ದಿನ ಭವಿಷ್ಯ 23 ಮೇ, 2019!!

0
380

Astrology in kannada | kannada news ದಿನ ಭವಿಷ್ಯ 23 ಮೇ, 2019!!

ದಿನ ಭವಿಷ್ಯ 23 ಮೇ, 2019!!

ಮೇಷ:

ನಿಮ್ಮ ಪಾಡಿಗೆ ನೀವಿದ್ದರೂ ನಿಮ್ಮನ್ನು ಮಾತನಾಡಿಸಿ ತಪ್ಪು ಹುಡುಕುವ ಮಂದಿಯಿಂದ ಈ ದಿನ ಎಚ್ಚರದಿಂದಿರಿ. ಆದಷ್ಟು ಈ ದಿನ ಮೌನವಾಗಿದ್ದು ರಾಯರ ಆರಾಧನೆ ಮಾಡಿರಿ.

ವೃಷಭ:

ಹಿರಿಯರ ಆಶೀರ್ವಾದದಿಂದ ಈ ದಿನ ನಿಮ್ಮ ಕಾರ್ಯಗಳು ಕೈಗೂಡುವವು. ಹಾಗಾಗಿ ಹಿರಿಯರ ಸಹಾಯವನ್ನು ಕಡೆಗಣಿಸದಿರಿ.

ಮಿಥುನ:

ಕುಟುಂಬ ಕಲಹದಿಂದ ಮನಸ್ಸಿಗೆ ಅಶಾಂತಿ ಉಂಟಾಗುವುದು. ಹಿರಿಯರ ಮಧ್ಯಸ್ಥಿಕೆಯಿಂದ ಕಲಹವು ಶಮನಗೊಳ್ಳುವುದು. ಪತಿ-ಪತ್ನಿಯರು ಈ ದಿನ ಶಿವನ ದೇವಾಲಯಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿರಿ.

Also read: ಮದುವೆಗೆ ಜಾತಕ ಪರೀಶಲನೆ ಎಷ್ಟು ಮುಖ್ಯ ಹಾಗೂ ಯಾವ ವಿಚಾರಗಳು ಸಂಬಂಧವನ್ನು ಗಟ್ಟಿ ಗೊಳಿಸುತ್ತವೆ ಅಂತ ತಿಳ್ಕೊಳ್ಳಿ..

ಕಟಕ:

ಪರಾಕ್ರಮ ಕೆಲಸಗಳು ಸುಸೂತ್ರವಾಗಿ ನಡೆಯುವುದು. ಆದಾಗ್ಯೂ ನಿಮ್ಮ ಎದುರಾಳಿಗಳು, ಪ್ರತಿಸ್ಪರ್ಧಿಗಳು ತಲೆನೋವಿಗೆ ಕಾರಣರಾಗುತ್ತಾರೆ.

ಸಿಂಹ:

ನಿಮ್ಮ ಎಲ್ಲಾ ಕಾರ್ಯಗಳು ಸುಗಮವಾಗಿ ಸಾಗುವವು. ಆದರೆ ನಿಮ್ಮ ಕಠೋರ ಮಾತು ಇತರೆಯವರನ್ನು ಘಾಸಿಗೊಳಿಸುವುದು. ಇದರಿಂದಾಗಿ ಅವರು ಹಣಕಾಸಿನ ವ್ಯವಹಾರದಲ್ಲಿ ಸಂಶಯ ತಾಳುವರು.

ಕನ್ಯಾ:

ಕೈ ಧಾರಾಳತನವಿರುವ ನೀವು ಇಂದಿನಿಂದ ಹಣ ಕೂಡಿಡುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು. ಏಕೆಂದರೆ ನಿಮ್ಮ ಆಪತ್‌ ಕಾಲದಲ್ಲಿ ಯಾರೂ ನಿಮಗೆ ಸಹಾಯ ಮಾಡುವುದಿಲ್ಲ.

Also read: ಈ ಎರಡು ರಾಶಿಯವರ ಪ್ರೇಮ ಜೀವನ ತುಂಬಾ ಸ್ಪೆಷಲ್ ಅಂತೆ, ನೀವು ಇದೆ ರಾಶಿಯವರ ನೋಡಿಕೊಳ್ಳಿ…

ತುಲಾ:

ನಿಮಗೆ ವಹಿಸಿದ ಕಾರ್ಯವನ್ನು ಶ್ರದ್ಧೆಯಿಂದ ಮಾಡಿರಿ. ಇದರಿಂದ ನಿಮ್ಮ ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ. ಹಣಕಾಸು ಕೂಡಾ ನಿಮಗೆ ಸಕಾಲದಲ್ಲಿ ಒದಗಿ ಬರುವುದು.

