ್ಳದಿರಿ. ಧನಾತ್ಮಕ ಚಿಂತನೆಗಳಿಂದ ನಿಶ್ಚಿತ ಕಾರ್ಯಕ್ರಮಗಳನ್ನು ಹಾಕಿಕೊಳ್ಳಿ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.

ಧನಸ್ಸು:

ದಿನ ಭವಿಷ್ಯ

ಧನುಸ್ಸು:- ಮನೆಯ ಬಂಧುಬಾಂಧವರು ಇಲ್ಲವೆ ಆತ್ಮೀಯ ಸ್ನೇಹಿತರೆ ನಿಮ್ಮನ್ನು ವಿರೋಧಿಸುವರು. ದೈವಕೃಪೆಯಿಂದ ಎಲ್ಲವೂ ಒಳಿತಾಗುವುದು. ಬಡವರಿಗೆ ಆಹಾರ ಕೊಡಿ. ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಹರಿಸಿ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ಸಕಲ ಗ್ರಹಬಲ ನೀನೇ ಸರಸಿಜಾಕ್ಷ ಎಂಬಂತೆ ಸದಾ ಶ್ರೀಹರಿಯನ್ನು ನೆನೆಯಿರಿ. ಸದ್ಯದ ಪರಿಸ್ಥಿತಿಯಲ್ಲಿ ಭಗವಂತನೇ ನಿಮ್ಮ ಸಹಾಯಕ್ಕೆ ಬರುವರು. ವೃತ್ತಿಯಲ್ಲಿನ ಕಿರಿಕಿರಿ ನಿವಾರಣೆಗಾಗಿ ಮಾತಾ ದುರ್ಗಾದೇವಿಯನ್ನು ಸ್ಮರಿಸಿ.

ಕುಂಭ:

ದಿನ ಭವಿಷ್ಯ

ಕುಂಭ:- ಸಮೃದ್ಧಿಯ ದಿನಗಳನ್ನು ಕಂಡ ನಿಮಗೆ ತೊಳಲಾಟವಾಗುವುದು. ಆದರೂ ಧೈರ್ಯದಿಂದ ಎದುರಿಸಿ. ದೈವಕೃಪೆ ಅಪಾರವಾಗಿದ್ದು ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಮೀನ:

ದಿನ ಭವಿಷ್ಯ

ಮೀನ:- ನಿಮ್ಮ ಮುಂದೆ ನಿಮ್ಮಂತೆ ಮಾತನಾಡಿ ಹಿಂದುಗಡೆಯಿಂದ ನಿಮ್ಮ ಬಗ್ಗೆ ಕುಹಕ ಮಾತನಾಡುವ ಮಂದಿ ಬಗ್ಗೆ ಜಾಗೃತರಾಗಿ. ಸ್ವಂತ ಒಡಹುಟ್ಟಿದವರು ಇಲ್ಲವೆ ನಿಮ್ಮ ಮಕ್ಕಳೆ ಶತ್ರುಗಳಂತೆ ವರ್ತಿಸುವರು ತಾಳ್ಮೆ ಇರಲಿ..

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 22 ಜೂನ್, 2019!!