ದಿನ ಭವಿಷ್ಯ: 07 ಆಗಸ್ಟ್, 2019!!

0
235

Astrology in kannada | kannada news ದಿನ ಭವಿಷ್ಯ: 07 ಆಗಸ್ಟ್, 2019!!

ದಿನ ಭವಿಷ್ಯ: 07 ಆಗಸ್ಟ್, 2019!!

ಮೇಷ:

ದಿನ ಭವಿಷ್ಯ

ನಿಮ್ಮ ದೌರ್ಬಲ್ಯಗಳ ಉಪಯೋಗವನ್ನು ಅನ್ಯರು ಮಾಡಿಕೊಳ್ಳುವರು. ಹಾಗಾಗಿ ನಿಮ್ಮ ಸ್ವಂತ ವಿಷಯಗಳನ್ನು ಎಲ್ಲರ ಮುಂದೆ ಪ್ರಸ್ತಾಪ ಮಾಡುವುದು ಸರಿಯಲ್ಲ. ಹೊಸತನವೇ ಬದುಕಿನ ಯಶಸ್ಸಿನ ಮಂತ್ರ. ಇದರಿಂದ ನಿಮಗೆ ಲಾಭವಾಗುವುದು.

ವೃಷಭ:

ದಿನ ಭವಿಷ್ಯ

ನಿತ್ಯದ ರಗಳೆಗಳ ನಡುವೆ ಬಹುದಿನಗಳ ಕನಸು ನನಸಾಗಲಿದೆ. ದಿನದ ವೇಳಾಪಟ್ಟಿಯಲ್ಲಿ ಸಕಾರಾತ್ಮಕ ಅಂಶಗಳನ್ನು ಗುರುತು ಮಾಡಿಕೊಳ್ಳಿರಿ. ಸಂಗಾತಿಯ ಸಕಾಲದ ಮುನ್ನೆಚ್ಚರಿಕೆಯಿಂದ ಮನೆಯಲ್ಲಿ ಸಂತಸ ವಾತಾವರಣ ಮೂಡುವುದು.

ಮಿಥುನ:

ದಿನ ಭವಿಷ್ಯ

ದುಡ್ಡಿದ್ದವನೇ ದೊಡ್ಡಪ್ಪ ಎನ್ನುವ ಹಳೆಯ ಗಾದೆ ಮಾತು. ಆದರೆ ಇತ್ತೀಚಿನ ದಿನದಲ್ಲಿ ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಉಪಯೋಗಿಸುವವನೇ ಸಭ್ಯ ನಾಗರಿಕ ಎಂಬ ಚಾಲನೆ ಪ್ರಚಲಿತವಿದೆ. ನಿಮ್ಮ ಬುದ್ಧಿಮತ್ತೆಯು ಈ ನಿಟ್ಟಿನಲ್ಲಿ ಯೋಚಿಸುತ್ತದೆ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಅವಸರವೇ ಇಂದು ನಿಮ್ಮನ್ನು ಬಾಧಿಸುತ್ತದೆ. ಆಲಸ್ಯ ಬೇಡ. ಆಲಸ್ಯಂ ಅಮೃತಂ ವಿಷಂ ಎನ್ನುವಂತೆ ಆಲಸ್ಯತನವು ಮನಸ್ಸಿಗೆ ಮುದ ನೀಡಿದರೂ ಅದು ನಿಮಗೆ ವಿಷವಾಗಿ ಪರಿಣಮಿಸುವ ಸಾಧ್ಯತೆ ಇರುತ್ತದೆ.

ಸಿಂಹ:

ದಿನ ಭವಿಷ್ಯ

ಸ್ವಕೀಯ ಜನರಿಂದಲೇ ಟೀಕೆ-ಟಿಪ್ಪಣಿಗಳು ಎದುರಾಗುವುದರಿಂದ ಮನಸ್ಸಿಗೆ ನೋವಾಗುವುದು. ಇದರಿಂದ ಯಾವುದೇ ಕೆಲಸ ಮಾಡಲು ಮನಸ್ಸು ಬರುವುದಿಲ್ಲ. ಅವರ ಟೀಕೆ ಧನಾತ್ಮಕವಾಗಿದ್ದರೆ ಅದನ್ನು ಒಪ್ಪಿಕೊಳ್ಳುವ ಜಾಣ್ಮೆ ತೋರಿ.

