ದಿನ ಭವಿಷ್ಯ: 06 ಆಗಸ್ಟ್, 2019!!

0
229

Astrology in kannada | kannada news ದಿನ ಭವಿಷ್ಯ: 06 ಆಗಸ್ಟ್, 2019!!

ದಿನ ಭವಿಷ್ಯ: 06 ಆಗಸ್ಟ್, 2019!!

ಮೇಷ:

ದಿನ ಭವಿಷ್ಯ

ಮೇಷ:- ಪರರ ಮಾತುಗಳನ್ನು ಕೇಳಿಸಿಕೊಂಡು ಕ್ರಮ ಕೈಗೊಳ್ಳುವ ವಿಚಾರ ಭವಿಷ್ಯದ ದೃಷ್ಟಿಯಿಂದ ಒಳಿತಲ್ಲ. ಆದಷ್ಟು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಿ. ಒಳಿತಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ವೃಷಭ:

ದಿನ ಭವಿಷ್ಯ

ವೃಷಭ:- ನಿಮ್ಮ ಬುದ್ಧಿಮತ್ತೆ ಎಲ್ಲೆಡೆ ಚರ್ಚೆಗೆ ಒಳಪಡುವುದು ಮತ್ತು ಈ ವರ್ಚಸ್ಸಿನ ವಿಷಯದಲ್ಲಿ ಹಲವು ರೀತಿಯ ಸದವಕಾಶಗಳು ನಿಮಗೆ ಬರಲಿದ್ದು ನೀವು ಇನ್ನೂ ಎತ್ತರಕ್ಕೆ ಏರಲು ಅನುಕೂಲವಾಗುವುದು.

ಮಿಥುನ:

ದಿನ ಭವಿಷ್ಯ

ಮಿಥುನ:- ದೂರದ ಬೆಟ್ಟ ನುಣ್ಣಗೆ ಎಂಬುದು ತಿಳಿದಿದ್ದರೂ ಪುನಃ ಪುನಃ ದೊಡ್ಡ ಯೋಜನೆಗಳನ್ನು ಕೈಗೆತ್ತಿಕೊಂಡು ಸೋಲನ್ನು ಅನುಭವಿಸುವಿರಿ. ಸದ್ಯದ ಪರಿಸ್ಥಿತಿಯಲ್ಲಿ ಈಗಿರುವ ಕೆಲಸವನ್ನೇ ಮುಂದುವರೆಸಿಕೊಂಡು ಹೋಗುವುದು ಒಳ್ಳೆಯದು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಅನ್ಯರ ಮಾತು ಕೇಳಿ ನಿಮಗೆ ತೊಂದರೆ ಕೊಡುತ್ತಿರುವ ಮೇಲಧಿಕಾರಿಗೆ ತಪ್ಪಿನ ಅರಿವಾಗಲಿದೆ. ಈ ಬಗ್ಗೆ ಅವರು ನಿಮ್ಮ ಬಳಿ ಕ್ಷ ಮೆಯಾಚಿಸುವ ಸಾಧ್ಯತೆ ಇದೆ. ಹಾಗಂತ ನೀವು ಅಹಂಕಾರ ಪಡುವುದು ಸೂಕ್ತವಲ್ಲ. ಆಂಜನೇಯ ಸ್ವಾಮಿ ಮಂತ್ರ ಜಪಿಸಿ.

ಸಿಂಹ:

