ದಿನ ಭವಿಷ್ಯ: 01 ಜುಲೈ, 2019!!

0
233

Astrology in kannada | kannada news ದಿನ ಭವಿಷ್ಯ: 01 ಜುಲೈ, 2019!!

ದಿನ ಭವಿಷ್ಯ: 01 ಜುಲೈ, 2019!!

ಮೇಷ:

ದಿನ ಭವಿಷ್ಯ

ಮೇಷ: ನೀವು ಹಮ್ಮಿಕೊಂಡಿರುವ ಕಾರ್ಯಗಳು ಜನಮನ್ನಣೆ ಗಳಿಸುವವು. ಇದರಿಂದ ಸಾಮಾಜಿಕ ವಾಗಿ ಮತ್ತು ಧಾರ್ಮಿಕವಾಗಿ ಗುರುತಿಸಿ ಕೊಳ್ಳುವಿರಿ. ನಿಮ್ಮನ್ನು ಭಾವಿ ನಾಯಕನೆಂದು ಗುರುತಿಸಿ ಗೌರವಿಸುವ ಸಂದರ್ಭ ಎದುರಾಗುವುದು. ಬಂದ ಅವಕಾಶಗಳನ್ನು ಉಪಯೋಗಿಸಿಕೊಳ್ಳಿ.

ವೃಷಭ:

ದಿನ ಭವಿಷ್ಯ

ವೃಷಭ: ನಿಮ್ಮ ಮೇಲೆ ಕೆಲ ಗ್ರಹಗಳ ಪ್ರಭಾವ ಹಲವು ರೀತಿಯಲ್ಲಿ ಆಗುವ ಸಾಧ್ಯತೆ ಇದೆ. ವಾಹನಗಳನ್ನು ಓಡಿಸುವಾಗ ಕಟ್ಟೆಚ್ಚರ ಪಾಲಿಸುವುದು ಒಳ್ಳೆಯದು. ಪ್ರಯಾಣ ಮಾಡುವಾಗ ಮೊಬೈಲ್‌ ಉಪಯೋಗಿಸದೆ ಇರುವುದು ಒಳ್ಳೆಯದು.

ಮಿಥುನ:

ದಿನ ಭವಿಷ್ಯ

ಮಿಥುನ: ದೂರ ಊರುಗಳ ಅಥವಾ ದೂರ ದೇಶದ ಪ್ರಯಾಣದ ಕುರಿತು ಚಿಂತಿಸುತ್ತಿದ್ದರೆ ವೀಸಾ ಅನುಮತಿಗಾಗಿ ಅರ್ಜಿ ಹಾಕಿಕೊಳ್ಳುವುದು ಒಳ್ಳೆಯದು. ದೈವಕೃಪೆಯಿಂದ ನಿಮ್ಮ ಕೆಲಸಗಳು ಸುಗಮವಾಗುವವು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ: ಮತ್ತೊಮ್ಮೆ ನಿಮ್ಮ ಬುದ್ಧಿಚಾತುರ‍್ಯ ಪ್ರದರ್ಶನವಾಗುವುದು. ಇದರಿಂದ ನಿಮ್ಮ ಮೇಲಧಿಕಾರಿಗಳು ಸಂತುಷ್ಟರಾಗುವರು. ನಿಮಗೆ ಸರ್ಕಾರದಿಂದ ಬರಬೇಕಾಗಿದ್ದ ಸೌಲಭ್ಯಗಳು ಬೇಗನೆ ಬರುವಂತೆ ಒತ್ತಡ ತರುವರು.

ಸಿಂಹ:

ದಿನ ಭವಿಷ್ಯ

ಸಿಂಹ: ‘ಮನೆಗೆದ್ದು ಮಾರುಗೆಲ್ಲು’ ಎನ್ನುವರು. ಅಂತೆಯೇ ಮನೆಯ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಲ್ಲಿ ಅತ್ಯಂತ ಆನಂದದಿಂದ ಬಾಳುವಿರಿ. ಮನಸ್ಸಿನ ದುಗುಡಗಳು ಕಾಣೆ ಆಗುವವು. ಕುಲದೇವರನ್ನು ಭಜಿಸಿ.

