ದಿನ ಭವಿಷ್ಯ: 04 ಸೆಪ್ಟೆಂಬರ್, 2019!!

0
318

Astrology in kannada | kannada news ದಿನ ಭವಿಷ್ಯ: 04 ಸೆಪ್ಟೆಂಬರ್, 2019!!

ದಿನ ಭವಿಷ್ಯ: 04 ಸೆಪ್ಟೆಂಬರ್, 2019!!

ಮೇಷ:

ದಿನ ಭವಿಷ್ಯ

ಮೇಷ:- ಕೌಟುಂಬಿಕ ವಿಷಯಗಳಲ್ಲಿ ಒಮ್ಮತದ ನಿರ್ಧಾರ ಉಂಟಾಗುವುದು. ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಮನೆಯಲ್ಲಿನ ಹಿರಿಯರ ಆರೋಗ್ಯದ ಬಗ್ಗೆ ಸೂಕ್ತ ವೈದ್ಯಕೀಯ ಉಪಚಾರ ನಡೆಸಬೇಕಾಗುವುದು. ಅನಗತ್ಯ ವಸ್ತುಗಳ ಖರೀದಿಯನ್ನು ಮಾಡದಿರುವುದೇ ಕ್ಷೇಮ.

ವೃಷಭ:

ದಿನ ಭವಿಷ್ಯ

ವೃಷಭ:- ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು. ಕುಲದೇವತಾ ದರ್ಶನದಿಂದ ನಿಮ್ಮ ಕೋರಿಕೆಗಳು ಈಡೇರುವವು. ವಾದ-ವಿವಾದಗಳಿಂದ ಪ್ರಯೋಜನವಿಲ್ಲ. ಹಾಗಾಗಿ ವಾದ-ವಿವಾದದಿಂದ ದೂರ ಇರುವುದು ಒಳ್ಳೆಯದು. ಮನೆಯ ಸದಸ್ಯರೊಡನೆ ಮನಸ್ತಾಪ ಎದುರಾಗುವ ಸಾಧ್ಯತೆ ಇದ್ದು ಮಧುರ ಬಾಂಧವ್ಯಕ್ಕೆ ಪೆಟ್ಟು ಬೀಳುವುದು, ತಾಳ್ಮೆಯಿಂದಿರಿ.

ಮಿಥುನ:

ದಿನ ಭವಿಷ್ಯ

ಮಿಥುನ:- ಆದಾಯದ ಮೂಲಗಳು ಹೆಚ್ಚಲಿದ್ದು ನಿಮ್ಮಲ್ಲಿ ಆರ್ಥಿಕ ಭದ್ರತೆ ಮೂಡಲಿದೆ. ಕಂಪ್ಯೂಟರ್‌ನ ಅತಿಯಾದ ವೀಕ್ಷಣೆಯಿಂದ ನೇತ್ರ ಸಂಬಂಧಿ ತೊಂದರೆಗಳು ಕಾಡಬಹುದು. ಕೆಲಕಾಲ ಕಣ್ಣಿಗೂ ವಿಶ್ರಾಂತಿ ನೀಡುವುದು ಒಳ್ಳೆಯದು. ವಹಿಸಿಕೊಂಡ ಜವಾಬ್ದಾರಿ ಕೆಲಸಗಳನ್ನು ಅಚ್ಚುಕಟ್ಟಾಗಿ ನೆರವೇರಿಸುವಿರಿ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಉದ್ಯಮದಲ್ಲಿ ನೀವು ತೋರುವ ಅತಿ ಶ್ರದ್ಧೆಯು ಪ್ರಗತಿಗೆ ಕಾರಣವಾಗಲಿದೆ. ಆದರೂ ಅದು ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರದಂತೆ ನೋಡಿಕೊಳ್ಳಿರಿ. ಬರಲಿರುವ ಸಂಪಾದನೆ ಕೈಗೆ ಎಟುಕದೇ ಹೋಗಬಹುದು. ಕೌಟುಂಬಿಕ ಸಮಸ್ಯೆ ಚಿಂತೆಗೆ ಕಾರಣವಾಗುವುದು.

ಸಿಂಹ:

