ದಿನ ಭವಿಷ್ಯ: 8 ಜೂನ್, 2019!!

0
449

Astrology in kannada | kannada news ದಿನ ಭವಿಷ್ಯ: 8 ಜೂನ್, 2019!

ದಿನ ಭವಿಷ್ಯ: 8 ಜೂನ್, 2019!

ಮೇಷ:

ದಿನ ಭವಿಷ್ಯ

ಮೇಷ:- ಕೈಕೊಂಡ ಕಾರ್ಯಗಳು ನಿಧಾನ ಗತಿಯಲ್ಲಿ ಸಾಗಿದರೂ ಅಂತಿಮವಾಗಿ ಯಶಸ್ಸನ್ನು ತಂದು ಕೊಡುತ್ತದೆ. ವ್ಯಾಪಾರದಲ್ಲಿನ ನಷ್ಟ ಸರಿದೂಗಿಸಿಕೊಳ್ಳುವ ಚಾಣಾಕ್ಷ ತನ ಇಂದು ನಿಮಗೆ ಬರುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

ವೃಷಭ:

ದಿನ ಭವಿಷ್ಯ

ವೃಷಭ:- ಧಾರ್ಮಿಕ ಕ್ರಿಯೆಗಳಿಂದ ಮನಸ್ಸಿಗೆ ಸಮಾಧಾನವಾಗುವುದು. ಅಲ್ಪ ಪ್ರವಾಸದಿಂದ ಹೆಚ್ಚಿನ ಪ್ರಯೋಜನ ಪಡೆಯುವಿರಿ. ಪ್ರಯಾಣದಲ್ಲಿ ಸಹ ಪ್ರಯಾಣಿಕರೊಂದಿಗೆ ನಿಮ್ಮ ವೈಯಕ್ತಿಕ ವಿಷಯಗಳನ್ನು ಚರ್ಚಿಸದಿರಿ.

ಮಿಥುನ:

ದಿನ ಭವಿಷ್ಯ

ಮಿಥುನ:- ಮರೆಗುಳಿತನದಿಂದ ಭಾರಿ ಬೆಲೆ ತೆರಬೇಕಾಗುವುದು. ಹಾಗಾಗಿ ನೀವು ಕೈಕೊಳ್ಳಬೇಕಾಗಿರುವ ಕೆಲಸಗಳನ್ನು ಆದ್ಯತೆಯ ಪ್ರಕಾರ ಪಟ್ಟಿ ಮಾಡಿ ಬರೆದಿಟ್ಟುಕೊಳ್ಳಿರಿ. ಇದರಿಂದ ಕೆಲಸ ಮಾಡಲು ಅನುಕೂಲವಾಗುವುದು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಇವತ್ತು ಬುದ್ಧಿವಂತ ಜನರ ನಡುವೆ ಒಡನಾಟ ದೊರೆಯುವುದು. ಹಾಗೂ ಕೆಲವು ಮಹತ್ತರ ವಿಷಯಗಳನ್ನು ಅರಿಯುವಿರಿ. ಹಾಗಾಗಿ ವರ್ತಮಾನದಲ್ಲಿ ಸುಖ ಸಂತೋಷ ನೆಮ್ಮದಿಯನ್ನು ಕಾಣುವಿರಿ.

ಸಿಂಹ:

