ದಿನ ಭವಿಷ್ಯ 22 ಮೇ, 2019!!

0
200

Astrology in kannada | kannada news ದಿನ ಭವಿಷ್ಯ 22 ಮೇ, 2019!!

ದಿನ ಭವಿಷ್ಯ 22 ಮೇ, 2019!!

ಮೇಷ:

ನಿಮ್ಮ ಇಚ್ಛಾಶಕ್ತಿಗೆ ಹೆಚ್ಚಿನ ಬಲ ಬರಲಿದೆ. ಅನೇಕ ಉತ್ತಮ ಕಾರ್ಯಗಳು ನಿಮ್ಮಿಂದ ನೆರವೇರಲ್ಪಡುವುದು. ಅಲ್ಲದೆ ಕೋರ್ಟು ಕಚೇರಿಯ ಕೆಲಸಗಳಲ್ಲಿ ಗೆಲುವು ನಿಮ್ಮದಾಗಲಿದೆ.

ವೃಷಭ:

ಅತ್ಯಂತ ಕ್ಲಿಷ್ಟಕರ ಸನ್ನಿವೇಶದಲ್ಲೂ ತಾಳ್ಮೆಯನ್ನು ಕಳೆದುಕೊಳ್ಳದೆ ಇರುವ ನಿಮ್ಮ ಗುಣವು ಬಂಧುಬಾಂಧವರಲ್ಲಿ ಅಚ್ಚರಿಯನ್ನು ಮೂಡಿಸುವುದು. ಅಂತೆಯೇ ನಿಮ್ಮ ತಾಳ್ಮೆಯೇ ಮಹತ್ತರ ಕೀರ್ತಿಯನ್ನು ತಂದುಕೊಡುವುದು.

ಮಿಥುನ:

ವಿನಾಕಾರಣ ಪರರ ವಿಷಯದಲ್ಲಿ ಭಾಗವಹಿಸದಿರಿ ಮತ್ತು ಕುತರ್ಕ, ಮುಂಗೋಪವನ್ನು ನಿಯಂತ್ರಿಸಿದಲ್ಲಿ ಹೆಚ್ಚು ಅನುಕೂಲವನ್ನು ಹೊಂದುವಿರಿ. ಗುರುವಿನ ಶುಭ ಸಂಚಾರದಿಂದ ಒಳಿತಾಗುವುದು.

Also read: ಮದುವೆಗೆ ಜಾತಕ ಪರೀಶಲನೆ ಎಷ್ಟು ಮುಖ್ಯ ಹಾಗೂ ಯಾವ ವಿಚಾರಗಳು ಸಂಬಂಧವನ್ನು ಗಟ್ಟಿ ಗೊಳಿಸುತ್ತವೆ ಅಂತ ತಿಳ್ಕೊಳ್ಳಿ..

ಕಟಕ:

ನಿಮ್ಮ ಕಾರ್ಯ ಯೋಜನೆಯನ್ನು ಕಾರ್ಯಗತಗೊಳಿಸಲು ಉತ್ತಮ ದಿನವಾಗಿದೆ. ಆಸ್ತಿ, ಮನೆಯ ವಿಚಾರದಲ್ಲಿ ಹೆಚ್ಚಿನ ಅನುಕೂಲ ಕಂಡುಬರುವುದು. ಮನೆಯ ಸ್ತ್ರೀಯರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.

ಸಿಂಹ:

ಹೊಸ ಆರ್ಥಿಕ ನೀತಿಯು ನಿಮಗೆ ಕೆಲವು ಕಳಂಕಗಳನ್ನು ತರುವ ಸಾಧ್ಯತೆ ಇರುತ್ತದೆ. ಇದರಿಂದ ನೀವು ಪರರಿಗೆ ಕೊಡಬೇಕಾಗಿರುವ ಹಣವು ಸಕಾಲದಲ್ಲಿ ದೊರೆಯದೆ ಇರುವುದರಿಂದ ವಿನಾಕಾರಣ ಟೀಕೆಗೆ ಒಳಗಾಗುವಿರಿ.

ಕನ್ಯಾ:

ಮನೆಯ ಹಿರಿಯರೊಬ್ಬರಿಂದ ನಿಮ್ಮ ಪೂರ್ವಿಕರ ಆಸ್ತಿಗೆ ಸಂಬಂಧಪಟ್ಟಂತೆ ಮಹತ್ವದ ಮಾಹಿತಿಯೊಂದು ನಿಮಗೆ ಲಭ್ಯವಾಗಲಿದೆ. ಇದರಿಂದ ನಿಮಗೆ ಅನುಕೂಲವೇ ಆಗುವುದು. ನಿಮ್ಮ ಮಹತ್ತರ ಆಸೆಯೂ ಕೈಗೂಡುವುದು.

