ದಿನ ಭವಿಷ್ಯ: 06 ಸೆಪ್ಟೆಂಬರ್, 2019!!

0
258

Astrology in kannada | kannada news ದಿನ ಭವಿಷ್ಯ: 06 ಸೆಪ್ಟೆಂಬರ್, 2019!!

ದಿನ ಭವಿಷ್ಯ: 06 ಸೆಪ್ಟೆಂಬರ್, 2019!!

ಮೇಷ:

ದಿನ ಭವಿಷ್ಯ

ಮೇಷ:- ಪ್ರತಿಯೊಂದು ಕಾರ್ಯದಲ್ಲೂ ಅಡೆತಡೆ ಉಂಟಾಗುತ್ತಿದೆ ಎಂಬ ಭಾವನೆಯಿದ್ದಲ್ಲಿ ಮಾತಾ ದುರ್ಗಾದೇವಿಯನ್ನು ಪ್ರಾರ್ಥಿಸಿ. ಬಡವರಿಗೆ ಆಹಾರ ನೀಡಿ. ಪ್ರಯಾಣ ಕಾಲದಲ್ಲಿ ಸ್ವಲ್ಪ ಉದ್ದಿನಕಾಳುಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.

ವೃಷಭ:

ದಿನ ಭವಿಷ್ಯ

ವೃಷಭ:- ಹಲಸಿನ ಹಣ್ಣನ್ನು ಸೂಜಿಯಿಂದ ಕತ್ತರಿಸಲು ಆಗುವುದಿಲ್ಲ. ಅದಕ್ಕೆ ಹರಿತವಾದ ಚಾಕು ಬೇಕಾಗುತ್ತದೆ. ಹಾಗಾಗಿ ನಿಮ್ಮ ವಿರೋಧಿಗಳನ್ನು ಎದುರಿಸಲು ಸೌಮ್ಯತೆ ಸಾಕಾಗುವುದಿಲ್ಲ. ನೀವು ಕೂಡಾ ಕೆಲವೊಮ್ಮೆ ರೋಷಾವೇಶ ವ್ಯಕ್ತಪಡಿಸಬೇಕಾಗುವುದು.

ಮಿಥುನ:

ದಿನ ಭವಿಷ್ಯ

ಮಿಥುನ:- ಮೃಷ್ಟಾನ್ನ ಭೋಜನ ಸವಿಯುವ ಸಾಧ್ಯತೆ ಇದೆ ಅಥವಾ ಸುಂದರ ಪ್ರದೇಶಗಳ ವೀಕ್ಷ ಣೆಗಾಗಿ ಸಮಯವನ್ನು ಮೀಸಲಿಡುವಿರಿ. ಮಕ್ಕಳ ವಿದ್ಯಾಭ್ಯಾಸದ ಪ್ರಗತಿ ಮನಸ್ಸಿಗೆ ಮುದ ನೀಡುವುದು. ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ನಿಮ್ಮ ವೈಯಕ್ತಿಕ ಕೆಲಸಗಳನ್ನು ಬಿಟ್ಟು ಬೇರೆ ಕೆಲಸಗಳನ್ನು ಎತ್ತಿಕೊಳ್ಳುವ ಸಾಹಸ ಬೇಡ. ಜನ್ಮಶನಿ ವಿನಾಕಾರಣ ಅಪವಾದಗಳನ್ನು ನಿಮ್ಮ ಮೇಲೆ ಹೇರಲು ಕಾಯುತ್ತಿರುವನು. ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ ಜಯಶೀಲರಾಗಿ.

ಸಿಂಹ:

ದಿನ ಭವಿಷ್ಯ

ಸಿಂಹ:- ರಾಜಕೀಯ ತಂತ್ರಗಾರಿಕೆ, ರಾಜಕೀಯ ದಾಳಗಳು ಉರುಳುವುದು ಇತ್ಯಾದಿ ಇದ್ದೇ ಇರುತ್ತದೆ. ಮನದಾಳದ ಮಾತಿನಿಂದ ಜನಪ್ರಿಯತೆ ಹೊಂದುವಿರಿ. ಹಮ್ಮಿಕೊಂಡ ಕಾರ್ಯಗಳಲ್ಲಿ ಗಣ್ಯರನೇಕರ ಬೆಂಬಲ ದೊರೆಯುವುದು.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಮಕ್ಕಳು, ಕೆಲಸಗಾರರು, ಕೆಲವು ಸರ್ಕಾರಿ ಅಧಿಕಾರಿಗಳು ಒತ್ತಡ ತರುವ ಸಾಧ್ಯತೆ ಇದೆ. ಆದಷ್ಟು ತಾಳ್ಮೆಯಿಂದ ವ್ಯವಹರಿಸಿರಿ. ಕೋಪ ಅನೇಕ ಅನರ್ಥಗಳಿಗೆ ಕಾರಣವಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ನಿಮ್ಮ ಜತೆಗಾರರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಅತ್ಯುತ್ತಮ ಕ್ಷ ಣಗಳು ವ್ಯರ್ಥವಾಗದಿರುವಂತೆ ನೋಡಿಕೊಳ್ಳಿ. ಇನ್ನೊಬ್ಬರ ಮರ್ಜಿಗೆ ಒಳಗಾಗಿ ನಿಮ್ಮತನವನ್ನು ನೀವು ಬಿಟ್ಟುಕೊಡದಿರಿ. ಇದರಿಂದ ಮುಂದೆ ಒಳಿತಾಗುವುದು.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಆರೋಗ್ಯದಲ್ಲಿ ನಿರಾಸಕ್ತಿ ಹೊಂದಬೇಡಿ. ಸರ್ರನೆ ಉಂಟಾಗುವ ಅಶಕ್ತತೆಯಿಂದ ಕಿರಿಕಿರಿ ಉಂಟಾಗುವುದು. ಮನೆ ವೈದ್ಯರ ಸಲಹೆಯಂತೆ ಔಷಧೋಪಚಾರ ಪಡೆಯಿರಿ. ಮನೆಯಲ್ಲಿ ನೆಮ್ಮದಿಯ ವಾತಾವರಣ ಕಾಯಿಲೆಯಿಂದ ಬೇಗ ಗುಣಮುಖರಾಗುವಲ್ಲಿ ಸಹಕಾರಿಯಾಗುವುದು.

ಧನಸ್ಸು:

ದಿನ ಭವಿಷ್ಯ

ಧನುಸ್ಸು:- ಕಾರ್ಯದಲ್ಲಿ ಸಿದ್ದಿ ಇದೆಯಾದರೂ ಏರುತಗ್ಗಿನ, ಕಲ್ಲುಮುಳ್ಳಿನ ಬಿರುದಾರಿಯಲ್ಲಿ ಸಾಗಬೇಕಾಗಿರುವುದರಿಂದ ಎಚ್ಚರಿಕೆ ಅಗತ್ಯ. ಆದಷ್ಟು ಕುಲದೇವರನ್ನು ಪ್ರಾರ್ಥನೆ ಮಾಡಿ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ಸಾಂಕೇತಿಕವಾದ ನಿಮ್ಮ ಪ್ರತಿಭಟನೆ, ಪ್ರತಿಪಾದನೆ ಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಸರಳವಾಗಿ ಮಾತನಾಡಿ ಬೃಹತ್‌ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ. ಬೇರೆಯವರ ಹಣಕಾಸಿನ ವಿಷಯದಲ್ಲಿ ಮೂಗು ತೂರಿಸದಿರಿ.

ಕುಂಭ:

ದಿನ ಭವಿಷ್ಯ

ಕುಂಭ:- ಎಲ್ಲಾ ವಿಚಾರಗಳಲ್ಲಿಯೂ ವಿವೇಕದೊಂದಿಗೆ ಕಾರ್ಯ ಪೂರೈಸಿ. ಸಂಗಾತಿಯ ಸಲಹೆಯಿಂದ ಒಳಿತಾಗುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಹವಾಮಾನ ಬದಲಾವಣೆಯಿಂದ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬರುವುದು.

ಮೀನ:

ದಿನ ಭವಿಷ್ಯ

ಮೀನ:- ಶತ್ರುವಿನ ಶತ್ರು ಮಿತ್ರ ಎನ್ನುವಂತೆ ಶತ್ರುವಿನ ಎಲ್ಲಾ ವರಸೆಗಳನ್ನು ತಿಳಿಯುವುದರಿಂದ ನಿಮ್ಮ ರಾಜಕೀಯ ಜೀವನಕ್ಕೆ ಒಂದು ಹೊಸ ತಿರುವು ಮೂಡುವುದು. ನಿಮ್ಮ ಬಗೆಗಿನ ವಿಶೇಷ ಪರೀಕ್ಷೆಗೆ ಸದ್ಯವೇ ಕಾಲ ಕೂಡಿಬರುವುದು.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 06 ಸೆಪ್ಟೆಂಬರ್, 2019!!