ಕನ್ಯಾ:

ದಿನ ಭವಿಷ್ಯ

ಕನ್ಯಾ: ತುಂಬಾ ಎಚ್ಚರಿಕೆಯಿಂದ ಸಂಘಟನೆಯನ್ನು ನಡೆಸಿ. ಇದರ ಮುಂದಾಳತ್ವ ನೀವೇ ಇಟ್ಟುಕೊಳ್ಳುವುದು ಒಳ್ಳೆಯದು. ಇದರಿಂದ ಜನರು ಸಂತಸಗೊಂಡು ನಿಮ್ಮನ್ನು ಆದರಿಸಿ ಗೌರವ ತೋರುವರು. ಆಹಾರ, ವಿಹಾರದಲ್ಲಿ ನಿಯಮ ಕಾಪಾಡಿ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ: ಕುಟುಂಬದ ಹಿರಿಯ ಸದಸ್ಯರ ನಿರೀಕ್ಷೆಗೆ ವಿರುದ್ಧವಾಗಿ ನಿಮ್ಮ ಜೀವನ ಕ್ರಮವನ್ನು ಅನುಸರಿಸದಿರಿ. ಹೀಗೆ ಮಾಡಿದಲ್ಲಿ ವಿನಾಕಾರಣ ನೀವು ನಿಷ್ಠುರಕ್ಕೆ ಒಳಗಾಗುವಿರಿ ಮತ್ತು ನಿಮ್ಮ ಬಗ್ಗೆ ಇತರರು ತೋರುವ ಗೌರವ ಕಡಿಮೆ ಆಗುವುದು.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ: ಕೆಲಸದ ಸಂದರ್ಶನ ಉತ್ತಮ ರೀತಿಯಲ್ಲಿ ಆಗುವುದು. ಸಂದರ್ಶನದ ಫಲಿತಾಂಶ ನಿಮ್ಮ ಜೀವನದ ದಿಕ್ಕನ್ನೇ ಧನಾತ್ಮಕವಾಗಿ ಬದಲಿಸುವ ಶಕ್ತಿ ಹೊಂದಿರುತ್ತದೆ. ಸಂತೋಷದ ದಿನವಾಗಿರುತ್ತದೆ.

ಧನಸ್ಸು:

ದಿನ ಭವಿಷ್ಯ

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಧನುಸ್ಸು: ಆರೋಗ್ಯದ ವಿಚಾರದಲ್ಲಿ ತೂಗುಯ್ಯಾಲೆ ರೀತಿಯ ಏರಿಳಿತಗಳು ಉಂಟಾಗುವ ಸಾಧ್ಯತೆ ಇದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಉಂಟಾಗುವುದು. ಹನುಮಾನ್‌ ಚಾಲೀಸ ಪಠಿಸುವುದು ಒಳ್ಳೆಯದು.

ಮಕರ:

ದಿನ ಭವಿಷ್ಯ

ಮಕರ: ಕೌಟುಂಬಿಕ ವಲಯದಲ್ಲಿ ಕಿರಿಕಿರಿಯಾಗುವ ವಾದವಿವಾದಗಳನ್ನು ತಪ್ಪಿಸಿ ಕೊಳ್ಳಲು ತಾಳ್ಮೆ ರೂಢಿಸಿಕೊಂಡರೆ ಒಳ್ಳೆಯದು. ಕ್ರಮವರಿತ ಅಥವಾ ಶಿಸ್ತುಬದ್ಧವಾದ ನಿಮ್ಮ ಜೀವನ ಇತರರಿಗೆ ಮಾದರಿಯಾಗುವುದು.

ಕುಂಭ:

ದಿನ ಭವಿಷ್ಯ

ಕುಂಭ: ತಾಳ್ಮೆ ಹಾಗೂ ನಿಮ್ಮ ಸೂಕ್ಷ ್ಮಮತಿಯು ಹೊಸ ಅನುಪಮ ಅವಕಾಶವೊಂದನ್ನು ತಂದು ಕೊಡುವುದು. ಇದರಿಂದ ಮನೆಯಲ್ಲಿಯೂ ಮತ್ತು ಹೊರಗಿನ ಸಮಾಜದಲ್ಲಿಯೂ ಹೆಸರು ಬರುವುದು.

ಮೀನ:

ದಿನ ಭವಿಷ್ಯ

ಮೀನ: ಲಂಗುಲಗಾಮಿಲ್ಲದ ಖರ್ಚುವೆಚ್ಚಗಳನ್ನು ನಿಯಂತ್ರಿಸಲು ಕಾರ್ಯೋನ್ಮುಖರಾಗಿ. ಕೂಡಿಟ್ಟ ಹೊನ್ನು ಕರಗಿ ಹೋಗುವ ಸಾಧ್ಯತೆ ಇದೆ. ಸಾಲಮಾಡಿ ಜೀವನ ನಡೆಸುವ ಹಂತಕ್ಕೆ ಬರುವುದನ್ನು ತಪ್ಪಿಸಿಕೊಳ್ಳಿ. ಆದಷ್ಟು ಪ್ರಾಮಾಣಿಕ ಜೀವನ ನಡೆಸಿ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 01 ಜುಲೈ, 2019!!