ದಿನ ಭವಿಷ್ಯ

ಸಿಂಹ:- ಅತಿಯಾದ ನಿರೀಕ್ಷೆ ಅಥವಾ ಫಲಾಪೇಕ್ಷೆ ನಿಮ್ಮನ್ನು ನಿರಾಸೆಯಲ್ಲಿ ಮುಳುಗಿಸಬಹುದು. ಬದಲಾವಣೆಗೆ ಹೊಂದಿಕೊಳ್ಳುವುದು ಅನಿವಾರ್ಯವಾಗುವುದು. ಯಾವುದೇ ಸನ್ನಿವೇಶವನ್ನು ಧೈರ್ಯದಿಂದ ಎದುರಿಸುವುದು ಬುದ್ಧಿವಂತರ ಲಕ್ಷಣ. ಹಣಕಾಸು ಸಂಸ್ಥೆಗಳಿಂದ ಆರ್ಥಿಕ ನೆರವು ದೊರೆಯಲಿದೆ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಮೇಲಿಂದ ಮೇಲೆ ಮನೆಗೆ ಬರುವ ಅತಿಥಿಗಳ ದೆಸೆಯಿಂದಾಗಿ ವೈಯಕ್ತಿಕ ಕೆಲಸಗಳಿಗೆ ಹೆಚ್ಚಿನ ಗಮನ ಕೊಡಲಾಗುವುದಿಲ್ಲ. ಶತ್ರುಗಳ ಬಾಧೆ ಕಡಿಮೆ ಆಗುವುದು. ವತ್ತಿಯಲ್ಲಿನ ನೈಪುಣ್ಯತೆಗಾಗಿ ಆಂಜನೇಯ ಸ್ತೋತ್ರ ಪಠಿಸಿರಿ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ವ್ಯವಹಾರದಲ್ಲಿ ವ್ಯತ್ಯಾಸಗಳು ತೋರುವ ಮೊದಲೇ ಪಾಲುದಾರರದೊಂದಿಗೆ ವಿಷಯವನ್ನು ಚರ್ಚಿಸಿ ನಂತರ ಒಂದು ನಿರ್ಣಯಕ್ಕೆ ಬರುವುದು ಉತ್ತಮ. ಸರ್ಕಾರಿ ನೌಕರರು ನೌಕರಿಯಲ್ಲಿ ಬರುವಂತಹ ಆಪಾದನೆಗಳನ್ನು ಜಾಣತನದಿಂದ ನಿಭಾಯಿಸುವುದು ಲೇಸು.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಮಕ್ಕಳ ಪ್ರಗತಿ ಕಂಡು ಸಂತಸ ಪಡುವಿರಿ. ಧಾರ್ಮಿಕ ಕಾರ್ಯಗಳ ನಿರ್ವಹಣೆಯಿಂದ ಆತ್ಮತಪ್ತಿ ಪಡೆಯುವಿರಿ. ಕೆಲವು ವಿಷಯಗಳಲ್ಲಿ ತಟಸ್ಥ ನೀತಿಯನ್ನು ಅನುಸರಿಸುವುದು ಒಳ್ಳೆಯದು. ಮಡದಿ ಮಕ್ಕಳ ಇಷ್ಟಾರ್ಥಗಳನ್ನು ನೆರವೇರಿಸುವಿರಿ..

ಧನಸ್ಸು:

ದಿನ ಭವಿಷ್ಯ

ಧನುಸ್ಸು:- ಹಿರಿಯರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡು ಬರುವುದು. ಮಹಿಳೆಯರಿಗೆ ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಸ್ಥಾನಮಾನಗಳು ದೊರೆಯಲಿವೆ. ಹಣಕಾಸು ವ್ಯವಹಾರದಲ್ಲಿ ಅಲ್ಪ ಮೋಸ ಹೋಗುವ ಸಾಧ್ಯತೆ ಇದ್ದು, ಈ ಬಗ್ಗೆ ಜಾಗ್ರತೆ ಅಗತ್ಯ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ಇಷ್ಟು ದಿನಗಳ ಕಾಲ ವಹಿಸಿಕೊಂಡ ಜವಾಬ್ದಾರಿಯನ್ನು ಮತ್ತೊಬ್ಬರಿಗೆ ವಹಿಸುವಿರಿ. ಮುಂಗಡ ಸಾಲಗಳಿಂದ ದೂರವಿರುವುದು ಲೇಸು. ಮಹಿಳೆಯರಿಗೆ ಅತಿಯಾದ ದೇಹಾಲಸ್ಯದಿಂದಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದು.

ಕುಂಭ:

ದಿನ ಭವಿಷ್ಯ

ಕುಂಭ:- ಉನ್ನತ ಅಧಿಕಾರಿಗಳ ಭೇಟಿಯಿಂದ ನಿಮ್ಮ ಕಾರ್ಯ ಕೈಗೂಡುವುದು. ಸೂಕ್ತ ವಧು-ವರರಿಗೆ ಉತ್ತಮ ಸಂಗಾತಿ ದೊರೆಯುವ ಸಾಧ್ಯತೆ. ಮಾಡುವ ಕೆಲಸದಲ್ಲಿ ಏಕಾಗ್ರತೆಯನ್ನು ಬೆಳೆಸಿಕೊಳ್ಳಿರಿ. ಹಿರಿಯರ ಆಶೀರ್ವಾದವು ನಿಮಗೆ ದೊರೆಯುವುದು.

ಮೀನ:

ದಿನ ಭವಿಷ್ಯ

ಮೀನ:- ಜನಸೇವೆ ಮಾಡಲು ಮನಸ್ಸು ಹಾತೊರೆಯುವುದು. ದೀನದಲಿತರ ಸೇವೆಯಲ್ಲಿ ಭಗವಂತನನ್ನು ಕಾಣುವ ತವಕ ಮೆಚ್ಚಬೇಕಾದ್ದು. ಹೊಸ ಮನೆಗೆ ಸ್ಥಳಾಂತರ ಮಾಡುವಿರಿ. ಸೂಕ್ತ ಸಮಯದಲ್ಲಿ ಸ್ನೇಹಿತರಿಂದ ಇಲ್ಲವೆ ಬಂಧುಗಳಿಂದ ಹಣಕಾಸಿನ ನೆರವು ದೊರೆಯುವುದು.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 04 ಸೆಪ್ಟೆಂಬರ್, 2019!!