ದಿನ ಭವಿಷ್ಯ 23 ಏಪ್ರಿಲ್, 2019!!

0
487

Astrology in kannada | kannada news ದಿನ-ಭವಿಷ್ಯ: 23 ಏಪ್ರಿಲ್, 2019!!

ದಿನ-ಭವಿಷ್ಯ: 23 ಏಪ್ರಿಲ್, 2019!!

ಮೇಷ:

ದಿನ ಭವಿಷ್ಯ

ಮೇಷ:- ಅವಸರದ ಸ್ವಭಾವದಿಂದ ಉದ್ಯೋಗದಲ್ಲಿ ಅಡೆತಡೆ ಆಗುವ ಸಾಧ್ಯತೆ ಇದೆ. ಗಣಪತಿ ದೇವರ ಆರಾಧನೆ ಮಾಡುವುದರಿಂದ ಒಳಿತಾಗುವುದು. ಮಿತ್ರರ ಹಾಗೂ ಸಹೋದ್ಯೋಗಿಗಳ ನೆರವನ್ನು ಪಡೆದು ಕಾರ್ಯ ನಿರ್ವಹಿಸಿ.

ವೃಷಭ:

ದಿನ ಭವಿಷ್ಯ

ವೃಷಭ:- ಎಲ್ಲರಿಗೂ ಸುಲಭವಾದಂಥ ಕೆಲಸವನ್ನು ನೀವು ಕೈಗೆತ್ತಿಕೊಳ್ಳುವುದಿಲ್ಲ. ನಿಮ್ಮ ವಿಶಿಷ್ಟವಾದ ಸ್ವಭಾವವೇ ಅಂತಹದು. ಯಾರೂ ಮಾಡಲಾಗದ್ದನ್ನು ಮಾಡಿ ತೋರಿಸುವ ತವಕ. ಆದರೆ ಅಂತಹ ಸಾಹಸಕ್ಕೆ ಕೈಹಾಕದಿರಿ.

ಮಿಥುನ:

ದಿನ ಭವಿಷ್ಯ

ಮಿಥುನ:- ಬಹು ದಿನದ ಕನಸು ನನಸಾಗುವ ದಿನ. ಹಾಗಾಗಿ ಮನಸ್ಸು ಪ್ರಫುಲ್ಲತೆಯಿಂದ ಕೂಡಿರುವುದು. ವಿವಿಧ ಮೂಲಗಳಿಂದ ಹಣಕಾಸು ಬರುವುದು. ಬಂಧುಗಳ ಜತೆಯಲ್ಲಿ ಉತ್ತಮ ಬಾಂಧವ್ಯ ವೃದ್ಧಿಸುವುದು.

Also read: ಸಂಖ್ಯಾಶಾಸ್ತ್ರದ ಪ್ರಕಾರ ನಿಮ್ಮ ನಕ್ಷತ್ರ ಮತ್ತು ರಾಶಿಗೆ ಹೊಂದಿಕೊಳ್ಳುವ ಶುಭ ಸಂಖ್ಯೆ ಯಾವುದೆಂದು ತಿಳಿದುಕೊಳ್ಳಿ…!!

ಕಟಕ:

ದಿನ ಭವಿಷ್ಯ

ಕಟಕ:- ತೀರಾ ಒತ್ತಡ ತರುವ ಕೆಲಸವೊಂದು ನಿಮಗೆ ಗಂಟು ಬೀಳುತ್ತದೆ. ಅದು ನಿಮ್ಮನ್ನು ಹೈರಾಣ ಮಾಡುವ ಸಾಧ್ಯತೆ ಇದೆ. ದೇವಿ ಮಂದಿರದಲ್ಲಿ ಪ್ರಾರ್ಥನೆ ಮಾಡಿ. ಹೆಣ್ಣುಮಕ್ಕಳಿಗೆ ಸಿಹಿ ಹಂಚಿ.

ಸಿಂಹ:

ದಿನ ಭವಿಷ್ಯ

ಸಿಂಹ:- ಸುಲಭವೆಂದು ತಿಳಿದ ಹಾದಿಯೇ ಹಠಾತ್ತನೆ ಕಗ್ಗಂಟಿನ ಕಿರಿಕಿರಿಯಾಗಿ ತಾಪತ್ರಯಕ್ಕೆ ಕಾರಣವಾಗುವುದು. ನಿಮ್ಮ ವಿರುದ್ಧ ಹಿಂದಿನಿಂದ ಕಾರ್ಯಾಚರಣೆಗೆ ತೊಡಗುತ್ತಾರೆ. ಆದರೆ ಅವರು ಮುಂದೆ ನಿಂತು ಹೋರಾಡುವ ಧೈರ್ಯವಂತರಲ್ಲ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ವಿಶೇಷ ಜವಾಬ್ದಾರಿಯೊಂದಿಗೆ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮುಖ್ಯವಾದ ಹುದ್ದೆಯನ್ನು ಪಡೆಯಲು ನಿಮಗೆ ಅವಕಾಶವಿದೆ. ಇದರಿಂದ ನೀವು ಜನಾನುರಾಗಿಯಾಗುವಿರಿ. ಆದರೆ ವೈಯಕ್ತಿಕ ವಿಚಾರದಲ್ಲಿ ಹಾನಿ ಉಂಟಾಗಲಿದೆ.

