ದಿನ ಭವಿಷ್ಯ: 07 ಸೆಪ್ಟೆಂಬರ್, 2019!!

0
296

Astrology in kannada | kannada news ದಿನ ಭವಿಷ್ಯ: 07 ಸೆಪ್ಟೆಂಬರ್, 2019!!

ದಿನ ಭವಿಷ್ಯ: 07 ಸೆಪ್ಟೆಂಬರ್, 2019!!

ಮೇಷ:

ದಿನ ಭವಿಷ್ಯ

ಮೇಷ:- ಗೊತ್ತುಗುರಿಯಿಲ್ಲದೆ ಹಮ್ಮಿಕೊಂಡ ಅನೇಕ ಕಾರ್ಯಗಳಿಗೆ ಆರ್ಥಿಕ ಕೊರತೆ ಕಂಡು ಬರಲಿದೆ. ಕೊಟ್ಟ ಮಾತು ಉಳಿಸಿಕೊಳ್ಳಲು ಪರದಾಡುವಿರಿ. ಮಾತಿನ ತಪ್ಪು ಗ್ರಹಿಕೆಯಿಂದ ಕುಟುಂಬದಲ್ಲಿ ದೊಡ್ಡ ಬಿರುಗಾಳಿ ಏಳುವುದು. ಇದನ್ನು ತಾಳ್ಮೆಯಿಂದ ಹಾಗೂ ವಿವೇಚನೆಯಿಂದ ಬಗೆಹರಿಸಿಕೊಳ್ಳಿ.

ವೃಷಭ:

ದಿನ ಭವಿಷ್ಯ

ವೃಷಭ:- ಕೈಗೆ ಬಂದ ತುತ್ತು ಬಾಯಿಗಿಲ್ಲ ಎನ್ನುವಂತಹ ಪರಿಸ್ಥಿತಿ ಇದೆ. ಹೆಚ್ಚಿನ ಶುಭಫಲ ಪಡೆಯಲು ಕಾಲ ಪಕ್ವವಾಗಿಲ್ಲ. ಹಾಗಾಗಿ ಹರಿಯ ಒಲುಮೆ ಆಗುವವರೆಗೂ ಅರಿತು ಸುಮ್ಮನಿರುವುದೇ ಲೇಸು. ನಿಮ್ಮ ಕಾರ್ಯದಲ್ಲಿ ಯಶಸ್ಸು ನಿಧಾನವಾದರೂ ಪ್ರಧಾನವಾಗುವುದು.

ಮಿಥುನ:

ದಿನ ಭವಿಷ್ಯ

ಮಿಥುನ:- ಹೆಚ್ಚಿನ ವಿದ್ಯಾಭ್ಯಾಸದ ಯೋಜನೆ ಹಾಕಿಕೊಂಡಿದ್ದರೆ ಕನಸು ನನಸಾಗುವ ಅವಕಾಶ ಲಭ್ಯವಿರುತ್ತದೆ. ಗುರು ಮಹಾರಾಜರು ನಿಮಗೆ ಎಲ್ಲಾ ರೀತಿಯ ಬೆಂಬಲ ಸೂಚಿಸುವರು. ಪ್ರಯಾಣದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಕಾಯ್ದೆ ಕಾನೂನುಗಳಿಗೆ ಸಂಬಂಧಿಸಿದ ದೀರ್ಘಕಾಲೀನ ವಿವಾದವೊಂದಕ್ಕೆ ಪರಿಹಾರ ಸಿಗಲಿದೆ. ಆದರೆ ಮನೆಯ ಸದಸ್ಯರೇ ನಿಮಗೆ ಬೆಂಬಲ ನೀಡದಿರುವುದು ಬೇಸರ ಮೂಡಿಸುವುದು. ಆದಷ್ಟು ಮೌನದಿಂದ ಇರಿ.

ಸಿಂಹ:

ದಿನ ಭವಿಷ್ಯ

ಸಿಂಹ:- ವ್ಯಾವಹಾರಿಕ ಜಗತ್ತಿನ ನಯವಂಚಕತನ ನಿಮಗೆ ಜಿಗುಪ್ಸೆ ತರಿಸುವುದು. ಆದರೆ ವಿಚಲಿತರಾಗದಿರಿ. ನೀವು ಇಟ್ಟಿರುವ ಹೆಜ್ಜೆ ಉತ್ತಮವಾಗಿದೆ. ಶ್ರೇಯಾಂಸಿ ಬಹು ವಿಘ್ನಾನಿ ಎಂದು ಹೇಳುವಂತೆ ಕಾರ್ಯಗಳು ಕಾರ್ಯಗತವಾಗಲು ಕೆಲವು ವಿಘ್ನಗಳನ್ನು ಎದುರಿಸಲೇಬೇಕಿದೆ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಸರ್ಕಾರಿ ಆಫೀಸಿನಲ್ಲಿ ಕಹಿ ಅನುಭವಗಳು ಉಂಟಾಗುವ ಸಾಧ್ಯತೆ ಇದೆ. ನಿಮ್ಮ ತಾಳ್ಮೆ ದೃಢವಾಗಿರಲಿ. ಗುರುಹಿರಿಯರ ಆಶೀರ್ವಾದದಿಂದ ಕೆಲಸಗಳು ಸುಗಮವಾಗಿ ನಡೆಯುವವು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರುವುದು.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ನಿಮ್ಮ ವೈಚಾರಿಕ ಆಳ ಅಗಲಗಳು ನಿಮ್ಮನ್ನು ಬಹಳ ಉತ್ತಮ ಸ್ಥಿತಿಗೆ ತಲುಪಿಸುತ್ತವೆ. ವಿವಿಧ ಮೂಲಗಳಿಂದ ಹಣ ಬರುವುದು. ನಿಮ್ಮ ಹಳೆಯ ಸ್ನೇಹಿತರು ನಿಮಗೆ ಸಹಾಯ ನೀಡುವ ಸಾಧ್ಯತೆ ಇದೆ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಕೀಳರಿಮೆ ಬಿಡಿ. ನಿಮ್ಮಲ್ಲಿನ ಪ್ರತಿಭೆ ಅಗಾಧವಾದುದು. ಒಳ್ಳೆಯ ವಿಚಾರಗಳನ್ನು ಕೇಳುವಿರಿ. ಹಲವು ದಿನದಿಂದ ಕಾಡುತ್ತಿದ್ದ ಮನಸ್ಸಿನ ತುಮುಲಕ್ಕೆ ಒಂದು ಶಾಶ್ವತ ಪರಿಹಾರ ದೊರೆಯಲಿದೆ.

ಧನಸ್ಸು:

ದಿನ ಭವಿಷ್ಯ

ಧನುಸ್ಸು:- ಮನಸ್ಸಿನ ಸಂಕಲ್ಪ ಕಾರ‍್ಯಗತವಾಗುವ ಸೂಚನೆಗಳಿಗೆ ಅವಕಾಶ ಕೂಡಿ ಬರುತ್ತದೆ. ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷೆ ಮೀರಿ ಲಾಭ ಕಂಡುಬರುವುದು. ವಿಷ್ಣು ದೇವಾಲಯಕ್ಕೆ ತುಳಸಿಮಾಲೆ ಸಮರ್ಪಿಸಿ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ಏನೋ ಮಾಡಲು ಹೋಗಿ ಇನ್ನೇನೋ ಅನರ್ಥ ಆಗುವುದು ಬೇಡ. ನಿಮಗೆ ಪರಿಚಯವಿರುವುದನ್ನೇ ಅಥವಾ ತಿಳಿದಿದ್ದನ್ನೇ ಮಾಡಿ. ಅದರಿಂದ ಜೀವನದಲ್ಲಿ ಒಳಿತಿಗೆ ದಾರಿ ಆಗುವುದು. ಅನವಶ್ಯಕ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು.

ಕುಂಭ:

ದಿನ ಭವಿಷ್ಯ

ಕುಂಭ:- ಆರೋಗ್ಯದ ವಿಚಾರವಾಗಿ ಯಾವಾಗಲೂ ಒಬ್ಬ ವೈದ್ಯರನ್ನು ನಂಬಬೇಕು. ಈ ನಂಬಿಕೆಯಲ್ಲಿ ವ್ಯತ್ಯಾಸವಾದಲ್ಲಿ ಅವುಗಳ ಪರಿಣಾಮ ವ್ಯತಿರಿಕ್ತವಾಗುವುದು. ಹಾಗಾಗಿ ಏಕದೇವತಾ ಉಪಾಸನೆ ಮಾಡುವುದು ಒಳ್ಳೆಯದು.

ಮೀನ:

ದಿನ ಭವಿಷ್ಯ

ಮೀನ:- ನಿಮ್ಮ ಕೆಲಸ ಕಾರ್ಯಗಳಲ್ಲಿನ ವಿನಯ ಹಾಗೂ ಶಿಸ್ತು ಹೊಸದಾದ ತೂಕವನ್ನು ಕೊಡಲಿವೆ. ಸಮಾಜದಲ್ಲಿ ಕೀರ್ತಿ ಗೌರವಗಳು ಹೆಚ್ಚಾಗುವವು. ಹಣಕಾಸಿನ ಪರಿಸ್ಥಿತಿ ಸಾಧಾರಣವಾಗಿರುತ್ತದೆ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 07 ಸೆಪ್ಟೆಂಬರ್, 2019!!