ವೃಶ್ಚಿಕ:

ದ್ವಿತೀಯ ವಾಕ್‌ ಸ್ಥಾನದಲ್ಲಿ ಸಂಚರಿಸುವ ಸಂದರ್ಭದಲ್ಲಿ ಮಾತಿನಿಂದ ಸಮಸ್ಯೆಗಳು ಎದುರಾಗುವುದು. ಹಾಗಾಗಿ ಈ ದಿನ ಎಚ್ಚರಿಕೆ ಅಗತ್ಯ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.

ಧನಸ್ಸು:

ತಣ್ಣೀರನ್ನು ಆರಿಸಿ ಕುಡಿಯುವ ಕಾಲವಿದು. ಹಾಗಾಗಿ ನಿಮ್ಮ ಎದುರಾಳಿಯು ಆಡಿದ ಮಾತಿಗೆ ತಕ್ಷ ಣವೇ ಪ್ರತಿಕ್ರಿಯಿಸುವುದು ಈ ದಿನ ಸೂಕ್ತವಲ್ಲ. ಹಾಗಾಗಿ ಇದು ನಿಮ್ಮ ಸೋಲಲ್ಲ. ಸೋತಂತೆ ನಟಿಸಿ ಗೆಲ್ಲಲು ಪ್ರಯತ್ನಿಸಿ.

Also read: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಿನ್ನದ ಆಭರಣಗಳನ್ನು ಹೇಗೆ ಧರಿಸಬೇಕೆಂದು ನಿಮಗೆ ತಿಳಿದಿದೆಯೇ..?

ಮಕರ:

ಗುರು ಕೃಪೆಯಿಂದ ಪಡೆದ ಹಣವು ಶನಿಯ ವ್ಯಯಸ್ಥಾನದ ಸಂಚಾರದಿಂದಾಗಿ ವೃಥಾ ಸರ್ಕಾರಕ್ಕೆ ದಂಡ ತೆರುವ ಮೂಲಕ ಖರ್ಚಾಗುವುದು. ಸಂಚಾರ ನಿಯಮ ಪಾಲಿಸಿ ಮತ್ತು ಸೂಕ್ತ ದಾಖಲೆಗಳನ್ನು ಇಟ್ಟುಕೊಳ್ಳಿ.

ಕುಂಭ:

ವ್ಯಾಪಾರ-ವ್ಯವಹಾರಸ್ಥರಿಗೆ ಸಾಧಾರಣ ಫಲ ಕಂಡು ಬರುವುದು. ಕೃಷಿಕರಿಗೆ ಸರ್ಕಾರದ ಧನ ಸಹಾಯ ದೊರೆಯುವುದು. ಮನೆಯ ಇತರೆ ಕಾರ್ಯಗಳು ಮಂದಗತಿಯಿಂದ ಸಾಗುವುದು.

ಮೀನ:

Meena1

ರಾಜಕೀಯ ನೇತಾರರಿಗೆ ಗುರುವಿನ ರಕ್ಷೆ ಇರುವುದರಿಂದ ಸಮಾಜದಲ್ಲಿ ನಿಮ್ಮ ಮಾತಿಗೆ ಬೆಲೆ ಬರುವುದು. ಸಂಘಸಂಸ್ಥೆಗಳ ಚುನಾವಣೆಗಳಲ್ಲಿ ಯಶಸ್ಸನ್ನು ಹೊಂದುವಿರಿ. ಇದರಿಂದ ಜನಪ್ರಿಯತೆ ಹೆಚ್ಚುವುದು.

Also read: ಭಾರತದ ಪೂರ್ವಜರ ವಿವಾಹ ಪದ್ದತಿಯ ಹಿಂದೆ ಇರುವ ವೈಜ್ಞಾನಿಕ ಅರ್ಥ ಗೊತ್ತಾದ್ರೆ, ಹೆಮ್ಮೆ ಆಶ್ಚರ್ಯ ಎರಡೂ ಆಗುತ್ತೆ!!

ದಿನ ಭವಿಷ್ಯ 23 ಮೇ, 2019!!