ದಿನ ಭವಿಷ್ಯ

ಸಿಂಹ:- ಧೈರ್ಯಂ ಸರ್ವತ್ರ ಸಾಧನಂ ಎಂದರು ಹಿರಿಯರು. ಧೈರ್ಯಗೆಡದೆ ಮುನ್ನಡೆಯಿರಿ. ಅಡಚಣೆಗಳು ತಾನಾಗಿಯೇ ದೂರವಾಗುವುದು. ಹಣಕಾಸಿನ ಸ್ಥಿತಿಯು ಉತ್ತಮವಾಗಿರುವುದು.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ದೂರದ ಊರಿನಲ್ಲಿ ವಾಸಿಸುವ ಯೋಗವಿರುತ್ತದೆ. ಸಭೆ ಸಮಾರಂಭಗಳಲ್ಲಿ ಭಾಗವಹಿಸುವಿರಿ. ನಿಮ್ಮ ಜ್ಞಾನದ ಮಟ್ಟ ಪರೀಕ್ಷಿಸುವ ಸಂದರ್ಭ ಬರಬಹುದು. ನಿಮಗೆ ವಿದ್ಯೆ ಕಲಿಸಿದ ಗುರುಗಳ ಸ್ಮರಣೆ ಮಾಡಿಕೊಂಡು ಉತ್ತರಿಸಿ. ಜಯಶೀಲರಾಗುವಿರಿ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ಆರ್ಥಿಕವಾಗಿ ಅಲ್ಪ ಅನನುಕೂಲವಾದರೂ ಹಮ್ಮಿಕೊಂಡ ಕಾರ್ಯಗಳನ್ನು ಪೂರೈಸಲು ತೊಂದರೆ ಆಗುವುದಿಲ್ಲ. ಆರಂಭಿಸಿದ ಕೆಲಸಗಳು ಸುಸೂತ್ರವಾಗಿ ಪೂರ್ಣಗೊಳ್ಳುವವು. ಮಕ್ಕಳೊಂದಿಗೆ ಬೆರೆತು ಮನಸ್ಸು ಹಗುರ ಮಾಡಿಕೊಳ್ಳಿರಿ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಸ್ನೇಹಿತರು ಆಡುವ ಮಾತುಗಳಿಂದ ನಿಮಗೆ ಬೇಸರ ಮೂಡುವುದು ಸಹಜ. ಆದರೆ ಆ ಮಾತುಗಳ ಹಿಂದಿನ ರಹಸ್ಯವನ್ನು ಅರಿಯಿರಿ. ಆಗ ಮನಸ್ಸು ನಿರಾಳವಾಗುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.

ಧನಸ್ಸು:

ದಿನ ಭವಿಷ್ಯ

ಧನುಸ್ಸು:- ಹಿರಿಯರ ಮಾತನ್ನು ಧಿಕ್ಕರಿಸಿ ಹಮ್ಮಿಕೊಂಡ ಕಾರ್ಯದಲ್ಲಿ ಅಪಯಶಸ್ಸನ್ನು ಹೊಂದುವಿರಿ. ದೇಹಾಲಸ್ಯವಿದ್ದರೆ ವಿಶ್ರಾಂತಿ ಪಡೆಯಿರಿ. ನಿಮ್ಮ ಕೋಪತಾಪಗಳನ್ನು ಮಡದಿ ಮಕ್ಕಳ ಮೇಲೆ ಹಾಕದಿರಿ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ಬಹುಕಾಲದಿಂದ ಬರಬೇಕಾಗಿದ್ದ ಹಣವು ನಿಮ್ಮ ಕೈಸೇರುವುದು. ನಿಮ್ಮ ಮಾತಿನ ವೈಖರಿಯಿಂದ ಕಚೇರಿಯ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುವುದು. ಇದು ನಿಮ್ಮ ಸ್ನೇಹಿತರಿಗೆ ಅಚ್ಚರಿಯನ್ನುಂಟು ಮಾಡುವುದು.

ಕುಂಭ:

ದಿನ ಭವಿಷ್ಯ

ಕುಂಭ:- ನಿಮ್ಮ ವೃತ್ತಿಯು ಸರಾಗವಾಗಿ ನಡೆಯುವುದು. ಪ್ರವೃತ್ತಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳುವುದು ಒಳಿತು. ವಿವೇಕಯುಕ್ತ ನಿರ್ಣಯ ಕೈಗೊಳ್ಳುವುದರಿಂದ ಸಮಾಜದಲ್ಲಿ ಗೌರವ ಮೂಡುವುದು.

ಮೀನ:

ದಿನ ಭವಿಷ್ಯ

ಮೀನ:- ಯಾವುದೇ ಋುಣಾತ್ಮಕ ವಿಚಾರಗಳಿಗೆ ಕಿವಿಗೊಡದಿರುವುದು ಒಳಿತು. ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಿರಿ. ನೀವು ಆಡುವ ಮಾತು ಪರರನ್ನು ನೋಯಿಸದಂತೆ ನೋಡಿಕೊಳ್ಳಿರಿ. ಸಮಾಜದಲ್ಲಿ ನಿಮ್ಮ ಸ್ಥಾನಮಾನಕ್ಕೆ ಚ್ಯುತಿ ಇರುವುದಿಲ್ಲ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 8 ಜೂನ್, 2019!