ದಿನ ಭವಿಷ್ಯ: 04 ಜುಲೈ, 2019!!

0
341

Astrology in kannada | kannada news ದಿನ ಭವಿಷ್ಯ: 04 ಜುಲೈ, 2019!!

ದಿನ ಭವಿಷ್ಯ: 04 ಜುಲೈ, 2019!!

ಮೇಷ:

ದಿನ ಭವಿಷ್ಯ

ಮೇಷ:- ನಿಮ್ಮ ಉದಾಸೀನ ಪ್ರವೃತ್ತಿಯಿಂದ ನಿವೃತ್ತರಾಗುವ ನೀವು ನೂತನ ಕಾರ್ಯಗಳನ್ನು ಹೆಚ್ಚು ಆಸ್ಥೆಯಿಂದ ಮಾಡುವಿರಿ. ನಿಮ್ಮ ಕೆಲವು ಅಭಿಪ್ರಾಯಗಳಿಗೆ ಕುಟುಂಬದಲ್ಲಿ ಪ್ರತಿರೋಧ ಬರುವ ಸಾಧ್ಯತೆಯಿದೆ. ಉತ್ತಮ ಗುರುವಿನ ಮಾರ್ಗದರ್ಶನ ಇಲ್ಲವೆ ಮಧ್ಯಸ್ಥಿಕೆಯಿಂದ ಪ್ರತಿರೋಧ ಶಮನವಾಗುವುದು.

ವೃಷಭ:

ದಿನ ಭವಿಷ್ಯ

ವೃಷಭ:- ಅಮೂಲ್ಯ ವಸ್ತುಗಳ ಖರೀದಿ ವಿಶೇಷವಾಗಿ ಆಗುವುದು. ಮಕ್ಕಳ ಸಂಕಷ್ಟಕ್ಕೆ ಮರುಗುವ ನೀವು ಅವರಿಗೆ ಆರ್ಥಿಕ ಸಹಾಯ ಮಾಡುವಿರಿ. ಖರ್ಚು ವೆಚ್ಚಗಳನ್ನು ಸರಿದೂಗಿಸುವ ಜವಾಬ್ದಾರಿ ನಿಮ್ಮ ಮೇಲೆ ಬೀಳುವುದು. ವೇತನದಲ್ಲಿ ಕಂಡು ಬರುವ ಹೆಚ್ಚಳ ನಿಮ್ಮ ಕೆಲವು ಸಾಲ ತೀರಿಸಲು ಸಹಕಾರಿಯಾಗುವುದು.

ಮಿಥುನ:

ದಿನ ಭವಿಷ್ಯ

ಮಿಥುನ:- ಹೊಸ ಮಿತ್ರರ ಪರಿಚಯದಿಂದಾಗಿ ಜೀವನದ ಶೈಲಿ ಬದಲಾಗುವುದು. ನಿಮ್ಮ ವ್ಯವಹಾರ ಕೌಶಲ್ಯ ಉತ್ತಮವಾಗಿದ್ದು ಅದರಿಂದ ಹೇರಳ ಧನಾಗಮ ಆಗುವ ನಿರೀಕ್ಷೆ ಇದೆ. ಆಹಾರ-ವಿಹಾರದಲ್ಲಿ ನಿಯಮತೆಯನ್ನು ಅಳವಡಿಸಿಕೊಂಡಲ್ಲಿ ಔಷಧಿಗಳಿಂದ ದೂರ ಇರಬಹುದು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ವಾಹನಗಳ ವಿಚಾರದಲ್ಲಿ ಜಾಗರೂಕರಾಗಿರಿ. ಮಧ್ಯರಾತ್ರಿಯಲ್ಲಿನ ಪ್ರಯಾಣವು ಸೂಕ್ತವಲ್ಲ. ಹಣಕಾಸಿನ ಒಳಹರಿವನ್ನು ಹೆಚ್ಚುವುದು. ಆದಾಗ್ಯೂ ಹೊಸ ಮನೆ ಖರೀದಿ ವಿಷಯವನ್ನು ತಾತ್ಕಾಲಿಕವಾಗಿ ಮುಂದೂಡುವುದು ಒಳ್ಳೆಯದು. ಅಪರಿಚಿತರಿಗೆ ವ್ಯವಹಾರದ ಗುಟ್ಟು ಬಿಟ್ಟು ಕೊಡಬೇಡಿ.