Also read: ಈ ಎರಡು ರಾಶಿಯವರ ಪ್ರೇಮ ಜೀವನ ತುಂಬಾ ಸ್ಪೆಷಲ್ ಅಂತೆ, ನೀವು ಇದೆ ರಾಶಿಯವರ ನೋಡಿಕೊಳ್ಳಿ…

ತುಲಾ:

ಕೆಲಸ ಮಾಡುವ ಸ್ಥಳದಲ್ಲಿ ಮೇಲಧಿಕಾರಿಗಳ ಪ್ರಶಂಸೆಗೆ ಒಳಗಾಗುವಿರಿ. ಇದರಿಂದ ನಿಮ್ಮ ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಉತ್ಸಾಹ ಮೂಡುವುದು. ಸಂಗಾತಿಯ ಸಲಹೆ, ಸಹಕಾರಗಳನ್ನು ತಿರಸ್ಕರಿಸದಿರಿ.

ವೃಶ್ಚಿಕ:

ಮುಖ ನೋಡಿ ಮಣೆ ಹಾಕುವ ಮಂದಿಯು ನಿಮ್ಮ ಸುತ್ತಲಿರುವರು. ಅವರ ವರ್ತನೆಯು ನಿಮಗೆ ಬೇಸರವನ್ನುಂಟು ಮಾಡುವುದು. ಆದರೆ ಇದೆಲ್ಲವೂ ನಿಮ್ಮ ಜೀವನದಲ್ಲಿನ ಪರೀಕ್ಷೆಗಳು ಇದಕ್ಕೆ ಹೆದರುವ ಅವಶ್ಯಕತೆ ಇರುವುದಿಲ್ಲ.

ಧನಸ್ಸು:

ಅಧಿಕ ಆತ್ಮವಿಶ್ವಾಸದಿಂದ ಕಾರ್ಯ ಪ್ರವೃತ್ತರಾಗುವಿರಿ. ಹಾಗಾಗಿ ನಿಮ್ಮ ಕಾರ್ಯಗಳು ಮನಸ್ಸಿನಂತೆ ಕೈಗೂಡುವುದು. ನಿಮಗೆ ಬರಬೇಕಾದ ಹಣಕಾಸು ನಿಮ್ಮ ಕೈಸೇರುವುದು. ಪ್ರಯಾಣದಲ್ಲಿ ಎಚ್ಚರದಿಂದ ಇರಿ.

Also read: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಿನ್ನದ ಆಭರಣಗಳನ್ನು ಹೇಗೆ ಧರಿಸಬೇಕೆಂದು ನಿಮಗೆ ತಿಳಿದಿದೆಯೇ..?

ಮಕರ:

ಪ್ರಮುಖ ಕಾಗದ ಪತ್ರಗಳನ್ನು ಜೋಪಾನವಾಗಿಟ್ಟುಕೊಳ್ಳಿ. ಯಾವ ಕಾಲದಲ್ಲಿ ಆದರೂ ದಿಢೀರನೆ ತಪಾಸಣಾ ಅಧಿಕಾರಿಗಳು ನಿಮ್ಮ ಕಚೇರಿಗೆ ಬರುವ ಸಾಧ್ಯತೆ ಇರುತ್ತದೆ. ಕುಲದೇವರ ಸ್ಮರಣೆ ಹಾಗೂ ಹಿರಿಯರ ಅಶೀರ್ವಾದ ಪಡೆದು ಮನೆಯಿಂದ ಹೊರಡಿ.

ಕುಂಭ:

ಓದುವ ಹಾಗೂ ಪ್ರಾಧ್ಯಾಪಕರ ವೃತ್ತಿಯಲ್ಲಿ ಆಸಕ್ತಿ ಹೊಂದಿದ ಜನರಿಗೆ ಅನೇಕ ರೀತಿಯ ಪ್ರೋತ್ಸಾಹ ಲಭ್ಯವಾಗಲಿದೆ. ಮನೆಯ ಕಡೆಯಿಂದ ಉತ್ತಮ ವಿಚಾರಗಳು ಬರುವುದು. ವಿವಾಹ ಸಂಬಂಧ ಪ್ರಸ್ತಾಪ ಎದುರಾಗುವುದು.

ಮೀನ:

Meena1

ವಿನಾಕಾರಣವಾಗಿ ಅಪವಾದಗಳು ಎದುರಾಗುವ ಸಂಭವವಿದೆ. ಅತ್ಯಂತ ನಂಬುಗೆಗೆ ಪಾತ್ರರಾದ ಸ್ನೇಹಿತರು ಅಥವಾ ಬಂಧುಗಳು ನಿಮ್ಮನ್ನು ಸರಿಯಾಗಿ ಅಥೈರ್‍ಸಿಕೊಳ್ಳುವುದಿಲ್ಲ. ಹಣವಿಲ್ಲದವನನ್ನು ಯಾರೂ ಆದರಿಸುವುದಿಲ್ಲ. ಹಾಗಾಗಿ ಹಣ ಸಂಪಾದಿಸುವ ಕಲೆ ತಿಳಿಯಿರಿ.

Also read: ಭಾರತದ ಪೂರ್ವಜರ ವಿವಾಹ ಪದ್ದತಿಯ ಹಿಂದೆ ಇರುವ ವೈಜ್ಞಾನಿಕ ಅರ್ಥ ಗೊತ್ತಾದ್ರೆ, ಹೆಮ್ಮೆ ಆಶ್ಚರ್ಯ ಎರಡೂ ಆಗುತ್ತೆ!!

ದಿನ ಭವಿಷ್ಯ 22 ಮೇ, 2019!!