Also read: ಯಾವ ನಕ್ಷತ್ರ ಕ್ಕೆ ಯಾವ ಅಕ್ಷರದ ಹೆಸರು?? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್

ತುಲಾ:

ದಿನ ಭವಿಷ್ಯ

ತುಲಾ:- ನಿಮಗೆ ಈಗಿರುವ ಕೆಲಸಗಳೇ ಬೆಟ್ಟದಷ್ಟಿವೆ. ಇದರ ಮಧ್ಯೆ ಸುಮ್ಮನೇ ಬೇಡವಾದ ಹೊರೆ ಹೊರಲು ಮುಂದಾಗದಿರಿ. ದುರ್ಗಾದೇವಿ ಆರಾಧನೆ ಮಾಡಿ. ಸಾಧ್ಯವಾದರೆ ಸ್ವಲ್ಪ ಅವರೇಕಾಳನ್ನು ದಾನ ಮಾಡಿ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಕೆಲಸ ಕಾರ್ಯಗಳು ಮೇಲ್ನೋಟಕ್ಕೆ ಒಳಿತಿಗೆ ದಾರಿ ಉಂಟು ಮಾಡುವುದು ಎಂದು ತೋರಿದರೂ ಪೂರ್ಣಪ್ರಮಾಣದಲ್ಲಿ ಅದು ನಿಮಗೆ ನಿರಾಸೆಯನ್ನುಂಟು ಮಾಡುವುದು. ಹಾಗಾಗಿ ಗುರುವನ್ನು ಧ್ಯಾನಿಸದೆ ಬೇರೆ ದಾರಿ ಇಲ್ಲ.

ಧನಸ್ಸು:

ದಿನ ಭವಿಷ್ಯ

ಧನಸ್ಸು:- ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು ಎಂಬಂತೆ ದ್ವಿತೀಯ ವಾಕ್‌ ಸ್ಥಾನದ ಶನಿ ಕೆಲವೊಂದು ಅಪಶಬ್ದವನ್ನು ಆಡಿಸಿ ನಿಮ್ಮ ಗೌರವಕ್ಕೆ ಚ್ಯುತಿ ತರುವಂತೆ ಮಾಡುವ ಸಾಧ್ಯತೆ ಇದೆ. ಎಚ್ಚರದಿಂದ ಇರಿ.

Also read: ಯಾವ ಯಾವ ನಕ್ಷತ್ರ ಯಾವ ರಾಶಿಗಳಿಗೆ ಬರುತ್ತದೆ ಎಂಬ ವಿವರ ಇಲ್ಲಿದೆ ನೋಡಿ..

ಮಕರ:

ದಿನ ಭವಿಷ್ಯ

ಮಕರ:- ನಿಮ್ಮ ವೈಯಕ್ತಿಕ ಕೆಲಸಗಳು ಮುಗಿದ ಮೇಲೆ ಇತರರ ಕೆಲಸ ಕೈಗೆತ್ತಿಕೊಳ್ಳಿ. ಎರಡು ದೋಣಿಯ ಪ್ರಯಾಣ ಶುಭವಲ್ಲ. ಅಪಾಯವನ್ನು ಎದುರಿಸುವ ಸಾಧ್ಯತೆ ಇದೆ. ಕುಲದೇವತಾ ಆರಾಧನೆ ಮಾಡಿ.

ಕುಂಭ:

ದಿನ ಭವಿಷ್ಯ

ಕುಂಭ:- ಅತಿಯಾದ ಆತ್ಮವಿಶ್ವಾಸ ಕೆಲವೊಮ್ಮೆ ಹಾನಿಯನ್ನುಂಟು ಮಾಡುವುದು. ತಕ್ಕದಾದ ನಿಲುವಿನೊಂದಿಗೆ ಮುಂದಾಗಿರಿ. ಇದರಿಂದ ಒಳಿತಾಗುವುದು ಮತ್ತು ನೆರೆಹೊರೆಯವರ ಪ್ರೀತಿಗೆ ಪಾತ್ರರಾಗುವಿರಿ.

ಮೀನ:

ದಿನ ಭವಿಷ್ಯ

ಮೀನ:- ಮಾತು ಕಡಿಮೆ ಕೆಲಸ ಜಾಸ್ತಿ ಎಂಬಂತೆ ನಿಮ್ಮ ಕೆಲಸ ಕಾರ್ಯಗಳೇ ನಿಮ್ಮನ್ನು ಗೌರವಾನ್ವಿತ ವ್ಯಕ್ತಿ ಎಂದು ಗುರುತಿಸುವುದು. ಏನೇ ಕಷ್ಟ ಇದ್ದರೂ ಮುಖದಲ್ಲಿ ನಗು ಇರಲಿ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ-ಭವಿಷ್ಯ: 23 ಏಪ್ರಿಲ್, 2019!!