ಸಿಂಹ:

ದಿನ ಭವಿಷ್ಯ

ಸಿಂಹ:- ನೀವು ಹಮ್ಮಿಕೊಂಡ ಕಾರ್ಯಗಳಿಗೆ ಬಂಧು ಬಾಂಧವರು ಸ್ನೇಹಿತರು ಕೂಡಾ ಹೆಚ್ಚಿನ ರೀತಿಯಲ್ಲಿ ಸಹಕರಿಸುವರು. ನಿಮ್ಮ ಪ್ರಗತಿಯ ವೇಗವನ್ನು ಕಂಡ ಜನರು ಅಸೂಯೆ ಪಡುವರು.ನರಸಿಂಹ ದೇವರ ಔಪಾಸನಾ ಮಾಡಿ ಇದರಿಂದ ಬಂದ ಕಷ್ಟಗಳು ದೂರವಾಗುವುದು.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಹೊಸ ಮಿತ್ರರ ಪರಿಚಯದಿಂದಾಗಿ ಜೀವನದ ಶೈಲಿ ಬದಲಾಗಲಿದೆ. ಇದರಿಂದ ಎಲ್ಲರೂ ಆಶ್ಚರ್ಯ ಪಡುವರು. ನಿಮ್ಮ ವ್ಯವಹಾರ ಚಾತುರ್ಯಕ್ಕೆ ವಿರೋಧಿಗಳು ಕೂಡಾ ತಲೆದೂಗುವರು. ಆರೋಗ್ಯದಲ್ಲಿ ತೀವ್ರ ವ್ಯತ್ಯಾಸ ಕಂಡು ಬರುವ ಸಾಧ್ಯತೆ ಇದ್ದು ಸೂಕ್ತ ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ನಿಮಗೆ ಬರಬೇಕಾದ ಹಣಕಾಸು ಒದಗಿ ಬರುವುದರಿಂದ ಅನೇಕ ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ಕಂಡು ಬರಲಿದೆ. ಕೌಟುಂಬಿಕ ಸಮಸ್ಯೆಗಳನ್ನು ಜಾಣ್ಮೆಯಿಂದ ಬಿಡಿಸಿಕೊಳ್ಳಿರಿ. ಕರ್ತವ್ಯದಲ್ಲಿ ಚುರುಕುತನ ತೋರುವುದರಿಂದ ಒಳಿತಾಗುವುದು. ದಣಿವ ದೇಹಕ್ಕೆ ವಿಶ್ರಾಂತಿ ಅಗತ್ಯ..

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಹಳೆ ಸ್ನೇಹಿತರು ಭೇಟಿ ನೀಡುವರು. ಅವರು ಕೊಡುವ ಸಲಹೆ ನಿಮ್ಮ ಉಪಯೋಗಕ್ಕೆ ಬರಲಿದೆ. ಮಡದಿ ಮಕ್ಕಳ ಆಶೋತ್ತರಗಳು ಈಡೇರಲಿವೆ. ಕೋರ್ಟು ಕಚೇರಿಯ ಕೆಲಸಗಳು ನಿಮ್ಮಂತೆ ಆಗುವವು. ದೂರದಿಂದ ಬರುವ ಶುಭ ಸುದ್ದಿಗಳು ನಿಮ್ಮ ಮನಸ್ಸಂತೋಷವನ್ನು ಹೆಚ್ಚಿಸುವವು.