ಕನ್ಯಾ:

ದಿನ ಭವಿಷ್ಯ

ಈದಿನ ನಿಮಗೆ ಕೀರ್ತಿಯು ಅರಸಿ ಬರುವುದು. ನಿಮ್ಮನ್ನು ಅಣಕಿಸಿದವರೆ ನಿಮ್ಮ ಬಳಿ ಬಂದು ಕ್ಷ ಮೆ ಯಾಚಿಸುವ ಸಂದರ್ಭ ಒದಗಿ ಬರುತ್ತದೆ. ಅಂಗಾಲು ಉರಿಯು ಜಾಸ್ತಿ ಇದ್ದು ಮನೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಿರಿ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ ಕಂಡುಬರುವುದು. ಹಾಗಂತ ನಿರಾಳರಾಗದಿರಿ. ದಾರಿಯಲ್ಲಿನ ಏರು-ತಗ್ಗುಗಳನ್ನು ಸರಿಪಡಿಸುವತ್ತ ಶ್ರಮ ವಹಿಸಿ. ಅರ್ಥಾತ್‌ ತುರ್ತಾಗಿ ಪಾವತಿಸಬೇಕಾದ ಸಾಲದ ಮರುಪಾವತಿ ಮಾಡಿರಿ ಒಳಿತಾಗುವುದು.

ವೃಶ್ಚಿಕ:

ದಿನ ಭವಿಷ್ಯ

ಕುಟುಂಬದಲ್ಲಿ ಗಣನೀಯವಾದ ಶುಭ ಶೋಭನಾದಿ ಘಳಿಗೆಗಳಿಗೆ ಸುಮೂರ್ತ ಕಂಡು ಬರುವುದು. ಈದಿನ ಮಹತ್ವದ ನಿರ್ಣಯವನ್ನು ತೆಗೆದುಕೊಳ್ಳುವಿರಿ. ಇದರಿಂದ ನಿಮ್ಮ ಕುಟುಂಬದ ಸದಸ್ಯರು ಹರ್ಷಚಿತ್ತರಾಗುವರು.

ಧನಸ್ಸು:

ದಿನ ಭವಿಷ್ಯ

ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಈದಿನ ಗ್ರಹಸ್ಥಿತಿಯು ನಿಮಗೆ ಪೂರಕವಾಗಿಲ್ಲದ ಕಾರಣ ಗೋವಿಂದನ ಮೊರೆ ಹೋಗುವುದು ಅನಿವಾರ್ಯ. ಭಗವಂತ ನೇರವಾಗಿ ಬಂದು ದರ್ಶನ ನೀಡದೆ ಇರಬಹುದು. ಆದರೆ ಸೂಕ್ತ ವ್ಯಕ್ತಿಯನ್ನು ಸೂಚಿಸುವನು.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಸಾಧನೆಗೆ ಸಾಧ್ಯತೆಗಳು ಹೇರಳವಾಗಿರುತ್ತದೆ. ಯಾವುದೇ ಕಾರಣಕ್ಕೂ ಜಡತ್ವ ಬೇಡ. ಬಾಳಸಂಗಾತಿಯ ವಿಶ್ವಾಸ ಪಡೆದು ಆಕೆಯ ಇಷ್ಟಾ-ನಿಷ್ಟಗಳನ್ನು ತಿಳಿದು ಅವಳನ್ನು ಸಂತೋಷ ಪಡಿಸಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.

ಕುಂಭ:

ದಿನ ಭವಿಷ್ಯ

ಅಲೌಕಿಕ ವಿಷಯವೊಂದರ ಬೆನ್ನು ಹಿಡಿಯುವ ನಿಮಗೆ ಇಂದು ಸಾಕ್ಷಾತ್ಕಾರವಾಗುವ ಸಾಧ್ಯತೆ. ದೇವಿ ದುರ್ಗಾಮಾತೆಯು ನಿಮ್ಮ ಮನಸ್ಸಿನ ತಾಕಲಾಟಕ್ಕೆ ಶೀಘ್ರ ಪರಿಹಾರ ಸೂಚಿಸುವರು. ಹಾಗಾಗಿ ಈದಿನ ದುರ್ಗಾ ದೇವಿಯನ್ನು ಸ್ತುತಿಸಿರಿ.

ಮೀನ:

ದಿನ ಭವಿಷ್ಯ

ಮನಸ್ಸಿನ ಜಯವೇ ಎಲ್ಲ ಜಯದ ಮೂಲ. ಹಾಗಾಗಿ ಶ್ರೀ ಆಂಜನೇಯ ಸ್ತೋತ್ರ ಪಠಿಸಿ ಮನಸ್ಸಿನ ಕಲ್ಮಶಗಳನ್ನು ಹೊರಹಾಕಿರಿ. ಶ್ರೀರಾಮನ ದರ್ಶನವಾಗದಿದ್ದರೂ ಅಂತಹ ಗುಣಗಳಿರುವ ಸಾಧು-ಸಂತರ ದರ್ಶನವಾಗುವುದು.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 07 ಆಗಸ್ಟ್, 2019!!