ದಿನ ಭವಿಷ್ಯ

ಸಿಂಹ:- ಮಾತನಾಡುವುದು ಅನಿವಾರ್ಯ ಆದಾಗಲೂ ಮೌನದಿಂದ ಇರಲು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಸಾಕಷ್ಟು ಆಂತರಿಕ ಹಾಗೂ ಬಾಹ್ಯ ಸಮಸ್ಯೆಗಳು ಕಡಿಮೆ ಆಗುವವು. ಪ್ರಯಾಣ ಕಾಲದಲ್ಲಿ ಎಚ್ಚರ ಇರಲಿ. ಸಾಧ್ಯವಾದಲ್ಲಿ 18 ಉದ್ದಿನಕಾಳನ್ನು ಜೇಬಿನಲ್ಲಿಟ್ಟುಕೊಳ್ಳಿ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ವಾಯುಪ್ರಕೋಪ, ಇಲ್ಲವೆ ಮಿತಿ ಮೀರಿದ ಅಲರ್ಜಿ ತೊಂದರೆಗಳು ನಿಮ್ಮನ್ನು ಕಾಡುವ ಸಾಧ್ಯತೆ ಇವೆ. ಆದಷ್ಟು ಊಟ ಉಪಚಾರಗಳಲ್ಲಿ ನಿಯಮ ಕಾಪಾಡಿಕೊಳ್ಳಿ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ಪ್ರವಾಸದ ಸಂದರ್ಭದಲ್ಲಿ ನಡೆಸಿದ ಮಾತುಕತೆಗೆ ವ್ಯತಿರಿಕ್ತವಾಗಿ ವರ್ತಿಸಿದವರನ್ನು ನಿರ್ಲಕ್ಷಿಸಿ ಮತ್ತು ಅವರನ್ನು ದೂರ ಇಡಿ. ಬಹುದಿನದ ಬಯಕೆ ಈಡೇರುವ ಸಾಧ್ಯತೆ ಇದೆ. ಆರೋಗ್ಯದ ಕಡೆ ಗಮನ ನೀಡಿ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ವಿನಾಕಾರಣ ನಿಮ್ಮ ಅಮೂಲ್ಯ ಸಮಯವನ್ನು ಹಾಳುಗೆಡಹುವ ಜನರು ನಿಮಗೆ ತಲೆನೋವು ತರುವ ಸಾಧ್ಯತೆ ಇದೆ. ಅವರನ್ನು ಜಾಣ್ಮೆಯಿಂದ ಸಾಗ ಹಾಕಿ. ಸಮಾಜದಲ್ಲಿ ನಿಮಗೆ ಉತ್ತಮ ಗೌರವ ಆದರಗಳು ದೊರೆಯುವವು.

ಧನಸ್ಸು:

ದಿನ ಭವಿಷ್ಯ

ಧನುಸ್ಸು:- ನಿಮ್ಮ ನಿರೀಕ್ಷೆಯನ್ನು ಮೀರಿ ಹೆಚ್ಚಿನ ಲಾಭ ಬರುವ ಉತ್ತಮ ಅವಕಾಶ ನಿಮಗೆ ದೊರೆಯಲಿದೆ. ಇದರಿಂದ ನಿಮ್ಮ ಬಹುತೇಕ ಸಮಸ್ಯೆಗಳು ತಿಳಿಗೊಳ್ಳುವವು. ಗುರು ರಾಘವೇಂದ್ರ ಸ್ವಾಮಿಯ ಅಶೀರ್ವಾದ ಪಡೆಯಿರಿ ಮತ್ತು ಗುರು ಕಾಣಿಕೆ ಸಲ್ಲಿಸಿ

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ವಿವೇಕದ ಮಾತುಗಳನ್ನು ಆಡಿದಾಗಲೂ ಅಹಂಕಾರ ತೋರುವ ಜನರನ್ನು ನಿರ್ದಾಕ್ಷಿಣ್ಯವಾಗಿ ದೂರವಿಡಿ. ಇದರಿಂದ ನಿಮ್ಮ ಕಾರ್ಯ ಸಾಧುವಾಗುವುದು. ಹಣಕಾಸಿನ ಸ್ಥಿತಿ ಸದ್ಯಕ್ಕೆ ಉತ್ತಮವಾಗಿರುವುದಿಲ್ಲ.

ಕುಂಭ:

ದಿನ ಭವಿಷ್ಯ

ಕುಂಭ:- ಅವಸರದ ನಿರ್ಣಯ ತೆಗೆದುಕೊಂಡು ನಂತರ ಕೈ ಕೈ ಹಿಸುಕಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಯಾವುದೇ ಕಾರ್ಯ ಮಾಡುವ ಮುನ್ನ ಎರಡು ಬಾರಿ ಚಿಂತಿಸಿ. ಸ್ವಯಂಕೃತ ಅಪರಾಧದಿಂದ ತೊಂದರೆಗೆ ಸಿಲುಕಿಕೊಳ್ಳುವಿರಿ.

ಮೀನ:

ದಿನ ಭವಿಷ್ಯ

ಮೀನ:- ಸಾಮಾಜಿಕವಾಗಿ ವಿಶೇಷವಾದುದನ್ನು ಸಾಧಿಸಿ ಪ್ರಶಂಸೆ ಗಳಿಸಲು ಗ್ರಹಗಳು ಸಹಕಾರ ನೀಡುವವು. ಅಂತೆಯೇ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಹಣಕಾಸಿನ ನೆರವು ವಿವಿಧ ಮೂಲಗಳಿಂದ ಹರಿದು ಬರುವುದು.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 06 ಆಗಸ್ಟ್, 2019!!