ಧನಸ್ಸು:

ದಿನ ಭವಿಷ್ಯ

ಧನಸ್ಸು:- ಬಂಧುಗಳ ಜವಾಬ್ದಾರಿ ಹೊತ್ತ ನಿಮಗೆ ಕೆಲವೊಂದು ಪ್ರಸಂಗಗಳು ನುಂಗಲಾರದ ತುತ್ತಾಗುವ ಸಾಧ್ಯತೆ ಇರುತ್ತದೆ. ಖರ್ಚನ್ನು ಭರಿಸಲಾಗದೆ ತೊಂದರೆಗೆ ಸಿಲುಕುವಿರಿ. ವಿವಾಹದ ಮಾತುಕತೆಗಳು ಅರ್ಧಕ್ಕೆ ನಿಲ್ಲುವ ಸಾಧ್ಯತೆ ಇರುವುದು. ಮಕ್ಕಳ ಆರೋಗ್ಯದ ಕಡೆ ಗಮನ ನೀಡಿರಿ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ನೀವು ನಂಬಿದ ದೇವರ ಅನುಗ್ರಹದಿಂದ ಹಿನ್ನಡೆಯತ್ತ ಹೊರಟಿದ್ದ ವ್ಯಾಪಾರವು ಅನಿರೀಕ್ಷಿತವಾಗಿ ಮುನ್ನಡೆ ಸಾಧಿಸುವುದು. ಇದರಿಂದ ಹಣಕಾಸಿನ ಸ್ಥಿತಿಯು ಉತ್ತಮಗೊಳ್ಳುವುದು. ಮನೆಯಲ್ಲಿ ವಿಶೇಷ ಶುಭ ಸಮಾರಂಭಗಳ ಆಯೋಜನೆಯಾಗಲಿದೆ. ಬಹಳ ದಿನಗಳಿಂದ ನೀವು ಕೈಬಿಟ್ಟಿದ್ದ ಕೆಲಸವೊಂದು ಮತ್ತೆ ಚಾಲನೆಗೆ ಬರಲಿದೆ.

ಕುಂಭ:

ದಿನ ಭವಿಷ್ಯ

ಕುಂಭ:- ಆರೋಗ್ಯದ ಕಡೆ ಅಲಕ್ಷೆ ಮಾಡಿದಲ್ಲಿ ರೋಗ ಮರುಕಳಿಸುವ ಸಾಧ್ಯತೆ ಇದೆ. ಹಿರಿಯರೊಂದಿಗೆ ವಾದವಿವಾದ ಬೇಡ. ಧಾರ್ಮಿಕ ಕಾರ್ಯಗಳಲ್ಲಿ ವಿಶೇಷವಾಗಿ ಭಾಗವಹಿಸುವುದರಿಂದ ಆತ್ಮವಿಶ್ವಾಸ ಮತ್ತು ಮನೋಬಲ ಹೆಚ್ಚಲಿದೆ. ವಿದ್ವಾಂಸರಿಗೆ ಸಾಮಾಜಿಕ ಗೌರವ ಲಭಿಸಲಿದೆ.

ಮೀನ:

ದಿನ ಭವಿಷ್ಯ

ಮೀನ:- ನವ ದಂಪತಿಗಳು ಗೃಹಸ್ಥ ಜೀವನದಲ್ಲಿ ನೆಮ್ಮದಿ ಕಾಣುವರು. ಅತಿಯಾದ ಕಾರ್ಯಭಾರದಿಂದಾಗಿ ದೇಹದಲ್ಲಿ ವಿಪರೀತ ದಣಿವು ಕಾಣಿಸಿಕೊಳ್ಳುವುದು. ಕೆಲವರಿಗೆ ಸರ್ಕಾರಿ ಸಂಬಂಧ ಉದ್ಯೋಗದ ಪತ್ರವು ವಾರಾಂತ್ಯದಲ್ಲಿ ದೊರೆಯುವುದು. ಪ್ರೇಮ ಪ್ರಕರಣವು ನಿರ್ಣಾಯಕ ಹಂತಕ್ಕೆ ಬರುವುದು. ಕುಲದೇವತಾರಾಧನೆಯನ್ನು ವಿಶೇಷವಾಗಿ ಮಾಡಿ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 04 ಜುಲೈ, 2019!!